ರಾಸಾಯನಿಕ ಕೃಷಿಯು ಕೇವಲ ಮಾನವನ ಆರೋಗ್ಯ ಹಾಳು ಮಾಡುವುದಷ್ಟೇ ಅಲ್ಲ, ದೊಡ್ಡ ಪ್ರಮಾಣದಲ್ಲಿ ನಿಸರ್ಗದ ಹಾನಿಯನ್ನೂ ಮಾಡುತ್ತದೆ !

ಸನಾತನದ ‘ಮನೆಮನೆಯಲ್ಲಿ ಕೈತೋಟ ಅಭಿಯಾನ

‘ಸಸಿಗಳ ಮೇಲೆ ಮಾವಾ, ಬೆಳ್ಳನೆಯ ನೊಣ ಇಂತಹ ಹುಳಗಳ ಸಂಸರ್ಗವು ಕಡಿಮೆ ಇದ್ದಾಗಲೇ ನೀರನ್ನು ಸಿಂಪಡಿಸಿ ಸಸಿಯ ಆ ಭಾಗವನ್ನು ತೊಳೆದು ಹಾಕಬೇಕು. ಇದಕ್ಕಾಗಿ ತುಷಾರ ಸಿಂಚನೆಯ (ಸ್ಪ್ರೇ) ಬಾಟಲೀಯನ್ನು ಬಳಸಬೇಕು. ಮಾವಾ ಬಹಳ ಜಗುಟಾಗಿದ್ದರೆ, ಹಲ್ಲು ತಿಕ್ಕುವ ಹಳೆಯ ಬ್ರಶ್ ನಿಂದ (ಟೂಥ್‌ಬ್ರಶ್ ನಿಂದ) ಅದನ್ನು ತಿಕ್ಕಿ ತಗೆದು ಹಾಕಬೇಕು. ಕೆಲವೊಮ್ಮೆ ಈ ಸುಲಭ ಉಪಾಯದಿಂದಲೂ ಹುಳಗಳನ್ನು ನಿಯಂತ್ರಣದಲ್ಲಿ ತರಬಹುದು ಮತ್ತು ಬೇರೇನು ಸಿಂಪಡಿಸುವ ಅವಶ್ಯಕತೆಯು ಬೀಳುವುದಿಲ್ಲ.’

– ಸೌ. ರಾಘವೀ ಮಯುರೇಶ ಕೊನೆಕರ, ಢವಳೀ, ಫೊಂಡಾ, ಗೋವಾ. (೩೦.೧.೨೦೨೩)