‘ನಮ್ಮ ಚಿತ್ತದ ಮೇಲೆ ಯೋಗ್ಯ ಸಂಸ್ಕಾರಗಳನ್ನು ನಿರ್ಮಿಸಿ ನಮ್ಮ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಚೈತನ್ಯದ ಸ್ತರದಲ್ಲಿ ಪ್ರಾರಂಭಿಸುವ ಚೈತನ್ಯದ ಝರಿ, ಎಂದರೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ ! ಈ ಪ್ರಕ್ರಿಯೆಯನ್ನು ನಡೆಸಿದ ನಂತರ ಸ್ವಭಾವದೋಷ ಮತ್ತು ಅಹಂನ ಅಭೇಧ್ಯ ಕಲ್ಲು ಒಡೆದು ಅದರಿಂದ ಸದ್ಗುಣ ಮತ್ತು ಚೈತನ್ಯದ ಝರಿಗಳು ಹರಿಯತೊಡಗುತ್ತವೆ ಮತ್ತು ಆನಂದದ ಮಹೋತ್ಸವ ಆರಂಭವಾಗುತ್ತದೆ !
ಮೊದಲು ‘ನಾವು ಮಾಡಿದ ಮತ್ತು ಮಾಡುತ್ತಿರುವ ಕೃತಿಗಳು ಯೋಗ್ಯವೇ ಆಗಿವೆ, ಎಂಬುದನ್ನು ನಾವೇ ನಿರ್ಧರಿಸಿರುತ್ತೇವೆ. ಸ್ವಭಾವ ದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ ಆರಂಭವಾದ ನಂತರ ಮೊದಲು ‘ಆ ಕೃತಿ ಮತ್ತು ಅದರ ಹಿಂದಿನ ವಿಚಾರಪ್ರಕ್ರಿಯೆಯು ಹೇಗೆ ಮೇಲುಮೇಲಿನದ್ದಾಗಿತ್ತು ?, ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ನಾವು ಮಾಡಿದ ಪ್ರತಿಯೊಂದು ಕೃತಿ ಮತ್ತು ಅದರ ಹಿಂದಿನ ವಿಚಾರಪ್ರಕ್ರಿಯೆ ಈಶ್ವರನಿಗೆ ಅಪೇಕ್ಷಿತವಿರುವಂತೆ ಪ್ರತಿದಿನ ವ್ಯಷ್ಟಿ ಸಾಧನೆಯ ವರದಿಗಳಾಗುತ್ತವೆ ಹಾಗೂ ನಮ್ಮ ಆನಂದ ಮಾರ್ಗದಲ್ಲಿ ಪ್ರವಾಸ ಪ್ರಾರಂಭವಾಗುತ್ತದೆ. ದೇವರ ಕೃಪೆಯಿಂದ ಅರಿವಾದ ಅದರಲ್ಲಿನ ಹಂತಗಳನ್ನು ಕೃತಜ್ಞತಾಪುಷ್ಪಗಳ ಮಾಧ್ಯಮದಿಂದ ನಾನು ಅವರ ಚರಣಗಳಲ್ಲಿಯೇ ಅರ್ಪಿಸುತ್ತಿದ್ದೇನೆ.
(ಭಾಗ ೧)
೧. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಆರಂಭಿಸಿದ ನಂತರ ಗಮನಕ್ಕೆ ಬಂದ ಹಂತಗಳು
೧ ಅ. ಮೊದಲು ತಪ್ಪುಗಳು ಗಮನಕ್ಕೆ ಬರದಿರುವುದು ಮತ್ತು ತಪ್ಪುಗಳು ಗಮನಕ್ಕೆ ಬಂದ ನಂತರ ಅದಕ್ಕೆ ಪರಿಸ್ಥಿತಿಯನ್ನು ಅಥವಾ ಇತರರನ್ನು ದೂಷಿಸುವುದು
೧. ಮೊದಲು ನಮಗೆ ನಮ್ಮಿಂದಾದ ತಪ್ಪುಗಳೇ ಗಮನಕ್ಕೆ ಬರುವುದಿಲ್ಲ.
೨. ತಪ್ಪುಗಳು ಗಮನಕ್ಕೆ ಬರಲು ಆರಂಭವಾದ ನಂತರವೂ ಅವುಗಳಿಗೆ ‘ಪರಿಸ್ಥಿತಿ ಅಥವಾ ಇತರ ವ್ಯಕ್ತಿಗಳೇ ಕಾರಣರಾಗಿದ್ದಾರೆ, ಎಂದು ನಮ್ಮಿಂದ ಹೇಳಲಾಗುತ್ತದೆ.
೩. ನಾವು ನಮ್ಮಿಂದಾಗಿರುವ ತಪ್ಪುಗಳಿಗಾಗಿ ನಮ್ಮ ವಿಚಾರ ಪ್ರಕ್ರಿಯೆಯ ಮೇಲೆ ದೃಢವಾಗಿರುವುದು ಗಮನಕ್ಕೆ ಬರುತ್ತದೆ.
೧ ಆ. ಅಂತರ್ಮನಸ್ಸಿನ ಚಿಂತನೆ ಮತ್ತು ಮನಸ್ಸಿನ ಸಂಘರ್ಷ
೧. ಕೆಲವು ದಿನಗಳ ವರದಿಗಳ ನಂತರ ನಮ್ಮ ಮನಸ್ಸಿನ ಬಹಿರ್ಮುಖತೆ ಅಂತರ್ಮನಸ್ಸಿನ ಕಡೆಗೆ ಆಗಿ, ಚಿಂತನೆಯ ಪ್ರವಾಸ ಪ್ರಾರಂಭವಾಗಿ ಕೃತಿ ಮತ್ತು ವಿಚಾರಗಳ ಚಿಂತನೆಯು ಅಂತರ್ಮನಸ್ಸಿನಲ್ಲಿ ಪ್ರಾರಂಭವಾಗುತ್ತದೆ.
೨. ನಮ್ಮಲ್ಲಿ ಕೇಳುವ ವೃತ್ತಿ ನಿರ್ಮಾಣವಾಗತೊಡಗುತ್ತದೆ; ಆದರೆ ಸ್ವೀಕರಿಸುವ ಸ್ಥಿತಿಯ ಕಡೆಗೆ ಹೋಗುವಾಗ ನಮ್ಮ ಮನಸ್ಸಿನಲ್ಲಿ ತೀವ್ರ ಸಂಘರ್ಷ ಪ್ರಾರಂಭವಾಗುತ್ತದೆ.
೧ ಇ. ತಪ್ಪುಗಳ ಬಗ್ಗೆ ಖೇದವೆನಿಸಿ ಪ್ರಾರ್ಥನೆ ಆಗುವುದು : ನಂತರ ನಮಗೆ ನಾವೇ ಮಾಡಿಕೊಂಡಿರುವ ನಮ್ಮ ಸ್ಥಿತಿಯ ಬಗ್ಗೆ ತೀವ್ರ ಖೇದ ಅನಿಸತೊಡಗುತ್ತದೆ ಮತ್ತು ಕಣ್ಣೀರು ಸುರಿಯತೊಡಗುತ್ತವೆ.
೧ ಇ ೧. ದೇವರಲ್ಲಿ ಆರ್ತತೆಯಿಂದಾಗುವ ಪ್ರಾರ್ಥನೆ !
ಅ. ‘ದೇವಾ, ‘ನಿನ್ನಿಂದ ದೂರ ಒಯ್ಯುವ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯನ್ನು ಹೇಗೆ ಮಾಡಬೇಕು ?, ಅದನ್ನು ನೀನೇ ಹೇಳು.
ಆ. ನನ್ನಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಯತ್ನಗಳಾಗಲು, ನನ್ನ ತಳಮಳವನ್ನು ಹೆಚ್ಚಿಸು ಹಾಗೂ ನಿನ್ನ ಇಚ್ಛೆಯಂತೆ ನನ್ನಿಂದ ಕೃತಿಗಳಾಗಲಿ.
ಇ. ದೇವಾ, ನನ್ನ ತನು, ಮನ, ಧನ, ಚಿತ್ತ, ಬುದ್ಧಿ, ಅಹಂ ಮತ್ತು ಪ್ರಾಣ ಇವುಗಳನ್ನು ಚೈತನ್ಯದಿಂದ ಯುಕ್ತಗೊಳಿಸಿ ನೀನೇ ಅವುಗಳನ್ನು ನಿನ್ನ ಚರಣಗಳಲ್ಲಿ ಅರ್ಪಣೆ ಮಾಡಿಕೋ.
ಈ. ‘ನನ್ನ ಶ್ವಾಸ ಮತ್ತು ಉಚ್ಛ್ವಾಸ ನೀನೇ ಆಗಿರುವೆ, ಇದರ ಅರಿವು ನನ್ನಲ್ಲಿ ಸತತವಾಗಿರಲಿ.
ಉ. ನಾನು ನಿನ್ನವಳೇ ಆಗಿರುವಾಗ ನಾನು ‘ನನ್ನ ಮನಸ್ಸು, ನನ್ನ ಬುದ್ಧಿ, ಇದು ನನ್ನದು, ಅದು ನನ್ನದು, ಎಂದು ಹೇಳಿದ್ದಕ್ಕಾಗಿ ನೀನು ನನ್ನನ್ನು ಕ್ಷಮಿಸು. ‘ಅನಂತಕೋಟಿ ಬ್ರಹ್ಮಾಂಡಗಳು ನಿನ್ನದೇ ಆಗಿವೆ. ಅವುಗಳಲ್ಲಿ ನಾನು ಸಹ ನಿನ್ನಳಾಗಿರುವೆ, ಇದರ ಅರಿವು ನನ್ನಲ್ಲಿ ಸತತವಾಗಿರಲಿ.
೧ ಈ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ ನಿಜವಾಗಿ ಆರಂಭವಾಗಿ ಆನಂದವನ್ನು ಅನುಭವಿಸುವುದು
೧. ವ್ಯಷ್ಟಿ ಸಾಧನೆಯ ವರದಿಯಲ್ಲಿ ಪ್ರಸಂಗವನ್ನು ಪ್ರಾಮಾಣಿಕವಾಗಿ ಮಂಡಿಸಲು ಆರಂಭವಾಗುತ್ತದೆ.
೨. ಒಂದೊಂದು ಪ್ರಸಂಗದಲ್ಲಿ ನಮಗೆ ನಮ್ಮ ಸ್ವಭಾವದೋಷಗಳ ಅನೇಕ ಮಜಲುಗಳು ತಿಳಿಯತೊಡಗುತ್ತವೆ.
೩. ನಮ್ಮಲ್ಲಿ ‘ನಾನು ಬದಲಾಗಬೇಕು, ಎಂಬ ತೀವ್ರ ಇಚ್ಛೆ ಉತ್ಪನ್ನವಾಗುತ್ತದೆ ಮತ್ತು ಅಂತರ್ಮನಸ್ಸಿನಿಂದ ನಮ್ಮ ಪ್ರಯತ್ನಗಳಾಗಿ ಪ್ರಕ್ರಿಯೆಗೆ ವೇಗ ಪ್ರಾಪ್ತವಾಗುತ್ತದೆ.
೪. ಈ ಮೊದಲು ಕೇವಲ ವರದಿ ಕೊಡಬೇಕೆಂದು ಮಾಡುತ್ತಿರುವ ಪ್ರಯತ್ನ ಈಗ ‘ನನಗೆ ದೇವರಲ್ಲಿ ಸಮರ್ಪಿತವಾಗಲಿಕ್ಕಿದೆ, ಎಂಬ ಭಾವದಿಂದ ಆಗತೊಡಗುತ್ತದೆ ಮತ್ತು ನಮ್ಮಿಂದ ಭಾವ ವೃದ್ಧಿಯ ಪ್ರಯತ್ನಗಳಾಗತೊಡಗುತ್ತವೆ.
೫. ‘ಸಮಷ್ಟಿಯಲ್ಲಿ ನನ್ನ ತಪ್ಪುಗಳನ್ನು ಹೇಳುವುದು ಮತ್ತು ಕೇಳುವುದು, ಕ್ಷಮಾಯಾಚನೆ ಮಾಡುವುದು, ಫಲಕದಲ್ಲಿ ತಪ್ಪುಗಳನ್ನು ಬರೆಯುವುದು, ಅವುಗಳಿಗೆ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದು ಹಾಗೂ ಮನಸ್ಸಿನ ವರದಿಯನ್ನು ತೆಗೆದು ಕೊಳ್ಳುವುದು, ಇವು ಸತತವಾಗಿ ನಡೆಯುತ್ತವೆ.
೬. ನಾವು ‘ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳದಿರುವುದರ ಪ್ರಾಯಶ್ಚಿತ್ತ ಮತ್ತು ತಪ್ಪು ಮಾಡಿದ ಪ್ರಾಯಶ್ಚಿತ್ತ, ಹೀಗೆ ಎರಡೆರಡು ಪ್ರಾಯಶ್ಚಿತ್ತಗಳನ್ನು ತೆಗೆದುಕೊಳ್ಳಲು ಕಲಿಯುತ್ತೇವೆ.
೭. ‘ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವಾಗ ನಮ್ಮ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಯತ್ನಗಳು ಆಗುತ್ತಿವೆಯೇ ?, ಎಂಬುದನ್ನು ನಮ್ಮಿಂದ ನೋಡಲಾಗುತ್ತದೆ.
೮. ನಮ್ಮ ಮನಸ್ಸಿನಲ್ಲಿನ ‘ಧ್ಯೇಯದ ಅರಿವು, ತಳಮಳ, ಖೇದವೆನಿಸುವುದು, ಇವು ಹೆಚ್ಚಾಗುತ್ತವೆ. ಆದ್ದರಿಂದ ನಾವು ಸ್ವಭಾವದೋಷ-ನಿರ್ಮೂಲನೆಯ ಪ್ರಕ್ರಿಯೆಯ ಪ್ರಯತ್ನಗಳಲ್ಲಿ ಸತತವಾಗಿ ಕಲಿಯುವ ಸ್ಥಿತಿಯಲ್ಲಿದ್ದು ಅವುಗಳನ್ನು ಮಾಡಲು ಕಲಿಯುತ್ತೇವೆ ಮತ್ತು ಅದರಿಂದ ಪ್ರತ್ಯಕ್ಷ ಕೃತಿಯನ್ನು ಮಾಡುವಾಗ ಅದಕ್ಕೆ ನಮ್ಮಿಂದ ಭಾವವನ್ನು ಜೋಡಿಸತೊಡಗುತ್ತೇವೆ.
೯. ಅನಂತರ ನಾವು ದೇವರಿಗೆ ಅಪೇಕ್ಷಿತ, ‘ಪರಪ್ರಕಾಶದಿಂದ ಸ್ವಯಂಪ್ರಕಾಶದ ಕಡೆಗೆ ಹೋಗುವ ಆನಂದವನ್ನು ಅನುಭವಿಸುತ್ತೇವೆ.
(ಮುಂದುರಿಯುವುದು)
– ಸೌ. ಅನುರಾಧಾ ಹರಿಶ್ಚಂದ್ರ ನಿಕಮ, ಫೊಂಡಾ, ಗೋವಾ. (೩೦.೫.೨೦೧೯)