ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅನುಭವಿಸಿದ ದಾರ್ಶನಿಕತೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಸಾಧಕನಿಗೆ ನಿಮ್ಮ ‘ಭಾವನಾಶೀಲತೆ ಈ ಸ್ವಭಾವ ದೋಷಕ್ಕೆ ಪರಿಹಾರ ೫ ರಿಂದ ೭ ವರ್ಷಗಳ ನಂತರ ಸಿಗುವುದು, ಎಂದು ಹೇಳುವುದು

‘ಒಮ್ಮೆ ಓರ್ವ ಸಂತರ ಸಂದೇಶವನ್ನು ಕೊಡಲು ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಳಿ ಹೋಗಿದ್ದೆ. ಆಗ ನನ್ನಲ್ಲಿನ ಭಾವನಾಶೀಲತೆ ಈ ಸ್ವಭಾವದೋಷದಿಂದ ನನ್ನ ಸಾಧನೆಯಲ್ಲಿ ಬರುವ ಅಡಚಣೆಯ ಕುರಿತು ಆಕಸ್ಮಿಕವಾಗಿ ಗುರುದೇವರೊಂದಿಗೆ ಚರ್ಚೆ ಆಯಿತು. ಆಗ ಗುರುದೇವರು ಸಹಜವಾಗಿಯೇ, “ಚಿಂತೆ ಮಾಡಬೇಡ, ೫ ರಿಂದ ೭ ವರ್ಷಗಳಲ್ಲಿ ಈ ಅಡಚಣೆ ದೂರವಾಗುವುದು. ಸಾಧನೆಯ ಕಡೆಗೆ ಗಮನ ಕೊಡು. ಎಲ್ಲವೂ ಸರಿಯಾಗುತ್ತದೆ. ಎಂದು ಹೇಳಿದರು.

೨. ‘ಈ ಸ್ವಭಾವದೋಷ ದೂರವಾಗಲು ೫ ರಿಂದ ೭ ವರ್ಷಗಳ ಕಾಲಾವಧಿ ಬಹಳ ಹೆಚ್ಚಿದೆ ಎಂದು ನನಗೆ ಅನಿಸಿತು; ಆದರೆ ಪ್ರತ್ಯಕ್ಷದಲ್ಲಿ ಅಷ್ಟು ಕಾಲಾವಧಿಯೇ ಬೇಕಾಯಿತು

ಆ ಸಮಯದಲ್ಲಿ ನನಗೆ, ‘ಭಾವನಾಶೀಲತೆ ಈ ಸ್ವಭಾವ ದೋಷವನ್ನು, ಸಾಧನೆಯಲ್ಲಿ ಬರುವ ಈ ಚಿಕ್ಕ ಮತ್ತು ಸಾಮಾನ್ಯ ಅಡಚಣೆಯನ್ನು ದೂರಗೊಳಿಸಲು ೫ ರಿಂದ ೭ ವರ್ಷಗಳ ಕಾಲಾವಧಿ ತುಂಬಾ ಹೆಚ್ಚಾಗಿದೆ ಎಂದು ಅನಿಸಿತು; ಆದರೆ ವಾಸ್ತವದಲ್ಲಿ ಈ ಅಡಚಣೆ ದೂರವಾಗಲು ಗುರುದೇವರು ಹೇಳಿದಂತೆ ೭ ವರ್ಷಗಳ ಕಾಲಾವಧಿ ಬೇಕಾಯಿತು. ಇದರಿಂದ ನನಗೆ ಮತ್ತೊಮ್ಮೆ  ಗುರುದೇವರ ದಾರ್ಶನಿಕತೆ ಅನುಭವಿಸಲು ಸಿಕ್ಕಿತು.

ಶ್ರೀ ಗುರುಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು.

– ಓರ್ವ ಸಾಧಕ, (೧೨.೨.೨೦೨೩)