ಹಿಂದೂ ಧರ್ಮ ಸ್ವೀಕರಿಸಿದ ಮೆಗನ್ ಅರಿಟ್ಝು ಇವರ ಹೇಳಿಕೆ
ನ್ಯೂಯಾರ್ಕ – ಅಮೇರಿಕಾದ ನರ್ಸ್ ಮೆಗನ ಆರಿಟ್ಝು ಇವರು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. `ಪೊಲಿಟಿಕಲಿ ಪರಫೆಕ್ಟ’ ಈ ಯುಟ್ಯೂಬ ಚಾನೆಲ್ ಮೇಲೆ ಅವರ ಸಂದರ್ಶನ ಪ್ರಸರವಾಗಿದೆ. ಅದರಲ್ಲಿ ಅವರು ಹಿಂದೂ ಧರ್ಮವನ್ನು ಸ್ವೀಕರಿಸಿರುವುದರ ಹಿಂದಿನ ಅವರ ವಿಚಾರಪ್ರಕ್ರಿಯೆ ಮತ್ತು ಅನುಭವವನ್ನು ಹೇಳಿದ್ದಾರೆ. ಅಮೇರಿಕಾದ `ಡಿಸಮೆಂಟಲಿಂಗ ಗ್ಲೋಬಲ ಹಿಂದುತ್ವ’ (ವಿಶ್ವ ಮಟ್ಟದಲ್ಲಿ ಹಿಂದುತ್ವದ ಉಚ್ಚಾಟನೆ) ಈ ವಿಷಕಾರುವ ಕಾರ್ಯಕ್ರಮದ ಮೂಲಕ ಹಿಂದೂದ್ವೇಷಿ ವಿಚಾರವಂತ ಮತ್ತು ಬುದ್ಧಿಜೀವಿಗಳಿಂದ ಹಿಂದೂ ಧರ್ಮದ ಬಗ್ಗೆ ಕೀಳುಮಟ್ಟಕ್ಕೆ ಹೋಗಿ ಟೀಕಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ತಿಳಿಸುವ ಸಂದರ್ಶನ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗಿದೆ. `ಡಿಸಮೆಂಟಲಿಂಗ ಗ್ಲೋಬಲ ಹಿಂದುತ್ವ’ ಈ ಕಾರ್ಯಕ್ರಮದ ಮೂಲಕ ಹಿಂದೂಗಳನ್ನು ಬಾಯಿ ಮುಚ್ಚಿಸಲು ಷಡ್ಯಂತ್ರ್ಯ ರೂಪಿಸಲಾಗುತ್ತಿದೆ. ಅದರ ವೈಚಾರಿಕ ಪ್ರತಿಕಾರ ಮಾಡುವ ಆವಶ್ಯಕತೆಯಿದೆಯೆಂದೂ ಅವರು ಹೇಳಿದರು.
ಹಿಂದೂ ಧರ್ಮ ಮತ್ತು ಕ್ರೈಸ್ತ ಧರ್ಮಗಳಲ್ಲಿ ಮೂಲಭೂತ ವ್ಯತ್ಯಾಸವನ್ನು ತಿಳಿಸುವಾಗ ಅವರು, ಕ್ರೈಸ್ತ ಧರ್ಮದಲ್ಲಿ ಪ್ರಶ್ನೆಗಳನ್ನು ಕೇಳಲು ನಿರ್ಬಂಧವಿದೆ; ಆದರೆ ಹಿಂದೂ ಧರ್ಮದಲ್ಲಿ ಹಾಗಿಲ್ಲ. ಭಕ್ತರಿಗೆ ಬರುವ ಸಂದೇಹಗಳನ್ನು ಅವರು ವಿಚಾರಿಸಲು ಅವಕಾಶವಿದೆಯೆಂದು ಹೇಳಿದರು.
ಓಂ ಜಪ ಮಾಡುವುದರಿಂದ ಆಯುಷ್ಯದಲ್ಲಿ ಸಕಾರಾತ್ಮಕ ಬದಲಾವಣೆ !
ಆರಿಟ್ಝು ಮಾತನಾಡುತ್ತಾ, ನಾನು 19 ವರ್ಷದವಳಾಗಿರುವಾಗ ನನ್ನ ತಾಯಿ ತೀರಿಕೊಂಡರು. ಆ ಸಮಯದಲ್ಲಿ ನಾನು ಮಾದಕ ಪದಾರ್ಥಗಳಿಗೆ ಬಲಿಯಾಗಿದ್ದೆ. ಆ ಸಮಯದಲ್ಲಿ ನನ್ನ ಅಜ್ಜಿ ಮತ್ತು ಅಜ್ಜನವರು ನನ್ನ ಉಜ್ವಲ ಭವಿಷ್ಯಕ್ಕಾಗಿ ವ್ಹಿಯೆಟ್ನಾಮನಲ್ಲಿರುವ ಶಿವಮಂದಿರದಲ್ಲಿ ಪ್ರಾರ್ಥಿಸಿದ್ದರು. ಅವರು ಕ್ರೈಸ್ತರಾಗಿದ್ದರೂ ಹಿಂದೂಗಳ ದೇವರಲ್ಲಿ ನನಗಾಗಿ ಪ್ರಾರ್ಥನೆಯನ್ನು ಮಾಡಿದ್ದರು. ಈ ಘಟನೆಯು ನನ್ನ ಮೇಲೆ ಆಳವಾದ ಪರಿಣಾಮ ಬೀರಿತು ಮತ್ತು ನಾನು ಹಿಂದೂ ಧರ್ಮವನ್ನು ಅಭ್ಯಾಸ ಮಾಡತೊಡಗಿದೆನು. ತದನಂತರ ನಾನು ದೇವರಲ್ಲಿ ಪ್ರಾರ್ಥಿಸತೊಡಗಿದೆನು. `ನಾನು ಹಿಂದೂ ಇಲ್ಲದಿರುವಾಗಲೂ ಭಗವಾನ ಶಿವನು ನನ್ನ ಕಾಳಜಿಯನ್ನು ತೆಗೆದುಕೊಂಡನು ಮತ್ತು ನನ್ನ ರಕ್ಷಣೆ ಮಾಡಿದನು. ತದನಂತರ ನಾನು `ಓಂ’ ಜಪ ಮಾಡಲು ಪ್ರಾರಂಭಿಸಿದೆನು. ಇದರಿಂದ ನನ್ನ ಆಯುಷ್ಯದಲ್ಲಿ ಸಕರಾತ್ಮಕ ಬದಲಾವಣೆಯಾಯಿತು ಎಂದು ಹೇಳಿದರು.
ಸಂಪಾದಕೀಯ ನಿಲುವುಎಲ್ಲಿಯ ಹಿಂದೂ ಧರ್ಮವನ್ನು ಅಧ್ಯಯನ ಮಾಡಿ ಅದನ್ನು ಸ್ವೀಕರಿಸಿರುವ ಅನ್ಯ ಪಂಥೀಯರು ಮತ್ತು ಎಲ್ಲಿಯ ಧರ್ಮಶಿಕ್ಷಣದ ಅಭಾವದಿಂದ ಆಮಿಷಗಳಿಗೆ ಬಲಿಯಾಗಿ ಹಿಂದೂ ಧರ್ಮವನ್ನು ತ್ಯಜಿಸುವ ನತದೃಷ್ಟ ಹಿಂದೂಗಳು ! |