ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ

ಅಪರಾಧ ತಡೆಯಲು ಇರುವ ಏಕೈಕ ಉಪಾಯ ಅಂದರೆ ಸಾಧನೆ ಕಲಿಸುವುದು !

‘ಭ್ರಷ್ಟಾಚಾರ, ಬಲಾತ್ಕಾರ, ಗೂಂಡಾಗಿರಿ, ಹತ್ಯೆ, ರಾಷ್ಟ್ರದ್ರೋಹ, ಧರ್ಮದ್ರೋಹ, ಇತ್ಯಾದಿ ಅಪರಾಧಗಳು ಆಗಬಾರದೆಂದು ಶಾಲೆಗಳಲ್ಲಿ, ಮಹಾವಿದ್ಯಾಲಯಗಳಲ್ಲಿ ಮತ್ತು ಸಮಾಜದಲ್ಲಿ ಸ್ವಾತಂತ್ರ್ಯದಿಂದ ಹಿಡಿದು ಇಲ್ಲಿ ತನಕ ಕಳೆದ ೭೫ ವರ್ಷಗಳಲ್ಲಿ ಯಾವುದಾದರೂ ಸರಕಾರ ಶಿಕ್ಷಣ ನೀಡಿದೆಯೇ ? ಈ ಶಿಕ್ಷಣ ನೀಡದ ಕಾರಣ ಕೋಟ್ಯಾಂತರ ಅಪರಾಧಗಳು ನಡೆದಿವೆ ಮತ್ತು ಈಗಲೂ ನಡೆಯುತ್ತಿವೆ. ಇವುಗಳಿಗೆಲ್ಲಾ ಏಕೈಕ ಪರಿಹಾರವೆಂದರೆ ಸಾಧನೆ ಕಲಿಸುವುದು. ಇದ ಇಲ್ಲಿಯ ತನಕ ರಾಜಕೀಯ ಪಕ್ಷಗಳಿಗೆ ಅರ್ಥವಾಗಲಿಲ್ಲ ಮತ್ತು ಮುಂದೆಯೂ ಅರ್ಥವಾಗುವುದಿಲ್ಲ. ಹಿಂದೂ ರಾಷ್ಟ್ರ ಸ್ಥಾಪನೆಯೇ ಇದಕ್ಕಿರುವ ಏಕೈಕ ಪರಿಹಾರ !

ಎಲ್ಲಿ ಕೇವಲ ಅಂದಾಜು ಹೇಳುವ ವಿಜ್ಞಾನ ಮತ್ತು ಎಲ್ಲಿ ಜ್ಯೋತಿಷ್ಯಶಾಸ್ತ್ರ !

ಎಲ್ಲಿ  ಒಬ್ಬ ವ್ಯಕ್ತಿಯ ಎಲ್ಲಾ ಪರೀಕ್ಷೆ ಮಾಡಿದ ನಂತರವೂ ಅವನ ಭವಿಷ್ಯದಲ್ಲಿ ಏನಾಗಲಿದೆ ಎಂದು ಹೇಳಲಾಗದ ಮತ್ತು ಪ್ರಕೃತಿಯ ವಿಷಯದಲ್ಲಿ ಕೇವಲ ಅಂದಾಜು ವ್ಯಕ್ತ ಪಡಿಸುವ ವಿಜ್ಞಾನ; ಮತ್ತು ಎಲ್ಲಿ ಕೇವಲ ಪ್ರಕೃತಿಯದ್ದು ಮಾತ್ರವಲ್ಲದೇ ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯವನ್ನು ಜಾತಕ, ನಾಡಿಪಟ್ಟಿ ಮತ್ತು ಸಂಹಿತೆಗಳ ಆಧಾರದ ಮೇಲೆ ಹೇಳುವ ಜ್ಯೋತಿಷ್ಯಶಾಸ್ತ್ರ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ