ಮತಾಂಧರಿಂದಾದ ಟೀಕೆ ಹಾಗೂ ವಿರೋಧ !
ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದಿಂದ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನೀಡಿದ ಮನವಿಯ ಅಂಶಗಳು
೧. ಭಾರತವು ಪರಿಪೂರ್ಣ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರ ಎಂಬುದನ್ನು ಸಂವಿಧಾನ ಪ್ರಬಲವಾಗಿ ಪ್ರತಿಪಾದಿಸಿರುತ್ತದೆ. (ಆದರೂ ಈ ದೇಶದಲ್ಲಿ ಕಳೆದ ಅನೇಕ ದಶಕಗಳಿಂದ ಮುಸಲ್ಮಾನರು ಧರ್ಮದ ಹೆಸರಿನಲ್ಲಿ ಎಷ್ಟೊಂದು ಸೌಲಭ್ಯಗಳನ್ನು ಕಬಳಿಸಿದ್ದಾರೆ ಇದರ ಲೆಕ್ಕ ನೀಡುವರೇ ? – ಸಂಪಾದಕರು)
೨. ಈ ದೇಶವನ್ನು ಯಾವುದೇ ಧರ್ಮದ ಆಧಾರದಲ್ಲಿ ಗುರುತಿಸುವ ದೇಶವೆಂದು ಉಲ್ಲೇಖಿಸುವುದು ಕಾನೂನುಬಾಹಿರ ಮತ್ತು ದೇಶದ್ರೋಹದ ಕೃತ್ಯವಾಗಿದೆ. (ಭಾರತವನ್ನು ಇಸ್ಲಾಮಿ ರಾಷ್ಟ್ರ ಮಾಡುವವರ ವಿರುದ್ಧ ಈ ಪಕ್ಷ ಎಂದಾದರೂ ಬಾಯಿ ಬಿಡುವುದೇ ? ತನ್ನ ಪಿ.ಎಫ್.ಐ.ಗೆ ಭಾರತವನ್ನು ಇಸ್ಲಾಮಿ ರಾಷ್ಟ್ರ ಮಾಡುವುದಿತ್ತು. ಆದ್ದರಿಂದ ಈ ಪಕ್ಷ ಯಾವ ಮುಖ ಇಟ್ಟುಕೊಂಡು ಈ ತತ್ತ್ವಜ್ಞಾನ ಹೇಳುತ್ತಿದೆ ? – ಸಂಪಾದಕರು)
ಎಸ್‌ಡಿಪಿಐ ಮುಖಂಡ ರಿಯಾಝ ಫರಂಗಿಪೇಟೆ ಇವರಿಂದ ಸಭೆಗೆ ವಿರೋಧ
೧. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಸ್ಥಳದಲ್ಲಿ ಸನಾತನ ಸಂಸ್ಥೆಯಿಂದ ಹಿಂದೂರಾಷ್ಟ್ರ ಸ್ಥಾಪನೆಗಾಗಿ ಹಿಂದೂ ರಾಷ್ಟ್ರ ಜನಜಾಗೃತಿ ಸಭೆ ಅಭಿಯಾನ ನಡೆಯುತ್ತಿದೆ. (ಹಿಂದೂ ಜನಜಾಗೃತಿ ಸಮಿತಿ ವಿವಿಧ ಸ್ಥಳದಲ್ಲಿ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ ಆಯೋಜನೆ ಮಾಡುತ್ತಿದೆ. ಯಾರಿಗೆ ‘ಯಾವ ಸಂಘಟನೆ ಈ ಆಯೋಜನೆ ಮಾಡುತ್ತಿದೆ ?, ಹಾಗೂ ಸಭೆಯ ಹೆಸರು ಕೂಡ ಸರಿಯಾಗಿ ತಿಳಿದಿಲ್ಲದಿದ್ದರೂ ಅವರು ಇದನ್ನು ವಿರೋಧಿಸುತ್ತಿದ್ದಾರೆ ! – ಸಂಪಾದಕರು)
೨. ಜಾತ್ಯತೀತವಾಗಿರುವ ಈ ದೇಶದಲ್ಲಿ ಈ ರೀತಿ ಒಂದು ಧರ್ಮದ ರಾಷ್ಟ್ರ ಸ್ಥಾಪನೆ ಮಾಡಲು ಒತ್ತಾಯಿಸುವ ಸಭೆ ಸಂವಿಧಾನ ವಿರೋಧಿಯಾಗಿದೆ. ಕಾನೂನುಬಾಹಿರ ಕೃತಿಯಾಗಿದೆ. (ಹಿಂದೂ ಜನಜಾಗೃತಿ ಸಮಿತಿ ಯಿಂದ ದೇಶಾದ್ಯಂತ ಈ ರೀತಿಯ ಸಭೆ ಅನೇಕ ಸ್ಥಳಗಳಲ್ಲಿ ತೆಗೆದುಕೊಳ್ಳುತ್ತಿದೆ. ಈ ಸಭೆ ಯಿಂದ ಎಲ್ಲಿಯೂ ಸಂವಿಧಾನವಿರೋಧಿ ಕೃತಿಗಳು ನಡೆದಿಲ್ಲ. ಹೀಗಿರುವಾಗ ಕೇವಲ ಹಿಂದೂ ದ್ವೇಷಕ್ಕಾಗಿ ಆರೋಪ ಮಾಡುತ್ತಿದ್ದಾರೆ, ಇದು ಸ್ಪಷ್ಟವಾಗುತ್ತದೆ ! – ಸಂಪಾದಕರು)
೨. ಇದು ಸೂಕ್ಷ್ಮ ವಿಷಯವಾಗಿರುವುದರಿಂದ ಭಾರತದಲ್ಲಿ ಈ ರೀತಿಯ ದುಷ್ಕೃತ್ಯ ನಡೆಸುವವರ ವಿರುದ್ಧ ರಾಷ್ಟ್ರೀಯ ತನಿಖಾ ದಳವೂ ಸಹ ಹಸ್ತಕ್ಷೇಪ ಮಾಡಿ ಸನಾತನ ಸಂಸ್ಥೆಯ ಪದಾಧಿಕಾರಿಗಳ ವಿರುದ್ಧ ದೇಶದ್ರೋಹದ ದೂರು, ಹಿಂದೂ ರಾಷ್ಟ್ರ ಸ್ಥಾಪನೆಯ ಹಿಂದೆ ಇರುವ ವ್ಯಕ್ತಿಗಳನ್ನು ಹುಡುಕಿ, ದೇಶದಲ್ಲಿ ಶಾಂತಿ ಕಾಪಾಡಬೇಕು ಎಂದು ವಿನಂತಿಸುತ್ತೇನೆ. (ಬಿಹಾರದಲ್ಲಿ ಪ್ರಧಾನಮಂತ್ರಿ ಮೋದಿ ಇವರ ಹತ್ಯೆ ನಡೆಸಲು ಪ್ರಯತ್ನಿಸಿರುವ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಸ್ವತಃ ರಿಯಾಝ ಇವರನ್ನು ರಾಷ್ಟ್ರೀಯ ತನಿಖಾ ದಳದವರು ವಿಚಾರಣೆ ನಡೆಸಿದ್ದಾರೆ. ಇಂತಹವರು ಈ ರೀತಿಯ ಆರೋಪ ಮಾಡುವುದು ಹಾಸ್ಯಸ್ಪದವಾಗಿದೆ ! – ಸಂಪಾದಕರು)
ಸಭೆಯ ಯಶಸ್ಸಿಗಾಗಿ ಹಿಂದೂಗಳು ಮಾಡಿದ ಪ್ರಯತ್ನ
ಕೋಮು ವಿಷಬೀಜ ಬಿತ್ತುವ ಎಸ್‌ಡಿಪಿಐ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯಿಂದ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ ಮನವಿಯ ಅಂಗಳು !
೧. ಹಿಂದೂ ಜನಜಾಗೃತಿ ಸಮಿತಿಯು ಇದುವರೆಗೆ ದೇಶದಾದ್ಯಂತ ೨೩೦೦ ಸಭೆಗಳ ಆಯೋಜನೆ ಮಾಡಿ ೨೫ ಲಕ್ಷ ಹಿಂದೂಗಳಲ್ಲಿ ಧರ್ಮಜಾಗೃತಿ ಮೂಡಿಸಿದೆ. ಇದುವರೆಗೆ ಯಾವುದೇ ಅಹಿತಕರ ಘಟನೆಯಾಗಿಲ್ಲ. ಹೀಗಿರುವಾಗ ಇಸ್ಲಾಮಿಕ್ ಮತಾಂಧ ಪಕ್ಷವಾದ ಎಸ್.ಡಿ.ಪಿ.ಐ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಹಿಂದೂ ಮತ್ತು ಮುಸಲ್ಮಾನರ ಬಗ್ಗೆ ಕೋಮು ಭಾವನೆಯನ್ನು ಕೆರಳಿಸಲು ಸಭೆಯ ಬಗ್ಗೆ ಸಮಾಜದಲ್ಲಿ ಅಪಪ್ರಚಾರ ಮಾಡುತ್ತಿದೆ.
೨. ಈ ಮೂಲಕ ಮುಸಲ್ಮಾನ ಸಮುದಾಯವನ್ನು ಹಿಂದೂ ಸಮಾಜದ ಎದುರು ಎತ್ತಿಕಟ್ಟಿ ಕೋಮುದ್ವೇಷ ಬಿತ್ತುವ ಕುಕೃತ್ಯವನ್ನು ಮಾಡುತ್ತಿದ್ದು ಇಂತಹ ಎಸ್.ಡಿ.ಪಿ.ಐ. ದ ಮೇಲೆ ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ ಇವರು ಈ ವಿಷಯದ ಕುರಿತು ಪೊಲೀಸ್ ಆಯುಕ್ತರಾದ ಅಶುತೋಷ್ ಅವರಿಗೆ ಮನವಿ ನೀಡಿದರು. ಈ ವೇಳೆಯಲ್ಲಿ ಉದ್ಯಮಿಗಳಾದ ಶ್ರೀ. ಮಧುಸೂಧನ ಅಯ್ಯರ್, ಶ್ರೀ. ದಿನೇಶ್ ಎಂ.ಪಿ. ಹಿಂದೂ ಮಹಾಸಭಾದ ಶ್ರೀ. ಲೋಕೇಶ್ ಇವರು ಉಪಸ್ಥಿತರಿದ್ದರು.
ಜಿಹಾದಿ ಎಸ್.ಡಿ.ಪಿ.ಐ.ಯನ್ನು ನಿಷೇಧಿಸಲು ಆಗ್ರಹಿಸುವ ‘#Ban_Communal_SDPI’ ‘ಟ್ರೆಂಡ್ಗೆ ಟ್ವಿಟರ್ ನಲ್ಲಿ ಮೊದಲ ಸ್ಥಾನ(ಟ್ರೆಂಡ್ ಎಂದರೆ ಟ್ವಿಟರ್‌ನಲ್ಲಿ ಒಂದೇ ವಿಷಯದ ಕುರಿತು ನಡೆದ ಚರ್ಚೆ) ಹಿಂದೂ ರಾಷ್ಟ್ರ ಸ್ಥಾಪನೆಯನ್ನು ವಿರೋಧಿಸಿದ ಎಸ್.ಡಿ.ಪಿ.ಐ.ಗೆ ಧರ್ಮಪ್ರೇಮಿ ಹಿಂದೂಗಳಿಂದ ತಕ್ಕ ಪ್ರತ್ಯುತ್ತರ ! ಮಂಗಳೂರು – ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ೧೨ ಮಾರ್ಚ ೨೦೨೩ ರಂದು ಮಂಗಳೂರಿನ ಕದ್ರಿ ಮೈದಾನದಲ್ಲಿ ಸಂಜೆ ೫ ಗಂಟೆಗೆ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಆಯೋಜಿಸಲಾಗಿದೆ. ಇದನ್ನು ರದ್ದುಪಡಿಸಬೇಕೆಂದು ಜಿಹಾದಿ ಭಯೋತ್ಪಾದಕ ಸಂಘಟನೆ ಪಿಎಫ್‌ಐನ ರಾಜಕೀಯ ಶಾಖೆಯಾದ ಎಸ್‌ಡಿಪಿಐ ವಿರೋಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಾರ್ಚ ೧೦ ರಂದು ಸಾಯಂಕಾಲ ೭ ಗಂಟೆಗೆ ಎಸ್.ಡಿ.ಪಿ.ಐ. ದಿಂದ #AntiNationalHinduRashtra ಮತ್ತು #StopHateGathering ಟ್ರೆಂಡ್ ನಡೆಸಲಾಯಿತು. ಇದಕ್ಕೆ ಪ್ರತ್ಯುತ್ತರವೆಂದು ಧರ್ಮಪ್ರೇಮಿ ಹಿಂದೂಗಳು ‘#Ban_Communal_SDPI ಎಂಬ ಹೆಸರಿನ ಟ್ರೆಂಡ್ ಅನ್ನು ನಡೆಸಿದರು. ಈ ‘ಟ್ರೆಂಡ್ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನವನ್ನು ಗಳಿಸಿತು. |