ಭಾಜಪದ ಚುನಾವಣೆ ಘೋಷಣಾ ಪತ್ರದಲ್ಲಿ ಹಲಾಲ ಪ್ರಮಾಣ ಪತ್ರ ನಿಷೇಧ ಕಾನೂನು ರೂಪಿಸುವ ಉಲ್ಲೇಖ ಮಾಡಬೇಕು ! – ಹಿಂದೂ ಜನ ಜಾಗೃತಿ ಸಮಿತಿ

ಮೋಹನ್ ಗೌಡ, ರಾಜ್ಯ ವಕ್ತಾರರು , ಹಿಂದೂ ಜಾಗರತಿ ಸಮಿತಿ

ಬೆಂಗಳೂರು – ‘ಯುಗಾದಿ’ಯ ಮೊದಲು ಸರಕಾರಿ ಅಧಿಕಾರಿಗಳಿಂದ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಜಟಕಾ ಮಾಂಸದ ಅಂಗಡಿಗಳಿಗೆ ಪ್ರೋತ್ಸಾಹ ನೀಡಬೇಕು. ನಮಗೆ ಸಂಪೂರ್ಣ ಕರ್ನಾಟಕವನ್ನು ಹಲಾಲ್ ಮುಕ್ತ ಮಾಡುವುದಿದೆ. ಈ ಹಲಾಲ್ ಪ್ರಮಾಣಿತ ಅಂಗಡಿಗಳಿಂದ ಸಿಗುವ ಕೋಟ್ಯಾಂತರ ರೂಪಾಯಿಗಳು ಭಾರತ ವಿರೋಧಿ ಚಟುವಟಿಕೆಯಲ್ಲಿ ಉಪಯೋಗಿಸಲಾಗುತ್ತಿದೆ. ಇದರ ಬಗ್ಗೆ ಆಳವಾಗಿ ವಿಚಾರಣೆ ನಡೆಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ ಇವರು ‘ಇಂಡಿಯಾ ಟುಡೇ’ಯ ಪ್ರತಿನಿಧಿ ಜೊತೆ ಮಾತನಾಡುವಾಗ ಅಭಿಪ್ರಾಯ ವ್ಯಕ್ತಪಡಿಸಿದರು.

(ಸೌಜನ್ಯ : Tv9 Kannada)

‘ಕಳೆದ ವರ್ಷ ಕೂಡ ಯುಗಾದಿಯ ಮೊದಲು ಇದೇ ಅಂಶಗಳ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯಿಂದ ರಾಜ್ಯಾದ್ಯಂತ ಆಂದೋಲನ ನಡೆಸಿದ್ದರು. ಆ ಸಮಯದಲ್ಲಿ ಜನರು ಜಟಕಾ ಮಾಂಸ ಖರೀದಿ ಬಗ್ಗೆ ಶೇಕಡಾ ೭೦ ರಷ್ಟು ಯಶಸ್ಸು ದೊರೆತಿತ್ತು. ಬಹಳಷ್ಟು ಜನರು ಹಲಾಲ್ ಪ್ರಮಾಣಿತ ಮಾಂಸ ಖರಿದಿಯನ್ನು ತಿರಸ್ಕರಿಸಿದ್ದರು, ಎಂದು ಸಮಿತಿಯು ಹೇಳಿದೆ. ಭಾಜಪವು ಚುನಾವಣೆಯ ಘೋಷಣಾ ಪತ್ರದಲ್ಲಿ ಹಲಾಲ್ ಪ್ರಮಾಣ ಪತ್ರ ನಿಷೇಧ ಕಾನೂನು ರೂಪಿಸುವ ಅಂಶಗಳನ್ನು ಸೇರಿಸಲು ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ.

ಹಲಾಲ್ ಪ್ರಮಾಣ ಪತ್ರದ ಅಂಶಗಳ ಬಗ್ಗೆ ಇತ್ತೀಚೆಗೆ ಬಹಳಷ್ಟು ಚರ್ಚೆಗಳು ನಡೆಯುತ್ತವೆ. ಕೇವಲ ಹಿಂದೂ ಜನಜಾಗೃತಿ ಸಮಿತಿ ಅಷ್ಟೇ ಅಲ್ಲದೆ, ಭಾಜಪದ ಸರಕಾರ ಇರುವ ಕರ್ನಾಟಕದಲ್ಲಿ ಅನೇಕ ನಾಯಕರು ಕೂಡ ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಹಿಂದುಗಳಿಗೆ ಹಲಾಲ್ ಮಾಂಸ ಖರಿದಿ ಮಾಡಲು ಕಡ್ಡಾಯ ಏಕೆ ಮಾಡಲಾಗುತ್ತದೆ ?’, ಎಂದು ಈ ಸಂಘಟನೆಗಳು ಪ್ರಶ್ನೆ ಮಾಡಿದೆ.

‘ಭಾರತೀಯ ಆಹಾರ ಸುರಕ್ಷಾ ಮತ್ತು ಮಾನದಂಡ ಪ್ರಾಧಿಕರಣ (ಎಫ್.ಎಸ್.ಎಸ್.ಎ.ಟಿ.) ಈ ಪ್ರಮಾಣ ಪತ್ರ ನೀಡುವ ಸರಕಾರಿ ಸಂಸ್ಥೆ ಇದೆ, ಹೀಗೆ ಇರುವಾಗ ಹಣ ಪಡೆದು ಅನೇಕ ಸಂಸ್ಥೆಗಳಿಂದ ಕಾನೂನ ಬಾಹಿರ ಹಲಾಲ್ ಪ್ರಮಾಣ ಪತ್ರ ನೀಡಲಾಗುತ್ತದೆ. ಮುಸಲ್ಮಾನ ಸಂಘಟನೆಗಳಿಗೆ ಹಲಾಲ್ ಉತ್ಪಾದನೆ ಪ್ರಮಾಣಿತಗೊಳಿಸುವ ಅನುಮತಿ ಯಾರು ನೀಡಿದರು ?’, ಎಂದು ಇತ್ತೀಚೆಗೆ ಭಾಜಪದ ಮುಖಂಡ ರವಿಕುಮಾರ ಇವರು ಪ್ರಶ್ನೆ ಕೇಳಿದ್ದರು.

(ಸೌಜನ್ಯ : Tv9 Kannada)