‘ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಮಹತ್ವ ಈ ಬಗ್ಗೆ ಈಶ್ವರನು ಸೂಚಿಸಿದ ಅಂಶಗಳು

ಸೌ. ಮಂದಾಕಿನಿ ಕದಮ್

೧. ನಮಸ್ಕಾರ ಮಾಡುವಾಗ ‘ಎಡಗೈ ಅಂದರೆ ವ್ಯಷ್ಟಿ ಸಾಧನೆ ಮತ್ತು ಬಲಗೈ ಅಂದರೆ ಸಮಷ್ಟಿ ಸಾಧನೆ !’, ಎಂಬ ವಿಚಾರ ಬರುವುದು !’

‘ಒಂದು ದಿನ ಮಧ್ಯಾಹ್ನ ನಾಮಜಪ ಮಾಡುವ ಮೊದಲು ನಾನು ಈಶ್ವರನಿಗೆ ಸಂಪೂರ್ಣ ಶರಣಾಗಿ ಪ್ರಾರ್ಥನೆ ಮಾಡಿದೆ. ಕೈಜೋಡಿಸಿ ನಮಸ್ಕಾರ ಮಾಡುವಾಗ ಈಶ್ವರನು, ಈ ‘ಎರಡೂ ಕೈಗಳನ್ನು ಒಟ್ಟಿಗೆ ಜೋಡಿಸಿದಾಗ ಯಾವ ಮುದ್ರೆ ತಯಾರಾಗುತ್ತದೆಯೋ, ಆ ಮುದ್ರೆಯೆಂದರೆ, ನಮಸ್ಕಾರ. ಎಡಗೈಯೆಂದರೆ ವ್ಯಷ್ಟಿ ಸಾಧನೆ ಮತ್ತು ಬಲಗೈಯೆಂದರೆ ಸಮಷ್ಟಿ ಸಾಧನೆ ಎಂದು ಹೇಳಿದನು !’

೨. ಎರಡೂ ಕೈಗಳನ್ನು ಜೋಡಿಸಿ ಮಾಡಿದ ನಮಸ್ಕಾರವೇ ಈಶ್ವರನಿಗೆ ತಲುಪುತ್ತದೆ

ಪ್ರತಿಯೊಬ್ಬರಿಗೂ ತಮ್ಮ ಬಲಗೈಯು ಮಹತ್ವದ್ದಾಗಿರುತ್ತದೆ. ನಾವು ನಮ್ಮ ಬಲಗೈಯನ್ನು ಶೇ. ೭೦ ರಿಂದ ೭೫ ರಷ್ಟು ಮತ್ತು ಎಡಗೈಯನ್ನು ಶೇ. ೨೫ ರಿಂದ ೩೦ ರಷ್ಟು ಉಪಯೋಗಿಸುತ್ತೇವೆ. ಕೆಲವರಲ್ಲಿ ಮಾತ್ರ ಇದು ಇದರ ವಿರುದ್ಧವಾಗಿರುತ್ತದೆ. ಎಡಗೈಗೆ ಪ್ರಾಧಾನ್ಯತೆ ನೀಡುವ ವ್ಯಕ್ತಿಯ ಎಡಗೈಯ ಉಪಯೋಗ ಶೇ. ೭೦ ರಿಂದ ೭೫ ರಷ್ಟು ಮತ್ತು ಬಲಗೈಯ ಉಪಯೋಗ ಶೇ. ೨೫ ರಿಂದ ೩೦ ರಷ್ಟಿರುತ್ತದೆ. ಇವೆರಡೂ ಕೈಗಳನ್ನು ಜೋಡಿಸಿ ಮಾಡಿದ ನಮಸ್ಕಾರವೇ ಈಶ್ವರನಿಗೆ ತಲಪುತ್ತದೆ.

೩. ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಗಂಭೀರವಾಗಿ ಮಾಡುವುದರಿಂದಲೇ ಮನುಷ್ಯ ಜೀವನ ಸಾರ್ಥಕವಾಗುತ್ತದೆ

ದೇವರು. ಸಂತರು ಮತ್ತು ಗುರುಗಳ ಚರಣಗಳಿಗೆ ಮಾಡುವ ನಮಸ್ಕಾರದಲ್ಲಿ ನಮ್ರತೆ ಮತ್ತು ಲೀನತೆ ವ್ಯಕ್ತವಾಗು ತ್ತದೆ. ಯಾವುದೇ ಕೃತಿ ಪೂರ್ಣವಾಗಬೇಕಾದರೆ ಎರಡೂ ಕೈಗಳ ಆವಶ್ಯಕತೆಯಿರುತ್ತದೆ. ವ್ಯಷ್ಟಿ ಮತ್ತು ಸಮಷ್ಟಿ ಈ ಎರಡೂ ಸಾಧನೆಯ ಮಹತ್ವ ಬಹಳ ಹೆಚ್ಚಿದೆ. ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ತಳಮಳ ಮತ್ತು ಗಾಂಭೀರ್ಯದಿಂದ ಮಾಡುವುದರಿಂದಲೇ ಪರಮೇಶ್ವರನ ಕೃಪೆಯಿಂದ ಲಭಿಸಿದ ಮನುಷ್ಯ ಜೀವನ ಸಾರ್ಥಕವಾಗುತ್ತದೆ, ನಮಗೆ ಪರಮೇಶ್ವರನ (ಗುರುದೇವರ) ಚರಣಗಳ ವರೆಗೆ ವೇಗದಿಂದ ತಲಪಲು ಸಾಧ್ಯವಾಗುತ್ತದೆ ಮತ್ತು ನಮ್ಮ ಆಧ್ಯಾತ್ಮಿಕ ಪ್ರಗತಿಯೂ ಶೀಘ್ರ ಗತಿಯಲ್ಲಿ ಆಗುತ್ತದೆ.

೪. ವ್ಯಷ್ಟಿ ಸಾಧನೆಯು ಅಡಿಪಾಯವಾಗಿರುವುದರಿಂದ ‘ವ್ಯಷ್ಟಿ ಸಾಧನೆ ಚೆನ್ನಾಗಿದ್ದರೆ ಮಾತ್ರ ಸಮಷ್ಟಿ ಸಾಧನೆ ಚೆನ್ನಾಗಿ ಆಗುತ್ತದೆ’, ಎಂಬ ದೃಷ್ಟಿಕೋನವನ್ನಿಟ್ಟು ಪ್ರಯತ್ನಿಸುವುದು ಆವಶ್ಯಕವಾಗಿದೆ !

ವ್ಯಷ್ಟಿ ಸಾಧನೆ, ಎಂದರೆ ಸ್ವಂತದ ಆಧ್ಯಾತ್ಮಿಕ ಪ್ರಗತಿಗಾಗಿ ಮಾಡುವ ಪ್ರಯತ್ನ. ವ್ಯಷ್ಟಿ ಸಾಧನೆಯ ಮಹತ್ವ ಎಡಗೈಯ ಹಾಗೆ, ಅಂದರೆ ಶೇ. ೩೦ ರಷ್ಟು ಇದ್ದರೂ ಅದು ಮಹತ್ವದ್ದಾಗಿದೆ; ಏಕೆಂದರೆ ಕಟ್ಟಡದ ಅಡಿಪಾಯ ಗಟ್ಟಿಮುಟ್ಟಾಗಿದ್ದರೆ ಮಾತ್ರ ಅದರ ಮೇಲಿನ ಕಟ್ಟಡವನ್ನು ಗಟ್ಟಿಮುಟ್ಟಾಗಿ ಕಟ್ಟಬಹುದು. ಆದ್ದರಿಂದ ಆಧ್ಯಾತ್ಮಿಕ ಪ್ರಗತಿಗಾಗಿ ವ್ಯಷ್ಟಿ ಸಾಧನೆಯು ಅಡಿಪಾಯವೇ ಆಗಿದೆ. ‘ವ್ಯಷ್ಟಿ ಸಾಧನೆ ಚೆನ್ನಾಗಿದ್ದರೆ ಸಮಷ್ಟಿ ಸಾಧನೆ  ಚೆನ್ನಾಗಿ ಆಗುವುದು’, ಎಂಬ ದೃಷ್ಟಿಕೋನವನ್ನಿಡಬೇಕು. ವ್ಯಷ್ಟಿ ಸಾಧನೆಯಲ್ಲಿ ಯಾವ ವಿಷಯಗಳ ಬಗ್ಗೆ ಪ್ರಯತ್ನಿಸುವ ಅವಶ್ಯಕತೆಯಿದೆಯೊ, ಆ ವಿಷಯಗಳ  ಗಾಂಭೀರ್ಯವನ್ನು ಹೆಚ್ಚಿಸಿ ಗುರುದೇವರಿಗೆ ಅಪೇಕ್ಷಿತ ವ್ಯಷ್ಟಿ ಸಾಧನೆಯನ್ನು ಮಾಡಲು ಪ್ರಯತ್ನಿಸಬೇಕು.

೫. ಪರಾತ್ಪರ ಗುರುದೇವರು ಹೇಳಿರುವ ವ್ಯಷ್ಟಿ ಸಾಧನೆ ! 

೫ ಅ. ನಾಮಜಪ : ಭಾವಪೂರ್ಣ ನಾಮಜಪವಾಗುವುದು ಅತ್ಯಂತ ಮಹತ್ವದ್ದಾಗಿದೆ. ನಮಗೆ ಬಹಳಷ್ಟು ಉದಾಹರಣೆಗಳು ಗೊತ್ತಿವೆ. ನಾಮಜಪ ಮಾಡಿಯೆ ಬೇಡ ರತ್ನಾಕರನು ವಾಲ್ಮೀಕಿ ಋಷಿಯಾದನು. ನಾವು ಸಾಮಾನ್ಯ ಜೀವಗಳಾಗಿದ್ದೇವೆ. ಯಾವನು ದೇವರ ಹೆಸರನ್ನು ಎಷ್ಟು ಶ್ರದ್ಧೆಯಿಂದ ತೆಗೆದುಕೊಳ್ಳುತ್ತಾನೆಯೋ, ಅಷ್ಟು ಅವನ ವೃತ್ತಿ ಸಾತ್ತ್ವಿಕವಾಗುತ್ತದೆ ಮತ್ತು ಈಶ್ವರನು ಅವನನ್ನು ಕಾಪಾಡುತ್ತಾನೆ. ನಾಮವನ್ನು ಜಪಿಸುವುದರಿಂದ ಸ್ವಭಾವದೋಷ ಮತ್ತು ಅಹಂ ಕಡಿಮೆಯಾಗಲು ಸಹಾಯವಾಗುತ್ತದೆ.

೫ ಆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಳ ಪ್ರಕ್ರಿಯೆ : ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಪ್ರತಿಯೊಬ್ಬರೂ ಮನಃಪೂರ್ವಕವಾಗಿ ಮಾಡಿ ತಮ್ಮಲ್ಲಿರುವ ಸ್ವಭಾವದೋಷ ಮತ್ತು ಅಹಂಅನ್ನು ಕಡಿಮೆ ಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಹೀಗೆ ಪ್ರಯತ್ನಿಸಿ ದಾಗ ನಮ್ಮಲ್ಲಿನ ಸತ್ತ್ವಗುಣ ಹೆಚ್ಚಾಗಿ ಶೇ. ೧೦೦ ರಷ್ಟು ಸಾತ್ತ್ವಿಕವಾದಂತಹ ಪರಮೇಶ್ವರನ (ಪ.ಪೂ. ಗುರುದೇವರ) ಚರಣಗಳಿಗೆ ಬೇಗನೆ ತಲುಪಿ ಪ್ರತಿಯೊಬ್ಬ ಅಜ್ಞಾನಿ, ಅಶಿಕ್ಷಿತ ಮತ್ತು ಕ್ಷುದ್ರ ಜೀವಕ್ಕೂ ಮೋಕ್ಷಪ್ರಾಪ್ತಿ ಆಗುವುದು ಮತ್ತು ಪರಮೇಶ್ವರನ ಕೃಪೆಯಿಂದ ಲಭಿಸಿದ ಮನುಷ್ಯಜನ್ಮವನ್ನು ಸಾರ್ಥಕಗೊಳಿಸಬಹುದು.

೫ ಇ. ಭಾವಜಾಗೃತಿಗಾಗಿ ಪ್ರಯತ್ನ : ‘ಭಾವವಿದ್ದಲ್ಲಿ ದೇವರು’, ಎಂಬ ವಚನದಂತೆ ಹೇಗೆ ಭಾವ ಇರುವುದೋ, ಹಾಗೆ ಅವನಿಗೆ ಅನುಭೂತಿಗಳು ಬರುತ್ತಿರುತ್ತವೆ. ಬೆಳಗ್ಗೆ ಎಚ್ಚರವಾದ ಕೂಡಲೇ ನಾನು ಮೊದಲು ಪರಮೇಶ್ವರ ರೂಪಿ ಮತ್ತು ಕೃಷ್ಣಸಮಾನ ಗುರುದೇವರಿಗೆ ನಮಸ್ಕಾರ ಮಾಡುತ್ತೇನೆ. ನನ್ನ ಗುರುದೇವರಲ್ಲಿ ಶ್ರೀಕೃಷ್ಣನಿದ್ದಾನೆ’, ಎಂಬ ಭಾವ ನನ್ನಲ್ಲಿ ನಿರಂತರವಾಗಿ ಇರುತ್ತದೆ. ಆ ಪರಮೇಶ್ವರ ಸತತವಾಗಿ ನನ್ನ ಜೊತೆಗೆ ಇರುತ್ತಾನೆ ಮತ್ತು ನನಗೆ ನಿರಂತರ ಪರಮೇಶ್ವರನ (ಗುರುದೇವರ) ಅಸ್ತಿತ್ವದ ಅರಿವಾಗುತ್ತದೆ.

೫ ಈ. ಪ್ರಾರ್ಥನೆ ಮತ್ತು ಕೃತಜ್ಞತೆ : ಭಾವಪೂರ್ಣ ಪ್ರಾರ್ಥನೆಯು ಈಶ್ವರನ ಚರಣಗಳಿಗೆ  ತಲುಪುತ್ತದೆ. ಆದ್ದರಿಂದ ಶರಣಾಗತ ಭಾವದಿಂದ ಪ್ರಾರ್ಥನೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸಬೇಕು.

೬. ಸಾಧಕರು ಪರಾತ್ಪರ ಗುರುದೇವರು ಹೇಳಿದ ಅಷ್ಟಾಂಗ ಸಾಧನೆಯಾಗಲು ಪ್ರಯತ್ನಿಸಿದರೆ ಪ್ರತಿಯೊಬ್ಬರಲ್ಲಿಯೂ ಶ್ರಿಕೃಷ್ಣನ, ಅಂದರೆ ಪರಾತ್ಪರ ಗುರುದೇವರ ರೂಪವನ್ನು ನೋಡಬಹುದು !

ಪರಾತ್ಪರ ಗುರುದೇವರು ಅಷ್ಟಾಂಗ ಸಾಧನೆಯನ್ನು ಹೇಳಿ ಎಲ್ಲ ಅಜ್ಞಾನಿ ಸಾಧಕರಿಗೆ ಪರಮೇಶ್ವರನ ಚರಣಗಳ ವರೆಗೆ ತಲುಪುವ ಮಾರ್ಗವನ್ನು ತೋರಿಸಿದ್ದಾರೆ. ಆ ಮಾರ್ಗದ ಮೇಲೆ ನಾವು ಒಂದು ಹೆಜ್ಞೆಯನ್ನು ಇಟ್ಟರೂ ಅವರ ಕೃಪೆಯಿಂದ ನಾವು ಮುಂದೆ ಮುಂದೆ ಹೋಗುವವರೇ ಇದ್ದೇವೆ. ಎಲ್ಲ ಸಾಧಕರು ಅವರಿಗೆ ಅಪೇಕ್ಷಿತ ವ್ಯಷ್ಟಿ ಸಾಧನೆಯಾಗಲು ಸಂಪೂರ್ಣ ಶರಣಾಗತಭಾವದಿಂದ ಪ್ರಾರ್ಥನೆಯನ್ನು ಮಾಡಿ ಪ್ರಾಮಾಣಿಕವಾಗಿ ಮತ್ತು ಗಾಂಭೀರ್ಯದಿಂದ ಪ್ರಯತ್ನಿಸ ಬೇಕು ಮತ್ತು ಪರಮೇಶ್ವರಪ್ರಾಪ್ತಿಯ ತಳಮಳವನ್ನು ಹೆಚ್ಚಿಸಬೇಕು. ಅದರಿಂದ ನಮಗೆ ಪ್ರತಿಯೊಬ್ಬರಲ್ಲಿ ಶ್ರೀಕೃಷ್ಣನ, ಅಂದರೆ ಪರಾತ್ಪರ ಗುರುದೇವರ ರೂಪವನ್ನು ನೋಡಲು ಸಾಧ್ಯವಾಗುವುದು.

೭. ‘ಈಶ್ವರನು ನನಗೆ ಕಲಿಸಲು ಮತ್ತು ನನ್ನ ಪ್ರಾರಬ್ಧವನ್ನು ಕಡಿಮೆ ಮಾಡಲು ಆ ವ್ಯಕ್ತಿಯ ಮಾಧ್ಯಮದಿಂದ ಪ್ರಸಂಗವನ್ನು ನಿರ್ಮಾಣ ಮಾಡಿದ್ದಾನೆ’, ಎಂಬ ಭಾವವನ್ನಿಟ್ಟರೆ ಸ್ವಭಾವದೋಷ ಮತ್ತು ಅಹಂ ಕಡಿಮೆಯಾಗಿ ಗುಣಗಳ ವೃದ್ಧಿಯಾಗುವುದು !

ನಾವು ಯಾರನ್ನಾದರೂ ಓರ್ವ ‘ವ್ಯಕ್ತಿ’ ಎಂದು ನೋಡಿದರೆ ನಮ್ಮ ಸ್ವಭಾವದೋಷ ಮತ್ತು ಅಹಂ ಉಕ್ಕಿ ಬರುತ್ತದೆ. ಯಾವಾಗ ಯಾವುದಾದರೊಬ್ಬ ವ್ಯಕ್ತಿಯ ವಿಷಯದಲ್ಲಿ ಯಾವುದಾದರೊಂದು ಪ್ರಸಂಗ ಘಟಿಸುತ್ತದೆಯೋ, ಆಗ ‘ಆ ವ್ಯಕ್ತಿಯಲ್ಲಿ ಶ್ರೀಕೃಷ್ಣನೇ ಇದ್ದಾನೆ’, ಎಂಬ ಭಾವವನ್ನಿಟ್ಟರೆ ಆ ಪ್ರಸಂಗವನ್ನು ನಾವು ಸಕಾರಾತ್ಮಕ ದೃಷ್ಟಿಯಿಂದ ನೋಡಬಹುದು. ‘ಈಶ್ವರನು ನನಗೆ ಕಲಿಸಲು ಮತ್ತು ನನ್ನ ಪ್ರಾರಬ್ದವನ್ನು ಕಡಿಮೆ ಮಾಡಲು ಆ ವ್ಯಕ್ತಿಯ ಮಾಧ್ಯಮದಿಂದ ಈ ಪ್ರಸಂಗವನ್ನು ಘಟಿಸಿದ್ದಾನೆ’, ಎಂಬ ಭಾವವಿಟ್ಟರೆ, ಸ್ವಭಾವದೋಷ ಮತ್ತು ಅಹಂ ಕಡಿಮೆಯಾಗಿ ಗುಣವೃದ್ಧಿಯಾಗುವುದನ್ನು ನಾನು ಅನುಭವಿಸಿದ್ದೇನೆ.

೮. ಸಮಷ್ಟಿ ಸಾಧನೆಯು ಸಮಾಜಕ್ಕೆ ಸಂಬಂಧಿಸಿರುವುದರಿಂದ ಅದನ್ನು ಮಾಡಲು ಮೊದಲು ತಾನು ಸ್ವತಃ ಆದರ್ಶ ಸಾಧಕನಾಗುವುದು ಆವಶ್ಯಕ

ಸಮಷ್ಟಿ ಸಾಧನೆಯೆಂದರೆ ಸಮಾಜದ ಆಧ್ಯಾತ್ಮಿಕ ಉನ್ನತಿ ಗಾಗಿ ಮಾಡುವ ಪ್ರಯತ್ನ, ‘ಸಮಷ್ಟಿ ಸಾಧನೆಗೆ ಶೇ. ೭೦ ರಷ್ಟು ಮಹತ್ವವಿದೆ’, ಎಂದು ಗುರುದೇವರ ಕೃಪೆಯಿಂದ ಎಲ್ಲರಿಗೂ ತಿಳಿದಿದೆ. ವ್ಯಷ್ಟಿ ಸಾಧನೆ ಕೇವಲ ಸ್ವಂತಕ್ಕಷ್ಟೇ ಸೀಮಿತ ವಾಗಿರುತ್ತದೆ; ಆದರೆ ಸಮಷ್ಟಿ ಸಾಧನೆಯು ಸಂಪೂರ್ಣ ಸಮಾಜಕ್ಕೆ ಸಂಬಂಧಿಸಿರುತ್ತದೆ. ವ್ಯಷ್ಟಿ ಸಾಧನೆಯಲ್ಲಿನ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ  ಪ್ರಾಮಾಣಿಕ ಪ್ರಯತ್ನವಾಗದಿದ್ದರೆ, ಸ್ವಭಾವದೋಷ ಮತ್ತು ಅಹಂನ ಲಕ್ಷಣ ಗಳು ಉಕ್ಕಿಬರುತ್ತವೆ ಮತ್ತು ಅವುಗಳಲ್ಲಿನ ಕೆಲವು ಲಕ್ಷಣಗಳು ಸಮಷ್ಟಿಗೆ ಹಾನಿಕರವಾಗಿರುತ್ತವೆ. ನಾವು ಗುರುದೇವರ ಆದರ್ಶ ಸಾಧಕರಾಗಲು ಮತ್ತು ನಮ್ಮಲ್ಲಿ ಸಾಧಕತ್ವ ಬರಲು ನಮ್ಮ ವ್ಯಷ್ಟಿ ಸಾಧನೆ ಗುರುದೇವರ ಅಪೇಕ್ಷೆಯಂತೆ ಆಗಬೇಕೆಂಬ ಧ್ಯೇಯವನ್ನು ಪ್ರತಿಯೊಬ್ಬರೂ ಇಟ್ಟುಕೊಳ್ಳಬೇಕು. ಹಾಗೆ ಮಾಡಿದರೆ ಮಾತ್ರ ಸೇವೆ ಪರಿಪೂರ್ಣ, ಭಾವಪೂರ್ಣ ಮತ್ತು ತಪ್ಪುರಹಿತವಾಗುವುದು. ಮಹತ್ವದೆಂದರೆ, ನಮಗೆ ಯಾವ ನಾಲ್ಕು ಋಣಗಳನ್ನು ತೀರಿಸಲು ಹೇಳಿದ್ದಾರೆಯೋ, ಅವುಗಳಲ್ಲಿ ಸಮಾಜಋಣ’ ಸಹ ಇದೆ. ಸಮಷ್ಟಿ ಸಾಧನೆ ಮತ್ತು ಸತ್ಸೇವೆ ಮಾಡಿ ಈ ಋಣದಿಂದ ನಾವು ಮುಕ್ತರಾಗಬಹುದು.

೯. ಪ್ರಾಮಾಣಿಕವಾಗಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಪ್ರಯತ್ನ ಮಾಡಿ ಈಶ್ವರನ ಚರಣಗಳಿಗೆ ತಲುಪಬಹುದು 

ನಮಗೆ ಪರಮೇಶ್ವರನ ಕೃಪೆಯಿಂದ ಮನುಷ್ಯಜನ್ಮ ಪ್ರಾಪ್ತವಾಗಿದೆ. ಗುರುದೇವರು ಹೇಳಿದ ಅಂಶಗಳಂತೆ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕು. ಆಗ ನಮಗೆ ಶೀಘ್ರಗತಿಯಲ್ಲಿ ಈಶ್ವರನ (ಗುರುಗಳ) ಚರಣಗಳಿಗೆ ತಲುಪಲು ಸಾಧ್ಯವಾಗಿ ಅವರ ಮನಸ್ಸನ್ನು ಗೆಲ್ಲಬಹುದು. ಮತ್ತು ನಮ್ಮ ಮೇಲೆ ಅಖಂಡ ಗುರುಕೃಪೆಯಾಗುವುದು.

– ಸೌ. ಮಂದಾಕಿನಿ ಕದಮ (ಆಧ್ಯಾತ್ಮಿಕ ಮಟ್ಟ ಶೇ. ೬೮), ಪುಣೆ (೧೫.೨.೨೦೧೭)