ಎಲ್ಲ ಸಾಧಕರಿಗೆ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಶ್ರೀ. ರಾಮ ಹೊನಪ

‘ಸಾಧಕನು ಈಶ್ವರನ ‘ಪ್ರೀತಿ ಗುಣವನ್ನು ಅಳವಡಿಸಿಕೊಳ್ಳಲು ಏನು ಮಾಡಬೇಕು ?, ಎಂಬ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಮಾರ್ಗದರ್ಶನ !

ಓರ್ವ ಸಾಧಕಿ ಪರಾತ್ಪರ ಗುರು ಡಾಕ್ಟರರಿಗೆ ಈ ಮುಂದಿನ ಪ್ರಶ್ನೆ ಕೇಳಿದಳು, “ನೀವು ಎಲ್ಲರನ್ನೂ ನಿರಪೇಕ್ಷವಾಗಿ ಪ್ರೀತಿಸುತ್ತೀರಿ. ನನಗೆ ಹಾಗೆ ಸಾಧ್ಯವಾಗುವುದಿಲ್ಲ. ಸಾಧಕ ಹೇಗಿದ್ದಾನೆ ? ಅವನ ವಯಸ್ಸು ಹಾಗೂ ಆರೋಗ್ಯವನ್ನು ನೋಡಿ ನನ್ನ ವರ್ತನೆ ಬದಲಾಗುತ್ತದೆ. ಆದ್ದರಿಂದ ನನ್ನಲ್ಲಿ ನಿಮ್ಮಲ್ಲಿರುವ ‘ಪ್ರೀತಿ ಇಲ್ಲ. ಈ ಗುಣ ನನ್ನಲ್ಲಿ ಬರಲು ಏನು ಮಾಡಬೇಕು ? ಪರಾತ್ಪರ ಗುರು ಡಾಕ್ಟರರು “ಒಳ್ಳೆಯ ಪ್ರಶ್ನೆ ಕೇಳಿದಿರಿ ಎಂದು ಹೇಳಿ ಈ ಮುಂದಿನ ಅಂಶವನ್ನು ಹೇಳಿದರು.

೧. ‘ಪ್ರತಿಯೊಬ್ಬ ಸಾಧಕನ ಪ್ರಕೃತಿ ಭಿನ್ನವಾಗಿದೆ. ಅದಕ್ಕನುಸಾರ ಅವನು ವರ್ತಿಸುತ್ತಾನೆ, ಎಂಬುದನ್ನು ತಿಳಿದುಕೊಳ್ಳಬೇಕು.

೨. ‘ಸಾಧಕನು ಸಾಧನೆಗಾಗಿ ಸನಾತನ ಸಂಸ್ಥೆಗೆ ಬಂದಿದ್ದಾನೆ, ಎಂಬ ವಿಷಯವನ್ನು ಮನಸ್ಸಿನಲ್ಲಿ ಬಿಂಬಿಸಬೇಕು.

೩. ಸಾಧಕನಿಂದ ಏನಾದರೂ ತಪ್ಪಾದರೆ ಅವನ ತಪ್ಪನ್ನು ಹೇಳುವಾಗ ‘ನಾನು ಸಾಧಕನಿಗೆ ಸಾಧನೆಯಲ್ಲಿ ಸಹಾಯ ಮಾಡಬೇಕಾಗಿದೆ, ಎನ್ನುವ ವಿಚಾರ ಮನಸ್ಸಿನಲ್ಲಿರಬೇಕು.

– ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ ಗೋವಾ. (೧೩.೨.೨೦೨೨)