ಪಾಕಿಸ್ತಾನದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಹತರಾದವರ ಸಂಖ್ಯೆ ಗಣನೀಯವಾಗಿ ಹೆಚ್ಚಳ !

ನವ ದೆಹಲಿ – ಪಾಕಿಸ್ತಾನದಲ್ಲಿ ೨೦೨೨ ರಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಹತರಾದವರ ಸಂಖ್ಯೆ ಅಪಘಾನಿಸ್ತಾನದಕ್ಕಿಂತಲೂ ಹೆಚ್ಚಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ೨೦೨೨ ರಲ್ಲಿ ಇಂತಹ ಘಟನೆಯಲ್ಲಿ ಒಟ್ಟು ೬೪೩ ಜನರು ಸಾವನ್ನಪ್ಪಿದ್ದಾರೆ. ೨೦೨೧ ರಲ್ಲಿ ಇದೇ ಸಂಖ್ಯೆ ೨೯೨ ಇತ್ತು, ಎಂದರೆ ಅದರಲ್ಲಿ ಶೇಕಡಾ ೧೨೦ ಹೆಚ್ಚಳವಾಗಿದೆ. ಆಸ್ಟ್ರೇಲಿಯಾದಲ್ಲಿನ ‘ಇನ್ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್’ನ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದ ತುಲನೆಯಲ್ಲಿ ಅಪಘಾನಿಸ್ತಾನದಲ್ಲಿ ಇಂತಹ ಘಟನೆಯಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಕಡಿಮೆ ಇದೆ.

ಒಂದು ವರದಿಯ ಪ್ರಕಾರ, ೨೦೦೭ ರಿಂದ ೨೦೨೨ ವರೆಗೆ ಪಾಕಿಸ್ತಾನದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ೧೪ ಸಾವಿರದ ೧೨೦ ಜನರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದಲ್ಲಿನ ಅಪಘಾನಿಸ್ತಾನದ ಗಡಿ ಭಾಗದಲ್ಲಿ ಭಯೋತ್ಪಾದಕ ಘಟನೆಗಳು ಹೆಚ್ಚಾಗಿ ಘಟಿಸಿವೆ.

೨೦೨೨ ರಲ್ಲಿ ಪಾಕಿಸ್ತಾನದಲ್ಲಿನ ‘ಬಲೂಚಿಸ್ತಾನ ಲಿಬ್ರೇಶನ್ ಆರ್ಮಿ’ ಇಂದ ನಡೆಸಲಾದ ದಾಳಿಯಲ್ಲಿ ಶೇಕಡ ೭೭ ರಷ್ಟು ಹೆಚ್ಚಳವಾಗಿದೆ. ‘ಇಸ್ಲಾಮಿಕ್ ಸ್ಟೇಟ್ ಖೋರಾಸಾನ್’ದ ಪ್ರಭಾವ ಪಾಕಿಸ್ತಾನದಲ್ಲಿ ಕೂಡ ಹೆಚ್ಚುತ್ತಿದೆ. ಈ ಭಯೋತ್ಪಾದಕ ಸಂಘಟನೆಯಿಂದ ೨೦೨೨ ರಲ್ಲಿ ಪಾಕಿಸ್ತಾನದಲ್ಲಿ ೨೩ ಭಯೋತ್ಪಾದಕ ದಾಳಿ ನಡೆಸಿದೆ, ಅದರಲ್ಲಿ ೭೮ ಜನರು ಸಾವನ್ನಪ್ಪಿದ್ದಾರೆ. ಭಯೋತ್ಪಾದಕ ದಾಳಿ ನಡೆಸುವವರ ಸಂಖ್ಯೆಯ ಬಗ್ಗೆ ಸುಚಿತ್ ಬುರ್ಕಿನ್ ಫಾಸೊ ಈ ಆಫ್ರಿಕಾದಲ್ಲಿನ ದೇಶ ಮೊದಲ ಸ್ಥಾನದಲ್ಲಿದೆ. ೨೦೨೨ ರಲ್ಲಿ ಬುರ್ಕಿನೀ ಫಾಸೋದಲ್ಲಿ ಭಯೋತ್ಪಾದಕ ದಾಳಿಯಲ್ಲಿ ೧ ಲಕ್ಷ ೧೩೫ ಸಾವಿರ ಜನರು ಹತರಾಗಿದ್ದರು ಹಾಗೂ ೨೦೨೧ ರಲ್ಲಿ ೭೫೯ ಜನರು ಹತರಾದರು.

ಸಂಪಾದಕೀಯ ನಿಲುವು

ಪಾಕಿಸ್ತಾನ ಏನು ಬಿತ್ತಿದೆ, ಆದೆ ಬೆಳೆಯುತ್ತಿದೆ !