ಕೊಹಿನೂರ ವಜ್ರವಿರುವ ರಾಣಿಯ ಕಿರೀಟವನ್ನು ‘ಟಾವರ ಆಫ್ ಲಂಡನ’ ನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು

ಲಂಡನ (ಬ್ರಿಟನ) – ಕೊಹಿನೂರ ವಜ್ರವಿರುವ ಬ್ರಿಟನ ರಾಣಿಯ ಕಿರೀಟವನ್ನು ಸಾರ್ವಜನಿಕರಿಗಾಗಿ ಪ್ರದರ್ಶನಕ್ಕೆ ಇಡಲಾಗುವುದು. ಕಳೆದ ವರ್ಷ ಬ್ರಿಟನ ರಾಣಿ ಎಲಿಜಬೆತ್ ದ್ವಿತೀಯ ಇವರ ನಿಧನದ ಬಳಿಕ ರಾಜ ಚಾರ್ಲ್ಸ ತೃತೀಯ ಇವರ ಪತ್ನಿ ರಾಣಿ ಕಸೋರ್ಟ ಕ್ಯಾಮಿಲಾ ಇವರಿಗೆ ಈ ಕಿರೀಟವನ್ನು ಒಪ್ಪಿಸಲಾಗಿತ್ತು; ಆದರೆ ಅವರು ಈ ಕಿರೀಟವನ್ನು ಧರಿಸಲು ನಿರಾಕರಿಸಿದ್ದರು. ಈ ಕಾರಣದಿಂದ ಈಗ ಈ ಕಿರೀಟ, ಇನ್ನಿತರ ಅಮೂಲ್ಯವಾದ ಆಭರಣಗಳು,ಲಾಂಛನಗಳನ್ನು ಲಂಡನ್ನಿನ `ಟಾವರ್ ಆಫ್ ಲಂಡನ್’ ಇಲ್ಲಿ ಸಾರ್ವಜನಿಕ ಪ್ರದರ್ಶನಕ್ಕಾಗಿ ಇಡಲಿದೆ. ಇದರೊಂದಿಗೆ ಅವುಗಳ ಇತಿಹಾಸವನ್ನು ಕೂಡ ವಿವರಿಸಲಿದ್ದಾರೆ. ಮೇ ತಿಂಗಳಿನಲ್ಲಿ ಸಾಮಾನ್ಯ ನಾಗರಿಕರು ಈ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ.