ಚೀನಾವು ತೈವಾನದೊಂದಿಗೆ ಯುದ್ಧ ಮಾಡಿದರೆ ತೈವಾನನ ಪರವಾಗಿ ಯುದ್ಧಮಾಡುವ ಅಮೇರಿಕಾದ ಸ್ಫೋಟಕಗಳ ಸಂಗ್ರಹ ಒಂದು ವಾರದಲ್ಲಿ ಮುಗಿಯುವುದು! – ವರದಿಯಿಂದ ಬಹಿರಂಗ

ವಾಶಿಂಗ್ಟನ್ (ಅಮೇರಿಕಾ) – ತೈವಾನನಿಂದ ಅಮೇರಿಕಾ ಮತ್ತು ಚೀನಾ ಇವರ ನಡುವಿನ ಒತ್ತಡ ಹೆಚ್ಚುತ್ತಿದ್ದು, ಮುಂಬರುವ ಕಾಲದಲ್ಲಿ ಅದು ಯುದ್ಧದಲ್ಲಿ ರೂಪಾಂತರಗೊಳ್ಳಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ‘ಫೋರ್ಬ್ಸ’ನ ವರದಿಯನುಸಾರ, ಚೀನಾದ ತುಲನೆಯಲ್ಲಿ ಅಮೇರಿಕಾದ ಆಕ್ರಮಣ ನಡೆಸುವ ಸಾಮರ್ಥ್ಯ ಕಡಿಮೆಯಾಗಿದೆ. ಇದರ ಕಾರಣ ಚೀನಾದ ಸ್ಫೋಟಕಗಳನ್ನು ತಯಾರಿಸುವ ಕ್ಷಮತೆ ಬಹಳ ಹೆಚ್ಚಾಗಿದೆ. ಆದರೆ ಅಮೇರಿಕೆಯ ಕಾರಖಾನೆಗಳು ಇದರಲ್ಲಿ ಹಿಂದೆ ಬಿದ್ದಿವೆ. ಇಷ್ಟೇ ಅಲ್ಲದೇ, ಚೀನಾವು ಈಗ `ಆರ್.ಡಿ.ಎಕ್ಸ’ ಅಥವಾ `ಎನ್.ಎಂ.ಎಕ್ಸ’ ಸ್ಫೋಟಕಗಳಿಗಿಂತ ಶೇ. 40 ರಷ್ಟು ಹೆಚ್ಚು ಅಪಾಯಕಾರಿಯಾಗಿರುವ ಸ್ಫೋಟಕಗಳನ್ನು ತಯಾರಿಸಿದೆ. ಚೀನಾವು ತೈವಾನದೊಂದಿಗೆ ಯುದ್ಧ ಮಾಡಿದರೆ, ತೈವಾನ ಪರವಾಗಿ ಯುದ್ಧ ಮಾಡುವ ಅಮೇರಿಕಾದ ಸ್ಫೋಟಕಗಳ ಸಂಗ್ರಹ ಒಂದು ವಾರದಲ್ಲಿ ಮುಗಿಯುವುದು, ಎಂದು ಈ ವರದಿಯಲ್ಲಿ ಬಹಿರಂಗಗೊಳಿಸಲಾಗಿದೆ.

`ಫೋರ್ಬ್ಸ’ ತನ್ನ ವರದಿಯಲ್ಲಿ, ಸೈನ್ಯದ ಸ್ಫೋಟಕಗಳನ್ನು ತಯಾರಿಸಲು ಆವಶ್ಯಕವಿರುವ ದ್ರಾವಣಕ್ಕಾಗಿ ಅಮೇರಿಕಾ ಚೀನಾವನ್ನು ಅವಲಂಬಿಸಿದೆ. ಅಮೇರಿಕೆಗೆ ಚೀನಾದಿಂದ ಕನಿಷ್ಟ ಪಕ್ಷ 6 ದ್ರಾವಣಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ತೈವಾನದಲ್ಲಿ ಯುದ್ಧ ನಡೆದರೆ ಅಮೇರಿಕಾಗೆ ಚೀನಾದ ಕ್ಷಿಪಣಿಯಾಸ್ತ್ರವನ್ನು ದೊಡ್ಡ ಪ್ರಮಾಣದಲ್ಲಿ ಎದುರಿಸಬೇಕಾಗಬಹುದು. ಚೀನಾದ ಅನೇಕ ಕ್ಷಿಪಣಿಯಾಸ್ತ್ರಗಳ ಸಾಮರ್ಥ್ಯ ಅಮೇರಿಕೆಗಿಂತ ಅಧಿಕವಾಗಿದೆ. ಇದರ ಕಾರಣವೇನೆಂದರೆ, ಚೀನಾ ಹೊಸ ಪ್ರಕಾರದ ಸ್ಫೋಟಕಗಳನ್ನು ಅಭಿವೃದ್ಧಿ ಪಡಿಸಿದೆ.