ಶ್ರೀ ಕೃಷ್ಣ ಜನ್ಮ ಭೂಮಿ ಪ್ರಕರಣದಲ್ಲಿ ಮುಖ್ಯ ಕಕ್ಷಿದಾರ ಆಶುತೋಷ ಪಾಂಡೆ ಇವರಿಗೆ ಮುಸಲ್ಮಾನರಿಂದ ಬೆದರಿಕೆ !

ಆಶುತೋಷ ಪಾಂಡೆ

ಮಥುರ – ಶ್ರೀ ಕೃಷ್ಣನ ಜನ್ಮ ಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್ ಗೆ ಮತ್ತೆ ಬೆದರಿಕೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಶ್ರೀ ಕೃಷ್ಣ ಜನ್ಮ ಭೂಮಿ ಪ್ರಕರಣದ ಮುಖ್ಯ ಕಕ್ಷಿದಾರ ಆಶುತೋಷ ಪಾಂಡೆ ಇವರು, ‘ಒಬ್ಬ ಮುಸಲ್ಮಾನ ಯುವಕನು ಶ್ರೀ ಕೃಷ್ಣ ಜನ್ಮ ಭೂಮಿಯ ಮೇಲೆ ಇರುವ ಈದ್ಗಾ ಮಸೀದಿಯ ಪ್ರಕರಣದಲ್ಲಿ ನೀವು ಟ್ರಸ್ಟ್ ಪರವಾಗಿ ಹೋರಾಡಬಾರದು. ಇದರಿಂದ ಹಿಂದೆ ಸರಿಯದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’, ಎಂದು ಬೆದರಿಕೆ ನೀಡಿದ್ದಾನೆ, ಎಂದು ಮಾಹಿತಿ ನೀಡಿದರು. ಆಶೋತೋಷ್ ಪಾಂಡೆ ಇವರಿಗೆ ಈ ಹಿಂದೆ ಕೂಡ ಈ ರೀತಿಯ ಬೆದರಿಕೆ ಸಿಕ್ಕಿತ್ತು. ಇದರ ಬಗ್ಗೆ ಅವರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಶ್ರೀ ಕೃಷ್ಣ ಜನ್ಮ ಭೂಮಿಯ ಮೇಲೆ ಮುಸಲ್ಮಾನ ಆಕ್ರಮಣಕಾರರು ಈದ್ಗಾ ಮಸೀದಿ ಕಟ್ಟಿತ್ತು. ಈ ಪವಿತ್ರ ಭೂಮಿ ಹಿಂಪಡೆಯುವುದುಕ್ಕಾಗಿ ಹಿಂದೂಗಳು ಕಾನೂನಿನ ಹೋರಾಟ ನಡೆಸುತ್ತಿದ್ದಾರೆ.

ಕಳೆದ ವರ್ಷ ಈ ಪ್ರಕರಣದಲ್ಲಿನ ಮುಖ್ಯ ಕಕ್ಷಿದಾರ ಮಹೇಂದ್ರ ಪ್ರತಾಪ ಇವರಿಗೆ ಕೂಡ ಬೆದರಿಕೆ ನೀಡಿದ್ದರು. ಅವರು ಬೃಂದಾವನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ರಕ್ಷಣೆಗಾಗಿ ಬೇಡಿಕೆ ಸಲ್ಲಿಸಿದ್ದರು. ಮಹೇಂದ್ರ ಪ್ರತಾಪ ಇವರು ಆಗ್ರಾದಲ್ಲಿಯ ಜಾಮಾ ಮಸೀದಿಯ ಅಧ್ಯಕ್ಷ ಜಾಹಿದ್ ಕುರೇಶಿ ಇವರ ಮೇಲೆ ಜೀವ ಬೆದರಿಕೆ ನೀಡಿರುವ ಆರೋಪ ಮಾಡಿದ್ದರು.

ಸಂಪಾದಕರ ನಿಲುವು

* ಧಾರ್ಮಿಕ ಸ್ಥಳಗಳು ಹಿಂಪಡೆಯಲು ಕಾನೂನಿನ ಹೋರಾಟ ನಡೆಸುವ ಹಿಂದೂಗಳಿಗೆ ಬೆದರಿಕೆ ನೀಡುವವರಿಗೆ ನ್ಯಾಯ ವ್ಯವಸ್ಥೆಯಲ್ಲಿ ವಿಶ್ವಾಸ ಇಲ್ಲ, ಎಂದು ತಿಳಿಯಬೇಕೆ ?