ಶರ್ಮಾ ಇವರ ಕುಟುಂಬದವರ ಭೇಟಿ ! ಇದೆಲ್ಲ ನಾಟಕ ಭಯದಿಂದ ಮಾಡಲಾಗುತ್ತಿದೆಯೇ ? ಅಥವಾ ಅದರ ಹಿಂದೆ ಇನ್ನೇನಾದರೂ ಕುತಂತ್ರವಿದೆಯೇ ? ದಕ್ಷಿಣ ಕಾಶ್ಮೀರ ಜಿಲ್ಲೆಯ ಎ.ಟಿ.ಎಮ್. ಯಂತ್ರಕ್ಕೆ ಸಂಬಂಧಿಸಿದಕೆಲಸ ಮಾಡುತ್ತಿದ್ದ ಸಂಜಯ ಶರ್ಮಾ ಎಂಬ ಕಾಶ್ಮೀರಿ ಪಂಡಿತರನ್ನು ಭಯೋತ್ಪಾದಕರು ಹತ್ಯೆ ಮಾಡಿದರು. ‘ಮನೆಯಿಂದ ೧೦೦ ಮೀಟರ್ ದೂರದಲ್ಲಿ ಶರ್ಮಾರವರ ಹತ್ಯೆಯಾಗುತ್ತಿರು ವಾಗ ಅವರ ಕುಟುಂಬದವರಿಗೆ ಎಷ್ಟು ಮಾನಸಿಕ ಆಘಾತವಾಗಿರ ಬಹುದು ?’, ಎಂಬುದರ ಕಲ್ಪನೆ ಮಾಡಬಹುದು. ಶರ್ಮಾ ಇವರ ಕುಟುಂಬವು ಅಚ್ಛನ ಗ್ರಾಮದ ಏಕೈಕ ಕಾಶ್ಮೀರಿ ಪಂಡಿತ ಕುಟುಂಬವಾಗಿತ್ತು. ಪೇಟೆಗೆ ಹೋಗುವಾಗ ಶರ್ಮಾರವರ ಹತ್ಯೆಯಾದಾಗ ಅಲ್ಲಿನ ಮುಸಲ್ಮಾನ ಸಮಾಜವೂ ಸ್ವಲ್ಪ ಹೆದರಿತು, ಅವರು ಇದನ್ನು ಖಂಡಿಸಿದರು, ಆ ಕುಟುಂಬಕ್ಕೆ ಸಹಾಯ ಮಾಡುತ್ತಾ ಅವರಿಗೆ ಹೆಗಲು ನೀಡಿದರು.ಇದುಕೇವಲ ನಾಟಕವೇ ಅಥವಾ ‘ಭವಿಷ್ಯದಲ್ಲಿ ಪರಿಸ್ಥಿತಿ ಬದಲಾಗ ಬಹುದು’, ಎಂಬುದನ್ನು ಗಮನದಲ್ಲಿಟ್ಟು ನೆರೆಕರೆಯ ಮುಸಲ್ಮಾನರು ಈ ‘ಬಂಧುತ್ವ’ ತೋರಿಸಿದರೆ ? ಎಂಬುದನ್ನು ಮುಂಬರುವ ಕಾಲವೇ ನಿರ್ಧರಿಸುವುದು; ಆದರೆ ಇದು ಹಿಂದಿನ ಸ್ಥಿತಿ ಬದಲಾಗಿರುವುದರ ಒಂದು ಲಕ್ಷಣವಾಗಿದೆ. ಕಳೆದ ವರ್ಷ ೧೯ ನಾಗರಿಕರ ಹತ್ಯೆಯಾಯಿತು, ಇವರ ಪೈಕಿ ೮ ಜನರು ಹೊರಗಿನಿಂದ ಬಂದ ಕಾರ್ಮಿಕರಾಗಿದ್ದರು. ‘ಕಾಶ್ಮೀರವುಹಿಂದಿನಂತೆಯೇ ಧಗಧಗಿಸುತ್ತಿದೆಯೆ ?’, ಎನ್ನುವ ಪ್ರಶ್ನೆ ಉದ್ಭವಿಸುವಂತಹ ಘಟನೆ ಕಲಮ್ ೩೭೦ ನ್ನು ರದ್ದತಿಯ ನಂತರ ಒಂದು ವರ್ಷದಲ್ಲಿ ಘಟಿಸಿದೆ; ಆದರೆ ಈಗ ಸಾಮಾಜಿಕ ಮಾಧ್ಯಮಗಳಿಂದಾಗಿ ಈ ಅರಿವುವಡಿದೆ. ಕಾಶ್ಮೀರದ ಪ್ರಸಾರಮಾಧ್ಯಮಗಳು ಮೊದಲಿಗಿಂತ ಜಾಗರೂಕವಾಗಿವೆ. ಹಿಂದೂಗಳು ಜಾಗರೂಕರಾಗಿದ್ದಾರೆ. ಹಿಂದೂಗಳನ್ನು ಕೊಲ್ಲುವ ಭಯೋತ್ಪಾದಕರ ವಿರುದ್ದ ಸೈನ್ಯವೂ ತತ್ಪರತೆಯಿಂದ ಆಯಾಯ ಸಮಯದಲ್ಲಿ ಕೃತಿ ಮಾಡಿ ಸೇಡು ತೀರಿಸಿಕೊಂಡಿದೆ. ಸಂಜಯಶರ್ಮಾ ಇವರ ಹತ್ಯೆಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕನನ್ನು ಮರುದಿನವೇ ಅವಂತೀಪೋರಾದಲ್ಲಿ ಹತ್ಯೆ ಮಾಡಿ ಸೈನಿಕರು ಅತ್ಯಂತ ತತ್ಪರತೆಯಿಂದ ಅದರ ಸೇಡನ್ನು ತೀರಿಸಿಕೊಂಡರು. ಕಲಮ್ ೩೭೦ ಅನ್ನು ರದ್ದುಪಡಿಸಿದ ನಂತರ ಈ ಬದಲಾವಣೆ ಯಾಗಿದೆ; ಆದರೆ ‘ಶಸ್ತ್ರಸಜ್ಜಿತ ಭಾರತದಲ್ಲಿ ಹಿಂದೂಗಳ ಹತ್ಯೆಯೆ ಆಗದಂತಹ ಸ್ಥಿತಿಯನ್ನು ಸರಕಾರ ಯಾವಾಗ ನಿರ್ಮಾಣಮಾಡುವುದು ?’, ಎನ್ನುವ ಪ್ರಶ್ನೆ ಜಾಗೃತ ಭಾರತೀಯರಲ್ಲಿ ಉದ್ಭವಿಸಿದೆ. ಗಡಿಯಲ್ಲಿ ಕಟ್ಟುನಿಟ್ಟಾದ ಡ್ರೋನ್‌ನ ಕಾವಲು ಇರುವಾಗಲೂ ಭಯೋತ್ಪಾದಕರು ಒಳಗೆ ನುಗ್ಗುತ್ತಾರೆ ಅಥವಾ ಅವರು ದೇಶದಲ್ಲಿಯೆ ತಯಾರಾಗುತ್ತಿದ್ದಾರೆ. ಸರಕಾರ ಕಾಶ್ಮೀರ ದಲ್ಲಿ ಧ್ವಜಾರೋಹಣ, ಉತ್ತಮ ರಸ್ತೆಗಳನ್ನು ನಿರ್ಮಿಸುವುದು, ಉದ್ಯೋಗಗಳನ್ನು ಸೃಷ್ಟಿಸುವುದು ಇತ್ಯಾದಿಗಳನ್ನು ಮಾಡುತ್ತಿದೆ ಆದರೆ ಅದು ಕಾಶ್ಮೀರಿ ಹಿಂದೂಗಳ ರಕ್ಷಣೆಗಾಗಿ ಸಾಕಾಗುವುದಿಲ್ಲ, ಎಂಬುದು ಇದರಿಂದ ಪದೇ ಪದೇ ಅರಿವಾಗುತ್ತಿದೆ.
ಅವಕಾಶವಾದಿ ಮುಫ್ತಿ !
ಸಂಜಯ ಶರ್ಮಾರವರ ಹತ್ಯೆಯ ನಂತರ ‘ಪೀಪಲ್ಸ್ ಡೆಮೋಕ್ರಾಟಿಕ್ ಪಾರ್ಟಿ’ಯ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಇವರು ದ್ವೇಷ ಕಾರಿದ್ದಾರೆ. ‘ಇಂತಹ ಘಟನೆಗಳಿಂದ ಭಾಜಪಲಾಭಗಳಿಸುತ್ತಿದೆ’, ಎಂದು ಅವರು ಹೇಳಿದ್ದಾರೆ. ‘ಕಾಶ್ಮೀರಿ ಪಂಡಿತರಹತ್ಯೆ ಇಂದೂ ನಡೆಯುತ್ತಿದೆ’, ಎಂಬುದು ಎಷ್ಟು ಗಂಭೀರ ವಿಷಯವಾಗಿದೆ. ಇದರತ್ತ ಗಮನ ಹರಿಸದೇ ಅದರಲ್ಲಿಯೂರಾಜಕಾರಣವನ್ನು ತರುವ ಮುಫ್ತಿ ಎಷ್ಟು ಸಂವೇದನಾಶೂನ್ಯ ರಾಗಿದ್ದಾರೆ, ಎಂಬುದರ ಕಲ್ಪನೆ ಮಾಡಬಹುದು. ನಿಜ ನೋಡಿದರೆ ಅವರು ಇಲ್ಲಿಯ ವರೆಗೆ ಆಗಾಗ ಭಯೋತ್ಪಾದಕರಿಗೆ ಮಾಡಿದ ಸಹಾಯ ಹಾಗೂ ಅವರ ಲಾಭಕ್ಕಾಗಿ ಮಾಡಿದ ಕೃತಿಗಳನ್ನು ಇಡೀ ಭಾರತ ಗುರುತಿಸಿದೆ. ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ, ಗಡಿಯಲ್ಲಿ ನುಸುಳುವಿಕೆ, ಸ್ಥಳೀಯರಿಂದ ಭಯೋತ್ಪಾದಕರಿಗೆ ಸಿಗುವ ಸಹಾಯ, ಕಲ್ಲುತೂರಾಟ ಮಾಡುವ ಸ್ಥಳೀಯ ಮುಸಲ್ಮಾನರ ನಿರ್ಮಿತಿ, ಇವೆಲ್ಲಕ್ಕೂ ಒಂದಲ್ಲೊಂದು ರೀತಿಯಲ್ಲಿ ಮಾಜಿ ಮುಖ್ಯಮಂತ್ರಿ ಮುಫ್ತಿಯೇ ಜವಾಬ್ದಾರರಾಗಿದ್ದಾರೆ’, ಎಂಬುದನ್ನು ನಿರಾಕರಿಸುವಂತಿಲ್ಲ. ಮುಫ್ತಿಯವರು ಇಷ್ಟಕ್ಕೇ ನಿಲ್ಲಲಿಲ್ಲ. ‘ಬಲಪಂಥೀಯ ಭಯೋತ್ಪಾದಕರು ರಾಜಸ್ಥಾನದಲ್ಲಿ ಮುಸಲ್ಮಾನರನ್ನು ಹತ್ಯೆ ಮಾಡಿದರು ಹಾಗೂ ಈಗ ಕಾಶ್ಮೀರದಲ್ಲಿಯೂ ಹಿಂದೂಗಳ ಹತ್ಯೆ ಮಾಡಿದರು’, ಎಂದು ಪ್ರಸಾರಮಾಧ್ಯಮಗಳೆದುರು ಬೊಬ್ಬೆ ಹೊಡೆದರು. ‘ಕಾಶ್ಮೀರದಲ್ಲಿ ಭಯೋತ್ಪಾದನೆ ಮುಗಿದಿದೆ ಎಂದಾದರೆ ಶರ್ಮಾರನ್ನು ಯಾರು ಹತ್ಯೆ ಮಾಡಿದರು ?’, ಎಂದು ಹೇಳುತ್ತಾ ಪರೋಕ್ಷವಾಗಿ ‘ಅದನ್ನು ಹಿಂದೂಗಳು ಮಾಡಿದರು’, ಎಂದು ಹೇಳಲು ಮುಫ್ತಿ ಇವರು ಪುನಃ ಪುನಃ ಪ್ರಯತ್ನಿಸಿದರು. ಸೈನ್ಯವು ಸಂಬಂಧಪಟ್ಟ ಭಯೋತ್ಪಾದಕನನ್ನು ಹತ್ಯೆ ಮಾಡಿ ಭಯೋತ್ಪಾದಕರು ಶರ್ಮಾ ಇವರನ್ನು ಹತ್ಯೆ ಮಾಡಿದ್ದಾರೆಂಬ ಪುರಾವೆಯನ್ನು ನೀಡಿದ್ದರೂ, ಮುಫ್ತಿಯವರು ಹಿಂದೂವಿರೋಧಿ ದ್ವೇಷಕಾರುವಿಕೆ ನಿಲ್ಲಿಸಲು ಸಿದ್ಧರಿಲ್ಲ. ಆದ್ದರಿಂದ ‘ಭಯೋತ್ಪಾದಕರಿಗೆ ಪರೋಕ್ಷವಾಗಿ ಸಹಾಯ ಮಾಡುವ ಮುಫ್ತಿಯ ಮೇಲೆ ಮತ್ತು ಅವರ ಪಕ್ಷದ ಮೇಲೆಯೆ ನಿರ್ಬಂಧ ಏಕೆ ಹೇರಬಾರದು ?’, ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಕಾಶ್ಮೀರ ಕಣಿವೆಯಲ್ಲಿ ಸಾಮಾನ್ಯ ಸ್ಥಿತಿ ಇದೆ, ‘ಭಾಜಪವೇ ಇಲ್ಲಿ ಶಾಂತಿಯನ್ನು ಕೆಡಿಸುತ್ತಿದೆ’, ಎಂದು ಅವರು ಆರೋಪಿಸಿದ್ದಾರೆ. ‘ವಿದ್ವೇಷಿ (ಅಂದರೆ ‘ದ ಕಾಶ್ಮೀರ ಫೈಲ್ಸ್) ಚಲನಚಿತ್ರವನ್ನು ಪುರಸ್ಕರಿಸುವ ಬದಲು ಇಲ್ಲಿನ ಅಲ್ಪಸಂಖ್ಯಾತರ ಸುರಕ್ಷೆಗಾಗಿ ಸರಕಾರ ಸಹಾಯ ಮಾಡಬೇಕಿತ್ತು’, ಎಂದು ಮುಫ್ತಿ ಹೇಳಿದರು. ಭಯೋತ್ಪಾದಕರನ್ನು ಸಲಹುವ ಮುಫ್ತಿಗೆ ಹೀಗೆ ಮಾತನಾಡುವ ಅಧಿಕಾರವಿದೆಯೇ ? ಶರ್ಮಾ ಇವರ ಪತ್ನಿಗೆ ಸರಕಾರಿ ನೌಕರಿ ಹಾಗೂ ಕುಟುಂಬದವರಿಗೆ ತಲಾ ೫ ಲಕ್ಷ ರೂಪಾಯಿ ಕೊಡಬೇಕೆಂದು ಮುಫ್ತಿ ಸರಕಾರಕ್ಕೆ ಸಲಹೆ ನೀಡಿದ್ದಾರೆ. ನಿಜ ನೋಡಿದರೆ ಕಾಶ್ಮೀರದಲ್ಲಿ ಭಯೋತ್ಪಾದನಾ ವಾತಾವರಣ ಸೃಷ್ಟಿಯಾಗಲು ಜವಾಬ್ದಾರರಾಗಿರುವ ಮುಫ್ತಿ ಇವರ ಜೇಬಿನಿಂದಲೆ ಈ ಮೊತ್ತವನ್ನು ತೆಗೆದುಕೊಂಡು ಸಂತ್ರಸ್ತರಿಗೆ ನೀಡಬೇಕು. ಧೂರ್ತೆ ಮುಫ್ತಿ ಇಷ್ಟಕ್ಕೆ ನಿಲ್ಲಲಿಲ್ಲ. ಈ ಘಟನೆಯ ಹಿನ್ನೆಲೆಯಲ್ಲಿ ಅವರು ಮುಸಲ್ಮಾನರಿಗೆ ಕರೆ ನೀಡಿದ್ದಾರೆ, ”ಮುಸಲ್ಮಾನರು ತಮ್ಮ ರಕ್ಷಣೆಗಾಗಿ ಏನೆಲ್ಲ ಮಾಡಲು ಸಾಧ್ಯವಿದೆಯೋ, ಅದನ್ನೆಲ್ಲ ಮಾಡಬೇಕು” ಎಂದು ಹೇಳಿ ಅವರು ಒಂದು ರೀತಿಯಲ್ಲಿ ಮತಾಂಧರನ್ನು ಪ್ರಚೋದಿಸಿದ್ದಾರೆ. ಇದಕ್ಕೆ ಎಂತಹ ದ್ರೋಹವೆಂದು ಹೇಳಬೇಕು ? ‘ಮುಸಲ್ಮಾನರು ಕಣಿವೆಯಲ್ಲಿ ಅಸುರಕ್ಷಿತರಾಗಿದ್ದಾರೆ’, ಎಂದು ಪುನಃ ಪುನಃ ನಾಟಕವಾಡುತ್ತಿದ್ದಾರೆ.
‘ಭಾಜಪ ಈ ಘಟನೆಯನ್ನು ರಾಜಕಾರಣ ಮಾಡುತ್ತಿದೆ’, ಎಂದು ಹೇಳುವ ಮುಫ್ತಿ ತಾವೇ ಈ ಘಟನೆಯಿಂದ ಎಷ್ಟು ರಾಜಕಾರಣ ಮಾಡಿದ್ದಾರೆ, ಎಂಬುದು ಮೇಲಿನ ವಿವಿಧ ಹೇಳಿಕೆಗಳಿಂದ ಹಾಗೂ ಶರ್ಮಾ ಇವರ ಕುಟುಂಬದವರ ಭೇಟಿ ಮಾಡುವ ಪ್ರಸಂಗದಿಂದ ಅರಿವಾಗುತ್ತದೆ. ಇವೆಲ್ಲ ನಾಟಕಗಳು ಭಯದಿಂದಾಗಿದೆಯೇ ? ಅಥವಾ ಅದರ ಹಿಂದೆ ಇನ್ನೇನಾದರೂಸಂಚಿದೆಯೇ ? ಎಂಬುದು ಭವಿಷ್ಯದಲ್ಲಿ ತಿಳಿಯಲಿದೆ. ಧೂರ್ತೆ ಮುಫ್ತಿ ಇವರು ಶರ್ಮಾ ಇವರ ಹತ್ಯೆಯ ನಂತರ ಏನೆಲ್ಲ ರಾಜಕಾರಣ ಮಾಡಿದ್ದಾರೆ. ಮುಫ್ತಿಯವರಿಗೆ ಭಾಜಪ ಆಡಳಿತ ಗೃಹಬಂಧನದಲ್ಲಿಟ್ಟು ನೀಡಿದ ಶಿಕ್ಷೆ ಸಾಕಾಗಲಿಲ್ಲ, ಎಂಬುದೇ ಇದರಿಂದ ಅರಿವಾಗುತ್ತದೆ.
”ಸರಕಾರಕ್ಕೆ ೭೫ ಲಕ್ಷ ಕಾಶ್ಮೀರಿಗಳನ್ನು ಕಾಪಾಡುವ ಅರ್ಹತೆ ಇಲ್ಲದಿರುವಾಗ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಬಲೂಚಿಸ್ತಾನವನ್ನು ವಶಪಡಿಸಿಕೊಳ್ಳುವ ಕನಸು ಕಾಣುತ್ತಿದೆ’’, ಎಂದು ‘ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ’ಯು ಈ ಘಟನೆಯ ವಿಷಯದಲ್ಲಿ ಹೇಳಿದೆ. ಈ ಘಟನೆಯ ನಂತರ ಭಾಜಪವು ಕಾಶ್ಮೀರದಲ್ಲಿ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ಮಾಡಿತು. ಜನರಿಗೆ ಈಗ ಪಾಕಿಸ್ತಾನವಿರೋಧಿ ಪ್ರತಿಭಟನೆ ಬೇಕಾಗಿಲ್ಲ, ಭಯೋತ್ಪಾದಕರನ್ನು ತಯಾರಿಸುವ ಪಾಕಿಸ್ತಾನದ ಸೊಂಟ ಮುರಿಯುವುದನ್ನು ನೋಡಲಿಕ್ಕಿದೆ. ಏಕೆಂದರೆ ಪಾಕಿಸ್ತಾನ ದಿವಾಳಿಯಾಗಿದ್ದರೂ ಅದು ತನ್ನ ಭಯೋತ್ಪಾದಕತೆಯನ್ನು ನಿಲ್ಲಿಸುವುದು ಕಾಣಿಸುವುದಿಲ್ಲ ಹಾಗೂ ಮುಫ್ತಿಯಂತಹವರು ಅದರ ಲಾಭವನ್ನು ಪಡೆಯುತ್ತಿದ್ದಾರೆ ! ದಿವಾಳಿಯಾಗಿದ್ದರೂ ಪಾಕಿಸ್ತಾನ ತನ್ನ ಭಯೋತ್ಪಾದನೆಯನ್ನು ನಿಲ್ಲಿಸದಿರುವುದರಿಂದ ಭಾರತ ಅದರ ಮುಂದಿನ ಕಠೋರ ಹೆಜ್ಜೆಯನ್ನಿಡಬೇಕು