ಕೊರತೆಗಳಿಂದ ಕೂಡಿರುವ ಪಾಶ್ಚಾತ್ಯರ ಕಾಲಗಣನೆ !

೧. ಹಿಂದೂ ಸಂಸ್ಕೃತಿಯ ಪ್ರಾಚೀನ ಪರಂಪರೆಗೆ ಹೆದರಿ ಕ್ರೈಸ್ತ ಕಾಲಗಣನೆಯನ್ನು ಹಿಂದೂಗಳ ಮೇಲೆ ಹೇರಿದ ಆಂಗ್ಲರು !

ಪ್ರಾಚೀನ ಕಾಲದಿಂದಲೂ ಹಿಂದೂ ಧರ್ಮವು ಕಾಲಗಣನೆಯ ಜ್ಞಾನವನ್ನು ಪ್ರತಿಯೊಬ್ಬ ಹಿಂದೂವಿಗೆ ಬಾಲ್ಯದಿಂದಲೇ ಮತ್ತು ಅವನ ಮನೆಯಲ್ಲಿಯೇ ಸಿಗುವ ವ್ಯವಸ್ಥೆಯನ್ನು ಮಾಡಿಟ್ಟಿದೆ ! ಈಗಲೂ ಹಳ್ಳಿಗಳಲ್ಲಿನ ವೃದ್ಧರು ಸೂರ್ಯ ಅಥವಾ ಚಂದ್ರನ ಸ್ಥಿತಿಯಿಂದ ಸಮಯವನ್ನು ಚಾಚೂತಪ್ಪದೇ ಹೇಳುತ್ತಾರೆ ! ಹಿಂದೂಗಳ ಕಾಲಗಣನೆಯ ಈ ಅತ್ಯಂತ ಪರಿಪೂರ್ಣ, ನಿಖರವಾದ ಮತ್ತು ಆಳವಾದ ಜ್ಞಾನವು ಧರ್ಮಗ್ರಂಥಗಳಲ್ಲಿ ಬಂದಿರುವುದರಿಂದ, ಅದು ಪ್ರಾಚೀನ ಕಾಲದಿಂದಲೂ ಬ್ರಾಹ್ಮಣರು ಮತ್ತು ಜ್ಞಾನೀ ಪಂಡಿತರಿಗೆ ತಿಳಿದಿರುವಂತೆಯೇ ನಿತ್ಯ ಜೀವನದಲ್ಲಿ ಬೇಕಾಗುವ ಕಾಲದ ಜ್ಞಾನವು ಎಲ್ಲ ವರ್ಣಗಳಲ್ಲಿನ ಜನಸಾಮಾನ್ಯರಿಗೂ ತಿಳಿದಿತ್ತು, ಇದು ವಿಶೇಷವಾಗಿದೆ. ಹಿಂದೂಗಳ ಪರಿಪೂರ್ಣ ಕಾಲಗಣನೆಯ ಪದ್ಧತಿಯೇ ಇದಕ್ಕೆ ಕಾರಣವಾಗಿದೆ ! ಇದರಲ್ಲಿ ಬಿತ್ತನೆ ಯಾವಾಗ ಮಾಡಬೇಕು ? ಮಳೆ ಯಾವಾಗ ಬರುವುದು ?ಸಮುದ್ರದ ಉಬ್ಬರಿಳಿತದಂತಹ ಅನೇಕ ವಿಷಯಗಳಿವೆ.

೧೮ ನೇ ಶತಮಾನದಲ್ಲಿ ಆಂಗ್ಲರು ಗುರುಕುಲ ಶಿಕ್ಷಣ ಪದ್ಧತಿಯನ್ನು ನಿಲ್ಲಿಸಿದರು ಮತ್ತು ಹಿಂದೂಗಳಿಗೆ ಏನೆಲ್ಲ ಸಂಬಂಧಿಸಿದೆಯೋ ಅವು ತುಚ್ಛ, ಹೀನ ಅಥವಾ ಕೆಳಮಟ್ಟದ್ದಾಗಿದೆ  !’ ಎಂಬ ಒಂದು ವಿಚಾರಧಾರೆಯನ್ನೇ ಪ್ರಾರಂಭಿಸಿದರು ಮತ್ತು ಸ್ವಾತಂತ್ರ್ಯದ ನಂತರ ನೆಹರೂವರು ಅದನ್ನೇ ಮುಂದುವರಿಸಿದರು. ಆಂಗ್ಲ ವಿದ್ವಾಂಸರು ಕ್ರೈಸ್ತ ಪಂಥವೇ ಬಹಳ ಹಳೆಯದಾಗಿದೆ ಅಥವಾ ‘ಸನಾತನ ಸಂಸ್ಕೃತಿಯು ಹೆಚ್ಚು ಪ್ರಾಚೀನವಲ್ಲ’, ಹೀಗೆ ತೋರಿಸಲು ಹಿಂದೂಗಳ ಧರ್ಮಗ್ರಂಥಗಳ ನಿರ್ಮಿತಿಯ ವರ್ಷಗಳನ್ನೂ ತಪ್ಪಾಗಿ ಹೇಳಿ ಹಿಂದೂಗಳ ದಾರಿ ತಪ್ಪಿಸಿದರು.

ಕ್ರೈಸ್ತರು (ಆಂಗ್ಲರು) ಭಾರತೀಯ ಹಿಂದೂಗಳಿಗೆ ಬಹಳಷ್ಟು ಕೊರತೆಗಳಿರುವ, ತುಲನೆಯಲ್ಲಿ ತೀರಾ ಇತ್ತೀಚಿನ ಕಾಲದಲ್ಲಿ ನಿರ್ಮಾಣವಾಗಿರುವ ಮತ್ತು ಸತತವಾಗಿ ಬದಲಾವಣೆಯಾಗುತ್ತಿರುವ ಪಾಶ್ಚಾತ್ಯರ ಕಾಲಗಣನೆಯನ್ನು ಒಪ್ಪಿಕೊಳ್ಳುವಂತೆ ಮಾಡಿದರು. ಇಷ್ಟೇ ಅಲ್ಲದೇ ನಂತರ ಅದಕ್ಕನುಸಾರ ಹೊಸ ವರ್ಷಾರಂಭವನ್ನು ಆಚರಿಸಲು ಒತ್ತಾಯಪಡಿಸಿದರು. ಇದರಿಂದ ಮುಂದೆ ಕೆಲವು ವರ್ಷಗಳಲ್ಲಿ ಹಿಂದೂಗಳು ‘ಯುಗಾದಿ’ ನಮ್ಮ ವರ್ಷಾರಂಭವಾಗಿದೆ, ಎಂಬುದನ್ನೇ ಮರೆತರು !

೨. ಆಂಗ್ಲ ಕಾಲಗಣನೆಯ ಪದ್ಧತಿಯಲ್ಲಿ ದೋಷಗಳಿರುವುದರಿಂದ ಅದರಲ್ಲಿ ಬದಲಾವಣೆಗಳಾಗುವುದು

ಪಾಶ್ಚಾತ್ಯ ಕಾಲಗಣನೆಯನ್ನು ಅವರಿಗೆ ಅನೇಕ ಬಾರಿ ಬದಲಾಯಿಸಬೇಕಾಯಿತು. ಹಿಂದೆ ಪ್ರಚಲಿತವಿದ್ದ ‘ಜ್ಯುಲಿಯನ್‌ ಕ್ಯಾಲೆಂಡರ್‌’ನ್ನು ೧೫೮೨ ರಲ್ಲಿ ಒಮ್ಮೆಲೆ ಬದಲಾಯಿಸಿ ‘ಗ್ರೆಗೋರಿಯನ್‌ ಕ್ಯಾಲೆಂಡರ್‌’ನ್ನು ಬಳಸಲಾಯಿತು; ಏಕೆಂದರೆ ಮೊದಲಿನ ‘ಕ್ಯಾಲೆಂಡರ್‌’ನಲ್ಲಿ ದೋಷಗಳಿದ್ದವು. ಹಳೆಯ ಜ್ಯುಲಿಯನ್‌ ಕ್ಯಾಲೆಂಡರ್‌ನ ಬದಲು ‘ಪೊಪ್‌ ಗ್ರೆಗರಿ ಘಿಈಈಈ’ನು ಕ್ಯಾಥೊಲಿಕ ದೇಶಗಳಲ್ಲಿ ಗ್ರೆಗೋರಿಯನ್‌ ಕ್ಯಾಲೆಂಡರ್‌ ಆರಂಭಿಸಿ ದನು. ಆಗ ಗುರುವಾರ, ೪ ಅಕ್ಟೋಬರ್‌ ನಂತರದ ದಿನ ಶುಕ್ರವಾರ,೧೫ ಅಕ್ಟೋಬರ್‌ ಎಂದಿತ್ತು ! ಪಾಶ್ಚಾತ್ಯ ಕ್ಯಾಲೆಂಡರ್‌ಗಳಿಂದ ದಿನಾಂಕ, ತಿಂಗಳು ಮತ್ತು ವರ್ಷ ಇಷ್ಟೇ ತಿಳಿಯುತ್ತದೆ ಹಾಗೂ ಗಡಿಯಾರದಲ್ಲಿ ಸೆಕೆಂಡು, ನಿಮಿಷ, ಗಂಟೆಗಳಷ್ಟೇ ಇರುತ್ತದೆ.