ಸರಕಾರಿಕರಣಗೊಂಡ ದೇವಾಲಯಗಳನ್ನು ಭಕ್ತರಿಗೆ ಹಸ್ತಾಂತರಿಸಬೇಕು ಮತ್ತು ಅವುಗಳನ್ನು ನಡೆಸಲು ಹಿಂದೂ ಮಂಡಳಿಯನ್ನು ಸ್ಥಾಪಿಸಬೇಕು ! – ಮಹಂತ ಶ್ರೀ ಸುಧೀರದಾಸಜೀ ಮಹಾರಾಜ

ಮಸೀದಿಗಳಿಗೆ ವಕ್ಫ್ ಬೋರ್ಡ್, ದೇವಾಲಯಗಳಿಗೆ ಸನಾತನ ಬೋರ್ಡ್ ಏಕಿಲ್ಲ ? ಈ ಕುರಿತು ವಿಶೇಷ ಸಂವಾದ !

ಶ್ರೀ ಸುಧೀರದಾಸಜೀ ಮಹಾರಾಜ

ಮುಂಬೈ – ಮಸೀದಿಗಳಿಗೆ ವಕ್ಫ್ ಬೋರ್ಡ್, ಚರ್ಚ್ ಗಳಿಗೆ ಸ್ವತಂತ್ರ ಚರ್ಚ್ ಸಮಿತಿ (ಡೈಸೆಶನ ಬೋರ್ಡ್) ಇದೆ. ಹಿಂದೂ ದೇವಾಲಯಗಳಿಗೂ ಸಮಿತಿ ಅಥವಾ ಮಂಡಳಿ ಸ್ಥಾಪಿಸ ಬೇಕು. ಹಿಂದೂ ದೇವಾಲಯಗಳ ಉತ್ತಮ ನಿರ್ವಹಣೆಗೆ ಹಿಂದೂ ಸಮಿತಿಯ ಅಗತ್ಯವಿದೆ. ಸರಕಾರದ ಅಧೀನದಲ್ಲಿರುವ ದೇವಾಲಯ ಗಳನ್ನು ಭಕ್ತರಿಗೆ ಹಸ್ತಾಂತರಿಸಿ ಅವುಗಳ ನಿರ್ವಹಣೆಯನ್ನು ಈ ಸಮಿತಿಗೆ ವಹಿಸಬೇಕು ಎಂದು ನಾಶಿಕ್‌ನ ಶ್ರೀ ಕಾಳಾರಾಮ ದೇವಸ್ಥಾನದ ಆಚಾರ್ಯ ಮಹಾಮಂಡಲೇಶ್ವರ ಮಹಂತ ಶ್ರೀ ಸುಧೀರದಾಸಜೀ ಮಹಾರಾಜ ಕರೆ ನೀಡಿದರು. ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಮಸೀದಿ ಗಳಿಗೆ ವಕ್ಫ್ ಬೋರ್ಡ್, ದೇವಸ್ಥಾನಗಳಿಗೆ ಸನಾತನ ಬೋರ್ಡ್ ಏಕಿಲ್ಲ ? ಎಂಬ ವಿಷಯದ ಕುರಿತು ಆಯೋಜಿಸಿದ್ದ ಆನ್‌ಲೈನ್ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ಮಹಂತ್ ಶ್ರೀ ಸುಧೀರದಾಸಜೀ ಮಹಾರಾಜ ತಮ್ಮ ಮಾತನ್ನು ಮುಂದುವರೆಸುತ್ತಾ, “ಹಲವು ಪ್ರಸಿದ್ಧ ದೇವಾಲಯಗಳ ಸುತ್ತಮುತ್ತ ಮದ್ಯ ಮತ್ತು ಮಾಂಸಾಹಾರಿ ಅಂಗಡಿಗಳಿವೆ, ಅವುಗಳನ್ನು ಮುಚ್ಚಬೇಕು. ಕೆಲವು ಪ್ರಸಿದ್ಧ ದೇವಸ್ಥಾನಗಳಲ್ಲಿ ಪ್ರವಾಸೋದ್ಯಮಕ್ಕಾಗಿ ಅಭಿವೃದ್ಧಿ ಮತ್ತು ಸೌಲಭ್ಯಗಳನ್ನು ಒದಗಿಸಿದ್ದರೂ, ಆ ದೇಗುಲಗಳ ಸಂಪ್ರದಾಯ ಮತ್ತು ಆಧ್ಯಾತ್ಮಿಕತೆಯನ್ನು ಯಥಾಸ್ಥಿತಿಯಲ್ಲಿ ಕಾಪಾಡುವ ಜವಾಬ್ದಾರಿ ಆಯಾ ದೇಗುಲಗಳ ಅರ್ಚಕರ ಮತ್ತು ನಿರ್ವಹಣೆಯ ಜವಾಬ್ದಾರಿಯಾಗಿದೆ. ಅಲ್ಲದೆ, ‘ಲ್ಯಾಂಡ್ ಜಿಹಾದ್ ಮೂಲಕ ‘ವಕ್ಫ್ ಬೋರ್ಡ್ ಲಕ್ಷಗಟ್ಟಲೆ ಎಕರೆ ಭೂಮಿಯನ್ನು ಕಬಳಿಸುತ್ತಿದೆ. ಈ ವಕ್ಫ್ ಬೋರ್ಡ್ ಮೇಲೆ ಸರಕಾರ ಕಡಿವಾಣ ಹಾಕಬೇಕು ಎಂದರು.

ಸನಾತನ ಬೋರ್ಡ್ ಬೇಕು ! – ಶ್ರೀ. ಅನುಪ ಜೈಸ್ವಾಲ್, ಕಾರ್ಯದರ್ಶಿ, ದೇವಸ್ಥಾನ ಸೇವಾ ಸಮಿತಿ

ಶ್ರೀ. ಅನುಪ ಜೈಸ್ವಾಲ್

ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳು ಈಗ ಒಂದಾಗ ಬೇಕು. ಅಲ್ಲದೆ ದೇವಸ್ಥಾನಗಳಿಗೆ ಸನಾತನ ಬೋರ್ಡ್ ಸ್ಥಾಪಿಸಬೇಕು. ಸರಕಾರ ದೇವಾಲಯಗಳನ್ನು ಸ್ವಾಧೀನ ಪಡಿಸಿಕೊಂಡು ದೇವಾಲಯದ ಹಣದಿಂದ ಒಂದಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದರಿಂದ ಸರಕಾರ ಚೆನ್ನಾಗಿದೆ ಎನ್ನಲಾಗದು; ಏಕೆಂದರೆ ಇವುಗಳನ್ನು ಸರಕಾರೇತರ ದೇವಾಲಯ ಮತ್ತು ಭಕ್ತರು ಸಹ ನಡೆಸುತ್ತಾರೆ.