|
ಐಝವಾಲ್ (ಮಿಜೋರಾಂ) – ಈಶಾನ್ಯ ಭಾರತದಲ್ಲಿ ಕ್ರೈಸ್ತ ಬಾಹುಸಂಖ್ಯಾತ ರಾಜ್ಯವಾಗಿರುವ ಮಿಝೋರಾಮನಲ್ಲಿ ಹಿಂದೂಗಳ ಒಂದು ಐತಿಹಾಸಿಕ ದೇವಸ್ಥಾನ ಸರಕಾರದ ವಶಕ್ಕೆ ಹೋಗುವ ಆತಂಕ ನಿರ್ಮಾಣವಾಗಿದೆ. ರಾಜಧಾನಿ ಐಝವಾಲ್ ನಲ್ಲಿರುವ `ಅಸ್ಸಾಂ ರೈಫಲ್ಸ್ ಹರಿ ಮಂದಿರ’ (ಮಹಾದೇವ್ ತ್ರಾಣ್ ಮಂದಿರ)ದ ಉಸ್ತುವಾರಿಯನ್ನು ಇಲ್ಲಿಯವರೆಗೆ ಅಸ್ಸಾಂ ರೈಫಲ್ಸ್ ನೋಡಿಕೊಳ್ಳುತಿತ್ತು; ಆದರೆ ಈಗ ಅಸ್ಸಾಂ ರೈಫಲ್ಸ್ ಕೇಂದ್ರಸ್ಥಾನವು ನಗರದಿಂದ 15 ಕಿ.ಮೀ ದೂರದಲ್ಲಿರುವ ಝೋಖಾವ್ಸಾಂಗ್ ಈ ಪ್ರದೇಶಕ್ಕೆ ಸ್ಥಳಾಂತರಿಸಲು ನಿರ್ಣಯಿಸಿರುವುದರಿಂದ ಈ ಮಂದಿರದ ಉಸ್ತುವಾರಿ ರಾಜ್ಯ ಸರಕಾರದ ವಶಕ್ಕೆ ಹೋಗುವ ಭಯವನ್ನು ವ್ಯಕ್ತಪಡಿಸಲಾಗುತ್ತಿದೆ. ಈ ಮಂದಿರ ಗೂರ್ಖಾ ಮತ್ತು ಬ್ರೂ ರೇಅಂಗ ಈ ಹಿಂದೂ ಸಮುದಾಯದವರಿಗೆ ಶ್ರದ್ಧೆಯ ಪ್ರಮುಖ ಸ್ಥಾನವಾಗಿದೆ.
Fear of Government Takeover of the Hari Mandir in Christian-Majority Mizoram!
There is a possibility that the temple under the Indian Army’s ‘Assam Rifles’ may come under the control of the State government
The Mizoram Gorkha Temple Sanchalan Samiti has written a letter to the… pic.twitter.com/eFxfjSbVgO
— Sanatan Prabhat (@SanatanPrabhat) October 14, 2024
1. ಈ ಮಂದಿರದಲ್ಲಿ ಜನ್ಮಾಷ್ಟಮಿ, ದುರ್ಗಾಪೂಜಾ, ದೀಪಾವಳಿಗಳಂತಹ ಹಬ್ಬಗಳನ್ನು ಆಚರಿಸುವುದರೊಂದಿಗೆ ವಿವಾಹ ಮತ್ತು ಕೀರ್ತನೆಗಳ ಕಾರ್ಯಕ್ರಮಗಳನ್ನು ಕೈಗೊಳ್ಳುವ ಪ್ರಮುಖ ಕೇಂದ್ರವಾಗಿದೆ.
2. ಮಿಜೋರಾಂ ಗೂರ್ಖಾ ಮಂದಿರದ ಸಂಚಾಲನಾ ಸಮಿತಿ ಅಧ್ಯಕ್ಷ ಮನಕುಮಾರ್ ಜೈಶಿ ಅವರು ಇತ್ತೀಚೆಗೆ ಹರಿ ಮಂದಿರದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ, ಐಝವಾಲ್ ಮೂಲದ ‘2ನೇ ಅಸ್ಸಾಂ ರೈಫಲ್ಸ್’ ಕಮಾಂಡೆಂಟ್‌ಗೆ ಒಂದು ಪತ್ರವನ್ನು ಬರೆದಿದ್ದಾರೆ.
3. ಜೈಶಿ ಅವರು, ಅಸ್ಸಾಂ ರೈಫಲ್ಸ ನ ಭದ್ರತಾ ಸಿಬ್ಬಂದಿಯವರ ಕುಟುಂಬದವರಿಗೆ ಹರಿ ಮಂದಿರದ ಬಗ್ಗೆ ಹೆಚ್ಚಿನ ಭಾವನಾತ್ಮಕ ಮಹತ್ವವಿದೆ. ಈ ಮಂದಿರವನ್ನು ರಕ್ಷಿಸಬೇಕು ಮತ್ತು ಅಸ್ಸಾಂ ರೈಫಲ್ಸ್ ನ ಸೈನಿಕರ ವಂಶಸ್ಥರು ಮತ್ತು ಇತರ ಹಿಂದೂ ಸಮುದಾಯಗಳು ಅಲ್ಲಿ ಪೂಜೆ ಮಾಡಬೇಕು ಎಂಬುದು ನಮ್ಮ ವಿನಮ್ರ ಕರೆಯಾಗಿದೆ ಎಂದು ಬರೆದಿದ್ದಾರೆ.
4. ಜೈಶಿ, ಜುಲೈ 2024 ರಲ್ಲಿ ಅಸ್ಸಾಂ ರೈಫಲ್ಸ್ ಸ್ಥಳಾಂತರಗೊಳಿಸಲು ಕೇಂದ್ರ ಸರಕಾರ ಮತ್ತು ಮಿಜೋರಾಂ ಸರಕಾರದ ನಡುವೆ ಒಪ್ಪಂದವಾಗಿತ್ತು. ಒಪ್ಪಂದದ ಸಧ್ಯದ ಸ್ಥಿತಿ ತಿಳಿದಿರದಿದ್ದರೂ, ಮಿಝೋರಾಮ ಸರಕಾರ ‘ಅಸ್ಸಾಂ ರೈಫಲ್ಸ್ ಕಾಂಪ್ಲೆಕ್ಸ್’ ಅನ್ನು ವಶಕ್ಕೆ ಪಡೆಯುತ್ತದೆ ಎನ್ನುವುದು ಸ್ಪಷ್ಟವಾಗಿದೆ.
5. ಈ ಐತಿಹಾಸಿಕ ಹರಿ ಮಂದಿರ ಅಸ್ಸಾಂ ರೈಫಲ್ಸ್‌ನ ಪ್ರದೇಶದಲ್ಲಿರುವುದರಿಂದ ಮಂದಿರದ ನಿರ್ವಹಣೆ ಮತ್ತು ಉಸ್ತುವಾರಿಯ ಜವಾಬ್ದಾರಿಯನ್ನು ಮಿಜೋರಾಂ ಸರಕಾರಕ್ಕೆ ಹಸ್ತಾಂತರಿಸುತ್ತಾರೆ ಎಂದು ಸ್ಥಳೀಯ ಹಿಂದೂಗಳಿಗೆ ಭಯವಾಗುತ್ತಿದೆ.
6. ಮಂದಿರದ ಉಸ್ತುವಾರಿಯನ್ನು ಗೂರ್ಖಾ ಹಿಂದೂಗಳಿವೆ ಒಪ್ಪಿಸಬೇಕು ಎಂದು ನಾವು ವಿನಂತಿಸುತ್ತೇವೆ.
ಮಿಜೋರಾಂನಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ !
2001 ರ ಜನಗಣತಿಯ ಅಂಕಿ- ಅಂಶಗಳ ಪ್ರಕಾರ, ಮಿಜೋರಾಂನಲ್ಲಿನ ಕ್ರೈಸ್ತ ಜನಸಂಖ್ಯೆಯು 7.7 ಲಕ್ಷಗಳಷ್ಟಿದೆ. ಅದನ್ನು ಹೋಲಿಸಿದರೆ ರಾಜ್ಯದಲ್ಲಿ ಕೇವಲ 31 ಸಾವಿರದ 562 ಹಿಂದೂಗಳಿದ್ದಾರೆ. ರಾಜ್ಯದ ಹಿಂದೂಗಳಲ್ಲಿ ಪ್ರಮುಖವಾಗಿ ಗೂರ್ಖಾಗಳು ಮತ್ತು ಬ್ರೂ ರೆಹಂಗ್‌ಗಳು ಸೇರಿದ್ದಾರೆ. ಬ್ರೂ ರೆಹಾಂಗ್ ಜನರು 1997 ರಲ್ಲಿ ಮಿಜೋ ಜನರ ದೌರ್ಜನ್ಯವನ್ನು ಎದುರಿಸಿದ್ದರು. ಈ ಕಾರಣದಿಂದ ಬ್ರೂ ರೆಹಂಗ್ ಸಮುದಾಯದ ಜನರು ತ್ರಿಪುರಾಕ್ಕೆ ಪಲಾಯನ ಮಾಡಿದ್ದರು. 2018 ರಲ್ಲಿ ತ್ರಿಪುರಾ ಮತ್ತು ಮಿಜೋರಾಂ ಇವರ ನಡುವೆ ನಡೆದ ಕರಾರಿನ ಬಳಿಕ ಬ್ರೂ ಜನರು ಇಲ್ಲಿಗೆ ಮರಳಿದ್ದರು.
ಮಿಜೋರಾಂನಲ್ಲಿಯೂ ದೇವಸ್ಥಾನಗಳ ಮೇಲೆ ದಾಳಿ ನಡೆದಿರುವ ಅನೇಕ ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ಹಿಂದೂ ಆಚರಣೆಗಳ ವಿರುದ್ಧ ಯಾವಾಗಲೂ ಶತ್ರುತ್ವದ ಭಾವನೆ ಇದೆ. ಯಾವುದೇ ಪ್ರಮುಖ ನಾಯಕ ಹಿಂದೂಗಳಿಗೆ ಸಂಬಂಧಿಸಿದ್ದಾನೆಂದು ಕಂಡು ಬಂದರೆ ಅವನ ಅವಮಾನ ಮಾಡಲಾಗುತ್ತದೆ. 2011 ರಲ್ಲಿ ‘ಮಿಜೋ ನ್ಯಾಷನಲ್ ಫ್ರಂಟ್’ನ ಆಗಿನ ಮುಖ್ಯಮಂತ್ರಿ ಲಾಲ ಥನಹವಲಾ ಇವರು ಕೋಲಕಾತಾದ ದುರ್ಗಾ ಪೂಜೆ ಮತ್ತು ವಿಜಯದಶಮಿ ಈ ಹಿಂದೂಗಳ ಹಬ್ಬಗಳಲ್ಲಿ ಉಪಸ್ಥಿತರಾಗಿದ್ದರಿಂದ ಅವರ ಮೇಲೆ ದಾಳಿ ನಡೆಸಲಾಗಿತ್ತು.
ಸಂಪಾದಕೀಯ ನಿಲುವುಯಾವುದೇ ರಾಜ್ಯದಲ್ಲಿ ಹಿಂದೂ ಬಹುಸಂಖ್ಯಾತರಾಗಿರಲಿ ಅಥವಾ ಅಲ್ಪಸಂಖ್ಯಾತರಿರಲಿ, ಹೆಚ್ಚಿನ ಹಿಂದೂಗಳಲ್ಲಿ ಧರ್ಮದ ಬಗ್ಗೆ ಇರುವ ಅನಾಸಕ್ತಿಯಿಂದ ಅವರ ದೇವಸ್ಥಾನಗಳ ಸರಕಾರೀಕರಣವಾಗುತ್ತದೆ. ಈಗ ಮಿಝೋರಾಂನಲ್ಲಿಯೂ ಹೀಗಾದರೆ ಅದರಲ್ಲಿ ಆಶ್ಚರ್ಯ ಪಡಬಾರದು ! |