‘ಮನೆಯಲ್ಲಿನ ಒಬ್ಬ ವ್ಯಕ್ತಿಯು ಸಾಧನೆ ಮಾಡುತ್ತಿದ್ದರೆ, ಸಂಪೂರ್ಣ ಕುಟುಂಬದ ಉದ್ಧಾರವಾಗುತ್ತದೆ, ಎಂಬ ಬಗ್ಗೆ ಗುರುದೇವರ ಕೃಪೆಯಿಂದ ಸಾಧಕಿಗೆ ಬಂದ ಅನುಭೂತಿ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ನಾನು ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುತ್ತೇನೆ. ನನಗೆ ಸಾಧನೆಗಾಗಿ ವಿರೋಧವಾಗುವುದರಿಂದ ನಾನು ಸನಾತನದ ಆಶ್ರಮದಲ್ಲಿದ್ದು ಸಾಧನೆಯನ್ನು ಮಾಡುತ್ತೇನೆ. ನಾನು ಕಳೆದ ೧೦ ವರ್ಷಗಳಿಂದ ಮನೆಗೆ ಹೋಗಲಿಲ್ಲ. ಈ ಅವಧಿಯಲ್ಲಿ ನನ್ನ ಕುಟುಂಬದವರೊಂದಿಗೆ ಸಂಪರ್ಕವಿರಲಿಲ್ಲ. ಅವರು ಅನೇಕ ಬಾರಿ ‘ನಾನು ಮನೆಗೆ ಬರಬೇಕು, ಎಂದು ಪ್ರಯತ್ನಿಸಿದರು. ೧೦ ವರ್ಷಗಳ ಹಿಂದೆ ನನಗೆ ಅವರಿಂದ ತೀವ್ರ ವಿರೋಧವಿತ್ತು. ಅವರಿಗೆ ಸನಾತನ ಸಂಸ್ಥೆ, ಹಾಗೆಯೇ ಸನಾತನದ ಸಾಧಕರ ಬಗ್ಗೆ ಸಿಟ್ಟು ಇರುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಸಾಧನೆಯನ್ನು ಮಾಡುತ್ತಿರುವಾಗ ‘ನಾನು ಕ್ಷಣಕ್ಷಣವೂ ಗುರುಕೃಪೆಯನ್ನು ಹೇಗೆ ಅನುಭವಿಸಿದೆನು, ಎಂಬುದನ್ನು ಪ್ರಸ್ತುತ ಲೇಖನದಲ್ಲಿ ಕೊಡಲಾಗಿದೆ.

‘ಮನೆಯಲ್ಲಿನ ಒಬ್ಬ ವ್ಯಕ್ತಿಯು ಸಾಧನೆಯನ್ನು ಮಾಡುತ್ತಿದ್ದರೆ, ಸಂಪೂರ್ಣ ಕುಟುಂಬದ ಮತ್ತು ಆ ಕುಲದ ಉದ್ಧಾರವಾಗುತ್ತದೆ, ಎಂದು ಈ ಹಿಂದೆ ಸತ್ಸಂಗದಲ್ಲಿ ಕೇಳಿದ್ದೆನು. ನಾನು ಇದರ ಅನುಭೂತಿಯನ್ನು ಪಡೆಯುತ್ತಿದ್ದೇನೆ. ಪರಾತ್ಪರ ಗುರು ಡಾ. ಆಠವಲೆ, ನೀವು ನಿಜವಾಗಿಯೂ ವಿಶ್ವಗುರುಗಳಾಗಿದ್ದೀರಿ. ನೀವೇ ಈಶ್ವರನಾಗಿದ್ದೀರಿ. ಸಾಧಕರ ರಕ್ಷಣೆಗಾಗಿ ನೀವೇ ಅವತರಿಸಿದ ವಿಷ್ಣುಸ್ವರೂಪ ಗುರುದೇವರಾಗಿದ್ದೀರಿ.

೧. ಸಾಧಕಿಯು ಪೂರ್ಣವೇಳೆ ಸಾಧನೆಯನ್ನು ಮಾಡುವ ಮೊದಲು ಅವಳ ಮನೆಯಲ್ಲಿನ ಪರಿಸ್ಥಿತಿ

ಅ. ತಂದೆಯವರಿಂದ ನಮಗೆ ಯಾವ ಸಹಾಯವೂ ಸಿಗುತ್ತಿರಲಿಲ್ಲ. ತಾಯಿಯು ಖಾನಾವಳಿಯನ್ನು ನಡೆಸುತ್ತಿದ್ದಳು. ಅದರಿಂದ ಎಲ್ಲ ಮನೆ ಖರ್ಚು ನಡೆಯುತ್ತಿತ್ತು. ನಾನು ಬ್ಯಾಂಕಿನಲ್ಲಿ ನೌಕರಿಯನ್ನು ಮಾಡುತ್ತಿದ್ದೆನು.

ಆ. ಈ ಮೊದಲು ನನ್ನ ತಂದೆ ಸರಾಯಿ ಕುಡಿಯುವುದು, ಸಿಗರೇಟ್ ಸೇದುವುದು ಮತ್ತು ಮನೆಯಲ್ಲಿ ಜಗಳಾಡುತ್ತಿದ್ದರು. ನಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿಲ್ಲ. ಸಂಬಂಧಿಕರು ತಾಯಿ-ತಂದೆಯವರಿಗೆ ಅನೇಕ ಬಾರಿ ‘ನೀವು ಹೆಣ್ಣುಮಕ್ಕಳ ಮೇಲೆ ಹೇಗೆ ಸಂಸ್ಕಾರಗಳನ್ನು ಮಾಡಿದ್ದೀರಿ ?, ಎಂದು ಹೇಳುತ್ತಿದ್ದರು.

೨. ‘ಶ್ರೀಮನ್ನಾರಾಯಣಸ್ವರೂಪ ಗುರುದೇವರೇ ಮನೆಯನ್ನು ನೋಡಿಕೊಳ್ಳುತ್ತಿದ್ದಾರೆ, ಎಂಬ ಅನುಭೂತಿ ಬರುವುದು

೨ ಅ. ಸಾಧಕಿಯು ಪೂರ್ಣವೇಳೆ ಸಾಧನೆಯನ್ನು ಮಾಡಲು ಪ್ರಾರಂಭಿಸಿದಾಗಿನಿಂದ ಮನೆಯಲ್ಲಿ ಯಾವುದೇ ಅಡಚಣೆಗಳು ಬರದಿರುವುದು : ಗುರುದೇವರ ಕೃಪೆಯಿಂದ ನಾನು ಪೂರ್ಣವೇಳೆ ಸಾಧನೆಯನ್ನು ಮಾಡಲು ಪ್ರಾರಂಭಿಸಿದಾಗಿನಿಂದ ಮನೆಯಲ್ಲಿ ಯಾವುದೇ ಅಡಚಣೆಗಳು ಬರಲಿಲ್ಲ. ‘ಗುರುದೇವರೇ ಎಲ್ಲವನ್ನು ಮಾಡುತ್ತಿದ್ದಾರೆ. ನಮ್ಮ ಮನೆಯನ್ನೂ ಅವರೇ ನೋಡಿಕೊಳ್ಳುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಸಂತ ಜನಾಬಾಯಿ, ಸಂತ ತುಕಾರಾಮ ಮಹಾರಾಜರಿಗೆ ವಿಠ್ಠಲನು ಸಹಾಯ ಮಾಡುತ್ತಿದ್ದನು. ಅವರ ಸಂಸಾರವನ್ನು ನಡೆಸುತ್ತಿದ್ದನು. ಕಲಿಯುಗದಲ್ಲಿ ನಾನು ಶ್ರೀಮನ್ನಾರಾಯಣಸ್ವರೂಪ ಗುರುದೇವರೇ ನನ್ನ ಮನೆಯನ್ನು ನೋಡಿಕೊಳ್ಳುತ್ತಿದ್ದಾರೆ, ಎಂಬ ಅನುಭೂತಿ ಪಡೆಯುತ್ತಿದ್ದೇನೆ. ಗುರುದೇವರ ಕೃಪೆಯಿಂದ ತಂಗಿಯ ಮದುವೆಯು ತುಂಬಾ ಒಳ್ಳೆಯ ರೀತಿಯಿಂದ ನೆರವೇರಿತು. ತಂಗಿಯ ಮದುವೆಯು ಯಾವುದೇ ಸಾಲವನ್ನು ಮಾಡದೇ ನೆರವೇರಿತು.

೩. ತಾಯಿಯು ‘ನಾನು ಮನೆಗೆ ಬರಬೇಕು, ಎಂದು ತುಂಬಾ ಪ್ರಯತ್ನಿಸಿದಳು; ಆದರೆ ದೇವರ ಕೃಪೆಯಿಂದ ಪ್ರತಿಯೊಂದು ಸಮಯದಲ್ಲಿ ನನಗೆ ಸ್ಥಿರವಾಗಿರಲು ಸಾಧ್ಯವಾಯಿತು. ದೇವರು ಪ್ರತಿಯೊಂದು ಅಡಚಣೆಯಲ್ಲಿ ನನಗೆ ಸಹಾಯ ಮಾಡಿದನು.

೩ ಆ. ಕುಟುಂಬವು ಅನಾರೋಗ್ಯದಲ್ಲಿರುವಾಗ ದೇವರು ಮಾಡಿದ ಸಹಾಯ

೧. ನನ್ನ ತಾಯಿಯು ಒಮ್ಮೆ ಶೌಚಾಲಯದಲ್ಲಿ ಬಿದ್ದಳು. ಆ ಸಮಯದಲ್ಲಿ ನನ್ನ ಚಿಕ್ಕಮ್ಮ ನಮ್ಮ ಮನೆಯಲ್ಲಿದ್ದು ತಾಯಿಯ ಸೇವೆ ಮತ್ತು ಮನೆಕೆಲಸವನ್ನು ಮಾಡಿದಳು.

೨. ೫-೬ ವರ್ಷಗಳ ಹಿಂದೆ ತಾಯಿ-ತಂದೆಯರಿಗೆ ‘ಚಿಕನ್ ಗುನಿಯಾ ಆಗಿತ್ತು. ಅವರಿಗೆ ಜ್ವರ ಬಂದಿತ್ತು. ಅವರ ಸಹಾಯಕ್ಕೆ ಮನೆಯಲ್ಲಿ ಯಾರೂ ಇರಲಿಲ್ಲ. ತಾಯಿಯು ಮಾವನನ್ನು ಕರೆಯಿಸಿಕೊಂಡಳು. ಮಾವನು ತಾಯಿ-ತಂದೆಯವರ ಸಹಾಯಕ್ಕೆ ತಕ್ಷಣ ಹೋದನು.

೩. ತಂದೆಯವರ ಕಣ್ಣುಗಳ ಶಸ್ತ್ರಕ್ರಿಯೆ ಆಯಿತು. ಆ ಸಮಯದಲ್ಲಿಯೂ ಯಾವ ಅಡಚಣೆಗಳೂ ಬರಲಿಲ್ಲ.

ಇಂತಹ ಅನೇಕ ಪ್ರಸಂಗಗಳಲ್ಲಿ ‘ಗುರುದೇವರೇ ಮನೆಯ ಪರಿಸ್ಥಿತಿಯನ್ನು ನೋಡಿಕೊಳ್ಳುತ್ತಿದ್ದಾರೆ, ಎಂಬ ಅನುಭೂತಿ ಬರುತ್ತದೆ.

೪. ಕುಟುಂಬದವರಲ್ಲಿ ಅರಿವಾದ ಬದಲಾವಣೆ

೪ ಅ. ಕಳೆದ ೭-೮ ವರ್ಷಗಳಿಂದ ತಂದೆಯವರ ಎಲ್ಲ ವ್ಯಸನಗಳು ಪೂರ್ಣ ಕಡಿಮೆಯಾಗಿವೆ.

೩ ಆ. ಕಳೆದ ಕೆಲವು ದಿನಗಳಿಂದ ತಾಯಿಯು ಸ್ಥಿರವಾದಂತೆ ಎನಿಸುವುದು ಮತ್ತು ಮಗಳಿಗೆ ಮನೆಗೆ ಬರುವ ಬಗ್ಗೆ ಸ್ವಲ್ಪವೂ ಒತ್ತಾಯ ಮಾಡದಿರುವುದು : ಕಳೆದ ವರ್ಷ ನನ್ನ ಅಜ್ಜಿಯ ನಿಧನವಾಯಿತು. ಆ ಸಮಯದಲ್ಲಿ ನಾನು ತಾಯಿಗೆ ಸಂಚಾರವಾಣಿಯಿಂದ ಮಾತನಾಡುವಾಗ ಅವಳು ಸ್ಥಿರವಾಗಿದ್ದಳು. ಆಗ ಅವಳ ಮಾತಿನಿಂದ ‘ಏನು ಆಗಲಿಲ್ಲ, ಎಂದೆನಿಸುತ್ತಿತ್ತು. ಕಳೆದ ಕೆಲವು ದಿನಗಳಿಂದ ತಾಯಿಯು ಸ್ಥಿರವಾದಂತೆ ಎನಿಸುತ್ತದೆ. ಅವಳು ಈಗ ಮನೆಗೆ ಬರುವ ಬಗ್ಗೆ ನನಗೆ ಅಷ್ಟೊಂದು ಒತ್ತಾಯ ಮಾಡುವುದಿಲ್ಲ. ನನಗೆ ‘ಗುರುದೇವರು ನನ್ನ ತಾಯಿಯ ಆಂತರಿಕ ಸಾಧನೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ, ಎಂದೆನಿಸಿತು.

೪ ಇ. ಸಹೋದರಿಯ ಮತ್ತು ಅವಳ ಯಜಮಾನರ ಸ್ವಭಾವದಲ್ಲಿ ಬದಲಾವಣೆ ಕಂಡುಬರುವುದು : ನನ್ನ ಸಹೋದರಿಯೊಬ್ಬಳು ಕೋಪದ ಸ್ವಭಾವದವಳಾಗಿದ್ದಳು. ತಾಯಿ-ತಂದೆ ಮತ್ತು ಇನ್ನೊಬ್ಬ ಸಹೋದರಿಯೊಂದಿಗೆ ಹೊಂದಾಣಿಕೆಯಾಗುತ್ತಿರಲಿಲ್ಲ. ಕಳೆದ ಕೆಲವು ತಿಂಗಳುಗಳಿಂದ ಅವಳು ಸ್ವಾಮಿ ಸಮರ್ಥ ಸಂಪ್ರದಾಯದ ಸಾಧನೆಯನ್ನು ಮಾಡುತ್ತಿದ್ದಾಳೆ. ಆದ್ದರಿಂದ ಅವಳು ಮತ್ತು ಅವಳ ಯಜಮಾನರ ಸ್ವಭಾವದಲ್ಲಿ ಬದಲಾವಣೆ ಕಂಡುಬರುತ್ತಿದೆ. ಗುರುದೇವರ ಕೃಪೆಯಿಂದ ಅವರಲ್ಲಿ ಬದಲಾವಣೆ ಆಗಿದೆ.

೫. ಕೃತಜ್ಞತಾ ಮತ್ತು ಪ್ರಾರ್ಥನೆ

‘ಹೇ ಗುರುದೇವಾ, ತಮ್ಮ ಕೃಪೆಯಿಂದ ನನಗೆ ಮಾಯೆಯಿಂದ, ಎಲ್ಲ ಬಂಧನಗಳಿಂದ ಮುಕ್ತವಾಗಲು ಸಾಧ್ಯವಾಯಿತು, ಈ ಕುರಿತು ನಾನು ತಮ್ಮ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ‘ಹೇ ಗುರುದೇವಾ, ನೀವು ಯಾವ ಕೃಪೆಯನ್ನು ಮಾಡಿರುವಿರೋ, ಆ ಕುರಿತು ನನಗೆ ಕ್ಷಣಕ್ಷಣಕ್ಕೆ ಕೃತಜ್ಞತೆಯಲ್ಲಿರಲು ಸಾಧ್ಯವಾಗಲಿ. ನನ್ನಿಂದ ನಿರಂತರ ಗುರುಸೇವೆಯನ್ನು ಮಾಡಿಸಿಕೊಳ್ಳಿರಿ, ಎಂದು ನಾನು ತಮ್ಮ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.

– ಓರ್ವ ಸಾಧಕಿ, ಸನಾತನ ಆಶ್ರಮ, ದೇವದ, ಪನವೇಲ. (೧೬.೪.೨೦೨೨)