ಸಣ್ಣ ದೇಶಗಳಲ್ಲಿ ಹಣಕ್ಕೆ ವಿಶೇಷ ಮಹತ್ವ ಇಲ್ಲದೆ ಇರುವುದರಿಂದ ಅವರು ಸಮಾಧಾನಿ ! – ವಿಜ್ಞಾನಿ ಕ್ರಿಸ್ಟೋಫರ್ ಬಾಯಸೆ

೨೫ ದೇಶಗಳ ಪ್ರವಾಸ ಮಾಡಿ ಸ್ಕಾಟ್ಲ್ಯಾಂಡ್ ವಿಜ್ಞಾನಿ ಕ್ರಿಸ್ತೋಫಾರ್ ಬಾಯಸೆ ಇವರ ನಿಷ್ಕರ್ಷ !

ವಿಜ್ಞಾನಿ ಕ್ರಿಸ್ಟೋಫರ್ ಬಾಯಸೆ

ಏಡಿನಬರ್ಗ್ (ಸ್ಕಾಟ್ಲ್ಯಾಂಡ್) – ಮನುಷ್ಯನ ವರ್ತನೆಯ ಅಧ್ಯಯನ ಮಾಡಿರುವ ಇಲ್ಲಿಯ ವಿಜ್ಞಾನಿ ಕ್ರಿಸ್ಟೋಫರ್ ಬಾಯಸೆ ಇವರು ‘ಮನುಷ್ಯನಿಗೆ ಯಾವ ವಿಷಯದಿಂದ ಶಾಶ್ವತ ಆನಂದವಾಗುತ್ತದೆ ?, ಈ ಪ್ರಶ್ನೆಯ ಹುಡುಕಾಟಕ್ಕೆ ಸೈಕಲ್‌ನಿಂದ ೨೫ ದೇಶಗಳಿಗೆ ೨೦ ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿದ್ದಾರೆ. ಅದಕ್ಕಾಗಿ ಅವರು ತಮ್ಮ ನೌಕರಿ ಕೂಡ ಬಿಟ್ಟರು. ಈ ಪ್ರವಾಸದಲ್ಲಿ ಅವರು ಮುಖ್ಯವಾಗಿ ಭಾರತದ ಪಕ್ಕದಲ್ಲಿರುವ ಭೂತಾನ ದೇಶದಲ್ಲಿ ವಾಸವಾಗಿದ್ದರು. ಅಲ್ಲಿ ಅವರಿಗೆ, ಸಣ್ಣ ದೇಶದಲ್ಲಿ ‘ಜೀವನದಲ್ಲಿ ಸಮಾಧಾನ ಪಡೆಯುವುದಕ್ಕೆ ಹಣಕ್ಕೆ ವಿಶೇಷ ಮಹತ್ವ ಇಲ್ಲ, ಎಂದು ಕಲಿಸುತ್ತಾರೆ. ಎಂಬುದು ಗಮನಕ್ಕೆ ಬಂದಿದೆ. ಸ್ಕಾಟ್ಲ್ಯಾಂಡ್‌ನಿಂದ ಬಾಯಸೆ ಇವರ ಪ್ರಯಾಣ ಆರಂಭವಾಯಿತು. ಈ ಸಮಯದಲ್ಲಿ ಅವರು ನೂರಾರು ಜನರನ್ನು ಭೇಟಿ ಮಾಡಿದರು. ಅವರ ಜೊತೆ ವಾಸವಾಗಿದ್ದರು. ‘ವಿವಿಧ ದೇಶದಲ್ಲಿನ ಬದುಕುವ ಪದ್ಧತಿಯಲ್ಲಿ ಆನಂದದ ಕಾರಣ ಅಡಗಿದೆ, ಇದನ್ನು ತಿಳಿದುಕೊಂಡು ಅದರ ಅಧ್ಯಯನ ಮಂಡಿಸಿದರು.

ಸಂಪಾದಕರು

ಜಗತ್ತಿಗೆ ಶಾಶ್ವತ ಆನಂದದ ಮಾರ್ಗವನ್ನು ಹಿಂದೂ ಧರ್ಮ ನೀಡಿದೆ; ಆದರೆ ಭಾರತದಲ್ಲಿನ ಹಿಂದೂಗಳ ಕರ್ಮದಾರಿದ್ರ್ಯದಿಂದ ಇಂದು ಕೇವಲ ವ್ಯಾವಹಾರಿಕ ಯಶಸ್ಸಿನ ಹಿಂದೆ ಓಡುತ್ತಿದ್ದಾರೆ ಮತ್ತು ದುಃಖಿತರಾಗುತ್ತಿದ್ದಾರೆ. ಈ ಎಲ್ಲದಕ್ಕೂ ಒಂದೇ ಉಪಾಯ ಮತ್ತು ಅದೆಂದರೆ ಹಿಂದೂಗಳು ಧರ್ಮಶಿಕ್ಷಣ ಪಡೆದು ಸಾಧನೆ ಮಾಡಬೇಕು ಇದನ್ನು ತಿಳಿದುಕೊಳ್ಳಿ !