೧. ‘ಹೊಟ್ಟೆ ಖಾಲಿ ಇದ್ದಾಗ ವ್ಯಾಯಾಮವನ್ನು ಮಾಡಬೇಕು. ತಿಂದ ನಂತರ ಕೂಡಲೇ ವ್ಯಾಯಾಮ ಮಾಡಬಾರದು. ತಿಂದ ನಂತರ ವ್ಯಾಯಾಮ ಮಾಡುವುದಿದ್ದರೆ ನಡುವೆ ಒಂದೂವರೆಯಿಂದ ೩ ಗಂಟೆಗಳ ಅಂತರವಿರಬೇಕು.
೨. ವ್ಯಾಯಾಮ ಮಾಡಿದ ನಂತರ ಕೂಡಲೇ ತಿನ್ನಬಾರದು. ಕನಿಷ್ಟ ಪಕ್ಷ ೧೫ ನಿಮಿಷ ಸಮಯವನ್ನಾದರೂ ಬಿಡಬೇಕು. ವ್ಯಾಯಾಮದ ನಂತರ ಸ್ನಾನ ಮಾಡುವುದಿದ್ದರೆ ಅದನ್ನು ೧೫ ನಿಮಿಷಗಳ ನಂತರ ಮಾಡಬೇಕು. ‘ವ್ಯಾಯಾಮ, ಸ್ನಾನ ಮತ್ತು ತಿನ್ನುವುದು, ಈ ರೀತಿ ಅನುಕ್ರಮಗಳಿರಬೇಕು.
೩. ವ್ಯಾಯಾಮದ ಮೊದಲು, ವ್ಯಾಯಾಮವನ್ನು ಮಾಡುವಾಗ ಮಧ್ಯಮಧ್ಯದಲ್ಲಿ, ಹಾಗೆಯೇ ವ್ಯಾಯಾಮ ಮಾಡಿದ ನಂತರ ಆವಶ್ಯಕತೆಗನುಸಾರ ೧-೨ ಗುಟುಕು ನೀರನ್ನು ಕುಡಿಯ ಬಹುದು; ಆದರೆ ಒಂದೇ ಸಲಕ್ಕೆ ಬಹಳ ನೀರು ಕುಡಿಯಬಾರದು.
‘ಕುತ್ತಿಗೆ, ಭುಜ ಇತ್ಯಾದಿ ಅವಯವಗಳಿಗಾಗಿ ಸ್ವಲ್ಪ ಸಮಯ ಮಾಡುವ ವ್ಯಾಯಾಮಗಳು ಮತ್ತು ತುಂಬಾ ಶ್ರಮವಾಗುವುದಿಲ್ಲ, ಅಂತಹ ವ್ಯಾಯಾಮಗಳು, ಅಂದರೆ ‘ಸೂಕ್ಷ್ಮ ವ್ಯಾಯಾಮ. ಸೂಕ್ಷ್ಮ ವ್ಯಾಯಾಮಗಳ ಸಂದರ್ಭದಲ್ಲಿ ಮೇಲಿನ ನಿಯಮವನ್ನು ಪಾಲಿಸುವ ಆವಶ್ಯಕತೆ ಇರುವುದಿಲ್ಲ.
– ವೈದ್ಯ ಮೇಘರಾಜ ಮಾಧವ ಪರಾಡಕರ