ಎಲ್ಲಾ ಹಿಂದೂಗಳು ಹಾಗೂ ಹಿಂದೂ ಸಂಘಟನೆಗಳು ಒಟ್ಟಾಗಬೇಕು – ಶ್ರೀ. ದಿವಾಕರ ಭಟ್

ಉಡುಪಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರಜಾಗೃತಿ ಸಭೆ

ಶ್ರೀ. ದಿವಾಕರ ಭಟ್

ಉಡುಪಿ – ‘ಅಲ್ಪಸಂಖ್ಯಾತರ ರಕ್ಷಣೆಗೆ ಸ್ವತಂತ್ರ ಭಾರತದಲ್ಲಿ ಅನೇಕ ಕಾನೂನುಗಳಿವೆ. ಆದರೆ, ಹಿಂದೂಗಳ ರಕ್ಷಣೆಗಾಗಿ ಯಾವುದೇ ಕಾನೂನುಗಳಿಲ್ಲ. ಹಿಂದುತ್ವವನ್ನು ಒಡೆಯುವ ಅಜೆಂಡಾದೊಂದಿಗೆ ಕಮ್ಯುನಿಸ್ಟರು, ಪ್ರಗತಿಪರರು ಹಾಗೂ ಇನ್ನೂ ಅನೇಕರು ಒಟ್ಟಾಗುತ್ತಿದ್ದಾರೆ. ವಿದೇಶಗಳಲ್ಲಿಯೂ ಹಿಂದುತ್ವವನ್ನು ಒಡೆಯುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ. ನಾವೆಲ್ಲರೂ ಕೂಡಲೇ ಜಾಗೃತರಾಗಬೇಕು. ನಮ್ಮಲ್ಲಿ ಇಚ್ಛಾಶಕ್ತಿ ಮತ್ತು ಛಲವಿರಬೇಕು. ನಮ್ಮ ನಡುವೆ ಏನೇ ಭೇದಭಾವ ಇದ್ದರೂ ಮರೆತು, ಧರ್ಮರಕ್ಷಣೆಗಾಗಿ ಎಲ್ಲಾ ಸಂಘಟನೆಗಳು ಒಟ್ಟಾಗುವ ಸಂಕಲ್ಪ ಮಾಡಬೇಕು , ಎಂದು ‘ಭಾರತ ಸ್ವಾಭಿಮಾನ ಟ್ರಸ್ಟ್ನ ಚಿಕ್ಕಮಗಳೂರು ಜಿಲ್ಲಾ ಪ್ರಭಾರಿ ಹಾಗೂ ಯೋಗ ಶಿಕ್ಷಕರೂ ಆಗಿರುವ ಶ್ರೀ. ದಿವಾಕರ ಭಟ್ ಇವರು ಕರೆ ನೀಡಿದರು. ಅವರು ೨೬.೨.೨೦೨೩ ರಂದು ಹಿಂದೂ ಜನಜಾಗೃತಿ ಸಮಿತಿಯು  ಉಡುಪಿಯಲ್ಲಿ ಆಯೋಜಿಸಿದ ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಸನಾತನ ಸಂಸ್ಥೆಯ ಸೌ. ಲಕ್ಷ್ಮಿ ಪೈ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಮಾರ್ಗದರ್ಶನ ಮಾಡಿದರು. ಸುಮಾರು ೪೦೦ ಧರ್ಮಪ್ರೇಮಿಗಳು ಈ ವೇಳೆ ಉಪಸ್ಥಿತರಿದ್ದರು.