ಉಪಾಹಾರದ ಜೊತೆಗೆ ಹಾಲು ಹಾಕಿದ ಚಹಾ ಅಥವಾ ಕಷಾಯ ಕುಡಿಯುವುದಕ್ಕಿಂತ ಹಾಲು ಹಾಕದಿರುವ ಚಹಾ ಅಥವಾ ಕಷಾಯ ಕುಡಿಯಿರಿ

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

‘ಹಾಲು ಮತ್ತು ಉಪ್ಪಿನ ಸಂಯೋಗವು ಆರೋಗ್ಯಕ್ಕೆ ಹಾನಿಕರವಾಗಿದೆ. ಪ್ರತಿಯೊಂದು ಉಪಾಹಾರದಲ್ಲಿ ಉಪ್ಪು ಇದ್ದೇ ಇರುತ್ತದೆ. ಆದುದರಿಂದ ಉಪಾಹಾರದೊಂದಿಗೆ ಚಹಾ ಅಥವಾ ಕಷಾಯ ಕುಡಿಯುವುದಾದರೆ ಅದಕ್ಕೆ ಹಾಲು ಹಾಕದೇ ಹಾಗೇ ಕುಡಿಯಬೇಕು.

ಚಹಾದ ಅಭ್ಯಾಸ ಬಿಡುವುದಕ್ಕಾಗಿ ಸ್ವಯಂಸೂಚನೆ 

‘ಅನೇಕರಿಗೆ ಚಹಾ ಬಿಡಬೇಕೆನಿಸುತ್ತದೆ; ಆದರೆ ಅವರ ಮನಸ್ಸು ಅದಕ್ಕೆ ಸಿದ್ಧವಾಗುವುದಿಲ್ಲ. ಮನಸ್ಸಿನ ಸಿದ್ಧತೆಗಾಗಿ ಸ್ವಯಂಸೂಚನೆ ಕೊಡಬೇಕು. ನೀವು ಇಡೀ ದಿನ ಅನೇಕ ಬಾರಿ ಚಹಾ ಕುಡಿಯುತ್ತಿದ್ದರೆ, ದಿನ ದಲ್ಲಿ ಸಾಯಂಕಾಲ ಇಂತಹ ಹೊತ್ತಿಗೆ ಒಂದೇ ಸಲ ಚಹಾ ಸೇವಿಸುವುದನ್ನು ನಿರ್ಧರಿಸಬೇಕು. ಅನಂತರ ಇಡೀದಿನ ಚಹಾ ಕುಡಿಯುವ ಮೋಹವನ್ನು ತಪ್ಪಿಸುವುದಕ್ಕಾಗಿ ದಿನದಲ್ಲಿ ೫ ಬಾರಿ ಹಾಗೂ ಪ್ರತಿ ಬಾರಿಗೂ ೫ ಸಲ ಮುಂದಿನ ಸ್ವಯಂಸೂಚನೆ ಓದಬೇಕು.

ಯಾವಾಗ ನನಗೆ ಅವೇಳೆಯಲ್ಲಿ ಚಹಾ ಕುಡಿಯಬೇಕಿನಿಸು ತ್ತದೆಯೋ, ಆಗ ‘ನಾನು ಸಾಯಂಕಾಲ ಇಂತಹ (ಇಲ್ಲಿ ಸಮಯ ಬರೆಯಬೇಕು) ಹೊತ್ತಿಗೆ ಒಂದೇ ಬಾರಿ ಚಹಾ ಕುಡಿಯುವುದೆಂದು ನಿಶ್ಚಯಿಸಿದ್ದೇನೆ’, ನನಗೆ ಇದರ ಅರಿವಾಗುವುದು ಮತ್ತು ನಾನು ಚಹಾದ ಬದಲಾಗಿ ಬಿಸಿನೀರು ಕುಡಿಯುವೆನು.

ಹೀಗೆ ಸ್ವಯಂಸೂಚನೆ ಕೊಡುವುದರಿಂದ ಆರಂಭದಲ್ಲಿ ‘ಚಹಾ ಕುಡಿಯುವ ಅಭ್ಯಾಸವು ಕೂಡಲೇ ನಿಲ್ಲುವುದಿಲ್ಲ. ದಿನದಲ್ಲಿ ಒಂದು ಬಾರಿಯಾದರೂ ಚಹಾ ಕುಡಿಯಲು ಸಿಗಲಿದೆ’, ಎಂಬ ಅರಿವಾಗುತ್ತದೆ. ಅದರಿಂದ ಮನಸ್ಸು ಬದಲಾವಣೆ ಸ್ವೀಕರಿಸಲು ಸಿದ್ಧವಾಗುತ್ತದೆ. ಕೆಲವರಿಗೆ ಏನಾದರೂ ಬಿಸಿ ಕುಡಿಯಲು ಬೇಕಿರುತ್ತದೆ, ಅದಕ್ಕಾಗಿ ಅವರಿಗೆ ಚಹಾ ಕುಡಿಯ ಬೇಕೆನಿಸುತ್ತದೆ. ಇಂತಹ ಹೊತ್ತಿನಲ್ಲಿ ಬಿಸಿ ನೀರು ಕುಡಿಯುವುದರಿಂದ ಸ್ವಲ್ಪ ಮಟ್ಟಿಗಾದರೂ ಅವರ ಮನಸ್ಸಿಗೆ ಸಮಾಧಾನ ವಾಗುತ್ತದೆ. ಮುಂದೆ ಕೆಲವು ದಿನಗಳ ನಂತರ ಚಹಾದ ಪ್ರಮಾಣವನ್ನು ಕಡಿಮೆ ಮಾಡುವುದು, ದಿನ ಬಿಟ್ಟು ದಿನ ಚಹಾ ಕುಡಿಯುವುದು ಹೀಗೆ ಪ್ರಯತ್ನವನ್ನು ಮಾಡಿದರೆ ಚಹಾ ಬಿಡುವುದು ಸಹಜವಾಗಿ ಸಾಧ್ಯವಾಗುತ್ತದೆ.’

ನಿಮ್ಮ ಚಹಾ ಕುಡಿಯುವ ಅಭ್ಯಾಸವು ಹೇಗೆ ಹೋಯಿತು, ಇದನ್ನು ನಮಗೆ ತಿಳಿಸಿರಿ !

ರಾತ್ರಿ ಪೂರ್ಣ ನಿದ್ರೆಯ ಅಗತ್ಯ

‘ದಿನವಿಡಿ ಶರೀರದ ಯಾವ ಭಾಗವು ಸವೆಯುತ್ತದೆಯೋ, ಅದು ರಾತ್ರಿಯ ನಿದ್ರೆಯಿಂದ ಸುಸ್ಥಿತಿಗೆ ಬರುತ್ತದೆ. ಆದ್ದರಿಂದ ರಾತ್ರಿ ಒಂದೇ ಸಲಕ್ಕೆ ಮತ್ತು ಸಾಕಷ್ಟು ನಿದ್ರೆಯ ಅಗತ್ಯವಿರುತ್ತದೆ. ಕೆಲವರು ರಾತ್ರಿ ತುಂಬಾ ಹೊತ್ತು ಜಾಗರಣೆ ಮಾಡುತ್ತಾರೆ ಮತ್ತು ಮುಂಜಾನೆ ಪುನಃ ಬೇಗ ಏಳುತ್ತಾರೆ. ಅದರಿಂದ ಅವರ ನಿದ್ರೆಯು ಪೂರ್ಣವಾಗುವುದಿಲ್ಲ. ಆಗ ಅವರು ದಿನವಿಡಿ ಮಧ್ಯ ಮಧ್ಯದಲ್ಲಿ ಮಲಗುತ್ತಾರೆ. ಹೀಗೆ ಕೆಲವೊಮ್ಮೆ ಆದರೂ ಏನೂ ಅಪಾಯವಿಲ್ಲ; ಆದರೆ ನಿಯಮಿತವಾಗಿ ಹೀಗೆ ಮಾಡುತ್ತಿದ್ದರೆ ದೇಹದ ಮೇಲೆ ಅದರ ದುಷ್ಪರಿಣಾಮವು ಕಂಡುಬರುವವು. ಹಾಗಾಗಬಾರದೆಂದು ಪ್ರತಿದಿನ ಒಂದೇ ಸಲಕ್ಕೆ ಸಾಕಷ್ಟು ನಿದ್ರೆ ಮಾಡಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ

ಆಯುರ್ವೇದದ ಕುರಿತು ಸಂದೇಹವನ್ನು ಕೇಳಲು ಸಂಪರ್ಕ : [email protected]