೧. ಪೂ. ವಾಮನ ಇವರಿಗೆ “ಅವರು ಜನಿಸುವ ಮೊದಲು ನಾರಾಯಣರ ಬಳಿ ತಪಶ್ಚರ್ಯ ಮಾಡುತ್ತಿದ್ದರು’, ಎಂದು ಹೇಳಿದಾಗ ಅವರು ‘ನಾನು ನಾರಾಯಣರ ಚರಣಸೇವೆ ಮಾಡುತ್ತಿದ್ದೆ’, ಎಂದು ತಂದೆಯವರಿಗೆ ಹೇಳುವುದು
‘೨೩.೪.೨೦೨೨ ಈ ದಿನ ನಾವು ಕು. ಶ್ರಿಯಾಳ (ಪೂ. ವಾಮನ ಇವರ ಅಕ್ಕ) ಬಾಲ್ಯದ ಬಗ್ಗೆ ಮಾತನಾಡುತ್ತಿದ್ದೆವು. ಆಗ ಪೂ. ವಾಮನ ಇವರು ನನ್ನನ್ನು, “ಅಮ್ಮಾ, ಆಗ ನಾನು ಎಲ್ಲಿದ್ದೆ ?” ಎಂದು ಕೇಳಿದರು. ಆಗ ನಾನು “ಆಗ ನೀವು ನಾರಾಯಣರ ಬಳಿಯಿದ್ದಿರಿ”, ಎಂದು ಹೇಳಿದೆನು. ನನ್ನ ಯಜಮಾನರಾದ ಶ್ರೀ. ಅನಿರುದ್ದ ಇವರು ಪೂ. ವಾಮನರಿಗೆ, “ಆಗ ನೀವು ನಾರಾಯಣರ ಬಳಿ ತಪಶ್ಚರ್ಯ ಮಾಡುತ್ತಿದ್ದಿರಿ”, ಎಂದು ಹೇಳಿದರು. ಅದಕ್ಕೆ ಪೂ. ವಾಮನ ಇವರು ತಂದೆಯವರಿಗೆ, “ನಾನು ನಾರಾಯಣರ ಬಳಿ ತಪಶ್ಚರ್ಯ ಮಾಡುತ್ತಿರಲಿಲ್ಲ. ನಾನು ಅವರ ಚರಣಸೇವೆಯನ್ನು ಮಾಡುತ್ತಿದ್ದೆ, ಅಂದರೆ ಅವರ ಚರಣಗಳನ್ನು ಒತ್ತುತ್ತಿದ್ದೆ”, ಎಂದು ಹೇಳಿದರು.
೨. ಪೂ. ವಾಮನ ಇವರಿಗೆ ಚರಣಸೇವೆ ಮತ್ತು ತಪಶ್ಚರ್ಯ ಇವುಗಳಲ್ಲಿನ ವ್ಯತ್ಯಾಸ ತಿಳಿಯುವುದು ಮತ್ತು ಅವರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಇರುವ ಭಾವ ಗಮನಕ್ಕೆ ಬರುವುದು
ಪೂ. ವಾಮನ ಇವರಿಗೆ ಚರಣಸೇವೆ ಮತ್ತು ತಪಶ್ಚರ್ಯ ಇವುಗಳಲ್ಲಿನ ವ್ಯತ್ಯಾಸ (ಭೇದ) ತಿಳಿಯುತ್ತದೆ. ಹಾಗೆಯೇ ಅದರಿಂದ ಅವರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಇರುವ ಶರಣಾಗತಭಾವವೂ ಗಮನಕ್ಕೆ ಬರುತ್ತದೆ. ‘ನಾನು ತಪಶ್ಚರ್ಯ ಮಾಡುತ್ತಿದ್ದೆನು’, ಎಂದು ಹೇಳುವುದರಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಅಹಂಭಾವವಿರುತ್ತದೆ. ‘ನಾವು ಗುರುಗಳೆದುರು ಅಖಂಡ ಶಿಷ್ಯಭಾವದಲ್ಲಿಯೇ ಇರಬೇಕು’, ಎಂದೂ ಪೂ. ವಾಮನ ಇವರು ಇದರಿಂದ ನಮಗೆ ಸಹಜ ರೀತಿಯಲ್ಲಿ ಕಲಿಸಿದರು, ‘ಇಷ್ಟು ಚಿಕ್ಕ ವಯಸ್ಸಿನಲ್ಲಿ ಪೂ. ವಾಮನ ಇವರಿಗೆ ಚರಣಸೇವೆ ಎಂದರೇನು ? ಮತ್ತು ಅದರ ಭಾವಾರ್ಥವನ್ನು ಶಬ್ದಗಳಲ್ಲಿ ಸಾಮಾನ್ಯ ಭಾಷೆಯಲ್ಲಿ ಹೇಳಲು ಬರುತ್ತದೆ’, ಇದುವೇ ಅವರಲ್ಲಿನ ಸಂತತ್ವದ ದರ್ಶನವಾಗಿದೆ. ದೊಡ್ಡವರಿಗೂ ಇಂತಹ ಉತ್ತರ ನೀಡಲು ಹೊಳೆಯಲಾರದು.
೩. ಕೃತಜ್ಞತೆ
‘ಸಂತರ ಸಂತತ್ವವು ಚಿಕ್ಕ ಕೃತಿ ಮತ್ತು ವಿಚಾರಗಳಿಂದ ವ್ಯಕ್ತವಾಗುತ್ತದೆ’, ಇದರ ಅನುಭೂತಿಯನ್ನು ನಮಗೆ ಕೇವಲ ಗುರುಕೃಪೆಯಿಂದಲೇ ಅನುಭವಿಸಲು ಸಿಕ್ಕಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಗುರುಗಳು), ಇದು ಕೇವಲ ತಮ್ಮ ಕೃಪೆಯೇ ಆಗಿದೆ; ಆದುದರಿಂದ ಪ್ರತಿಕ್ಷಣ ತಮ್ಮ ಸಂಕಲ್ಪದಿಂದ ಜನಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಅದ್ವಿತೀಯ ಜೀವದ ಅನುಭೂತಿಯನ್ನು ನಾವು ಅನುಭವಿಸುತ್ತಿದ್ದೇವೆ. ಇದಕ್ಕಾಗಿ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ ಅದು ಕಡಿಮೆಯೇ ಆಗಿವೆ. ‘ತಮ್ಮ ಚರಣಗಳಲ್ಲಿ ಅಖಂಡ ಕೃತಜ್ಞತಾಭಾವದಲ್ಲಿರುವುದು’, ಇದೇ ನಿಜವಾದ ಕೃತಜ್ಞತೆ !’
– ಸೌ. ಮಾನಸಿ ರಾಜಂದೇಕರ (ಪೂ. ವಾಮನ ಇವರ ತಾಯಿ, ಆಧ್ಯಾತ್ಮಿಕ ಮಟ್ಟ ಶೇ. ೬೧), ಫೋಂಡಾ, ಗೋವಾ. (೧೨.೫.೨೦೨೨)