ಹಿಂದೂಗಳ ವೇದ, ಶಾಸ್ತ್ರ ಹಾಗೂ ಪುರಾಣಗಳನುಸಾರ ದೇವಸ್ಥಾನದ ಆಡಳಿತವು ನಡೆಯಬೇಕು – ನ್ಯಾಯವಾದಿ ವಿಷ್ಣು ಶಂಕರ ಜೈನ, ವಕ್ತಾರರು, ಹಿಂದೂ ಫ್ರಂಟ್ ಫಾರ್ ಜಸ್ಟಿಸ್

ನ್ಯಾಯವಾದಿ ವಿಷ್ಣು ಶಂಕರ್ ಜೈನ್

ಸಂಸತ್ತಿನ ಯಾವುದೇ ಕಾಯಿದೆಗನುಸಾರವಲ್ಲ; ದೇವಸ್ಥಾನದಲ್ಲಿ ಪ್ರತಿಷ್ಠಾಪಿತ ದೇವರ ನಿಯಮದಂತೆ ದೇವಸ್ಥಾನವು ನಡೆಯಬೇಕು. ಹಿಂದೂಗಳ ವೇದ, ಶಾಸ್ತ್ರ ಹಾಗೂ ಪುರಾಣಗಳಿಗನುಸಾರ ದೇವಸ್ಥಾನವು ನಡೆಯಬೇಕು. ದೇವಸ್ಥಾನದ ಆಡಳಿತದ ನಿಯಮಗಳ ಉಲ್ಲಂಘನೆಯಾದರೆ ನ್ಯಾಯಾಲಯದಲ್ಲಿ ನ್ಯಾಯ ಕೇಳುವ ಅಧಿಕಾರ ಇದೆ. ನ್ಯಾಯಾಲಯದಲ್ಲಿಯು ಯೋಗ್ಯ ನ್ಯಾಯ ಸಿಗದಿದ್ದರೆ ಹಿಂದೂ ದೇವಸ್ಥಾನದ ಸಂರಕ್ಷಣೆಗಾಗಿ ಪ್ರಭಾವಿ ಕಾಯಿದೆ ಮಾಡುವ ಬೇಡಿಕೆಯನ್ನು ಮಾಡಬಹುದು.