ಸಾಧನಾ ಪ್ರಯತ್ನಕ್ಕೆ ಭಂಗ ಬರದಿರಲು ಇದನ್ನು ಮಾಡಿ !

(ಪೂ.) ಸಂದೀಪ ಆಳಶಿ

‘ಹೆಚ್ಚಿನ ಸಾಧಕರು ಸಾಧನೆಯ ಪ್ರಯತ್ನವನ್ನು ಉತ್ಸಾಹದಿಂದ ಆರಂಭಿಸುತ್ತಾರೆ; ಆದರೆ ವಿವಿಧ ಕಾರಣಗಳಿಂದ ಆ ಪ್ರಯತ್ನಗಳು ಸ್ಥಗಿತಗೊಂಡರೆ ಅವರ ಉತ್ಸಾಹ ಕಡಿಮೆಗಾಗಿ ಅವರು ಪ್ರಯತ್ನಿಸುವುದನ್ನೇ ಬಿಟ್ಟುಬಿಡುತ್ತಾರೆ. ಈ ರೀತಿ ಅವರ ವಿಷಯದಲ್ಲಿ ಪುನಃ ಪುನಃ ಸಂಭವಿಸುತ್ತಿರುತ್ತದೆ. ಇದರ ಮುಖ್ಯ ಕಾರಣವೆಂದರೆ, ಅವರಲ್ಲಿ ‘ಸಾಧನೆಯ ಪ್ರಯತ್ನವನ್ನು ಜಿಗುಟುತನದಿಂದ ಮಾಡುವ, ವೃತ್ತಿಯೇ ನಿರ್ಮಾಣವಾಗಿರುವುದಿಲ್ಲ. ಈ ವೃತ್ತಿ ನಿರ್ಮಾಣವಾಗಲು ಪ್ರಯತ್ನಗಳಲ್ಲಿ ಸ್ವಲ್ಪವಾದರೂ ಸಾತತ್ಯ ಇರಬೇಕಾಗುತ್ತದೆ. ಇದಕ್ಕಾಗಿ ಮುಂದಿನ ಕೃತಿ ಮಾಡುವುದು ಲಾಭಕಾರಿಯಾಗಿದೆ.

೧. ಸಾಧನೆಯಲ್ಲಿ ಅನೇಕ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಇವುಗಳಲ್ಲಿ ಆರಂಭದಲ್ಲಿ ಯಾವ ಪ್ರಯತ್ನವನ್ನು ನಾವು ಸಹಜವಾಗಿ ಮಾಡಬಲ್ಲೆವೋ, ಅಷ್ಟೇ ಪ್ರಯತ್ನವನ್ನು ಮಾಡಲು ಆರಂಭಿಸಬೇಕು. ಈ ಪ್ರಯತ್ನ ಸ್ವಲ್ಪ ಸಮಯ ಮಾಡಲು ಸಾಧ್ಯವಾಗತೊಡಗಿದ ನಂತರವೇ ಮುಂದಿನ ಪ್ರಯತ್ನವನ್ನು ಮಾಡಲು ಆರಂಭಿಸಬೇಕು.

೨. ಯಾವ ಪ್ರಯತ್ನವನ್ನು ಮಾಡಲು ನಮಗೆ ಇಷ್ಟವಾಗುತ್ತದೆಯೋ, ಆ ಪ್ರಯತ್ನವನ್ನು ಮಾಡಲು ಮನಸ್ಸು ಉತ್ಸಾಹ ತೋರುತ್ತದೆ. ಇದಕ್ಕಾಗಿ ಆರಂಭದಲ್ಲಿ ಅಂತಹ ಪ್ರಯತ್ನವನ್ನೇ ಆಯ್ದುಕೊಳ್ಳಬೇಕು.

೩. ‘ಪ್ರಯತ್ನಗಳಲ್ಲಿ ಸಾತತ್ಯ ಉಳಿಯಲು,  ಉಪಯುಕ್ತವೆನಿಸುವ ಸ್ವಯಂಸೂಚನೆಗಳನ್ನು ಕೆಲವು ದಿನ ತೆಗೆದುಕೊಳ್ಳಬೇಕು.

ನಮ್ಮ ಜವಾಬ್ದಾರ ಸಾಧಕರಿಗೆ ನಮ್ಮ ಸ್ಥಿತಿಯ ಬಗ್ಗೆ ಮನಮುಕ್ತವಾಗಿ ಹೇಳಬೇಕು ಮತ್ತು ಅವರಿಗೆ ಮೇಲಿನ ಪ್ರಯತ್ನಗಳ ಬಗ್ಗೆಯೂ ತಿಳಿಸಬೇಕು. ಆರಂಭದ ಹಂತದ ಪ್ರಯತ್ನ ಸಾಧ್ಯವಾಗತೊಡಗಿದೆ ಮತ್ತು ‘ಪ್ರಯತ್ನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಸಾತತ್ಯ ನಿರ್ಮಾಣವಾಗುತ್ತಿದೆ, ಎಂದು ಅನಿಸತೊಡಗಿದ ನಂತರವೇ ನಿಧಾನವಾಗಿ ಮುಂದಿನ ಪ್ರಯತ್ನಗಳನ್ನು ಮಾಡುತ್ತಾ ಹೋಗಬೇಕು.

– (ಪೂ.) ಸಂದೀಪ ಆಳಶಿ (೨೬.೧೨.೨೦೨೨)

ನಿಜವಾದ ಜವಾಬ್ದಾರಿ

‘ಗುರುಕಾರ್ಯವನ್ನು ನಿಭಾಯಿಸುವುದರೊಂದಿಗೆ ಗುರು ಕಾರ್ಯದಲ್ಲಿ ಭಾಗವಹಿಸುವ ಸಾಧಕರನ್ನು ಸಾಧನೆಯ ದೃಷ್ಟಿಯಿಂದ ನಿರ್ಮಿಸುವುದು, ಇದು ಗುರುಕಾರ್ಯದ ನಿಜವಾದ ಜವಾಬ್ದಾರಿಯಾಗಿದೆ ! ಯಾರು ತನ್ನನ್ನು ತಾನು ರೂಪಿಸಿ ಕೊಳ್ಳಬಲ್ಲನೋ, ಅವನೇ ಇತರರನ್ನೂ ರೂಪಿಸಬಲ್ಲನು ಮತ್ತು ಅವನೇ ಜವಾಬ್ದಾರಿಯ ನಿಜವಾದ ಅಧಿಕಾರಿಯಾಗಿರುತ್ತಾನೆ ! ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮತ್ತು ಅವರ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುವ ಸನಾತನದ ಸಮಷ್ಟಿ ಸಂತರು ಇಂತಹ ಜವಾಬ್ದಾರಿಯ ಆದರ್ಶವನ್ನು ಇಟ್ಟಿದ್ದಾರೆ.

(ಪೂ.) ಸಂದೀಪ ಆಳಶಿ (೨೬.೧೨.೨೦೨೨)