ವೈಯಕ್ತಿಕ ಸ್ವಾತಂತ್ರ್ಯದ ಬೆಂಬಲಿಗರಿಗೆ ಇದು ಲಜ್ಜಾಸ್ಪದ !
‘ವೈಯಕ್ತಿಕ ಸ್ವಾತಂತ್ರ್ಯಕ್ಕಿಂತ ಸಾಮಾಜಿಕ ಹಿತಾಸಕ್ತಿ ಮತ್ತು ರಾಷ್ಟ್ರದ ಹಿತಾಸಕ್ತಿ ಮುಖ್ಯ ಎಂಬುದು ವೈಯಕ್ತಿಕ ಸ್ವಾತಂತ್ರ್ಯದ ಬೆಂಬಲಿಗರಿಗೆ ಏಕೆ ಅರ್ಥವಾಗುವುದಿಲ್ಲ ? ಭವಿಷ್ಯದಲ್ಲಿ ವೈಯಕ್ತಿಕ ಸ್ವಾತಂತ್ರ್ಯವನ್ನು ಬೆಂಬಲಿಸುವ ಹೆಸರಿನಲ್ಲಿ ಕಳ್ಳತನ, ಅತ್ಯಾಚಾರ, ಭ್ರಷ್ಟಾಚಾರ ಇತ್ಯಾದಿ ಮಾಡುವವರನ್ನೂ ಬೆಂಬಲಿಸಿದರೆ ಆಶ್ಚರ್ಯವಿಲ್ಲ.’
ರಾಜಕಾರಣ ಮತ್ತು ಸಾಧನೆ
‘ಇಂದಿನ ರಾಜಕಾರಣವು ರಸಾತಳದ ಕಡೆಗೆ ಕರೆದೊಯ್ಯುತ್ತದೆ ಮತ್ತು ಸಾಧನೆಯು ಈಶ್ವರನ ಕಡೆಗೆ ಕರೆದೊಯ್ಯುತ್ತದೆ !’
ಇದನ್ನು ವಾಸ್ತವಿಕ ಬುದ್ಧಿಪ್ರಾಮಾಣ್ಯವಾದಿಗಳ ಲಕ್ಷಣ ಎಂದು ತಿಳಿಯಬಹುದೇ ?
‘ನಮಗೆ ಯಾವ ವಿಷಯದ ಬಗ್ಗೆ ಮಾಹಿತಿ ಇಲ್ಲವೋ, ಯಾವ ವಿಷಯವನ್ನು ನಾವು ಅಧ್ಯಯನ ಮಾಡಿರುವುದಿಲ್ಲವೋ, ಆ ವಿಷಯದ ಬಗ್ಗೆ ಸಮಾಜದಲ್ಲಿ ಸಂದೇಹ ಮೂಡಿಸುವ ಮಾತುಗಳನ್ನು ಆಡುವುದು ಮತ್ತು ಕೆಲಸ ಮಾಡುವುದು, ಇದನ್ನು ವಾಸ್ತವಿಕ ಬುದ್ಧಿಪ್ರಾಮಾಣ್ಯವಾದಿಗಳ ಲಕ್ಷಣ ಎಂದು ತಿಳಿಯಬಹುದೇ ?’
ಇಂತಹ ಜನಪ್ರತಿನಿಧಿಗಳು ದೇಶಕ್ಕೆ ಒಳಿತು ಮಾಡುವರೇ?
‘ಸಂಸ್ಕೃತದಲ್ಲಿ ಹೀಗೆ ಹೇಳಲಾಗಿದೆ, ‘ಸಮಾನಶೀಲೆ ವ್ಯಸನೇಶು ಸಖ್ಯಮ್’, ಅರ್ಥಾತ್ ‘ಯಾವಾಗ ಸಮಾನ ಗುಣ – ದೋಷಗಳಿರುತ್ತವೆಯೋ, ಅವರು ಸಂಕಟದ ಸಮಯದಲ್ಲಿ ಒಬ್ಬರಿಗೊಬ್ಬರು ಸ್ನೇಹಿತರಾಗುತ್ತಾರೆ’. ಈ ಸಿದ್ಧಾಂತಕ್ಕನುಸಾರ ಜನರು ರಜ-ತಮ ಪ್ರಧಾನವಾಗಿರುವುದರಿಂದ ಚುನಾವಣೆಗಳಲ್ಲಿ ಚುನಾಯಿತರಾಗುವ ಜನಪ್ರತಿನಿಧಿಗಳು ಸಹ ಹಾಗೇ ಇರುತ್ತಾರೆ. ಅವರು ದೇಶಕ್ಕೆ ಒಳಿತು ಮಾಡುವರೇ ?’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ