ಚೀನಾವು ಭಾರತ ಹಾಗೂ ನೇಪಾಳದ ಸಂಬಂಧದಲ್ಲಿ ನಿರಂತರ ಹುಳಿ ಹಿಂಡಲು ಪ್ರಯತ್ನಿಸುತ್ತದೆ. ನೇಪಾಳವೂ ಚೀನಾದ ಪ್ರಭಾವದಿಂದ ಭಾರತವನ್ನು ದೂರವಿಡಲು ಪ್ರಯತ್ನಿಸುತ್ತಿರುತ್ತದೆ. ಆದರೆ ಸಾಲಿಗ್ರಾಮ ಯಾತ್ರೆಯಿಂದ ಅವರ ಅಪೇಕ್ಷೆ ಹುಸಿಯಾಗಿದೆ.
೧. ಶ್ರೀರಾಮ ಮಂದಿರದ ನಿರ್ಮಾಣದಲ್ಲಿ ನೇಪಾಳದ ಸಹಭಾಗವಿರಬೇಕೆಂದು ಅಲ್ಲಿಂದ ಸಾಲಿಗ್ರಾಮ ಶಿಲೆಯನ್ನು ತರುವುದು
‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾದಾಗ ನೇಪಾಳದ ಮಾಜಿ ಉಪಪ್ರಧಾನಮಂತ್ರಿ ಹಾಗೂ ಗೃಹಮಂತ್ರಿ ವಿಮಲೇಂದ್ರ ನಿಧಿ ಇವರು ‘ಈ ಕಾರ್ಯದಲ್ಲಿ ನೇಪಾಳದ ಯೋಗದಾನವೂ ಇರಬೇಕೆಂದು’, ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸಕ್ಕೆ ಆಗ್ರಹಿಸಿದರು. ವಿಮಲೇಂದ್ರ ನಿಧಿ ಇವರು ನೇಪಾಳದ ಜನಕಪುರ ಧಾಮದ ಸಂಸದರಾಗಿದ್ದಾರೆ, ಅದು ಸೀತಾಮಾತೆಯ ಜನ್ಮಭೂಮಿ ಹಾಗೂ ತವರು ಮನೆಯಾಗಿದೆ. ಅವರು ಅಷ್ಟಕ್ಕೇ ನಿಲ್ಲದೆ ಪ್ರಧಾನಮಂತ್ರಿ ಮೋದಿಯವರ ಸ್ತರದಲ್ಲಿಯೂ ಚರ್ಚೆ ಆರಂಭಿಸಿದರು. ಅನಂತರ ತೀರ್ಥಕ್ಷೇತ್ರ ನ್ಯಾಸವು ಮನ್ನಣೆ ನೀಡಿತು ಹಾಗೂ ಶ್ರೀರಾಮ ಮಂದಿರದ ಮೂರ್ತಿಯನ್ನು ಕಾಳಿ ಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮ ಶಿಲೆಯಿಂದ ನಿರ್ಮಿಸುವ’ ನೇಪಾಳದ ಪ್ರಸ್ತಾಪವನ್ನು ಸ್ವೀಕರಿಸಿತು.
ನೇಪಾಳದ ಕಾಳಿ ಗಂಡಕೀನದಿಯು ಶ್ರೇಷ್ಠಮಟ್ಟದ ಸಾಲಿಗ್ರಾಮ ಶಿಲೆ ಲಭಿಸುವ ಜಗತ್ತಿನ ಏಕೈಕ ನದಿಯಾಗಿದೆ. ನೇಪಾಳ ಸರಕಾರ ಮಂತ್ರಿಮಂಡಳದ ಸಭೆ ಕರೆದು ತಕ್ಷಣವೇ ಕಾಳಿ ಗಂಡಕಿ ನದಿಗೆ ತಜ್ಞರ ತಂಡವನ್ನು ಕಳುಹಿಸಿತು. ಅನಂತರ ೨೬ ಟನ್ ಹಾಗೂ ೧೪ ಟನ್ ತೂಕದ ೨ ಸಾಲಿಗ್ರಾಮ ಶಿಲೆಗಳನ್ನು ಆರಿಸಲಾಯಿತು. ೬ ಕೋಟಿ ವರ್ಷಗಳಷ್ಟು ಹಳೆಯ ಸಾಲಿಗ್ರಾಮ ಶಿಲೆಗಳಿಂದ ಭಗವಾನ ಶ್ರೀರಾಮ ಮತ್ತು ಸೀತಾ ದೇವಿಯ ಮೂರ್ತಿಗಳನ್ನು ತಯಾರಿಸಲಾಗುವುದು. ಈ ಶಿಲೆ ಇನ್ನೂ ೧ ಲಕ್ಷ ವರ್ಷಗಳಷ್ಟು ಬಾಳಿಕೆ ಬರುವುದು, ಎಂದು ಹೇಳಲಾಗುತ್ತದೆ.
೨. ರಾಮನಾಮದ ಮಹಿಮೆಯಿಂದಲೇ ಶಿಲೆಯ ಆಗಮನಕ್ಕೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಒಟ್ಟಾಗುವುದು !
ಸಾಲಿಗ್ರಾಮ ಶಿಲೆಗಳನ್ನು ನದಿಯಿಂದ ತೆಗೆಯುವ ಮೊದಲು ಅದಕ್ಕೆ ಕ್ಷಮಾಪೂಜೆ ಮಾಡಲಾಯಿತು. ಅನಂತರ ಈ ಶಿಲೆಯು ಜನಕಪುರದಿಂದ ಬಿಹಾರದ ಮಧುಬನೀ ಮಾರ್ಗವಾಗಿ ದರಭಂಗಾ ಫಯಿರೀ, ಗೋಪಾಲಗಂಜ, ಗೋರಖಪುರದ ಮೂಲಕ ಮಾರ್ಗಕ್ರಮಣ ಮಾಡುತ್ತಾ ಅಯೋಧ್ಯೆಗೆ ತಲುಪಿದೆ. ಈ ಶಿಲೆಯ ಪ್ರಯಾಣ ನಡೆಯುತ್ತಿರುವಾಗ ನೇಪಾಳ ಮತ್ತು ಬಿಹಾರದ ಲಕ್ಷಗಟ್ಟಲೆ ಜನರು ರಸ್ತೆಗೆ ಬಂದು ಶಿಲೆಗೆ ಪೂಜೆ ಮಾಡಿದರು. ಜನರು ಅತ್ಯಂತ ಭಾವುಕರಾಗಿದ್ದರು. ಲಕ್ಷಗಟ್ಟಲೆ ಮಹಿಳೆಯರು ಈ ಶಿಲೆಗಳ ಪೂಜೆ ಮಾಡಲು ಚಂದನ-ಕುಂಕುಮದೊಂದಿಗೆ ರಸ್ತೆಯಲ್ಲಿ ಪ್ರತೀಕ್ಷೆ ಮಾಡುತ್ತಿದ್ದರು. ಯಾರ ಆಮಂತ್ರಣವೂ ಇಲ್ಲದೆ ಜನರು ತಾವಾಗಿಯೆ ಮಂಟಪಗಳನ್ನು ರಚಿಸಿ ಸ್ವಾಗತಿಸುತ್ತಿದ್ದರು. ಯಾರೇ ಧರ್ಮಗುರು ಅಥವಾ ದೊಡ್ಡ ನಾಯಕರಿಲ್ಲದಿದ್ದರೂ ಕೇವಲ ಶ್ರೀರಾಮನ ಶಿಲೆಯ ಆಗಮನಕ್ಕೆ ಇಷ್ಟು ದೊಡ್ಡ ಜನಸಂದಣಿ ಸೇರುವುದೆಂದರೆ ಇದು ರಾಮನಾಮದ ಮಹಿಮೆಯೆ ಆಗಿದೆ.
೩. ಪ್ರಭು ಶ್ರೀರಾಮನ ಮೂರ್ತಿಯ ಸಾಲಿಗ್ರಾಮ ಶಿಲೆಗಳು ಭಾರತವಿರೋಧಿ ಷಡ್ಯಂತ್ರವನ್ನು ಧ್ವಂಸಗೊಳಿಸುವುದು
ರಾಮಮಂದಿರದ ಗರ್ಭಗೃಹದಲ್ಲಿ ವಿರಾಜಮಾನವಾಗುವ ಮೂರ್ತಿಗಳನ್ನು ನೇಪಾಳದ ಶಿಲೆಗಳಿಂದ ನಿರ್ಮಿಸಲಾಗುವುದು, ಎಂದು ಹೇಳಲಾಗುತ್ತದೆ. ಇದು ನೇಪಾಳ ಮತ್ತು ಭಾರತದೊಂದಿಗಿನ ಆಧ್ಯಾತ್ಮಿಕ ಸಂಬಂಧವನ್ನು ಬಲಪಡಿಸುವುದಾಗಿದೆ. ಪುಷ್ಪಕಮಲ್ ದಹಲ್ ಪ್ರಚಂಡ ಇವರು ನೇಪಾಳದ ಪ್ರಧಾನಮಂತ್ರಿ ಆದ ನಂತರ ಚೀನಾ ಮತ್ತು ನೇಪಾಳಿ ಕಮ್ಯುನಿಸ್ಟ್ (ಸಾಮ್ಯವಾದಿ) ಪಕ್ಷ ಭಾರತವಿರೋಧಿ ಷಡ್ಯಂತ್ರ ರಚಿಸುತ್ತಿರುವಾಗ ಅದನ್ನು ಪ್ರಭು ಶ್ರೀರಾಮನ ಶಿಲೆಗಳೆ ಧ್ವಂಸಗೊಳಿಸಿವೆ.
೪. ಅಯೋಧ್ಯೆಯಲ್ಲಿ ಸೇರುವ ಲಕ್ಷಗಟ್ಟಲೆ ಭಕ್ತರ ಜನಸಂದಣಿಯನ್ನು ನಿಯಂತ್ರಿಸುವುದು ಯೋಗಿ ಸರಕಾರಕ್ಕೆ ದೊಡ್ಡ ಸವಾಲಾಗಿದೆ
೨೦೨೪ ರ ಮಕರಸಂಕ್ರಾಂತಿಗೆ ಈ ಮೂರ್ತಿಗಳ ಪ್ರತಿಷ್ಠಾಪನೆಯಾಗುವುದು ಹಾಗೂ ರಾಮನವಮಿಯಿಂದ ಭಕ್ತರಿಗಾಗಿ ದರ್ಶನ ಆರಂಭವಾಗುವುದು. ಈ ಭವ್ಯ ಮಂದಿರಕ್ಕಾಗಿ ೧ ಸಾವಿರದ ೮೦೦ ಕೋಟಿ ರೂಪಾಯಿ ವೆಚ್ಚವಾಗಲಿಕ್ಕಿದೆ, ಒಂದನೇ ಮಾಳಿಗೆಯ ಶೇ. ೪೫ ರಷ್ಟು ಕಾರ್ಯ ಪೂರ್ಣವಾಗಿದೆ. ಇಲ್ಲಿ ಪ್ರತಿದಿನ ೫೦ ಸಾವಿರ ಹಾಗೂ ವಿಶೇಷ ಪ್ರಸಂಗಗಳಲ್ಲಿ ೫೦ ಲಕ್ಷ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಇಷ್ಟು ದೊಡ್ಡ ಪ್ರಮಾಣದ ಭಕ್ತ ಸಮುದಾಯದ ನಿಯೋಜನೆ ಮಾಡುವುದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರಕಾರಕ್ಕೆ ದೊಡ್ಡ ಸವಾಲಾಗಲಿಕ್ಕಿದೆ. (ಆಧಾರ : ಮಾಸಿಕ ‘ವಿವೇಕ, ಹಿಂದಿ’)