ಕಸ ಗುಡಿಸುವುದು ಮತ್ತು ಕೈಯಿಂದ ನೆಲ ಒರೆಸುವುದು ಈ ದೈನಂದಿನ ಕೃತಿಗಳಿಂದಾಗುವ ಆಧ್ಯಾತ್ಮಿಕ ಲಾಭಗಳನ್ನು ತಿಳಿದುಕೊಳ್ಳಿ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್.) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ನಾವು ಪ್ರತಿದಿನ ಬೆಳಗ್ಗೆ ಮನೆಯಲ್ಲಿ ಕಸವನ್ನು ಗುಡಿಸುತ್ತೇವೆ, ಹಾಗೆಯೇ ನೆಲವನ್ನು (ಟೈಲ್ಸಗಳನ್ನು) ಒರೆಸುತ್ತೇವೆ. ಮನೆಯ ಸ್ವಚ್ಛತೆಯನ್ನು ಮಾಡಿದ ನಂತರ ಮನೆಯ ವಾತಾವರಣ ಪ್ರಸನ್ನವಾಗುತ್ತದೆ. ಇದರ ಅನುಭವವನ್ನು ನಾವೆಲ್ಲರೂ ಪಡೆದಿದ್ದೇವೆ. ಇತ್ತೀಚೆಗೆ ಮೊದಲಿನಂತೆ ಪಾರಂಪರಿಕ ಪದ್ಧತಿಯಿಂದ, ಅಂದರೆ ಬಲಗೈಯಿಂದ (ನೆಲಕ್ಕೆ ಮೊಣಕಾಲುಗಳನ್ನು ತಾಗಿಸದೇ, ಕೆಳಗೆ ಕುಳಿತುಕೊಂಡು) ನೆಲ ಒರೆಸುವುದಕ್ಕಿಂತ ಶಾರೀರಿಕ ದೃಷ್ಟಿಯಲ್ಲಿ ಸುಲಭವೆನಿಸುತ್ತಿರುವುದರಿಂದ ಅನೇಕ ಜನರು ‘ಮಾಪ್ನಿಂ’ದ ನೆಲ ಒರೆಸುತ್ತಾರೆ. (‘ಮಾಪ್’ ಇದು ನೆಲ ಒರೆಸುವ ಒಂದು ಉಪಕರಣವಾಗಿದೆ. ಇದರಿಂದ ನಿಂತುಕೊಂಡು ನೆಲ ಒರೆಸಬಹುದು.) ‘ಕಸ ಗುಡಿಸುವುದು ಮತ್ತು ನೆಲ ಒರೆಸುವುದು’ ಈ ದೈನಂದಿನ ಕೃತಿಗಳನ್ನು ಮಾಡುವುದರಿಂದ ಅವುಗಳನ್ನು ಮಾಡುವವರ ಮೇಲೆ ಮತ್ತು ವಾಸ್ತುವಿನ ಮೇಲೆ ಆಧ್ಯಾತ್ಮಿಕದೃಷ್ಟಿಯಲ್ಲಿ ಏನು ಪರಿಣಾಮವಾಗುತ್ತದೆ ?, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ‘ಯು.ಎ.ಎಸ್.'(ಯುನಿವರ್ಸಲ್ ಔರಾ ಸ್ಕ್ಯಾನರ್) ಉಪಕರಣದಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

ಸೌ. ಮಧುರಾ ಕರ್ವೆ
ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ

ಈ ಪರೀಕ್ಷಣೆಯಲ್ಲಿ ಮುಂದಿನ ಪ್ರಯೋಗಗಳನ್ನು ಮಾಡಲಾಯಿತು.

೧. ಅ. ಕಸ ಗುಡಿಸುವುದು ಮತ್ತು ‘ಮಾಪ್’ನಿಂದ ನೆಲ ಒರೆಸುವುದು : ಈ ಪರೀಕ್ಷಣೆಯಲ್ಲಿ ಪಾಲ್ಗೊಂಡ ಓರ್ವ ಸ್ತ್ರೀಯು ಮೊದಲನೇ ದಿನ ಮನೆಯಲ್ಲಿನ ಒಂದು ಕೋಣೆಯ ಕಸವನ್ನು ಗುಡಿಸಿದಳು ಮತ್ತು ‘ಮಾಪ್’ನಿಂದ ನೆಲ ಒರೆಸಿದಳು. ಕಸ ಗುಡಿಸುವ ಮೊದಲು, ಕಸ ಗುಡಿಸಿದ ನಂತರ ಮತ್ತು ‘ಮಾಪ್’ನಿಂದ ನೆಲ ಒರೆಸಿದ ನಂತರ ಅವಳ ಮತ್ತು ಕೋಣೆಯ (ನಾಲ್ಕೂ ದಿಕ್ಕುಗಳಿಂದ) ‘ಯು.ಎ.ಎಸ್.’ ಉಪಕರಣದಿಂದ ಪರೀಕ್ಷಣೆಯನ್ನು ಮಾಡಲಾಯಿತು.

ಬಗ್ಗಿ ಕಸವನ್ನು ಗುಡಿಸುವಾಗ

೧. ಆ. ಪಾರಂಪರಿಕ ಪದ್ಧತಿಯಿಂದ ನೆಲ ಒರೆಸುವುದು : ಮರುದಿನ ಅವಳು ಮನೆಯಲ್ಲಿನ ಅದೇ ಕೋಣೆಯ ಕಸವನ್ನು ಗುಡಿಸಿದಳು ಮತ್ತು ಪಾರಂಪರಿಕ ಪದ್ಧತಿಯಿಂದ ನೆಲವನ್ನು ಒರೆಸಿದಳು. ನೆಲ ಒರೆಸುವ ಮೊದಲು ಮತ್ತು ಒರೆಸಿದ ನಂತರ ಅವಳ ಮತ್ತು ಕೋಣೆಯ (ನಾಲ್ಕೂ ದಿಕ್ಕುಗಳಿಂದ) ‘ಯು.ಎ.ಎಸ್.’ ಉಪಕರಣದಿಂದ ಪರೀಕ್ಷಣೆಯನ್ನು ಮಾಡಲಾಯಿತು. ಹಿಂದಿನ ದಿನದ ಮತ್ತು ಈ ದಿನದ ನಿರೀಕ್ಷಣೆಗಳ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು.

ಮಾಪ್‌ದಿಂದ ನೆಲವನ್ನು ಒರೆಸುವಾಗ
ಪಾರಂಪರಿಕ ಪದ್ಧತಿಯಿಂದ ಬಲಗೈಯಿಂದ ನೆಲವನ್ನು ಒರೆಸುವಾಗ

೨. ಕಸ ಗುಡಿಸುವುದು ಮತ್ತು ಎರಡೂ ವಿಧಗಳಿಂದ ನೆಲ ಒರೆಸುವುದು ಈ ಕೃತಿಗಳನ್ನು ಮಾಡಿದ್ದರಿಂದ ಸ್ತ್ರೀಯ ಮೇಲೆ ಮತ್ತು ಕೋಣೆಯ ಮೇಲೆ ಆಗಿರುವ ಪರಿಣಾಮ

ಮೊದಲನೇ ದಿನ ಕಸ ಗುಡಿಸುವುದು ಮತ್ತು ‘ಮಾಪ್’ನಿಂದ ನೆಲ ಒರೆಸುವುದು, ಈ ಕೃತಿಗಳನ್ನು ಮಾಡಿದ ನಂತರ ಆ ಸ್ತ್ರೀಯ ಮತ್ತು ಕೋಣೆಯಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆ ಅಥವಾ ಇಲ್ಲವಾಗಿ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು. ಮರುದಿನ ಸ್ತ್ರೀಯು ಪಾರಂಪರಿಕ ಪದ್ಧತಿಯಿಂದ ಕೈಯಿಂದ ನೆಲವನ್ನು ಒರೆಸಿದ ನಂತರ ಅವಳಲ್ಲಿನ ಮತ್ತು ಕೋಣೆಯಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಗಿ ಅವಳಲ್ಲಿನ ಸಕಾರಾತ್ಮಕ ಊರ್ಜೆ ತುಂಬಾ ಹೆಚ್ಚಾಯಿತು.

ಇದು ಮುಂದೆ ಕೊಟ್ಟಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

೩. ನಿಷ್ಕರ್ಷ

ಕಸ ಗುಡಿಸುವುದು ಮತ್ತು ನೆಲ ಒರೆಸುವುದು ಈ ದೈನಂದಿನ ಕೃತಿಯನ್ನು ಮಾಡುವವರ ಮೇಲೆ ಮತ್ತು ವಾಸ್ತುವಿನ ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತದೆ. ‘ಮಾಪ್ನಿಂ’ದ ನೆಲವನ್ನು ಒರೆಸುವುದಕ್ಕಿಂತ ಪಾರಂಪರಿಕ ಪದ್ಧತಿಯಿಂದ ನೆಲವನ್ನು ಒರೆಸಿದ ನಂತರ ಸ್ತ್ರೀಯ ಮತ್ತು ಕೋಣೆಯಲ್ಲಿನ ಸಕಾರಾತ್ಮಕ ಊರ್ಜೆ (ಸಾತ್ತ್ವಿಕತೆ) ತುಂಬಾ ಹೆಚ್ಚು ಪ್ರಮಾಣದಲ್ಲಿ ಹೆಚ್ಚಾಗಿರುವುದು ಕಂಡುಬಂದಿತು. ಇದರಿಂದ ‘ಮಾಪ್ನಿಂ’ದ ನೆಲವನ್ನು ಒರೆಸುವುದಕ್ಕಿಂತ ಪಾರಂಪರಿಕ ಪದ್ಧತಿಯಿಂದ ನೆಲವನ್ನು ಒರೆಸುವುದು ಹೆಚ್ಚು ಲಾಭದಾಯಕವಾಗಿದೆ, ಎಂಬುದು ಗಮನಕ್ಕೆ ಬರುತ್ತದೆ.

೪. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೪ ಅ. ಕಸ ಗುಡಿಸುವುದು ಮತ್ತು ನೆಲ ಒರೆಸುವುದು ಈ ಕೃತಿಗಳನ್ನು ಮಾಡುವುದರಿಂದ ಸ್ತ್ರೀಯರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುವುದು : ಪರೀಕ್ಷಣೆಯಲ್ಲಿ ಸ್ತ್ರೀಯು ಸೊಂಟವನ್ನು ಬಾಗಿಸಿ ಬಲಭಾಗದ ಕಡೆಯಿಂದ ಕಸ ಗುಡಿಸಿದಳು. ನಂತರ ಅವಳು ಪಾರಂಪರಿಕ ಪದ್ಧತಿಯಿಂದ ಅಂದರೆ ಬಲಗೈಯಿಂದ (ನೆಲಕ್ಕೆ ಮೊಣಕಾಲುಗಳನ್ನು ತಾಗಿಸದೇ, ಕೆಳಗೆ ಕುಳಿತುಕೊಂಡು) ನೆಲವನ್ನು ಒರೆಸಿದಳು. ಈ ಕೃತಿಗಳನ್ನು ಮಾಡುವಾಗ ಶರೀರದ ಆಗುವ ಮುದ್ರೆಯಿಂದ ಅವಳ ಸೂರ್ಯನಾಡಿ ಜಾಗೃತವಾದುದರಿಂದ ಅವಳ ಸುತ್ತಲೂ ಸಂರಕ್ಷಕ ಕವಚ ನಿರ್ಮಾಣವಾಯಿತು. ಆದ್ದರಿಂದ ಕಸ ಗುಡಿಸುವುದು ಮತ್ತು ಕೈಯಿಂದ ನೆಲ ಒರೆಸುವುದು ಈ ಕೃತಿಗಳನ್ನು ಮಾಡುವಾಗ ಅವಳಲ್ಲಿನ ತೊಂದರೆದಾಯಕ ಸ್ಪಂದನಗಳ ಆವರಣ ಕಡಿಮೆಯಾಗಿ ಅವಳ ಸಾತ್ತ್ವಿಕತೆ ತುಂಬಾ ಹೆಚ್ಚಾಯಿತು.

೪ ಆ. ಕಸ ಗುಡಿಸುವುದು ಮತ್ತು ನೆಲ ಒರೆಸುವುದು ಈ ಕೃತಿಗಳಿಂದ ವಾಸ್ತು ಶುದ್ಧವಾಗುವುದು : ಸ್ತ್ರೀಯು ಕೋಣೆಯ ಕಸವನ್ನು ಗುಡಿಸಿದ್ದರಿಂದ ಅಲ್ಲಿನ ರಜ-ತಮಾತ್ಮಕ ಸ್ಪಂದನಗಳು ಕಡಿಮೆಯಾದವು. ನೆಲ ಒರೆಸುವಾಗ ನೀರಿನಲ್ಲಿನ ಆಪತತ್ತ್ವದಿಂದ ಭೂಮಿಯ ಮೇಲಿನ ತೊಂದರೆದಾಯಕ ಸ್ಪಂದನಗಳು ದೂರವಾದವು. ಆದ್ದರಿಂದ ವಾಸ್ತುವಿನ ಶುದ್ಧಿ ಆಯಿತು.

೪ ಇ. ‘ಮಾಪ್ನಿಂದ ನೆಲ ಒರೆಸುವುದಕ್ಕಿಂತ ಪಾರಂಪರಿಕ ಪದ್ಧತಿಯಿಂದ ನೆಲ ಒರೆಸುವುದು ಹೆಚ್ಚು ಲಾಭದಾಯಕವಾಗಿದೆ : ಪಾರಂಪರಿಕ ಪದ್ಧತಿಯಿಂದ ನೆಲ ಒರೆಸುವಾಗ ಶರೀರದ ಮುದ್ರೆ ಹೇಗೆ ಆಗುತ್ತದೆಯೋ, ಹಾಗೆ ‘ಮಾಪ್ನಿಂದ ಒರೆಸುವಾಗ ಆಗುವುದಿಲ್ಲ ಮತ್ತು ಎರಡನೇಯದೆಂದರೆ ಪಾರಂಪರಿಕ ಪದ್ಧತಿಯಿಂದ ನೆಲವನ್ನು ಒರೆಸುವಾಗ ಒದ್ದೆ ಬಟ್ಟೆಯನ್ನು ಆಗಾಗ ಸ್ವಚ್ಛ ಮಾಡಲು ತೊಳೆಯಲಾಗುತ್ತದೆ. ಆದ್ದರಿಂದ ನೆಲ ಒಳ್ಳೆಯ ರೀತಿಯಿಂದ ಸ್ವಚ್ಛವಾಗುತ್ತದೆ. ಹಾಗೆಯೇ ಅಲ್ಲಿನ ತೊಂದರೆದಾಯಕ ಸ್ಪಂದನಗಳು ಇಲ್ಲವಾಗಿ ಚೈತನ್ಯ ನಿರ್ಮಾಣವಾಗುತ್ತದೆ. ಆದ್ದರಿಂದ ಮನೆಯ ಸ್ವಚ್ಛತೆಯನ್ನು ಮಾಡಿದ ನಂತರ ಮನಸ್ಸಿಗೆ ಉತ್ಸಾಹವೆನಿಸುತ್ತದೆ.

೫. ಕಸ ಗುಡಿಸುವುದು ಮತ್ತು ನೆಲ ಒರೆಸುವುದು ಈ ಕೃತಿಗಳನ್ನು ಮಾಡುವಾಗ ವಾಸ್ತುವಿನಲ್ಲಿ ನಿರ್ಮಾಣವಾಗುವ ಸಾತ್ತ್ವಿಕತೆ ಉಳಿದುಕೊಳ್ಳಲು ಮಾಡಬೇಕಾದ ಪ್ರಯತ್ನಗಳು

ಕಸ ಗುಡಿಸುವ ಮೊದಲು ಭಾವಪೂರ್ಣ ಪ್ರಾರ್ಥನೆಯನ್ನು ಮಾಡಿ ನಾಮಜಪ ಮಾಡುತ್ತ ಕಸ ಗುಡಿಸಬೇಕು. ನೆಲ ಒರೆಸಲು ಉಪಯೋಗಿಸುವ ನೀರಿನಲ್ಲಿ ಚಿಟಿಕೆಯಷ್ಟು ವಿಭೂತಿಯನ್ನು ಹಾಕಬೇಕು. ವಿಭೂತಿಯಲ್ಲಿನ ಸಾತ್ತ್ವಿಕತೆಯಿಂದ ವಿಭೂತಿಯ ನೀರಿನಿಂದ ನೆಲವನ್ನು ಒರೆಸಿದ ನಂತರ ನೆಲದ ಮೇಲಿನ ತೊಂದರೆದಾಯಕ ಸ್ಪಂದನಗಳು ನಾಶವಾಗಲು ಸಹಾಯವಾಗುತ್ತದೆ. ನೆಲವನ್ನು ಒರೆಸುವ ಮೊದಲು ‘ಭೂಮಿಯ ಮೇಲೆ ತೊಂದರೆದಾಯಕ ಸ್ಪಂದನಗಳ ಆವರಣವು ನೀರಿನಲ್ಲಿನ ಚೈತನ್ಯದಿಂದ ನಾಶವಾಗಲಿ, ಎಂದು ಜಲ ದೇವತೆಗೆ ಪ್ರಾರ್ಥನೆಯನ್ನು ಮಾಡಬೇಕು. ನೆಲ ಒರೆಸಲು ಉಪಯೋಗಿಸುವ ಒದ್ದೆ ಬಟ್ಟೆಯನ್ನು ಆಗಾಗ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಬೇಕು. ನೆಲ ಒರೆಸಿದ ನಂತರ ಊದಿನಕಡ್ಡಿಯನ್ನು ಉರಿಸಿ ಮನೆಯಲ್ಲಿ ನಿರ್ಮಾಣವಾದ ಸಾತ್ತ್ವಿಕತೆ ಉಳಿಯಲು ವಾಸ್ತುದೇವತೆಗೆ ಪ್ರಾರ್ಥಿಸಬೇಕು.

ವೃದ್ಧಾಪ್ಯದಿಂದಾಗಿ ಅಥವಾ ಶಾರೀರಿಕ ರೋಗಗಳಿಂದಾಗಿ ಕೆಲವರಿಗೆ ಸೊಂಟವನ್ನು ಬಗ್ಗಿಸಿ ಕಸ ಗುಡಿಸಲು ಅಥವಾ ಕೈಯಿಂದ ನೆಲವನ್ನು ಒರೆಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವರು ನಿಂತುಕೊಂಡು ಈ ಕೃತಿಗಳನ್ನು ಮಾಡುತ್ತಾರೆ. ಇಂತಹ ಸಮಯದಲ್ಲಿ ಅವರು ತಮ್ಮ ಸುತ್ತಲು ಸಂರಕ್ಷಕ ಕವಚ ನಿರ್ಮಾಣವಾಗಲು ತಮ್ಮ ಇಷ್ಟದೇವತೆಗೆ ಭಾವಪೂರ್ಣ ಪ್ರಾರ್ಥನೆಯನ್ನು ಮಾಡಬೇಕು, ಹಾಗೆಯೇ ಪ್ರತಿಯೊಂದು ಕೃತಿಯನ್ನು ನಾಮಜಪ ಮಾಡುತ್ತ ಮಾಡಬೇಕು. ಇದರಿಂದ ಈ ಕೃತಿಗಳನ್ನು ಮಾಡುವಾಗ ತೊಂದರೆದಾಯಕ ಸ್ಪಂದನಗಳಿಂದ ರಕ್ಷಣೆಯಾಗುವುದು.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೧.೧೨.೨೦೨೨)

ವಿ-ಅಂಚೆ : [email protected]