ಕೌಟಿಲ್ಯನು ಮಂಡಿಸಿದ್ದ ಉತ್ತಮ ರಾಜ್ಯ ವ್ಯವಸ್ಥೆಯ ಸಿದ್ದಾಂತ !

‘ಕೌಟಿಲ್ಯನು ಅವನ ‘ಅರ್ಥಶಾಸ್ತ್ರ’ದ ಗ್ರಂಥದಲ್ಲಿ ‘ರಾಜ್ಯ’ ಈ ಸಂಕಲ್ಪನೆಗೆ ಮನುಷ್ಯನ ಶರೀರದ ಹೋಲಿಕೆ ನೀಡಿದ್ದಾನೆ. ಇದರಲ್ಲಿ ‘ರಾಜ’ ಇವನು ಶರೀರದ ‘ಆತ್ಮ’, ‘ಪ್ರಧಾನಮಂತ್ರಿ’ ಎಂದರೆ ‘ಮೆದುಳು’, ‘ಸೇನಾಪತಿ’ ಎಂದರೆ ‘ಭುಜಗಳು’ ಮತ್ತು ‘ಗೂಢಚಾರ’ವೆಂದರೆ ರಾಜ್ಯ ರೂಪದ ಶರೀರದ ‘ಕಣ್ಣು’ ಮತ್ತು ‘ಕಿವಿ’ ಎಂದು ಹೇಳಿದ್ದಾನೆ. ಈ ಕಣ್ಣು ಮತ್ತು ಕಿವಿಗಳು ಎಷ್ಟು ಜಾಗೃತ ಮತ್ತು ತೀಕ್ಷ್ಣವಾಗಿರುತ್ತವೆಯೋ ಅಷ್ಟು ಪ್ರಮಾಣದಲ್ಲಿ ‘ರಾಜ್ಯ’ವು ಸುರಕ್ಷಿತವಾಗಿರುತ್ತದೆ, ಎಂಬ ಸಿದ್ದಾಂತವನ್ನು ಕೌಟಿಲ್ಯನು ಮಂಡಿಸುತ್ತಾನೆ.