ದೇಶವನ್ನು ಸಮೃದ್ಧಗೊಳಿಸುವ ಗುರುಕುಲ ಶಿಕ್ಷಣಪದ್ದತಿಯ ಮಹತ್ವ

ಭಾರತ ದೇಶವು ಮೊದಲು ತುಂಬಾ ಸಮೃದ್ಧ ಮತ್ತು ಪ್ರಗತವಾಗಿತ್ತು, ಅದರ ನಿಜವಾದ ಕಾರಣವೆಂದರೆ ಗುರುಕುಲ ಶಿಕ್ಷಣ ಪದ್ದತಿ ! ಗುರುಕುಲ ಶಿಕ್ಷಣ ಪದ್ದತಿಯಿಂದ ಸಕ್ಷಮ ಪೀಳಿಗೆಯನ್ನು ರೂಪಿಸಲಾಗುತ್ತಿತ್ತು. ಆ ಪೀಳಿಗೆಯು ದೇಶದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿತ್ತು ಮತ್ತು ದೇಶವನ್ನು ಇನ್ನೂ ಅಭಿವೃದ್ಧಿಗೊಳಿಸುವ, ಇನ್ನೂ ಸಮೃದ್ಧಗೊಳಿಸುವ ಪ್ರಯತ್ನದಲ್ಲಿರುತ್ತಿತ್ತು. ಆಂಗ್ಲರು ಭಾರತಕ್ಕೆ ಬಂದಾಗ ಅವರು ಭಾರತದ ಸಮೃದ್ಧಿ ಮತ್ತು ಪ್ರಗತಿಯ ಮೂಲ ಕಾರಣ ಇಲ್ಲಿನ ಗುರುಕುಲ ಶಿಕ್ಷಣಪದ್ದತಿಯೇ ಆಗಿದೆ, ಎಂಬುದನ್ನು ಗುರುತಿಸಿದರು. ಎಲ್ಲಿಯವರೆಗೆ ನಾವು ಈ ಶಿಕ್ಷಣಪದ್ದತಿಯನ್ನು ನಾಶ ಮಾಡಿ ಭಾರತೀಯರಲ್ಲಿ ಗುಲಾಮಗಿರಿಯ ಮಾನಸಿಕತೆಯನ್ನು ನಿರ್ಮಿಸುವ ನಮ್ಮ ಶಿಕ್ಷಣಪದ್ದತಿಯನ್ನು ಬಿಂಬಿಸುವುದಿಲ್ಲವೋ, ಅಲ್ಲಿಯವರೆಗೆ ಭಾರತದಲ್ಲಿ ಸುಖವಾಗಿ ಆಡಳಿತವನ್ನು ನಡೆಸಲು ಸಾಧ್ಯವೇ ಇಲ್ಲ ಎಂಬುದನ್ನು ಅವರು ತಿಳಿದುಕೊಂಡರು.

ಕು. ಜಯೇಶ ಕಾಪಶೀಕರ್

೧. ಭಾರತ ಸ್ವತಂತ್ರವಾಯಿತು, ಆದರೆ ಶಿಕ್ಷಣದಲ್ಲಿ ಆಂಗ್ಲರ ಗುಲಾಮವಾಗಿಯೇ ಉಳಿಯಿತು !

೧೮೩೫ ರಲ್ಲಿ ಭಾರತೀಯ ಶಿಕ್ಷಣಪದ್ಧತಿಯನ್ನು ಅಧ್ಯಯನ ಮಾಡಲು ಆಂಗ್ಲರು ಒಂದು ಸಮಿತಿಯನ್ನು ರಚಿಸಿದ್ದರು. ವಿಲ್ಯಮ್ ಎಡಮ್ ಇವನು ಆ ಸಮಿತಿಯ ಮುಖಂಡನಾಗಿದ್ದನು. ಅವನು ಉನ್ನತ ಮಟ್ಟದ ಅಧಿಕಾರಿ ಆಗಿದ್ದನು. ಅವನ ಕೈಕೆಳಗೆ ಕೆಲವು ಅಧಿಕಾರಿಗಳು ಕೆಲಸವನ್ನು ಮಾಡುತ್ತಿದ್ದರು, ಅವರಲ್ಲಿ ಮೆಕಾಲೆ ಒಬ್ಬನಾಗಿದ್ದನು. ಮೆಕಾಲೆ ಭಾರತದಲ್ಲಿನ ಶಿಕ್ಷಣ ಪದ್ಧತಿಯ ಅಭ್ಯಾಸ ಮಾಡಿ ಅದರ ವರದಿಯನ್ನು ವಿಲ್ಯಮ್‌ನಿಗೆ ಕಳುಹಿಸುತ್ತಿದ್ದನು.

ಇಬ್ಬರೂ ಸೇರಿ ೧ ಸಾವಿರದ ೭೦೦ ಪುಟಗಳ ವರದಿಯನ್ನು ತಯಾರಿಸಿದರು. ಅದನ್ನು ಆಂಗ್ಲರ ಬ್ರಿಟನ್‌ನ ಸಂಸತ್ತು ‘ಹೌಸ್ ಆಫ್ ಕಾಮನ್ಸ್’ನಲ್ಲಿ ಸಲ್ಲಿಸಿದರು. ಅನಂತರ ಭಾರತದ ಭವ್ಯತೆಯನ್ನು ಹಾಳು ಮಾಡಲು ಮೆಕಾಲೆ ಗುರುಕುಲ ಶಿಕ್ಷಣ ಪದ್ದತಿಯನ್ನೇ ಮುಗಿಸಿಬಿಟ್ಟನು ಮತ್ತು ಬ್ರಿಟೀಶರ ಶಿಕ್ಷಣಪದ್ದತಿ ಆರಂಭಿಸಿದನು. ಅದೇ ವ್ಯವಸ್ಥೆಯು ಇಂದು ಭಾರತದ ಮುಂದಿನ ಪೀಳಿಗೆಗಳಿಗೆ ಗುಲಾಮಗಿರಿಯ ಮಾನಸಿಕತೆಯನ್ನು ಕಲಿಸುತ್ತಿದೆ.

೨. ಪಾಶ್ಚಾತ್ಯರ ಅಂಧಾನುಕರಣೆ ಮಾಡಲು ಕಲಿಸುವ ಮೆಕಾಲೆ ಶಿಕ್ಷಣಪದ್ಧತಿಯ ದುಷ್ಪರಿಣಾಮಗಳು

ಯಾವಾಗ ಯಾವುದಾದರೊಂದು ದೇಶ ಸ್ವತಂತ್ರವಾಗುತ್ತದೆಯೋ, ಆಗ ಅದು ಸಂಪೂರ್ಣ ಸ್ವತಂತ್ರವಾಗಿರುತ್ತದೆ ಮತ್ತು ಅದು ತನ್ನ ಹೊಸ ಶಿಕ್ಷಣಪದ್ದತಿಯನ್ನು ತಯಾರಿಸುತ್ತದೆ. ಆದರೆ ಭಾರತ ಸ್ವತಂತ್ರವಾದ ನಂತರ ಶಿಕ್ಷಣಪದ್ದತಿ ಮಾತ್ರವಲ್ಲ, ಒಂದು ಕಾನೂನನ್ನೂ ಕೂಡ ಬದಲಾಯಿಸಲಿಲ್ಲ. ಎಲ್ಲಿಯವರೆಗೆ ಒಬ್ಬ ವ್ಯಕ್ತಿ ಸೆರೆಮನೆಯಲ್ಲಿರುತ್ತಾನೆಯೋ, ಅಲ್ಲಿಯವರೆಗೆ ಅವನಿಗೆ ತನ್ನದೆಂದು ಏನೂ ಇರುವುದಿಲ್ಲ. ಸೆರೆಮನೆಯಲ್ಲಿ ಯಾವ ಶಿಕ್ಷೆಯನ್ನು ಕೊಡಲಾಗುತ್ತದೆಯೋ, ಅದನ್ನು ಏನೂ ಹೇಳದೇ ಸುಮ್ಮನೆ ಭೋಗಿಸಬೇಕಾಗುತ್ತದೆ; ಆದರೆ ಯಾವಾಗ ಅವನು ಸೆರೆಮನೆಯಿಂದ ಮುಕ್ತನಾಗುತ್ತಾನೆಯೋ, ಆಗ ಅವನು ಸ್ವತಂತ್ರನಾಗಿರುತ್ತಾನೆ. ಅದೇ ರೀತಿ ಯಾವಾಗ ಒಂದು ದೇಶ ಪಾರತಂತ್ರ್ಯದಲ್ಲಿರುತ್ತದೆಯೋ, ಆಗ ಅದಕ್ಕೆ ತನ್ನದೆಂದು ಏನೂ ಇರುವುದಿಲ್ಲ; ಆದರೆ ಯಾವಾಗ ಆ ದೇಶ ಸ್ವತಂತ್ರವಾಗುತ್ತದೆಯೋ, ಆಗ ಎಲ್ಲವೂ ಅದರದ್ದೇ ಆಗಿರಬೇಕು, ಇಲ್ಲದಿದ್ದರೆ ಆ ಸ್ವಾತಂತ್ರ್ಯಕ್ಕೆ ಏನೂ ಅರ್ಥ ಉಳಿಯುವುದಿಲ್ಲ; ಆದರೆ ನಾವು ಮಾತ್ರ ಸ್ವತಂತ್ರವಾದ ನಂತರವೂ ಕಣ್ಣುಮುಚ್ಚಿ ಪಾಶ್ಚಾತ್ಯರ ಅಂಧಾನುಕರಣೆಯನ್ನು ಮಾಡುತ್ತಾ ಬಂದಿದ್ದೇವೆ. ನಾವು ಹೆಸರಿಗೆ ಮಾತ್ರ ಸ್ವತಂತ್ರವಾಗಿದ್ದೇವೆ; ಆದರೆ ನಮ್ಮ ಮಾನಸಿಕತೆಯು ಗುಲಾಮಗಿರಿಯಲ್ಲಿಯೇ ಉಳಿದಿದೆ. ಇದೆಲ್ಲ ಮೆಕಾಲೆಯ ಶಿಕ್ಷಣಪದ್ಧತಿಯಿಂದಲೇ ಆಗಿದೆ.

೩. ಭಾರತದ ಇಂದಿನ ವಿಫಲ ಶಿಕ್ಷಣ ಪದ್ಧತಿ !

ಮೊದಲು ನಮ್ಮಲ್ಲಿ ಮನುಷ್ಯನ ಯೋಗ್ಯತೆಯನ್ನು ಪದವಿಯಿಂದಲ್ಲ, ಅವನ ಜ್ಞಾನದ ಆಧಾರದಲ್ಲಿ ಗುರುತಿಸಲಾಗುತ್ತಿತ್ತು. ಇಂದು ಜ್ಞಾನಕ್ಕಿಂತ ಪದವಿಗೆ ಹೆಚ್ಚು ಮಹತ್ವವನ್ನು ಕೊಡಲಾಗುತ್ತದೆ. ಭಾರಧ್ವಜಋಷಿ, ಸುಶ್ರುತಋಷಿ ಮುಂತಾದವರಲ್ಲಿ ಯಾವುದೇ ಪದವಿಗಳು ಇರಲಿಲ್ಲ. ಆದರೆ ಜ್ಞಾನವಿತ್ತು ಆದ್ದರಿಂದ ಅವರು ಸಾವಿರಾರು ವರ್ಷಗಳ ಹಿಂದೆ ಸಂಶೋಧನೆಯನ್ನು ಮಾಡಿರುವುದು ಜಗತ್ತಿಗೆ ಈಗ ತಿಳಿಯುತ್ತದೆ. ಇದೆಲ್ಲವನ್ನೂ ಬಿಟ್ಟು ನಾವು ಮಾತ್ರ ಪಾಶ್ಚಾತ್ಯರ ಕಡೆಗೆ ವಾಲುತ್ತಿದ್ದೇವೆ. ಇಂದಿನ ಪೀಳಿಗೆಯ ಕುಸಿತಕ್ಕೆ ಈ ಗುಲಾಮೀ ಮಾನಸಿಕತೆಯ ಶಿಕ್ಷಣವೇ ಕಾರಣವಾಗಿದೆ. ಭಾರತದ ಇಂದಿನ ಈ ಶಿಕ್ಷಣಪದ್ದತಿಯು ವಿದ್ಯಾರ್ಥಿಗಳ ಮನೋಬಲವನ್ನು ಹೆಚ್ಚಿಸುವುದರಲ್ಲಿ ಸಂಪೂರ್ಣ ವಿಫಲವಾಗಿದೆ, ಎಂಬುದು ಕೊರೋನಾದ ಸಂಕಟಕಾಲದಲ್ಲಿ ಪ್ರಖರವಾಗಿ ಅರಿವಾಯಿತು. ಆದ್ದರಿಂದಲೆ ಇಂದಿನ ಪೀಳಿಗೆಯು ನಿರಾಶೆಯಿಂದ ಮೃತ್ಯುವಿನ ಮಡಿಲಿಗೆ ಹೋಗುತ್ತಿದೆ.

೪. ಭಾರತವನ್ನು ವಿಶ್ವಗುರುವನ್ನಾಗಿಸುವ ಭಾವನೆಯನ್ನು ನಿರ್ಮಿಸಿರಿ !

ಭಾರತ ಸ್ವತಂತ್ರವಾದ ನಂತರ ಮೆಕಾಲೆ ಪುರಸ್ಕೃತ ಶಿಕ್ಷಣಪದ್ಧತಿಯನ್ನು ಬದಲಾಯಿಸಿದ್ದರೆ, ನಮ್ಮ ದೇಶ ಇಂತಹ ದುರವಸ್ಥೆಗೆ ಹೋಗುತ್ತಿರಲಿಲ್ಲ. ಮೊಗಲ ಆಡಳಿತಗಾರರ ಸುಳ್ಳು ಇತಿಹಾಸವನ್ನು ಕಲಿಸುವುದರಿಂದ ಮಕ್ಕಳ ಮನಸ್ಸಿನ ಮೇಲೆ ವಿಪರೀತ ಪರಿಣಾಮವಾಗುತ್ತದೆ. ಒಂದು ವೇಳೆ ಸತ್ಯ ಇತಿಹಾಸವನ್ನು ಕಲಿಸಿದರೆ, ಮಕ್ಕಳಲ್ಲಿನ ಹಿಂದುತ್ವದ ಸುಪ್ತ ಭಾವನೆಯು ಜಾಗೃತವಾಗಬಹುದು. ಅವರಲ್ಲಿನ ಹಿಂದುತ್ವ ಸಿಡಿದೇಳಬಹುದು. ಒಂದು ಕಾಲದಲ್ಲಿ ಭಾರತ ವಿಶ್ವಗುರು ಆಗಿತ್ತು, ಎಂಬುದು ಅವರಿಗೆ ತಿಳಿಯುವುದು, ಆದರೆ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಬಹುದು, ‘ಭಾರತ ಈ ಹಿಂದೆ ವಿಶ್ವಗುರು ಆಗಿತ್ತೇ ? ಹಾಗಾದರೆ ಈಗ ವಿಶ್ವಗುರು ಆಗಲು ಏಕೆ ಸಾಧ್ಯವಿಲ್ಲ ?’ ಪ್ರತಿಯೊಬ್ಬರ ಮನಸ್ಸಿನಲ್ಲಿ ಈ ಭಾವನೆ ಜಾಗೃತವಾದರೆ, ಭಾರತ ಪುನಃ ವಿಶ್ವಗುರು ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.’

– ಕು. ಜಯೇಶ ಕಾಪಶೀಕರ್ (೧೬ ವರ್ಷ) ಆಧ್ಯಾತ್ಮಿಕ ಮಟ್ಟ ಶೇ. ೬೧) ಪುಣೆ. (೫.೭.೨೦೨೧)

ಮೆಕಾಲೆ ಬ್ರಿಟನ್ನಿನ ಸಂಸತ್ತಿನಲ್ಲಿ ಸಾದರಪಡಿಸಿದ ವರದಿಯಲ್ಲಿ ಭಾರತೀಯ ಶಿಕ್ಷಣಪದ್ದತಿಯ ಬಗ್ಗೆ ಮಾಡಿದ ವರ್ಣನೆ ! 

ಮೆಕಾಲೆ

೧. ಒಳ್ಳೆಯ ಶಿಕ್ಷಣಪದ್ದತಿಯಿಂದ ಭಾರತ ವೈಭವಸಂಪನ್ನವಾಗಿದೆ !

‘ನಾನು ಇಷ್ಟರವರೆಗೆ ಸಂಪೂರ್ಣ ಭಾರತದ ಯಾತ್ರೆಯನ್ನು ಮಾಡಿದ್ದೇನೆ. ಭಾರತದಲ್ಲಿ ನಾನು ನೋಡದಿರುವ ಯಾವುದೇ ಕ್ಷೇತ್ರವೇ ಇಲ್ಲ. ನಾನು ಈಗ ಏನು ಹೇಳಲಿಕ್ಕಿದ್ದೇನೆಯೋ, ಅದರ ಬಗ್ಗೆ ನಿಮಗೆ ಯಾರಿಗೂ ವಿಶ್ವಾಸ ಬರಲಿಕ್ಕಿಲ್ಲ; ಏಕೆಂದರೆ, ನಾನು ಭಾರತದಲ್ಲಿ ಒಬ್ಬ ಭಿಕ್ಷುಕನನ್ನೂ ನೋಡಲಿಲ್ಲ, ತನ್ನ ಉದರಪೋಷಣೆಗಾಗಿ ಇನ್ನೊಬ್ಬರ ಮುಂದೆ ಕೈಚಾಚುವ ಒಬ್ಬ ವ್ಯಕ್ತಿಯನ್ನೂ ಸಹ ನಾನು ನೋಡಲಿಲ್ಲ . ನಾನು ಇದುವರೆಗೆ ಅನೇಕ ನಗರಗಳಲ್ಲಿ ತಿರುಗಾಡಿದ್ದೇನೆ. ಒಂದೆಡೆ ಯುರೋಪ್‌ನಲ್ಲಿನ ನಗರಗಳು ಮತ್ತು ವ್ಯತ್ಯಾಸಕ್ಕಾಗಿ ಭಾರತದಲ್ಲಿನ ಸೂರತ್ ನಗರವನ್ನು ತೆಗೆದುಕೊಂಡರೆ, ಸೂರತ್‌ನಲ್ಲಿನ ಸಂಪತ್ತು ಹೆಚ್ಚು ಕಾಣಿಸುತ್ತದೆ. ಭಾರತವನ್ನು ಆಳುವುದು ಕಠಿಣವಾಗಿದೆ; ಆದರೆ ಅಸಾಧ್ಯವೇನಲ್ಲ. ಭಾರತವನ್ನು ಆಳಬೇಕಾಗಿದ್ದರೆ, ಭಾರತದ ಶಿಕ್ಷಣಪದ್ದತಿಯನ್ನು ನಾಶಮಾಡಬೇಕಾಗುವುದು. ಭಾರತದಲ್ಲಿ ಏನೆಲ್ಲ ವೈಭವವಿದೆಯೊ, ಅದು ಕೇವಲ ಅವರ ಶಿಕ್ಷಣಪದ್ದತಿಯಿಂದಲೇ ಬಂದಿದೆ. ಭಾರತೀಯ ಶಿಕ್ಷಣಪದ್ದತಿಯ ಮೊದಲ ಸತ್ಯವೆಂದರೆ, ಅಲ್ಲಿ ನಿರಕ್ಷರತೆಯಿಲ್ಲ. ಹೆಚ್ಚು ಕಡಿಮೆ ಸಂಪೂರ್ಣ ಭಾರತದಲ್ಲಿ ಸಾಕ್ಷರತೆಯಿದೆ. ಇಂಗ್ಲೆಡ್‌ನಲ್ಲಿ ಕೇವಲ ಶೇ. ೧೭ ರಷ್ಟೇ ಸಾಕ್ಷರತೆಯಿದೆ.

೨. ಭಾರತದಲ್ಲಿನ ವಿಶ್ವವಿದ್ಯಾಲಯಗಳೆಂದರೆ ವಿವಿಧ ವಿಷಯಗಳ ಶಿಕ್ಷಣವನ್ನು ನೀಡುವ ವ್ಯವಸ್ಥೆಗಳು !

ಭಾರತದಲ್ಲಿ ಸುಮಾರು ೧೫ ಸಾವಿರದ ೮೦೦ ವಿಶ್ವವಿದ್ಯಾಲಯಗಳಿವೆ (ಹಾಯರ್ ಸ್ಟಡೀ ಸೆಂಟರ್) ಮೊದಲು ನಲಂದಾ ಮತ್ತು ತಕ್ಷಶಿಲಾ ಈ ವಿಶ್ವವಿದ್ಯಾಲಯಗಳಿದ್ದವು. ಎಲ್ಲ ವಿಶ್ವವಿದ್ಯಾಲಯಗಳು ಯಾವುದಾದರೊಂದು ವಿಷಯದಲ್ಲಿ ಕುಶಲವಾಗಿದ್ದವು, ಉದಾ. ಅಮರಾವತಿ ವಿಶ್ವವಿದ್ಯಾಲಯದಲ್ಲಿ ಭೂಮಿಯಿಂದ ಕಬ್ಬಿಣ, ಚಿನ್ನ, ಮತ್ತು ಬೆಳ್ಳಿಯನ್ನು ತೆಗೆದು ಅವುಗಳನ್ನು ಹೇಗೆ ಬೇರೆ ಬೇರೆ ಮಾಡಬೇಕು ಎಂಬುದನ್ನು ಕಲಿಸಲಾಗುತ್ತದೆ. ಕಾಂಗಡಾ (ಹಿಮಾಚಲ ಪ್ರದೇಶ) ವಿಶ್ವವಿದ್ಯಾಲಯವು ಶಸ್ತ್ರಕ್ರಿಯೆಗೆ (ಸರ್ಜರಿ) ಪ್ರಸಿದ್ಧವಾಗಿದೆ. ಅಲ್ಲಿನ ಓರ್ವ ಆಚಾರ್ಯರಲ್ಲಿ ಕನಿಷ್ಟ ೫೦೦ ಶಸ್ತ್ರಕ್ರಿಯೆಯ ಉಪಕರಣಗಳಿವೆ. ಈ ಆಚಾರ್ಯರೆಂದರೆ, ಇಂದಿನ ಎಮ್.ಎಸ್. (ಮಾಸ್ಟರ ಆಫ್ ಸರ್ಜರಿ)ಗೆ ಸಮಾನರಾಗಿದ್ದರು.

೩. ಬ್ರಿಟನ್‌ನಲ್ಲಿ ಕೇವಲ ಬೈಬಲ್‌ನ್ನು ಕಲಿಸಲಾಗುತ್ತದೆ, ಆದರೆ ಭಾರತದಲ್ಲಿ ಗುರುಕುಲಗಳಲ್ಲಿ ವಿದ್ಯಾರ್ಥಿಗಳಿಗೆ ೧೮ ಪ್ರಕಾರದ ವಿಷಯಗಳನ್ನು ಕಲಿಸಲಾಗುತ್ತದೆ

ಮೆಕಾಲೆಯವರು ಮಾತುಗಳನ್ನು ಮುಂದುವರಿಸುತ್ತಾ, ಭಾರತದಲ್ಲಿ ೭ ಲಕ್ಷ ಗುರುಕುಲಗಳಿವೆ. ಇಂಗ್ಲೆಡನಲ್ಲಿ ಕೇವಲ ೪೦ ವಿದ್ಯಾಲಯಗಳಿವೆ ಮತ್ತು ಅವುಗಳಲ್ಲಿ ಯಾರಿಗೂ ಗಣಿತ ಕಲಿಸಲು ಬರುವುದಿಲ್ಲ, ಇಲ್ಲಿ ಕೇವಲ ಬೈಬಲ್‌ನ್ನು ಮಾತ್ರ ಕಲಿಸಲಾಗುತ್ತದೆ. ಭಾರತದಲ್ಲಿನ ಗುರುಕುಲಗಳಲ್ಲಿ ೧೮ ವಿಷಯಗಳನ್ನು ಕಲಿಸಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚು ಪ್ರಾಧಾನ್ಯತೆಯನ್ನು ಗಣಿತ ವಿಷಯಕ್ಕೆ ಕೊಡಲಾಗುತ್ತದೆ, ಅದರಲ್ಲಿಯೂ ವೈದಿಕ ಗಣಿತವನ್ನು ಹೆಚ್ಚು ಕಲಿಸಲಾಗುತ್ತದೆ. ಅನಂತರ ಖಗೋಲಶಾಸ್ತ್ರ, ಧಾತುವಿಜ್ಞಾನ (ಮೆಟಲರ್ಜಿ), ರಸಾಯನಶಾಸ್ತ್ರ, ಚಿಕಿತ್ಸಾಶಾಸ್ತ್ರ ಇತ್ಯಾದಿ ವಿಷಯಗಳಿಗೆ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಎಲ್ಲ ೧೮ ವಿಷಯಗಳನ್ನು ಕಲಿಸಲಾಗುತ್ತದೆ. ಮಕ್ಕಳಿಗೆ ೫ ನೇ ವಯಸ್ಸಿನಲ್ಲಿ ಗುರುಕುಲದಲ್ಲಿ ಪ್ರವೇಶ ಸಿಗುತ್ತದೆ. ಅವರ ಶಿಕ್ಷಣ ಪೂರ್ಣವಾದಾಗ ಅವರ ವಯಸ್ಸು ೨೧-೨೨ ಆಗಿರುತ್ತದೆ.

ಮೇಲಿನ ಎಲ್ಲ ಉದಾಹರಣೆಗಳಿಂದ ಭಾರತ ಎಷ್ಟು ಸಮೃದ್ಧ ದೇಶವಾಗಿತ್ತು ಮತ್ತು ಭಾರತದಲ್ಲಿನ ಗುರುಕುಲ ಶಿಕ್ಷಣಪದ್ದತಿಯು ಎಷ್ಟು ಉತ್ತಮವಾಗಿತ್ತು ! ಎಂಬುದು ಗಮನಕ್ಕೆ ಬರುತ್ತದೆ . – ಕು. ಜಯೇಶ ಕಾಪಶಿಕರ್