ಪಾಕಿಸ್ತಾನದಲ್ಲಿನ ಅಪ್ರಾಪ್ತ ಹಿಂದೂ ಹುಡುಗಿ ಅಪಹರಣ ಮತ್ತು ಮತಾಂತರ !

ಪಾಕಿಸ್ತಾನದಲ್ಲಿನ ಅಸುರಕ್ಷಿತ ಹಿಂದೂ !

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿ ಮಿರಪುರ ಖಾಸ್ ಜಿಲ್ಲೆಯಲ್ಲಿನ ನೌಕೋಟ್ ನಲ್ಲಿ ಓರ್ವ ೧೭ ವರ್ಷದ ಹಿಂದೂ ಹುಡುಗಿಯನ್ನು ಮುಸಲ್ಮಾನರು ಅಪಹರಿಸಿರುವ ಘಟನೆ ನಡೆದಿದೆ. ಈ ಹುಡುಗಿ ಫೆಬ್ರವರಿ ೧೫ ರಂದು ತನ್ನ ಚಿಕ್ಕ ಸಹೋದರನ ಜೊತೆ ತರಕಾರಿ ಕೊಳ್ಳಲು ಮಾರುಕಟ್ಟೆಗೆ ಹೋಗುತ್ತಿರುವಾಗ ಉಮರಕೋಟ ಇಲ್ಲಿಯ ರೌಫ ಮತ್ತು ಅವನ ಸ್ನೇಹಿತ ಆಕೆಯನ್ನು ಅಪಹರಿಸಿದ್ದಾರೆ. ಹುಡುಗಿಯ ತಂದೆ ರಮೇಶ ಭಿಲ ಇವರು ಪೊಲೀಸರಿಗೆ ದೂರು ನೀಡುವ ಪ್ರಯತ್ನ ಮಾಡಿದಾಗ ಪೊಲೀಸರು ಅವರಿಗೆ, ಹುಡುಗಿ ಸ್ವಂತ ಇಚ್ಛೆಯಿಂದ ಹೋಗಿದ್ದಾಳೆ ಎಂದು ಹೇಳಿದರು. ಆದ್ದರಿಂದ ಅಪಹರಣದ ದೂರು ದಾಖಲಿಸುವುದಕ್ಕೆ ಒಂದು ವಾರ ಕಾಯಬೇಕಾಗಬಹುದು. ಈ ವಿಷಯದ ಬಗ್ಗೆ ನೌಕೋಟ್ ಪೊಲೀಸ್ ಠಾಣೆಯ ಪೊಲೀಸ ಅಧಿಕಾರಿ, ಹುಡುಗಿ ಇಸ್ಲಾಂ ಸ್ವೀಕರಿಸಿದ್ದು ಆಕೆಗೆ ರೌಫ ಜೊತೆಗೆ ಇರುವುದಿದೆ, ಎಂದು ಹೇಳಿದರು.