ಇಂದು ಭಾರತದಾದ್ಯಂತ ಧ್ರುವ ಜೈನ್ ಈ ಹೆಸರು ಎಲ್ಲೆಡೆ ಚರ್ಚೆಯಲ್ಲಿದೆ. ಇದರ ಕಾರಣವೂ ಹಾಗೆಯೆ ಇದೆ. ಬಿಲಾಸಪುರ (ಛತ್ತೀಸ್‌ಗಡ) ದಲ್ಲಿನ ವಿದ್ಯಾರ್ಥಿ ಧ್ರುವ ‘ಜೆಇಇ ಮೆನ್ (ಅಭಿಯಾಂತ್ರಿಕ ಶಿಕ್ಷಣ ಪ್ರವೇಶ ಪರೀಕ್ಷೆ) ೨೦೨೩ ರ ಪ್ರವೇಶ ಪರೀಕ್ಷೆಯಲ್ಲಿ ಶೇ. ೧೦೦ ರಷ್ಟು ಅಂಕಗಳನ್ನು ಪಡೆದು ಯಶಸ್ವಿಯಾದನು. ನಿಜ ನೋಡಿದರೆ ‘ಜೆಇಇ ಮೆನ್ ಈ ಪರೀಕ್ಷೆ ಕಠಿಣವಿರುತ್ತದೆ. ಆದರೂ ಇದರಲ್ಲಿ ಪ್ರತಿಯೊಂದರಲ್ಲಿಯೂ ಪೂರ್ಣ ಅಂಕಗಳನ್ನು ಪಡೆಯುವುದು ಶ್ಲಾಘನೀಯವಾಗಿದೆ. ಅವನು ಹೇಗೆ ಈ ಯಶಸ್ಸನ್ನು ಸಂಪಾದಿಸಿದನು, ಎನ್ನುವ ವಿಷಯದಲ್ಲಿ ಎಲ್ಲರಿಗೂ ಕುತೂಹಲವಿದೆ. ಧ್ರುವನ ಅಧ್ಯಯನದ ಪದ್ಧತಿ ಮತ್ತು ಇಟ್ಟುಕೊಂಡಿರುವ ಧ್ಯೇಯ-ಧೋರಣೆಯ ವಿಷಯದಲ್ಲಿ ನೀಡಿರುವ ಮಾಹಿತಿಯು ಎಲ್ಲೆಡೆ ಪ್ರಸಾರವಾಗಿದೆ. ಅದರಲ್ಲಿ ಅವನು ಹೇಳಿರುವ ಒಂದು ವಿಷಯವು ಮಹತ್ವಪೂರ್ಣವಾಗಿದೆ. ಧ್ರುವ ಹೇಳುತ್ತಾನೆ, “ನಾನು ಅಧ್ಯಯನ ಹಾಗೂ ಅಧ್ಯಾತ್ಮವನ್ನು ಹೊಂದಾಣಿಕೆ ಮಾಡಿಕೊಂಡು ನನ್ನ ಧ್ಯೇಯವನ್ನು ಸಾಧಿಸಲು ಪ್ರಯತ್ನಿಸಿದೆನು. ಅಧ್ಯಾತ್ಮದ ಸಹಾಯದಿಂದ ಮನಸ್ಸನ್ನು ಶಾಂತವಾಗಿಟ್ಟು ಅಧ್ಯಯನದ ಮೇಲೆ ಗಮನವಿಡಲು ಸುಲಭ ವಾಯಿತು. ನಾವು ದೇವರ ಅನುಸಂಧಾನದಲ್ಲಿರುವಾಗ ನಮಗೆ ಸಕಾರಾತ್ಮಕ ಇಂಧನ ಸಿಗುತ್ತದೆ, ಎನ್ನುವ ವಿಶ್ವಾಸ ನನಗಿದೆ, ಆದ್ದರಿಂದ ಅದು ನನಗೆ ಪ್ರಾಪ್ತಿಯಾಯಿತು. ಕಠಿಣವಾದ ಪರೀಕ್ಷೆಯಲ್ಲಿ ಯಶಸ್ಸು ಪಡೆದ ವಿದ್ಯಾರ್ಥಿಯ ಈ ಹೇಳಿಕೆಯು ಎಲ್ಲರಿಗೂ ಆದರ್ಶವಾಗಿದೆ. ಅಧ್ಯಾತ್ಮವನ್ನು ನಿರಾಕರಿಸುವ ಜನರಿಗೆ ಹಾಗೂ ತಥಾಕಥಿತ ಪ್ರಗತಿಪರರು, ವಿಜ್ಞಾನವಾದಿಗಳು ಮತ್ತು ಜಾತ್ಯತೀತರಿಗೆ ಧ್ರುವನ ಹೇಳಿಕೆಯು ಒಂದು ದೊಡ್ಡ ಛಡಿಯೇಟಾಗಿದೆ. ‘ಅಧ್ಯಾತ್ಮ ಅಸ್ತಿತ್ವದಲ್ಲಿಲ್ಲ, ‘ಅಧ್ಯಾತ್ಮದಿಂದ ಯಶಸ್ಸು ಸಿಗಲು ಸಾಧ್ಯವಿಲ್ಲ, ಬುದ್ಧಿಯಿಂದಲೆ ಯಶಸ್ಸು ಸಿಗುತ್ತದೆ, ‘ಅಧ್ಯಾತ್ಮಕ್ಕಿಂತ ವಿಜ್ಞಾನ ಶ್ರೇಷ್ಠವಾಗಿದೆ, ಎಂದು ಹೇಳುವವರಿಗೆ ಧ್ರುವನ ಮಾತು ಇಷ್ಟವಾಗಲಿಕ್ಕಿಲ್ಲ. ಅದು ತಪ್ಪು ಎಂದು ವಿವರಿಸಲು ಅವರು ಪ್ರಯತ್ನಿಸುವರು. ಧ್ರುವನ ಮಾತಿನ ಹಿಂದಿನ ಅಧ್ಯಾತ್ಮದ ಸತ್ಯವನ್ನು ತಿಳಿದುಕೊಳ್ಳಲು ಅವರು ಪ್ರಯತ್ನಿಸಲಿಕ್ಕಿಲ್ಲ. ‘ಜೆಇಇ ಮೆನ್ ಪರೀಕ್ಷೆ ನೀಡುವ ವಿದ್ಯಾರ್ಥಿ ದೇವರೊಂದಿಗೆ ಅನುಸಂಧಾನವಿಟ್ಟು ಅದರಿಂದ ಯಶಸ್ವಿಯಾದ ಅನುಭವವನ್ನು ಸಮಾಜದ ಮುಂದಿಡುತ್ತಾನೆ, ಇದಕ್ಕಿಂತ ದೊಡ್ಡ ಸಾಕ್ಷಿ ವಿಜ್ಞಾನನಿಷ್ಠರಿಗೆ ಇನ್ನೇನು ಬೇಕು ? ಅವನ ಉದಾಹರಣೆಯಿಂದಲೆ ವಿಜ್ಞಾನವು ಅಧ್ಯಾತ್ಮಕ್ಕಿಂತ ಬಹಳ ಹಿಂದಿದೆ ಎಂಬುದು ಮತ್ತೊಮ್ಮೆ ಸಿದ್ಧವಾಗುತ್ತದೆ.
‘ಅಧ್ಯಾತ್ಮದ ಅಡಿಪಾಯವಿದ್ದರೆ ಯಶಸ್ಸು ಸಿಗಬಹುದು, ಎಂದು ಧ್ರುವ ತನ್ನದೆ ಉದಾಹರಣೆಯಿಂದ ಸಿದ್ಧಪಡಿಸಿ ತೋರಿಸಿದ್ದಾನೆ. ಕೇವಲ ಹಗಲಿರುಳು ಅಧ್ಯಯನ ಮಾಡಿಯಲ್ಲ, ಅಧ್ಯಯನಕ್ಕೆ ಅಧ್ಯಾತ್ಮವನ್ನು ಜೋಡಿಸಿ ಅವನು ಯಶಸ್ಸಿನ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಾನೆ. ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ಅಧ್ಯಾತ್ಮವನ್ನು ಅವಲಂಬಿಸುವುದು, ತುಂಬಾ ವೈಶಿಷ್ಟ್ಯಪೂರ್ಣವಾಗಿದೆ. ಅಧ್ಯಾತ್ಮದ ಬಲದಿಂದ ಧ್ರುವನಿಗೆ ತಾಳ್ಮೆಯಿಂದ (ಏಕಾಗ್ರತೆಯಲ್ಲಿ) ಇರಲು ಸಾಧ್ಯ ವಾಯಿತು. ಅವನಿಗೆ ಯಾವುದೇ ಒತ್ತಡ ಅಥವಾ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಯಾವುದೇ ಅಡಚಣೆ ಬಂದಿಲ್ಲ. ಅವನು ಪರೀಕ್ಷೆ ಹಾಗೂ ಅಧ್ಯಯನದ ನಿಯೋಜನೆಯನ್ನೂ ಯೋಗ್ಯ ರೀತಿಯಲ್ಲಿ ಪೂರ್ಣಗೊಳಿಸಿದನು. ಅದರಿಂದ ಅವನಿಗೆ (ತಾಳ್ಮೆಯಿಂದ) ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಯಿತು. ಇದರ ಮೂಲ ಅಧ್ಯಾತ್ಮದಲ್ಲಿದೆ. ಯಾವುದು ಧ್ರುವನಿಗೆ ಸಾಧ್ಯವಾಯಿತೋ, ಅದು ಇತರ ವಿದ್ಯಾರ್ಥಿಗಳಿಗೂ ಸಾಧ್ಯವಾಗಬಹುದು. ಎಲ್ಲರೂ ಹೀಗೆ ಪ್ರಯತ್ನಿಸಿ ಗಳಿಸುವ ಯಶಸ್ಸು ನಿಜವಾಗಿಯೂ ಶ್ಲಾಘನೀಯವೆನಿಸುತ್ತದೆ. ‘ಜೆಇಇ ಮೆನ್ ಈ ಪರೀಕ್ಷೆಯಲ್ಲಿ ಧ್ರುವನ ಜೊತೆಗೆ ೧೯ ವಿದ್ಯಾರ್ಥಿಗಳು ಯಶಸ್ವಿಯಾದರು; ಆದರೆ ಕೇವಲ ಅವನು ಮಾತ್ರ ತನ್ನ ಯಶಸ್ಸಿನ ಹಿಂದಿನ ರಹಸ್ಯವನ್ನು ಹೇಳಿದನು, ಎಂಬುದು ವಿಶೇಷವಾಗಿದೆ. ‘ಪರೀಕ್ಷೆಯ ಮೊದಲು ಗಣಪತಿಸ್ತೋತ್ರ ಪಠಿಸಿ ಹೋಗುವುದರಿಂದ ಅಧ್ಯಯನ ಮಾಡಿರುವ ವಿಷಯಗಳು ನೆನಪಾಗುತ್ತವೆ ಹಾಗೂ ಒಳ್ಳೆಯ ಫಲ ಸಿಗುತ್ತದೆ, ಎಂಬುದನ್ನು ಅನುಭವಿಸಿದ ವಿದ್ಯಾರ್ಥಿಗಳ ಅನೇಕ ಉದಾಹರಣೆಗಳಿವೆ. ‘ಪರೀಕ್ಷೆಯಲ್ಲಿ ಯಾವುದೇ ವಿಷಯ ನೆನಪಾಗದಿದ್ದರೆ, ಆಗ ದೇವರಿಗೆ ಪ್ರಾರ್ಥನೆ ಮಾಡಿದಾಗ ವಿಷಯ ನೆನಪಾಗಿ ಅದನ್ನು ಸರಿಯಾಗಿ ಬರೆಯಲು ಸಾಧ್ಯವಾಯಿತು, ಎನ್ನುವ ಅನುಭವ ಕೂಡ ಅಧ್ಯಾತ್ಮವನ್ನು ಅನುಸರಿಸುವ ಅನೇಕ ವಿದ್ಯಾರ್ಥಿಗಳಿಗೆ ಆಗಿದೆ. ಈ ಉದಾಹರಣೆಗಳನ್ನು ನೋಡಿದರೆ, ಎಲ್ಲಿ ಬುದ್ಧಿಗೆ ತಿಳಿಯುವುದಿಲ್ಲವೋ, ಅಲ್ಲಿ ಅಧ್ಯಾತ್ಮದ ಆಧಾರ ಪಡೆಯಬೇಕಾಗುತ್ತದೆ, ಎಂಬುದು ಅರಿವಾಗುತ್ತದೆ !
ವಿಜ್ಞಾನದ ಮಿತಿ ಹಾಗೂ ಅಧ್ಯಾತ್ಮದ ಪ್ರಾರಂಭ !
ಇಂದು ಅನೇಕರು ಧ್ಯಾನ-ಧಾರಣೆ ಅಥವಾ ‘ಮೆಡಿಟೇಶನ್ನ ಸಹಾಯ ಪಡೆಯುತ್ತಿದ್ದಾರೆ. ವಿಜ್ಞಾನದ ಬಲದಲ್ಲಿ ಇಂದು ಮನುಷ್ಯ ಆಕಾಶಕ್ಕೆ ಜಿಗಿಯುತ್ತಿದ್ದಾನೆ; ಆದರೂ ‘ಇಸ್ರೋದ ವಿಜ್ಞಾನಿಗಳು ಪ್ರತಿಯೊಂದು ಉಪಗ್ರಹವನ್ನು ಆಕಾಶಕ್ಕೆ ಹಾರಿಸುವ ಮೊದಲು ಅದರ ಪ್ರತಿಮೆಯನ್ನು ತಿರುಪತಿ ಬಾಲಾಜಿ ಮಂದಿರದಲ್ಲಿ ಅರ್ಪಣೆ ಮಾಡುತ್ತಾರೆ. ಉಪಗ್ರಹದ ಅಂತರಿಕ್ಷದಲ್ಲಿನ ಮುಂದಿನ ಪ್ರವಾಸ ಸುರಕ್ಷಿತವಾಗಲು ಪೂಜೆ ಹಾಗೂ ಪ್ರಾರ್ಥನೆ ಮಾಡುತ್ತಾರೆ. ಇನ್ನೊಂದು ಉದಾಹರಣೆಯನ್ನು ನೀಡುವುದಾದರೆ, ಈ ಹಿಂದೆ ಗುಜರಾತದ ಒಂದು ಗೋಶಾಲೆ ಯಲ್ಲಿನ ೨೫ ಹಸುಗಳಿಗೆ ‘ಲಂಪಿ ಎಂಬ ವೈರಾಣುವಿನ ಸೋಂಕಾಗಿತ್ತು. ಹಸುಗಳನ್ನು ರಕ್ಷಿಸಲು ಶ್ರೀ ಮಹಾದೇವ ದೇಸಾಯಿ ಇವರು ದ್ವಾರಕಾಧೀಶ ಶ್ರೀಕೃಷ್ಣನಿಗೆ ‘ಈ ಹಸುಗಳು ಬದುಕುಳಿದರೆ ನಾನು ಈ ೨೫ ಹಸುಗಳೊಂದಿಗೆ ನಿನ್ನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಬರುತ್ತೇನೆ, ಎಂದು ಹರಕೆ ಹೇಳಿದರು. ನಿಜವಾಗಿಯೂ ಹಸುಗಳು ಬದುಕಿದವು, ಆದ್ದರಿಂದ ಅವರು ತನ್ನ ಹರಕೆಯನ್ನು ಪೂರ್ಣಗೊಳಿಸಿದರು. ಎಲ್ಲಿ ವಿಜ್ಞಾನ ಕೈ ಚೆಲ್ಲುತ್ತದೆಯೋ, ಅಲ್ಲಿ ಅಧ್ಯಾತ್ಮದ ಮಾರ್ಗ ಆರಂಭವಾಗುತ್ತದೆ. ಆಗ ಮನುಷ್ಯನಿಗೂ ಈಶ್ವರೀ ಶಕ್ತಿಯ ಅರಿವಾಗುತ್ತದೆ. ಅಮೇರಿಕಾದಲ್ಲಿನ ಭಾರತೀಯ ವೈದ್ಯರು ‘ಪ್ರಾರ್ಥನೆ ಮಾಡುವುದರಿಂದ ಕೊರೋನಾ ಪೀಡಿತರ ಆರೋಗ್ಯ ಸುಧಾರಣೆಯಾಗಲು ಸಾಧ್ಯವಿದೆಯೇ ?, ಎಂದು ಈ ಹಿಂದೆ ಸಂಶೋಧನೆ ಮಾಡಿದ್ದರು. ಅಧ್ಯಾತ್ಮವನ್ನು ಅಂಗೀಕರಿಸುವ ಪ್ರಮಾಣ ಕ್ರಮೇಣ ಹೆಚ್ಚಾಗುತ್ತಿದೆ, ಎಂಬುದು ಆಶಾದಾಯಕವಾಗಿದೆ. ಧ್ರುವ ಜೈನ್ ಇವನ ಉದಾಹರಣೆಯಿಂದ ‘ಅಧ್ಯಾತ್ಮದ ಶ್ರೇಷ್ಠತೆಯ ಬಗ್ಗೆ ಮತ್ತೊಮ್ಮೆ ವಿಚಾರಮಂಥನವಾಗಬೇಕು, ಎಂದು ಆಶಿಸೋಣ.
‘ಅಧ್ಯಾತ್ಮಶಾಸ್ತ್ರ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಬೇಕು !
ಯಾವುದೇ ವಿಷಯದಲ್ಲಿ ಮಾತನಾಡುವುದರ ಹಿಂದಿನ ಭೌತಿಕ ಕಾರಣಮೀಮಾಂಸೆ ವಿಜ್ಞಾನದಿಂದ ತಿಳಿಯುತ್ತದೆ; ಆದರೆ ಅದರ ಹಿಂದೆ ಭಗವಂತನಿಗೆ ಅಪೇಕ್ಷಿತವಿರುವ ಕಾರ್ಯಕಾರಣ ಭಾವವು ಕೇವಲ ಅಧ್ಯಾತ್ಮದಿಂದಲೇ ಸಿಗಲು ಸಾಧ್ಯ. ಇದರಿಂದಲೇ ಅಧ್ಯಾತ್ಮದ ಶ್ರೇಷ್ಠತೆಯು ಹೆಜ್ಜೆಹೆಜ್ಜೆಗೂ ಅರಿವಾಗುತ್ತದೆ. ಅಧ್ಯಾತ್ಮದ ಮಾರ್ಗವನ್ನು ಅವಲಂಬಿಸುವುದರಿಂದ ಸಕಾರಾತ್ಮಕತೆ ಹೆಚ್ಚಾಗುತ್ತದೆ. ನಿರಾಶೆ, ಒತ್ತಡ ಹಾಗೂ ಚಿಂತೆಯಂತಹ ಮಾನಸಿಕ ಸಮಸ್ಯೆಗಳು ದೂರವಾಗಿ ಮಾನಸಿಕ ಸ್ಥೈರ್ಯ ಲಭಿಸುತ್ತದೆ. ಭವಿಷ್ಯದ ಚಿಂತೆಯ ಭಯವಿರುವುದಿಲ್ಲ. ಕಾರ್ಯಕುಶಲತೆ ಹೆಚ್ಚಾಗಿ ವ್ಯಕ್ತಿಯು ಜೀವನದಲ್ಲಿ ಯಶಸ್ವಿಯಾಗುತ್ತಾನೆ. ಪ್ರತಿಯೊಬ್ಬನೂ ಅಧ್ಯಾತ್ಮಶಾಸ್ತ್ರದ ಅಧ್ಯಯನ ಮಾಡಬೇಕು; ಆದರೆ ಆ ವಿಷಯದಲ್ಲಿ ಏನೂ ತಿಳಿಯದಿರುವುದು, ಇಂದಿನ ಶಿಕ್ಷಣಪದ್ಧತಿಯಲ್ಲಿನ ಮೂಲ ದೋಷವಾಗಿದೆ. ಅದನ್ನು ಮೊದಲು ದೂರಗೊಳಿಸಬೇಕು. ಅದಕ್ಕಾಗಿ ವ್ಯಾಪಕವಾಗಿ ಹಾಗೂ ಮೂಲದಿಂದ ಪ್ರಯತ್ನವಾಗಬೇಕು. ಧ್ರುವ ಜೈನ್ ಗಳಿಸಿದ ಯಶಸ್ಸು ಮತ್ತು ಅವನು ಅವಲಂಬಿಸಿದ ಅಧ್ಯಾತ್ಮದ ಮಾರ್ಗವನ್ನು ನೋಡುವಾಗ ಶೈಕ್ಷಣಿಕ ಸ್ತರದಲ್ಲಿ ಎಲ್ಲರಿಗೂ ಇದರ ಲಾಭವಾಗುವಂತೆ ರಾಜ್ಯಸರಕಾರ ಹಿಂದಿನ ಗುರುಕುಲಪದ್ಧತಿ ಗನುಸಾರ ಇಂದಿನ ಅಭ್ಯಾಸಕ್ರಮದಲ್ಲಿ ‘ಅಧ್ಯಾತ್ಮಶಾಸ್ತ್ರದ ವಿಷಯವನ್ನು ಸಮಾವೇಶಗೊಳಿಸಿದರೆ ಎಲ್ಲರಿಗೂ ಈ ಜ್ಞಾನದ ಲಾಭವಾಗಿ ಮನುಷ್ಯಜನ್ಮವನ್ನು ಸಾರ್ಥಕಗೊಳಿಸಬಹುದು, ಎಂಬುದು ನಿಜ !