ಮತಾಂತರದ ವಿರುದ್ಧ ಉತ್ತರಪ್ರದೇಶ ಉಚ್ಚ ನ್ಯಾಯಾಲಯದ ಕಠಿಣ ನಿಲುವು ! 

೧. ೯೦ ಮಂದಿ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸುತ್ತಿದ್ದ ಕ್ರೈಸ್ತರ ವಿರುದ್ಧ ಪೊಲೀಸರು ಅಪರಾಧವನ್ನು ದಾಖಲಿಸುವುದು

ಹಿಂದೂಗಳನ್ನು ಕ್ರೈಸ್ತರನ್ನಾಗಿ ಮತಾಂತರಿಸಿದ ಪ್ರಕರಣದಲ್ಲಿ ಉತ್ತರಪ್ರದೇಶದ ಫತ್ತೇಪುರದಲ್ಲಿ ಭಾನುಪ್ರತಾಪ ಸಿಂಹ ಮತ್ತು ಇತರ ಕೆಲವು ವ್ಯಕ್ತಿಗಳ ವಿರುದ್ಧ ಅಪರಾಧವನ್ನು ದಾಖಲಿಸಲಾಯಿತು. ಈ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯವು ಅವರ ಬಂಧನಪೂರ್ವ ಜಾಮೀನನ್ನು ನಿರಾಕರಿಸಿತು. ಆದುದರಿಂದ ಅವರಲ್ಲಿನ ಕೆಲವು ಆರೋಪಿಗಳು ಜಾಮೀನಿಗಾಗಿ ಉತ್ತರಪ್ರದೇಶದ ಉಚ್ಚ ನ್ಯಾಯಾಲಯಕ್ಕೆ ಹೋದರು. ಭಾನುಪ್ರತಾಪ ಸಿಂಹ ಮತ್ತು ಇತರ ವ್ಯಕ್ತಿಗಳ ಈ ‘ಇವ್‌ನ್ಜೆಲಿಕಲ್ ಚರ್ಚ್ ಆಫ್ ಇಂಡಿಯಾ ಹರಿಹರಗಂಜ, ಫತ್ತೇಪುರ’ದೊಂದಿಗೆ ಸಂಬಂಧವಿದ್ದು ಅವರು ೯೦ ಮಂದಿ ಹಿಂದೂಗಳಿಗೆ ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ಆಮಿಷ ತೋರಿಸಿದರು. ಆದುದರಿಂದ ಇವೆಲ್ಲ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಅನೇಕ ಕಲಂಗಳ ಅಡಿಯಲ್ಲಿ ಹಾಗೆಯೇ ‘ಉತ್ತರಪ್ರದೇಶ ಪ್ರೊಹಿಬಿಶನ್ ಆಫ್ ಅನ್‌ಲಾಫುಲ್ ಕನವರ್ಜನ್ ಆಫ್ ರಿಲಿಜನ್ ಆರ್ಡಿನನ್ಸ್ ೨೦೨೦’ರ ಕಲಮ್ ೩ ಮತ್ತು ೫ (೧) ಕ್ಕನುಸಾರ ಅಪರಾಧವನ್ನು ದಾಖಲಿಸಲಾಯಿತು. ದೂರುದಾರ ಹಿಮಾಂಶು ದೀಕ್ಷಿತ ಇವರು, ‘ಮಿಶನ್ ಹಾಸ್ಪಿಟಲ್’ನಲ್ಲಿ ಭರ್ತಿಯಾಗುವ ಅಮಾಯಕ ರೋಗಿಗಳಿಗೆ ‘ರೋಗವನ್ನು ಗುಣಪಡಿಸುವುದು, ಮಕ್ಕಳಿಗೆ ಉಚಿತ ಒಳ್ಳೆಯ ಶಾಲೆಯಲ್ಲಿ ಉತ್ತಮ ಶಿಕ್ಷಣವನ್ನು ನೀಡುವುದು, ಆರ್ಥಿಕ ಸಹಾಯ ಮಾಡುವುದು, ಹಾಗೆಯೇ ಅವರ ಕುಟುಂಬದ ಕೆಲವು ವ್ಯಕ್ತಿಗಳಿಗೆ ನೌಕರಿ ಕೊಡಿಸುವುದು’, ಈ ರೀತಿಯ ಆಮಿಷಗಳನ್ನು ತೋರಿಸಿದ್ದರು; ಆದುದರಿಂದ ಅವರು ಈ ಬಗ್ಗೆ ಪೊಲೀಸರಿಗೆ ದೂರನ್ನು ನೀಡಿದ್ದರು ಎಂದರು.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

ದೀಕ್ಷಿತ ಇವರ ಅಭಿಪ್ರಾಯಕ್ಕನುಸಾರ ‘ಇವ್‌ನ್ಜೆಲಿಕಲ್ ಚರ್ಚ್ ಆಫ್ ಇಂಡಿಯಾ’ದ ಕೆಲವು ಪಾದ್ರಿಗಳು ಒಂದು ಧಾರ್ಮಿಕ ಕಾರ್ಯಕ್ರಮಕ್ಕಾಗಿ ಒಟ್ಟು ಸೇರಿದ್ದರು. ಅದರಲ್ಲಿ ಹಿಂದೂ ರೋಗಿಗಳನ್ನು ಮತ್ತು ಅವರ ಸಂಬಂಧಿಕರನ್ನು ಮತಾಂತರಿಸುವ ಆಂತರಿಕ ಉದ್ದೇಶವಿತ್ತು. ಹಾಗಾಗಿ ದೂರಿನ ಆಧಾರದಲ್ಲಿ ಪೊಲೀಸರು ಕೆಲವು ವ್ಯಕ್ತಿಗಳ ವಿಚಾರಣೆ ಮಾಡಿದರು. ಆಗ ಪಾದ್ರಿ ವಿಜಯ ಮಸೀಹಾ, ಭಾನುಪ್ರತಾಪ ಸಿಂಹ ಮತ್ತು ಇತರ ವ್ಯಕ್ತಿಗಳ ಮತಾಂತರದ ಆಂತರಿಕ ಉದ್ದೇಶ ಅವರ ಗಮನಕ್ಕೆ ಬಂದಿತು. ಅನಂತರ ಪೊಲೀಸರು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿದರು.

೨. ಆರೋಪಿಗಳಿಗೆ ಬಂಧನಪೂರ್ವ ಜಾಮೀನು ಸಿಗಬಾರದೆಂದು ಸರಕಾರಿ ನ್ಯಾಯವಾದಿಗಳು ಮಾಡಿದ ಯುಕ್ತಿವಾದ

ಈ ಪ್ರಕರಣದಲ್ಲಿ ಆರೋಪಿಗಳ ಜಾಮೀನಿಗೆ ವಿರೋಧಿಸಿದ ಸರಕಾರಿ ಪಕ್ಷದ ವಕೀಲರು, ಕೇವಲ ಸಹಆರೋಪಿಗಳಿಗೆ ಜಾಮೀನು ಸಿಕ್ಕಿದೆ ಅಥವಾ ಅರ್ಜಿದಾರರ ವಿರುದ್ಧ ಇದಕ್ಕೂ ಮೊದಲು ಯಾವುದೇ ಅಪರಾಧಗಳಿಲ್ಲ, ಎಂಬುದು ಜಾಮೀನು ನೀಡುವ ಮಾನದಂಡವಾಗುವುದಿಲ್ಲ ಎಂದು ಹೇಳಿದರು. ಮತಾಂತರಿಸುವ ಪ್ರಕ್ರಿಯೆ ದೊಡ್ಡ ಪ್ರಮಾಣದಲ್ಲಿ ನಡೆದಿತ್ತು. ಈ ಪ್ರಕರಣದಲ್ಲಿ ಅಪರಾಧವನ್ನು ದಾಖಲಿಸಿದ ೩೫ ವ್ಯಕ್ತಿಗಳಿಗೆ ೯೦ ಜನರನ್ನು ಮತಾಂತರಿಸುವುದಿತ್ತು. ‘ಮಿಶನ್ ಹಾಸ್ಪಿಟಲ್’ದಲ್ಲಿ ಎಲ್ಲ ರೀತಿಯ ಆರ್ಥಿಕ ಮತ್ತು ವೈದ್ಯಕೀಯ ನೆರವು ನೀಡುವ ಪ್ರಲೋಭನೆಗಳನ್ನು ನೀಡಿ ವಿಜಯ ಮಸೀಹಾ ಇವನು ರೋಗಿಗಳನ್ನು ಮತಾಂತರವಾಗಲು ಪ್ರೋತ್ಸಾಹಿಸುತ್ತಿದ್ದನು.

ಪ್ರಮೋದ ಕುಮಾರ ದೀಕ್ಷಿತ ಮತ್ತು ಇತರ ವ್ಯಕ್ತಿಗಳು ನ್ಯಾಯಾಧೀಶರೆದುರು ಸಾಕ್ಷಿಯನ್ನು ನೀಡುವಾಗ, ಆರೋಪಿಗಳು ಈ ೯೦ ಜನರನ್ನು ಒಟ್ಟುಗೂಡಿಸಿ ನೌಕರಿ ನೀಡುವುದು ಮತ್ತು ವೈದ್ಯಕೀಯ ಸಹಾಯ ಮಾಡುವುದು, ಇಂತಹ ಆಮಿಷಗಳನ್ನು ನೀಡಿದ್ದರು ಎಂದು ಹೇಳಿದರು. ಆ ಸಮಯದಲ್ಲಿ ಅಲ್ಲಿ ಓರ್ವ ಮಹಿಳೆಯೂ ಇದ್ದಳು. ಅವಳು ಹಿಂದೂಗಳಿಗೆ ಅವರ ಹಿಂದಿನ ಆಧಾರಕಾರ್ಡ್ ಪಡೆದು ಅದರ ಬದಲು ‘ಮತಾಂತರವಾದ ಹೊಸ ಆಧಾರಕಾರ್ಡ್‌ಗಳನ್ನು ನೀಡಲಾಗುವುದು’, ಎಂದು ಹೇಳಿದ್ದಳು. ಪೊಲೀಸರು ಪರಿಶೀಲಿಸಿದ ಸಾಕ್ಷಿದಾರರು, ಶ್ರೀಕೃಷ್ಣ ಎಂಬ ಹೆಸರಿನ ಹಿಂದೂವಿನ ಆಧಾರ ಕಾರ್ಡ್ ತೆಗೆದುಕೊಂಡು ಅವನಿಗೆ ಅವರು ‘ಕೇಶನ್ ಜೊಸೆಫ್’ ಎಂಬ ಹೆಸರಿನ ಆಧಾರ ಕಾರ್ಡ್‌ನ್ನು ನೀಡಿದ್ದರು. ‘ಇದು ಮತಾಂತರದ ದೊಡ್ಡ ಒಳಸಂಚಾಗಿದ್ದು ಈಗಲೂ ತನಿಖೆ ನಡೆದಿದೆ. ಆದುದರಿಂದ ಆರೋಪಿಗಳಿಗೆ ಬಂಧನಪೂರ್ವ ಜಾಮೀನು ನೀಡಬಾರದು. ಇದು ಕೇವಲ ಒಬ್ಬಿಬ್ಬರದ್ದಲ್ಲ, ದೊಡ್ಡ ಸಂಖ್ಯೆಯಲ್ಲಿ ಜನರನ್ನು ಮತಾಂತರಿಸುವ ಷಡ್ಯಂತ್ರವಾಗಿದೆ. ಆದುದರಿಂದ ಅವರಿಗೆ ಜಾಮೀನು ನೀಡುವುದೆಂದರೆ ಪೊಲೀಸರ ಮುಂದೆ ಸಮಸ್ಯೆಯನ್ನು ನಿರ್ಮಿಸುವುದಾಗಿದೆ. ಒಂದು ರೂಢಿ ಅಥವಾ ಒಂದು ಪದ್ಧತಿ ಎಂದು ತಿಳಿದು ಜಾಮೀನು ನೀಡಬಾರದು’, ಎಂಬ ಯುಕ್ತಿವಾದವನ್ನು ಈ ಸಮಯದಲ್ಲಿ ಮಾಡಲಾಯಿತು. ಅನಂತರ ನ್ಯಾಯಾಲಯವು ಆರೋಪಿ ಭಾನುಪ್ರತಾಪ ಸಿಂಹ ಇವರಿಗೆ ಜಾಮೀನನ್ನು ನಿರಾಕರಿಸಿತು.

೩. ಕ್ರೈಸ್ತರು ಪೊಲೀಸರ ವಿರುದ್ಧ ಘೋಷಣೆ ಕೂಗುವುದು !

ಕೆಲವು ಹಿಂದೂಗಳು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ಹೋದಾಗ ಅಲ್ಲಿ ಕ್ರೈಸ್ತರು ದೊಡ್ಡ ಪ್ರಮಾಣದಲ್ಲಿ ಒಟ್ಟಾದರು ಮತ್ತು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು. ಅಲ್ಲಿ ಅವರು ಕಾನೂನು-ಸುವ್ಯವಸ್ಥೆಯ ಉದ್ವಿಗ್ನ ಸ್ಥಿತಿಯನ್ನು ನಿರ್ಮಿಸಿದರು.

ಇಷ್ಟು ದೊಡ್ಡ ಪ್ರಮಾಣದಲ್ಲಿ ಬಲವಂತವಾಗಿ ಮತಾಂತರ ಮಾಡುವುದು ಯೋಗ್ಯವೇ ? ಎಂಬುದರ ಉತ್ತರ ಜಾತ್ಯತೀತವಾದಿಗಳಿಂದ ದೊರಕುವುದು ಅಪೇಕ್ಷಿತವಿದೆ. ಹಾಗೆಯೇ ಹಿಂದೂಗಳಿಗೆ ಅಸಹಿಷ್ಣುವೆಂದು ನಿರ್ಧರಿಸುವ ಮಾಧ್ಯಮಗಳಿಗೆ ಇಂತಹ ಮತಾಂತರಗಳು ಕಾಣಿಸುವುದಿಲ್ಲವೇ ? ಅಥವಾ ಅವರು ಎಂದಿನಂತೆ ಇದರತ್ತ  ದುರ್ಲಕ್ಷಿಸುತ್ತಾರಾ ?

ಶ್ರೀಕೃಷ್ಣಾರ್ಪಣಮಸ್ತು |

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ. (೨೧.೧.೨೦೨೩)