‘ಜೆ.ಎನ್.ಯು.ನಲ್ಲಿನ ಬ್ರಾಹ್ಮಣವಿರೋಧಿ ಘೋಷಣೆಗಳ ಅರ್ಥ !

ಶ್ರೀ. ಚೇತನ ರಾಜಹಂಸ

ಕಳೆದ ತಿಂಗಳು ನವ ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದ (‘ಜೆ.ಎನ್.ಯು.ನ) ಪರಿಸರದಲ್ಲಿನ ಅನೇಕ ಗೋಡೆಗಳ ಮೇಲೆ ಬ್ರಾಹ್ಮಣ ಮತ್ತು ವ್ಯಾಪಾರಿಗಳ ವಿರುದ್ಧ ಘೋಷಣೆಗಳನ್ನು ಬರೆಯಲಾಗಿತ್ತು. ಈ ಕೃತಿಯನ್ನು ಸಾಮ್ಯವಾದಿ (ಕಮ್ಯುನಿಸ್ಟ್) ವಿಚಾರಸರಣಿಗೆ ಸಂಬಂಧಿಸಿದ ವಿದ್ಯಾರ್ಥಿಗಳು ಮಾಡಿರುವುದಾಗಿ ಹೇಳಲಾಗಿದೆ. ಈ ಸಂದರ್ಭದಲ್ಲಿ ‘ಜಂಬು ದ್ವೀಪ ಎಂಬ ಯು ಟ್ಯೂಬ್ ವಾಹಿನಿಯಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಮತ್ತು ಹಿರಿಯ ಪತ್ರಕರ್ತ ಮತ್ತು ‘ಎಚ್.ವಿ. ಟಿವಿ ಯ ಸಂಪಾದಕರಾದ ಹರ್ಷವರ್ಧನ ತ್ರಿಪಾಠಿ ಇವರ ಚರ್ಚೆಯನ್ನು ಆಯೋಜಿಸಲಾಗಿತ್ತು. ಅದರಲ್ಲಿನ ಶ್ರೀ. ಚೇತನ ರಾಜಹಂಸ ಇವರು ಮಾಡಿದ ಬೋಧಪ್ರದ ಅಂಶಗಳನ್ನು ಇಲ್ಲಿ ನೀಡುತ್ತಿದ್ದೇವೆ.

೧. ಭಾರತ ವಿರೋಧಿ ಶಕ್ತಿಗಳು ‘ಜೆ.ಎನ್.ಯು.’ವನ್ನು ಸಂದೇಶವಾಹಕವೆಂದು ಬಳಸುವುದು !

ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ (‘ಜೆ.ಎನ್.ಯು.’ನಲ್ಲಿ) ಒಂದು ‘ಅಜೆಂಡಾ’ದ (ವಿಶಿಷ್ಟ ಉದ್ದೇಶದ) ಅಂತರ್ಗತ ‘ಬ್ರಾಹ್ಮಣವಿರೋಧ’ವನ್ನು ಮಾಡಲಾಗುತ್ತಿದೆ. ಈ ದೇಶದಲ್ಲಿ ಶೈಕ್ಷಣಿಕ ಸಂಸ್ಥೆಗಳು (ಅಕಾಡೆಮಿ) ಮತ್ತು ಮಾಧ್ಯಮಗಳು (ಮಿಡಿಯಾ) ಅನೇಕ ವರ್ಷಗಳಿಂದ ಸಾಮ್ಯವಾದಿಗಳ (ಕಮ್ಯುನಿಸ್ಟರ) ಕೈಯಲ್ಲಿ ಉಳಿದಿವೆ. ಇವುಗಳಲ್ಲಿ ‘ಜೆ.ಎನ್.ಯು.’ಈಗ ಸಾಮ್ಯವಾದಿ ವಿಚಾರಗಳ ಪ್ರಚಾರದ ಕೋಟೆ ಆಗಿದೆ.

‘ಜೆ.ಎನ್.ಯು.’ವು ಈಗ ಸಾಮ್ಯವಾದಿಗಳ, ಜಾತ್ಯತೀತವಾದಿಗಳ, ಜಿಹಾದಿಗಳ ಮತ್ತು ಮಿಶನರಿ ಸಂಘಟನೆಗಳ ದೇಶದಾದ್ಯಂತ ಸಂದೇಶವನ್ನು ತಲುಪಿಸುವ ಒಂದು ಮಾಧ್ಯಮವಾಗಿದೆ ಅಥವಾ ಈ ಎಲ್ಲ ಭಾರತವಿರೋಧಿ ಶಕ್ತಿಗಳಿಂದ ‘ಜೆ.ಎನ್.ಯು.’ವನ್ನು ಸಂದೇಶವಾಹಕವೆಂದು ಉಪಯೋಗಿಸಲಾಗುತ್ತಿದೆ. ಮೂಲದಲ್ಲಿ ಅವರ ‘ಅಜೆಂಡಾ ಬೇಸ್ಡ ಪ್ರಪಗೊಂಡ’ (ಉದ್ದೇಶಾಧಾರಿತ ಪ್ರಚಾರ) ರಾಜಕೀಯವಾಗಿದೆ.

೨. ಸ್ವಾತಂತ್ರ್ಯದ ನಂತರ ಕಂಡುಬಂದ ಭಾರತವಿರೋಧಿ ಶಕ್ತಿಗಳ ಬ್ರಾಹ್ಮಣವಿರೋಧಿ ‘ಅಜೆಂಡಾ’!

‘ಜೆ.ಎನ್.ಯು’ದಲ್ಲಿ ಘೋಷಣೆ ಕೂಗಿದ ಘಟನೆಗಳು ಇದೇ ಮೊದಲ ಬಾರಿಯಲ್ಲ, ಇದಕ್ಕೂ ಮೊದಲೂ ಮಿಶನರಿಗಳು, ಜಿಹಾದಿಗಳು, ಜಾತ್ಯತೀತವಾದಿಗಳು ಮತ್ತು ಸಾಮ್ಯವಾದಿಗಳ ಭಾರತವಿರೋಧಿ ಶಕ್ತಿಗಳು ಬ್ರಾಹ್ಮಣವಿರೋಧಿ ‘ಅಜೆಂಡಾ’ ವನ್ನು ನಡೆಸಿದ್ದವು. ಈ ಭಾರತವಿರೋಧಿ ಶಕ್ತಿಗಳಿಗೆ ಬ್ರಾಹ್ಮಣ ಸಮಾಜವನ್ನು, ಅಂದರೆ ಬುದ್ಧಿವಾದಿ ಸಮಾಜವನ್ನು ಕಳಂಕಿತಗೊಳಿಸಿ ಭಾರತದಲ್ಲಿ ನಡೆಯುತ್ತಿರುವ ಪುನರುತ್ಥಾನವನ್ನು ತಡೆಯುವುದಿದೆ.

೨ ಅ. ಗಾಂಧಿ ಹತ್ಯೆಯ ನಂತರದ ಬ್ರಾಹ್ಮಣವಿರೋಧಿ ಗಲಭೆಗಳು : ೧೯೪೮ ರಲ್ಲಿ ಗಾಂಧಿ ಹತ್ಯೆಯಾಯಿತು. ಆಗ ನಥುರಾಮ ಗೋಡಸೆ ಬ್ರಾಹ್ಮಣರಾಗಿದ್ದರಿಂದ ಅವರ ವಿರುದ್ಧ ದೇಶದಾದ್ಯಂತ ಮತ್ತು ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಪುಣೆ, ಠಾಣೆ, ಮುಂಬಯಿ, ನಾಶಿಕ ಮುಂತಾದ ಸ್ಥಳಗಳಲ್ಲಿ ಬ್ರಾಹ್ಮಣವಿರೋಧಿ ಗಲಭೆಗಳಾದವು. ಅದರಲ್ಲಿ ರಾ.ಸ್ವ. ಸಂಘದ ಅನೇಕ ಸ್ವಯಂಸೇವಕರ ಮನೆಗಳನ್ನು ಧ್ವಂಸ ಮಾಡಲಾಯಿತು. ಇದಕ್ಕೆ ಗೊಡಸೆಯವರು ಸಂಘದ ಕಾರ್ಯಕರ್ತ ಹಾಗೂ ಬ್ರಾಹ್ಮಣರಾಗಿದ್ದುದೇ ಕಾರಣವಾಗಿತ್ತು.

ಸ್ವಾತಂತ್ರ್ಯದ ನಂತರ ೧೯೪೮ ರಲ್ಲಿ ಕೂಡಲೇ ರಾ.ಸ್ವ. ಸಂಘದ ಮೇಲೆ ‘ಬ್ರಾಹ್ಮಣರ ಸಂಘಟನೆ’ ಎಂದು ಹೆಸರಿಡಲಾಯಿತು. ಆ ಕಾಲದಲ್ಲಿ ಸಂಘವು ದೊಡ್ಡದು ಮತ್ತು ಜನಪ್ರಿಯ ಸಂಘಟನೆಯಾಗಿತ್ತು. ಅದು ಎಂತಹ ಕಾಲವಾಗಿತ್ತೆಂದರೆ, ‘ಬಿಬಿಸಿ’ ರೆಡಿಯೋದಲ್ಲಿ ಕೇವಲ ಪ.ಪೂ. ಗೋಳವಲಕರ ಗುರುಜಿ ಮತ್ತು ಜವಾಹರಲಾಲ ನೆಹರುರವರ ಭಾಷಣಗಳೇ ಪ್ರಸಾರವಾಗುತ್ತಿದ್ದವು. ಆ ಸಮಯದಲ್ಲಿ ‘ಸಂಘದ ಹೆಸರು ಕೆಡಬೇಕು’, ಎಂದು ನೆಹರೂರವರಿಗೆ ಅನಿಸುತ್ತಿತ್ತು. ಅದಕ್ಕಾಗಿ ‘ರಾ.ಸ್ವ. ಸಂಘವೆಂದರೆ ಬ್ರಾಹ್ಮಣರ ಸಂಘ’, ಈ ರೀತಿಯ ಅಪಪ್ರಚಾರವನ್ನು ಮಾಡಲಾಯಿತು ಮತ್ತು ಗಾಂಧಿ ಹತ್ಯೆಯ ನಂತರ ಮಹಾರಾಷ್ಟ್ರದಲ್ಲಿ ಬ್ರಾಹ್ಮಣವಿರೋಧಿ ಗಲಭೆಗಳನ್ನು ಮಾಡಲಾಯಿತು ಅರ್ಥಾತ ಇದು ರಾ.ಸ್ವ. ಸಂಘವನ್ನು ಹತ್ತಿಕ್ಕಲು ಮಾಡಲಾಗಿತ್ತು.

೨ ಆ. ತಮಿಳುನಾಡಿನಲ್ಲಿ ನಡೆದ ಬ್ರಾಹ್ಮಣವಿರೋಧ : ಮುಂದೆ ಇದೇ ಯುಕ್ತಿಯನ್ನು ಕ್ರಿಸ್ತಿ-ದ್ರವಿಡಿ ಸಂಘಟನೆಗಳು ತಮಿಳುನಾಡಿನಲ್ಲಿ ಉಪಯೋಗಿಸಿದವು ಮತ್ತು ಅಲ್ಲಿ ಬ್ರಾಹ್ಮಣವಿರೋಧಿ ಚಳುವಳಿಯನ್ನು ನಡೆಸಿದವು, ಆ ಚಳುವಳಿಗಳು ೧೯೭೦ ರ ವರೆಗೆ ನಡೆದವು. ಆ ಚಳುವಳಿಯು ಬ್ರಾಹ್ಮಣವಿರೋಧಿ ಪೆರಿಯಾರ್ ರನ್ನು ಗುರು ಎಂದು ಒಪ್ಪಿಕೊಂಡಿತು. ಈ ಚಳುವಳಿಯಿಂದಾಗಿ ಮೂಲ ಬ್ರಾಹ್ಮಣರು ತಮಿಳುನಾಡಿನಿಂದ ಪಲಾಯನ ಮಾಡಿದರು. ಅದರ ಪರಿಣಾಮದಿಂದ ಇಂದು ಅಲ್ಲಿನ ದೇವಸ್ಥಾನಗಳಿಗೆ ಅಥವಾ ತೀರ್ಥಕ್ಷೇತ್ರಗಳಿಗೆ ಪೂಜೆ-ಪುನಸ್ಕಾರಗಳಿಗಾಗಿ ಬ್ರಾಹ್ಮಣರು ಸಿಗದಂತಾಗಿದೆ. ಅಲ್ಲಿ ಮದುವೆಯನ್ನು ಮಾಡಿಸಲೂ ಬ್ರಾಹ್ಮಣರು ಸಿಗದಂತಹ ಭೀಕರ ಪರಿಸ್ಥಿತಿ ಉದ್ಭವಿಸಿದೆ.

೨ ಇ. ಕಾಶ್ಮೀರದಲ್ಲಿನ ಪಂಡಿತರ ಪಲಾಯನದ ಕಡೆಗೆ ದುರ್ಲಕ್ಷ ! : ಕಾಶ್ಮೀರ ಕಣಿವೆಯಿಂದ ಜಿಹಾದಿ ಭಯೋತ್ಪಾದಕ ಶಕ್ತಿಗಳು ಕಾಶ್ಮೀರಿ ಹಿಂದೂಗಳನ್ನು ಪಲಾಯನ ಮಾಡುವಂತೆ ಮಾಡಿದವು. ಆಗ ಧರ್ಮನಿರಪೇಕ್ಷತಾವಾದಿಗಳು ಮತ್ತು ಸಾಮ್ಯವಾದಿಗಳು ಕಾಶ್ಮೀರಿ ಪಂಡಿತರೆಂದರೆ ಬ್ರಾಹ್ಮಣ ಸಮುದಾಯವೆಂದು ವಿಚಾರ ಮಾಡಿದರು ಮತ್ತು ಅವರ ಪಲಾಯನದ ಕಡೆಗೆ ಅಕ್ಷಮ್ಯ ದುರ್ಲಕ್ಷ ಮಾಡಿದರು.

೩. ಭಾರತವಿರೋಧಿ ಶಕ್ತಿಗಳು ‘ಜೆ.ಎನ್.ಯು.’ವನ್ನು ರಾಜಕೀಯ ಉದ್ದೇಶದಿಂದ ‘ಟೂಲ್‌ಕಿಟ್’ ಎಂದು ಬಳಸುವುದು !

‘ಜೆ.ಎನ್.ಯು.’ವನ್ನು ‘ಟೂಲ್‌ಕಿಟ್’ (ವಿಶಿಷ್ಟ ಉದ್ದೇಶ ದಿಂದ ಅಪಪ್ರಚಾರ ಮಾಡುವ ಷಡ್ಯಂತ್ರ) ಎಂದು ಉಪಯೋಗಿಸಲಾಗಿದೆ. ಅಲ್ಲಿ ಕೇವಲ ‘ಬ್ರಾಹ್ಮಣ ಛೊಡೊ’ ಇದೊಂದೇ ಘೋಷಣೆಯನ್ನು ಮಾಡಲಾಗಿಲ್ಲ, ಅಲ್ಲಿ ‘ಬನಿಯಾ ಛೋಡೊ’ (ವ್ಯಾಪಾರಿಗಳೇ ದೇಶವನ್ನು ಬಿಟ್ಟು ಹೋಗಿರಿ) ಎಂಬ ಘೋಷಣೆಯನ್ನೂ ಮಾಡಲಾಗಿದೆ. ಅನಂತರ ‘ಖೂನ್ ಬಹೆಗಾ, ಖೂನ್ ಬಹೆಗಾ’ (ರಕ್ತ ಹರಿಯುವುದು, ರಕ್ತ ಹರಿಯುವುದು) ಎಂಬ ಘೋಷಣೆಯನ್ನೂ ಮಾಡಲಾಯಿತು. ಇದರಲ್ಲಿ ಬ್ರಾಹ್ಮಣ ಮತ್ತು ಬನಿಯಾ (ವ್ಯಾಪಾರಿಗಳು) ಇವರಿಬ್ಬರನ್ನೂ ಗುರಿ ಮಾಡಲಾಗಿದೆ. ಇಲ್ಲಿ ಗಮನದಲ್ಲಿಡುವ ಅಂಶವೆಂದರೆ ಸದ್ಯ ಅಂಬಾನಿ ಮತ್ತು ಅದಾನಿ ಈ ಇಬ್ಬರು ಉದ್ಯಮಿಗಳು ಯಾವ ವೇಗದಿಂದ ತಮ್ಮ ಆರ್ಥಿಕ ವ್ಯಾಪಾರದಲ್ಲಿ ಮುನ್ನಡೆದಿದ್ದಾರೋ, ಆ ಮುನ್ನಡೆಯ ಕಡೆಗೆ ಸರಕಾರ ಮತ್ತು ಉದ್ಯಮಿಗಳ ನಡುವೆ ಏನಾದರೂ ಕೊಡುಕೊಳ್ಳುವಿಕೆ ನಡೆದಿದೆ ಎಂಬ ದೃಷ್ಟಿಕೋನದಿಂದ ಭಾರತವಿರೋಧಿ ಶಕ್ತಿಗಳು ನೋಡುತ್ತಿವೆ.

ಭಾರತದ ಮುಖ್ಯ ಉದ್ಯಮಿಗಳನ್ನು ಗುರಿಪಡಿಸಲೆಂದೇ ವೈಶ್ಯ ಸಮಾಜವನ್ನು ಗುರಿ ಮಾಡಲಾಗುತ್ತಿದೆ. ಇದು ಬಹಳ ಗಂಭೀರ ವಿಷಯವಾಗಿದೆ. ಅದರಲ್ಲಿಯೂ ಈ ‘ಬನಿಯಾ ಛೋಡೊ’ ಘೋಷಣೆಯು ಇತ್ತೀಚೆಗಷ್ಟೇ ನಡೆದ ಗುಜರಾತ್‌ನ ಚುನಾವಣೆಯ ಮೊದಲು ಮಾಡಲಾಗಿತ್ತು. ಗುಜರಾತಿ ವ್ಯಾಪಾರಿ ಸಮಾಜವನ್ನು ಶ್ರೀಮಂತ ಸಮಾಜವೆಂದು ಪರಿಗಣಿಸ ಲಾಗುತ್ತದೆ. ಅಂದರೆ ಇದು ಒಂದು ರೀತಿಯಲ್ಲಿ ರಾಜಕೀಯ ಘೋಷಣೆಯಾಗಿತ್ತು, ಇದನ್ನು ನಾವು ಗಮನದಲ್ಲಿಡಬೇಕು.

೪. ಇದು ‘ಜೆ.ಎನ್.ಯು.’ನಲ್ಲಿನ ದೇಶವಿರೋಧಿ ವಿದ್ಯಾರ್ಥಿ ಸಂಘಟನೆಗಳ ಹೇಳಿಕೆ ಆಗಿಲ್ಲ, ಇದು ಭಾರತವಿರೋಧಿ ಶಕ್ತಿಗಳ ‘ಅಜೆಂಡಾ ಬೇಸ್ಡ್ ಪ್ರಪೊಗೊಂಡ’ (ವಿಶಿಷ್ಟ ಧೋರಣೆಯನ್ನು ಆಧರಿಸಿದ ಪ್ರಚಾರ) ಚಳುವಳಿ ಆಗಿದೆ !

ಭಾರತದಲ್ಲಿನ ಯಾವುದಾದರೊಂದು ವರ್ಗಕ್ಕಾಗುವ ವಿರೋಧ ಪ್ರಜಾಪ್ರಭುತ್ವದ ದೃಷ್ಟಿಕೋನದಿಂದಲೂ ತಪ್ಪಾಗಿದೆ; ಏಕೆಂದರೆ ಭಾರತೀಯ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಮಾಜಿಕ ಸ್ವಾಸ್ಥ್ಯ, ಜನವ್ಯವಸ್ಥೆ, ಸದಾಚಾರ ಅಥವಾ ನೈತಿಕತೆಯ ಮಿತಿಯನ್ನು ಹಾಕಲಾಗಿದೆ. ಯಾವುದಾರೊಂದು ವಿಶಿಷ್ಟ ವರ್ಗಕ್ಕೆ ಅಂದರೆ ಬ್ರಾಹ್ಮಣ ಮತ್ತು ವ್ಯಾಪಾರಿ ಸಮುದಾಯಕ್ಕೆ ಭಾರತದಿಂದ ತೊಲಗಿರಿ, ಎಂಬಂತಹ ದ್ವೇಷ ಪೂರ್ಣ ಕರೆ ನೀಡುವುದು, ಇದು ಸಾಮಾಜಿಕ ಆರೋಗ್ಯವನ್ನು ಹಾಳು ಮಾಡುವಂತಹದ್ದಾಗಿದೆ. ಇದು ಜಾತಿದ್ವೇಷವಾಗಿದ್ದು ಒಂದು ರೀತಿಯಲ್ಲಿ ಜನವ್ಯವಸ್ಥೆಯ ವಿರುದ್ಧ ಯುದ್ಧವಾಗಿದೆ.

‘ರಕ್ತ ಹರಿಯುವುದು’ ಈ ಘೋಷಣೆಯು ಕಾನೂನಿನ ವಿರುದ್ಧವಾಗಿದೆ. ಇದು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇಷ್ಟವಾಗಿರುವ ಯಾವುದೇ ಸದಾಚಾರಿ ಅಥವಾ ನೈತಿಕ ಕಾರ್ಯವಾಗಿಲ್ಲ. ಭಾರತ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿಯಲ್ಲ, ಇದನ್ನು ‘ಅಜೆಂಡಾ ಬೇಸ್ಡ ಪ್ರಪಗೊಂಡ’ ಚಳುವಳಿ ನಡೆಸುವವರನ್ನು ಸೆರೆಮೆನೆಗೆ ಅಟ್ಟಬೇಕು.

೫. ಸರ್ವೋಚ್ಚ ನ್ಯಾಯಾಲಯಕ್ಕೆ ಕರ್ತವ್ಯದ ವಿಸ್ಮರಣೆಯೋ ಅಥವಾ ಉದ್ದೇಶಪೂರ್ವಕ ದುರ್ಲಕ್ಷವೋ !

‘ಜೆ.ಎನ್.ಯು.’ವು ಒಂದು ವಿಶ್ವವಿದ್ಯಾಲಯವಾಗಿದೆ. ಅಲ್ಲಿ ಕಾರ್ಯಾಚರಣೆಯನ್ನು ಮಾಡಲು ಸರಕಾರಿ ತನಿಖಾ ದಳಗಳಿಗೆ ಒಂದು ಮಿತಿ ಇದೆ; ಏಕೆಂದರೆ ವಿಶ್ವವಿದ್ಯಾಲಯವು ಕುಲಪತಿ, ರಾಜ್ಯಪಾಲ ಅಥವಾ ರಾಷ್ಟ್ರಪತಿ ಇವರಿಗೆ ಸಂಬಂಧಿಸಿದೆ. ಅಲ್ಲಿನ ವ್ಯವಸ್ಥೆ ಅವರ ಕೈಯಲ್ಲಿದ್ದು ಅವರು ಸ್ವತಂತ್ರ ರೀತಿಯಲ್ಲಿ ಕಾರ್ಯವನ್ನು ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ‘ಸುಮೊಟೊ’ದ (ಯಾವುದಾದರೊಂದು ಪ್ರಕರಣದಲ್ಲಿ ನ್ಯಾಯಾಲಯವು ತಾನಾಗಿಯೇ ಗಮನ ಹರಿಸಿ ಅರ್ಜಿಯನ್ನು ಮಾಡಿಕೊಳ್ಳುವುದು) ಆಧಾರದಲ್ಲಿ ಕಾರ್ಯಾಚರಣೆ ಮಾಡುವುದು ನ್ಯಾಯಾಲಯಗಳ ಕೈಯಲ್ಲಿರುತ್ತದೆ. ಇಲ್ಲಿ ಸರಕಾರ ಅಥವಾ ಸರಕಾರಿ ವ್ಯವಸ್ಥೆಯ ಮಿತಿಯನ್ನು ಗಮನಿಸಿ ಸರ್ವೋಚ್ಚ ನ್ಯಾಯಾಲಯವು ‘ಸುಮೊಟೊ’ ಕಾರ್ಯಾಚರಣೆಯನ್ನು ಮಾಡುವುದು ಆವಶ್ಯಕವಾಗಿತ್ತು. ಇಂತಹ ಘೋಷಣೆಗಳನ್ನು ನೀಡಿದ ವಿದ್ಯಾರ್ಥಿಗಳು ಮುಂದೆ ಭಾರತದ ಪ್ರಜೆಗಳಾಗುವವರಿದ್ದಾರೆ. ಇವರು ಇಷ್ಟೊಂದು ದೊಡ್ಡ ಸರಕಾರಿ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾರೆ. ಸರಕಾರವು ಪ್ರತಿಯೊಬ್ಬರಿಗೆ ತಲಾ ೩ ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತದೆ, ಇಂತಹವರು ಈ ರೀತಿಯ ಘೋಷಣೆಗಳನ್ನು ನೀಡುವುದು ಅತ್ಯಂತ ಗಂಭೀರ ವಿಷಯವಾಗಿದೆ. ಆದುದರಿಂದ ಸರ್ವೋಚ್ಚ ನ್ಯಾಯಾಲಯದವರೆಗೆ ಈ ಘೋಷಣೆಗಳು ತಲುಪಿ ಅವರಿಂದ ಇದರ ಮೇಲೆ ‘ಸುಮೊಟೊ’ದಂತಹ ಕಾರ್ಯಾಚರಣೆಯಾಗುವುದು ಅಪೇಕ್ಷಿತವಿತ್ತು. ತನಿಖಾ ದಳ ಪುರಾವೆಗಳನ್ನು ನೀಡುವುದು ಮತ್ತು ನ್ಯಾಯಾಲಯ ನ್ಯಾಯ ನೀಡುವುದು, ಇದು ನಿತ್ಯದ ಕೆಲಸವಾಗಿದೆ; ಆದರೆ ನ್ಯಾಯಾಧೀಶರೂ ಪ್ರತಿದಿನ ದಿನಪತ್ರಿಕೆಗಳನ್ನು ಓದುತ್ತಿರುತ್ತಾರೆ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುತ್ತಾರೆ. ಆದುದರಿಂದ ಅವರು ಇಂತಹ ಘಟನೆಗಳನ್ನು ಹೇಗೆ ದುರ್ಲಕ್ಷಿಸಬಹುದು ?

– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ (೨೧.೧೨.೨೦೨೨)