ಬಾಳೆಹಣ್ಣನ್ನು ಯಾರು ತಿನ್ನಬಾರದು ?

ಸಂದೇಹ ನಿವಾರಣೆ

ವೈದ್ಯ ಮೇಘರಾಜ ಪರಾಡಕರ್

ಶ್ರೀ. ದಿವಾಕರ ಆಗಾವಣೆ : ಚಳಿಗಾಲದಲ್ಲಿ ಬಾಳೆಹಣ್ಣನ್ನುಗಳನ್ನು ತಿನ್ನಬಹುದೇ ? ಶೀತವಾಗಿದ್ದರೆ ಬಾಳೆಹಣ್ಣು ತಿನ್ನಬಹುದೇ ?

ಉತ್ತರ

೧. ಚಳಿಗಾಲವುದಲ್ಲಿ ಬಾಳೆಹಣ್ಣನ್ನು ತಿನ್ನಲು ಉತ್ತಮ ಕಾಲ

‘ಆಹಾರವು ಸರಿಯಾಗಿ ಜೀರ್ಣವಾಗಿ ಅದು ಶರೀರದಲ್ಲಿ ಹೀರಿಕೊಳ್ಳಲು ಶರೀರದಲ್ಲಿನ ಅಗ್ನಿ (ಪಚನಶಕ್ತಿ) ಚೆನ್ನಾಗಿರುವುದು ಆವಶ್ಯಕವಾಗಿರುತ್ತದೆ. ಬಾಳೆಹಣ್ಣಿನ ಗಿಡಕ್ಕೆ ಬಹಳಷ್ಟು ನೀರು ಬೇಕಾಗುತ್ತದೆ. ಈ ಗಿಡದಲ್ಲಿ ಬಹಳಷ್ಟು ನೀರು ಇರುತ್ತದೆ. ಅಗ್ನಿಯ ಗುಣಧರ್ಮವು ನೀರಿನ ವಿರುದ್ಧವಾಗಿದೆ. ಆದ್ದರಿಂದ ಬಾಳೆಹಣ್ಣು ಜೀರ್ಣವಾಗಲು ಜಡವಾಗಿರುತ್ತದೆ. ‘ಚಳಿಗಾಲದಲ್ಲಿನ ಚಳಿಯಿಂದ ಚರ್ಮದ ಮೇಲಿನ ತೂತುಗಳು ಮುಚ್ಚಿರುತ್ತವೆ. ಆದ್ದರಿಂದ ಶರೀರದಲ್ಲಿನ ಅಗ್ನಿ ಹಿಡಿದಿಟ್ಟಿರುವುದರಿಂದ ಬಹಳಷ್ಟು ಹಸಿವಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಅತೀ ಹಸಿವಾಗುವಾಗ ಜೀರ್ಣವಾಗಲು ಜಡ ಪದಾರ್ಥಗಳನ್ನು ಸೇವಿಸಬೇಕು’, ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಆದ್ದರಿಂದ ಚಳಿಗಾಲದಲ್ಲಿ ಬಾಳೆಹಣ್ಣುಗಳನ್ನು ತಿನ್ನಬಹುದು.

೨. ಬಾಳೆಹಣ್ಣುನ್ನು ಯಾರು ತಿನ್ನಬಾರದು ?

ಯಾರಿಗೆ ಮೇಲಿಂದ ಮೇಲೆ ಶೀತವಾಗುತ್ತದೆ ಅಥವಾ ಯಾರಿಗೆ ದಮ್ಮು, ಶರೀರದಲ್ಲಿ ಬಾವು ಬರುವುದು, ಹಸಿವಾಗದಿರುವುದು ಈ ತೊಂದರೆಗಳಾಗುತ್ತವೆಯೋ, ಅವರ ಶರೀರದಲ್ಲಿ ಅಗ್ನಿ ಮಂದವಾಗಿರುತ್ತದೆ. ಇಂತಹ ಸಮಯದಲ್ಲಿ ಬಾಳೆಹಣ್ಣನ್ನು ತಿನ್ನಬಾರದು.

೩. ಬಾಳೆಹಣ್ಣಿನ ದುಷ್ಪರಿಣಾಮವಾಗಬಾರದೆಂದು ಮಾಡುವ ಉಪಾಯಯೋಜನೆ

ಅ. ಶರೀರ ಗಟ್ಟಿಮುಟ್ಟಾಗಿದ್ದು ಹಸಿವು ಸಹ ಚೆನ್ನಾಗಿ ಆಗುತ್ತದೆ; ಆದರೆ ಬಾಳೆಹಣ್ಣನ್ನು ತಿಂದನಂತರ ಗಂಟಲಿನಲ್ಲಿ ಕಫ ಬರುತ್ತದೆ, ಇಂತಹ ವ್ಯಕ್ತಿಗಳು ಬಾಳೆಹಣ್ಣಿನೊಂದಿಗೆ ೧-೨ ಮೆಣಸಿನಕಾಳುಸು ಅಥವಾ ಲವಂಗವನ್ನು ಕಚ್ಚಿ ತಿನ್ನಬೇಕು. ಹೀಗೆ ಮಾಡಿದರೆ ಬಾಳೆಹಣ್ಣನ್ನು ತಿಂದನಂತರ ಕಫದ ತೊಂದರೆ ಆಗುವುದಿಲ್ಲ.

ಆ. ಚೆಚನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಸುಲಿದು ಉದ್ದ ಹೆಚ್ಚಿ ಚಾಕಲೆಟ್ ಬಣ್ಣ ಆಗುವವರೆಗೂ ಬಿಸಿಲಿನಲ್ಲಿ ಒಣಗಿಸಬೇಕು. ಈ ಒಣಗಿದ ಬಾಳೆಹಣ್ಣುಗಳಿಗೆ ಒಳಗಿದ ಬಾಳೆಹಣ್ಣು ಎನ್ನುತ್ತಾರೆ. ಇವುಗಳನ್ನು ಗಾಳಿ ಹೋಗದಿರುವ ಡಬ್ಬಿಯಲ್ಲಿ ವರ್ಷವಿಡಿ ಇಡಬಹುದು. ತಾಜಾ ಬಾಳೆಹಣ್ಣಿಗಿಂತ ಇವುಗಳಲ್ಲಿ ನೀರು ಕಡಿಮೆ ಇರುತ್ತದೆ. ಹಾಗೆಯೇ ಇವುಗಳ ಮೇಲೆ ಸೂರ್ಯನ ಉಷ್ಣತೆಯ ಸಂಸ್ಕಾರವಾಗಿರುತ್ತದೆ. ಆದ್ದರಿಂದ ಬಾಳೆಹಣ್ಣುಗಳನ್ನು ತಿನ್ನುವುದರಿಂದ ಆಗುವ ದುಷ್ಪರಿಣಾಮವು ಒಣಗಿದ ಹಣ್ಣನ್ನು ತಿಂದನಂತರ ಕಾಣಿಸುವುದಿಲ್ಲ.

ಇ. ಎಷ್ಟೇ ಇಷ್ಟವಾಗುತ್ತಿದ್ದರೂ ಬಾಳೆಹಣ್ಣು ಒಂದು ಸಮಯಕ್ಕೆ ಒಂದು ಅಥವಾ ಎರಡು ತಿನ್ನಬೇಕು. ಹೆಚ್ಚು ಬಾಳೆಹಣ್ಣುಗಳನ್ನು ತಿಂದು ಜೀರ್ಣವಾಗದಿದ್ದರೆ ಹೊಟ್ಟೆ ಕೆಡುತ್ತದೆ.

ಈ. ಮಧ್ಯಾಹ್ನ ಊಟದ ನಂತರ ಅಥವಾ ಸಾಯಂಕಾಲ ಹಸಿವಾದಾಗ ಬಾಳೆಹಣ್ಣನ್ನು ತಿನ್ನಬೇಕು. ರಾತ್ರಿ ಬಾಳೆಹಣ್ಣನ್ನು ತಿನ್ನುವುದು ತಡೆಗಟ್ಟಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೧.೨೦೨೩)