ಹಾಸ್ಯ ಕಲಾವಿದ ತನ್ಮಯ ಭಟ ನಟಿಸಿದ ಜಾಹಿರಾತನ್ನು ಹಿಂಪಡೆದ ‘ಕೋಟಕ್ ಮಹೀಂದ್ರಾ ಬ್ಯಾಂಕ್’ !

ತನ್ಮಯ ಭಟ ಇವರಿಂದ ಭಗವಾನ ಶ್ರೀ ಗಣೇಶನ ಬಗ್ಗೆ ಅವಮಾನಕಾರಿ ಹೇಳಿಕೆ !

ಹಿಂದುಗಳಿಂದ ಬ್ಯಾಂಕ್ ನ ಖಾತೆಗಳನ್ನು ಬಂದ ಮಾಡಿದ ಪರಿಣಾಮ !

ತನ್ಮಯ ಭಟ

ನವ ದೆಹಲಿ – ಯೂ ಟ್ಯೂಬ್ ವಿಡಿಯೋ ಪ್ರಸಾರ ಮಾಡುವ ಮತ್ತು ಹಾಸ್ಯ ಕಲಾವಿದ ತನ್ಮಯ್ ಭಟ ಇವರು ‘ಕೋಟಕ್ ಮಹೀಂದ್ರಾ ಬ್ಯಾಂಕ್’ನ ಒಂದು ಜಾಹೀರಾತಿನಲ್ಲಿ ಕಾಣುತ್ತಿದ್ದರು. ಈಗ ಅವರನ್ನು ಇದರಿಂದ ತೆಗೆಯಲಾಗಿದೆ. ಸಾಮಾಜಿಕ ಜಾಲತಾಣದಿಂದ ಬ್ಯಾಂಕಿನ ಬಳಿ ತನ್ಮಯ ಭಟ್ ಇವರು ಹಿಂದೂ ಧರ್ಮದ ಅವಮಾನ ಮಾಡುವುದು ಮತ್ತು ಚಿಕ್ಕ ಮಕ್ಕಳ ಅಶ್ಲೀಲ ಚಿತ್ರಗಳಿಗೆ ಪ್ರೋತ್ಸಾಹ ನೀಡಿದ ಬಗ್ಗೆ ಮಾಹಿತಿ ಸಿಕ್ಕಿದೆ. ಅದರ ನಂತರ ಬ್ಯಾಂಕ ತನ್ನ ಜಾಹೀರಾತನ್ನು ಹಿಂಪಡೆದಿದೆ. ತನ್ಮಯ ಭಟ ಇವರು ಶ್ರೀ ಗಣೇಶನ ಮೇಲೆ ಕೂಡ ಅಕ್ಷೆಪಾರ್ಹ ಹೇಳಿಕೆ ನೀಡುವ ಟ್ವೀಟ್ ಮಾಡಿದ್ದಾರೆ. ಹಾಗೂ ಬಾಲಕರ ಲೈಂಗಿಕ ಶೋಷಣೆ ಮಾಡಿರುವ ಆರೋಪ ಕೂಡ ಅವರ ಮೇಲೆ ಇದೆ.

೧. ಜಾಹೀರಾತಿನ ನಂತರ ಅನೇಕರು ಈ ಬ್ಯಾಂಕಿನಿಂದ ತಮ್ಮ ಖಾತೆಗಳನ್ನು ಬಂದ್ ಮಾಡಿದ್ದರು ಹಾಗೂ ಕೆಲವು ಜನರು ತಮ್ಮ ಖಾತೆ ಬಂದ್ ಮಾಡುವುದಾಗಿ ಸಾಮಾಜಿಕ ಜಾಲತಾಣದಿಂದ ಘೋಷಿಸಿದ್ದರು. ಇದರ ಪರಿಣಾಮವಾಗಿ ಬ್ಯಾಂಕಿನಿಂದ ಮೇಲಿನ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

೨. ಬ್ಯಾಂಕನಿಂದ, ನಮ್ಮ ಬ್ಯಾಂಕ ಯಾವುದಾದರೂ ವ್ಯಕ್ತಿ ಅಥವಾ ಸಮೂಹಕ್ಕೆ ಹಾನಿ ಮಾಡುತ್ತಿದ್ದರೆ ಅಂತಹ ಯಾವುದೇ ವಿಚಾರಗಳನ್ನು ಬೆಂಬಲಿಸುವುದಿಲ್ಲ. ಆದ್ದರಿಂದ ನಾವು ನಮ್ಮ ಜಾಹೀರಾತು ಹಿಂಪಡೆದಿದ್ದೇವೆ ಎಂದು ಟ್ವೀಟ್ ಮಾಡಿ ಹೇಳಿದೆ.

ಸಂಪಾದಕರ ನಿಲುವು

* ಇಂತಹವರ ಮೇಲೆ ದೂರು ದಾಖಲಿಸಿ ಅವರನ್ನು ಜೈಲಿಗೆ ಅಟ್ಟಬೇಕು ?