ಇನ್ನು ಪಶ್ಚಿಮ ಬಂಗಾಳದ ಹಿಂದೂಗಳ ಮೇಲೆ, ಬಾಂಗ್ಲಾದೇಶದಲ್ಲಿ ಹಿಂದುಗಳಂತೆ ದೌರ್ಜನ್ಯ ನಡೆಯುವ ದಿನ ದೂರವಿಲ್ಲ ! – ಶ್ರೀ. ತಥಾಗತ ರಾಯ್, ಮಾಜಿ ರಾಜ್ಯಪಾಲರು

ಬಾಂಗ್ಲಾದೇಶದ ಹಿಂದೂಗಳ ಮೇಲೆ ಜಿಹಾದಿ ಆಕ್ರಮಣ ಈ ವಿಷಯದ ಕುರಿತು ವಿಶೇಷ ಸಂವಾದ !

ಶ್ರೀ. ತಥಾಗತ ರಾಯ್

ಬಾಂಗ್ಲಾದೇಶದ ಹಿಂದುಗಳ ಮೇಲೆ ನಿರಂತರ ನಡೆಯುತ್ತಿರುವ ದೌರ್ಜನ್ಯದ ಕುರಿತು ಜಗತ್ತಿನಲ್ಲಿ ಯಾರೂ ಮಾತನಾಡುವುದಿಲ್ಲ. ಯಾರ ಪೂರ್ವಜರು ಇಂದಿನ ಬಾಂಗ್ಲಾದೇಶದಲ್ಲಿ ಹಿಂದೂಗಳಾಗಿದ್ದರೋ, ಅಂತಹ ಪಶ್ಚಿಮ ಬಂಗಾಳದಲ್ಲಿ ಬಹಳಷ್ಟು ಹಿಂದುಗಳ ಮೇಲೆ ಎಡಪಂಥೀಯ ವಿಚಾರಧಾರೆಯ ಪ್ರಭಾವ ಇರುವುದರಿಂದ ಅವರು ಕೂಡ ಬಾಂಗ್ಲಾದೇಶದ ಹಿಂದುಗಳ ಮೇಲಿನ ದೌರ್ಜನ್ಯದ ಬಗ್ಗೆ ದುರ್ಲಕ್ಷ ಮಾಡುತ್ತಿದ್ದಾರೆ. ಆದರೆ ಈಗ ಪಶ್ಚಿಮ ಬಂಗಾಳದ ಹಿಂದೂಗಳ ಮೇಲೂ ಬಾಂಗ್ಲಾದೇಶದಲ್ಲಿನ ಹಿಂದುಗಳ ರೀತಿ ದೌರ್ಜನ್ಯ ನಡೆಯುವ ದಿನದ ದೂರವಿಲ್ಲ. ಸರಕಾರವು ಹಿಂದುಗಳ ಮೇಲಿನ ಆಕ್ರಮಣ ತಡೆಯಲು ಮುಂದೆ ಬರಬೇಕು. ಹಾಗೂ ಬಂಗಾಳ ಮತ್ತು ಭಾರತದ ಇತರೆಡೆಗಳಲ್ಲಿ ಹಿಂದುಗಳ ಮೇಲೆ ದಾಳಿ ನಡೆಯಬಾದೆಂದು ಹಿಂದುಗಳಲ್ಲಿ ಜಾಗೃತಿ ಮೂಡಿಸಬೇಕು , ಎಂದು ತ್ರಿಪುರ ಮತ್ತು ಮೇಘಾಲಯ ರಾಜ್ಯದ ಮಾಜಿ ರಾಜ್ಯಪಾಲರಾದ ಶ್ರೀ. ತಥಾಗತ ರಾಯ್ ಇವರು ಪ್ರತಿಪಾದಿಸಿದರು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ, ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ಜಿಹಾದಿ ಆಕ್ರಮಣ ! ಈ ವಿಷಯದ ಕುರಿತು ಆಯೋಜಿಸಿದ್ದ ಆನ್ಲೈನ್ ವಿಶೇಷ ಚರ್ಚಾ ಸತ್ರದಲ್ಲಿ ಅವರು ಮಾತನಾಡುತ್ತಿದ್ದರು.

ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನಕಾರ ಹಾಗೂ ಲೇಖಕ ನ್ಯಾಯವಾದಿ ಸತೀಶ ದೇಶಪಾಂಡೆ ಇವರು , ಬಾಂಗ್ಲಾದೇಶ ೧೯೭೧ ರಲ್ಲಿ ಸ್ವತಂತ್ರವಾಯಿತು, ಆದರೆ ಅಲ್ಲಿಯ ಹಿಂದುಗಳಿಗಾಗಿ ನಾವು ಏನು ಮಾಡಿದ್ದೇವೆ ? ಅಲ್ಲಿಯ ಹಿಂದೂಗಳು ಯಾವ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ? ಇದರ ಬಗ್ಗೆ ಭಾರತದಲ್ಲಿನ ಹಿಂದುಗಳಿಗೆ ಯಾವುದೇ ಕಾಳಜಿ ಇಲ್ಲ. ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ೧೪ ದೇವಸ್ಥಾನಗಳನ್ನು ನೆಲಸಮ ಮಾಡಿದರು. ಇದರ ಬಗ್ಗೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಹಿಂದೂಗಳು ಜಾಗೃತ ಇಲ್ಲದಿರುವುದರಿಂದ ಜಗತ್ತಿನಾದ್ಯಂತ ಇರುವ ಅನೇಕ ಸ್ಥಳದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಅದರ ಬಗ್ಗೆ ಯಾರೂ ಧ್ವನಿ ಎತ್ತುವುದಿಲ್ಲ.

ಹಿಂದುಗಳ ಹಿತಕ್ಕಾಗಿ ಬೇರೆ ಯಾರಾದರೂ ಕಾರ್ಯ ಮಾಡಬಹುದು ಎಂದು ಅವಲಂಬಿಸದೆ ಹಿಂದುಗಳನ್ನು ಜಾಗೃತ ಮಾಡಲು ಗ್ರಾಮ ಗ್ರಾಮದಲ್ಲಿ, ನಗರ ನಗರಗಳಲ್ಲಿ ಆಂದೋಲನಗಳು ನಡೆಯಬೇಕು. ಆಗ ಬಾಂಗ್ಲಾದೇಶ ಅಥವಾ ಇತರ ಬೇರೆ ಎಲ್ಲಾದರೂ ಹಿಂದುಗಳ ಮೇಲೆ ದೌರ್ಜನ್ಯ ನಡೆದರೆ ಅದರ ಬಗ್ಗೆ ಕ್ರಮ ಕೈಗೊಳ್ಳಲು ಸರಕಾರದ ಮೇಲೆ ಒತ್ತಡ ನಿರ್ಮಾಣವಾಗುವುದು.