ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ವೈದ್ಯ ಮೇಘರಾಜ ಪರಾಡಕರ

ಶೀತ, ಕೆಮ್ಮು ಮತ್ತು ಜ್ವರವಿದ್ದಾಗ ತುಳಸಿಯ ಉಪಯೋಗ

‘ಶೀತ, ಕೆಮ್ಮು ಮತ್ತು ಜ್ವರಗಳಿಗೆ ತುಳಸಿಯು ರಾಮಬಾಣ ಔಷಧಿ. ಈ ರೋಗವಾದಾಗ  ತುಳಸಿಯ ಎರಡೆರಡು ಎಲೆಗಳನ್ನು ದಿನದಲ್ಲಿ ೩ ಬಾರಿ ಕಚ್ಚಿ ತಿನ್ನಬೇಕು. ತುಳಸಿಯ ೧೦-೧೫ ಎಲೆಗಳನ್ನು ೧ ಲೋಟ ನೀರಿನಲ್ಲಿ ಕುದಿಸಿ ಆವಿಯನ್ನು ಮೂಗು ಮತ್ತು ಬಾಯಿಯಿಂದ ಒಳಗಡೆ (ದೇಹದಲ್ಲಿ) ತೆಗೆದುಕೊಳ್ಳಬೇಕು. ದಿನದಲ್ಲಿ ೨ ಬಾರಿ ಒಂದೊಂದು ಕಪ್ ತುಳಸಿಯ ಕಷಾಯವನ್ನು (ಆವಿ ತೆಗೆದುಕೊಂಡ ನಂತರ ಉಳಿದಿರುವ ನೀರು) ಕುಡಿಯಬೇಕು. ಹೀಗೆ ೩ ರಿಂದ ೫ ದಿನಗಳ ವರೆಗೆ ಮಾಡಬೇಕು. ನಮಗೆ ತುಳಸಿ ಯಾವಾಗಲೂ ಸಿಗಬೇಕೆಂದು ಪ್ರತಿಯೊಬ್ಬರೂ ತುಳಸಿಯ ೧-೨ ಸಸಿಗಳನ್ನು ತಮ್ಮ ಮನೆಯಲ್ಲಿ ನೆಡಬೇಕು.’

ಊಟ ಬೇಡ ಅನಿಸುವುದು, ಶೌಚ ಸ್ವಚ್ಛವಾಗದಿರುವುದು ಇಂತಹ ಸಮಸ್ಯೆಗಳಿಗೆ ‘ಸನಾತನ ಆಮಲಕಿ (ನೆಲ್ಲಿಕಾಯಿ) ಚೂರ್ಣದ ಒಂದು ಭಿನ್ನ ಪ್ರಯೋಗ

‘ಊಟ ಬೇಡವೆನಿಸುವುದು, ಶೌಚ ಸ್ವಚ್ಛವಾಗದಿರುವುದು, ಮೇಲಿಂದಮೇಲೆ ಪಿತ್ತವಾಗುವುದು ಇವುಗಳಂತಹ ಸಮಸ್ಯೆಗಳಿದ್ದರೆ, ೧ ದೊಡ್ಡ ಚಮಚದಷ್ಟು ‘ಸನಾತನ ಆಮಲಕಿ (ನೆಲ್ಲಿಕಾಯಿ) ಚೂರ್ಣ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಇವು ನೆನೆಯುವಷ್ಟು ೧-೨ ಚಮಚ ಮಜ್ಜಿಗೆ ಅಥವಾ ನೀರನ್ನು ಒಟ್ಟಿಗೆ ಸೇರಿಸಿ ಚಟ್ನಿಯನ್ನು ಮಾಡಬೇಕು. ಈ ಚಟ್ನಿಯನ್ನು ಊಟ ಮಾಡುವಾಗ ಮಧ್ಯಮಧ್ಯದಲ್ಲಿ ತಿನ್ನಬೇಕು. ಇದರಿಂದ ಬಾಯಿಗೆ ರುಚಿ ಬರುತ್ತದೆ, ಹಾಗೆಯೇ ಶೌಚವೂ ಸ್ವಚ್ಛವಾಗಲು ಸಹಾಯವಾಗುತ್ತದೆ.

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೧೨.೨೦೨೨)