ಪರಾತ್ಪರ ಗುರು ಪಾಂಡೆ ಮಹಾರಾಜರ ಅಮೂಲ್ಯ ಸತ್ಸಂಗದ ಮಾರ್ಗದರ್ಶಕ ಅಂಶಗಳು !

೧೮.೨.೨೦೨೩ ಈ ದಿನದಂದು ಪರಾತ್ಪರ ಗುರು ಪಾಂಡೆ ಮಹಾರಾಜರ ಪುಣ್ಯತಿಥಿ ಇದೆ. ಆ ನಿಮಿತ್ತದಿಂದ

ಜ್ಞಾನಯೋಗಿ ಮತ್ತು ಋಷಿಸಮಾನ ಪರಾತ್ಪರ ಗುರು ಪಾಂಡೆ ಮಹಾರಾಜರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು

‘೨೫.೧೨.೨೦೧೮ ಈ ದಿನ ದಂದು ನಾನು ಕುಟುಂಬ ಸಮೇತ ದೇವದ ಆಶ್ರಮಕ್ಕೆ ಹೋಗಿದ್ದೆನು. ಆ ಸಮಯದಲ್ಲಿ ಆಕಸ್ಮಿಕವಾಗಿ ನಮಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ದರ್ಶನದ ಅವಕಾಶವು ಲಭಿಸಿತು. ಅವರ ಈ ಅಮೂಲ್ಯ ಸತ್ಸಂಗದಲ್ಲಿ ಅವರು ಮಾಡಿದ ಮಾರ್ಗದರ್ಶನವನ್ನು ಕೊಡುತ್ತಿದ್ದೇವೆ.

ಶ್ರೀ. ದತ್ತಾತ್ರಯ ಕುಲಕರ್ಣಿ

೧. ಬಾಹ್ಯ ಆವರಣವನ್ನು ನೋಡದೇ ಎಲ್ಲರಲ್ಲಿರುವ ಆತ್ಮತತ್ತ್ವವನ್ನು ತಿಳಿಯಬೇಕು !

‘ಯಾವುದಾದರೊಂದು ಭರಣಿಯಲ್ಲಿರುವ ವಸ್ತುವನ್ನು ನೋಡುವ ಬದಲು ನಾವು ಕೇವಲ ಭರಣಿ, ಅಂದರೆ ಬಾಹ್ಯ ಆವರಣವನ್ನು ನೋಡುತ್ತೇವೆ. ಅಂತರಂಗ ನೋಡುವುದಿಲ್ಲ. ನಾವು ಕನ್ನಡಿಯೆದುರು ನಿಂತಿರುತ್ತೇವೆ. ಆ ಸಮಯದಲ್ಲಿಯೂ ನಾವು ಏನು ನೋಡುತ್ತೇವೆ. ನಾವು ನಮ್ಮ ದೇಹ ಅಂದರೆ ನಮ್ಮ ಬಾಹ್ಯಾಂಗ, ಅಂದರೆ ಆವರಣವನ್ನು ನೋಡುತ್ತೇವೆ. ಈ ದೇಹಕ್ಕಾಗಿ ನಾವು ಬಟ್ಟೆಗಳು, ವಾಹನ, ಬಂಗಲೆ ಮುಂತಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ; ಆದರೆ ನಮ್ಮ ದೇಹದ ಒಳಗಿನ ‘ಆತ್ಮತತ್ತ್ವವನ್ನು ನೋಡುವುದಿಲ್ಲ. ‘ಎಲ್ಲರಲ್ಲಿ ಈ ಆತ್ಮತತ್ತ್ವವೇ ಇದೆ, ಎಂದು ನಾವು ತಿಳಿಯಬೇಕು.

೨. ಎಲ್ಲವೂ ಭಗವಂತನದ್ದಾಗಿರುವುದರಿಂದ ‘ನನ್ನದು ಎನ್ನುವುದು ತಪ್ಪಾಗಿರುವುದು

ನಾವು ‘ನನ್ನ ಮಕ್ಕಳು, ‘ನನ್ನ ಶರೀರ, ‘ನನ್ನ ಮನೆ ಎಂದೆಲ್ಲ ಹೇಳುತ್ತೇವೆ. ಈ ‘ನನ್ನದು ಎಲ್ಲಿಂದ ಬಂದಿತು ? ನಮ್ಮ ಕೈ-ಕಾಲು ನಿಜವಾಗಿಯೂ ಸತ್ತಂತಿವೆ. ನಾವೂ ಸತ್ತಂತೇ ಇದ್ದೇವೆ. ಈಶ್ವರನು ಇವೆಲ್ಲವನ್ನೂ ಸಜೀವ ಮಾಡಿದ್ದಾನೆ, ಅಂದರೆ ಎಲ್ಲ ಕಡೆಗೆ ಆ ಭಗವಂತನಿದ್ದಾನೆ. ಎಲ್ಲವೂ ಅವನದ್ದೇ ಇದೆ. ಹೀಗಿರುವಾಗ ‘ನಾನು, ‘ನನ್ನದು ಹೀಗೆ ಏನೂ ಇಲ್ಲ. ಹಾಗಾದರೆ ‘ನನ್ನ ಈ ಪದವು ಎಲ್ಲಿಂದ ಬಂದಿತು ? ಎಲ್ಲ ಕಡೆಗೆ ಭಗವಂತನೇ ಇದ್ದಾನೆ ಹಾಗೂ ಅವನೇ ಎಲ್ಲವನ್ನೂ ಮಾಡುತ್ತಿದ್ದಾನೆ.

೩. ಕ್ರೋಧವನ್ನು ಬಳಸಿ ಆದರೆ ಅದಕ್ಕೆ ತುತ್ತಾಗಬೇಡಿ !

ಸಿಟ್ಟು ಬರುವುದೂ ಒಂದು ಭಾವವೇ ಆಗಿದೆ. ಸಿಟ್ಟು, ಅನುರಾಗ, ವಿರಾಗ, ಪ್ರೇಮ, ಪ್ರೀತಿ, ಹೀಗೆ ಈ ಪದಗಳಿವೆ. ತಾಯಿಯು ಮಗುವಿನ ಮೇಲೆ ಸಿಟ್ಟಾಗುತ್ತಾಳೆ, ಅದು ಸರಿಯಿದೆ; ಆದರೆ ತಾಯಿಯು ಸಿಟ್ಟಿನಲ್ಲಿರುತ್ತಾಳೆಯೇ ?, ಇಲ್ಲ. ಆದ್ದರಿಂದ ‘ತಾಯಿಯು ಸಿಟ್ಟಿನಲ್ಲಿರುತ್ತಾಳೆ, ಎಂದು ಹೇಳುವುದು ತಪ್ಪಾಗಿದೆ. (ಮಕ್ಕಳಲ್ಲಿ ಶಿಸ್ತನ್ನು ಕಲಿಸುವಾಗ ಕ್ರೋಧದ ಉಪಯೋಗವು ಆವಶ್ಯಕವಿದೆ; ಆದರೆ ಕ್ರೋಧಕ್ಕೆ ತುತ್ತಾಗಬಾರದು.)

– ಶ್ರೀ. ದತ್ತಾತ್ರಯ ಕುಲಕರ್ಣಿ, ಗಾವಭಾಗ, ಸಾಂಗಲಿ. (೨೭.೧೨.೨೦೧೮)

ಪರಾತ್ಪರ ಗುರು ಪಾಂಡೆ ಮಹಾರಾಜರ ಅಮೂಲ್ಯ ಮಾರ್ಗದರ್ಶನ

ಅ. ‘ಶಿಕ್ಷಣದ ಅಹಂಕಾರ ಮನುಕುಲವನ್ನು ಮನುಷ್ಯತ್ವ ದಿಂದ ದೂರ ಒಯ್ಯುತ್ತಿದೆ.

ಆ. ಪರಸ್ಪರರಲ್ಲಿ ಪ್ರೀತಿ ಇಲ್ಲದಿದ್ದರೆ, ಹಣವಿದ್ದು ಏನು ಉಪಯೋಗ ?

ಇ. ಅಹಂ ಕಡಿಮೆ ಇದ್ದರೆ ದೇವರತ್ತ ಹೋಗಬಹುದು.