ಪಾಕಿಸ್ತಾನದ ಕಾಶ್ಮೀರ ವಿಷಯದ ಹೇಳಿಕೆಯಿಂದ ಬ್ರಿಟನ್ ನಲ್ಲಿರುವ ಮುಸಲ್ಮಾನರ ಮೇಲೆ ಪರಿಣಾಮ !

ಬ್ರಿಟನ್ ಸರಕಾರದ ವರದಿ.

ಲಂಡನ್ (ಬ್ರಿಟನ್) – ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನ ನೀಡಿರುವ ಹೇಳಿಕೆಯಿಂದ ಬ್ರಿಟನನಲ್ಲಿರುವ ಮುಸಲ್ಮಾನರ ಮೇಲೆ ಪರಿಣಾಮವಾಗುತ್ತಿದೆ. ಅವರಲ್ಲಿ ಭಾರತ ವಿರೋಧಿ ಭಾವನೆಗಳನ್ನು ಕೆಣಕಲಾಗುತ್ತಿದೆ. ಇದರೊಂದಿಗೆ ಬ್ರಿಟನನಲ್ಲಿರುವ ಖಲಿಸ್ತಾನ ಬೆಂಬಿಗರ ಗುಂಪು ಭಾರತ ವಿರೋಧಿ ಸುಳ್ಳು ವಿಷಯಗಳನ್ನು ಹಬ್ಬಿಸುತ್ತಿದ್ದಾರೆ. ಇದರಿಂದ ಬ್ರಿಟನ ಜಾಗರೂಕವಾಗಿರುವ ಆವಶ್ಯಕತೆಯಿದೆ, ಎಂದು ಬ್ರಿಟನ ಸರಕಾರವು ಭಯೋತ್ಪಾದಕತೆಯನ್ನು ತಡೆಯಲು ರಚಿಸಿರುವ ಯೋಜನೆಗಳ ಸಮೀಕ್ಷೆಯ ವರದಿಯಲ್ಲಿ ತಿಳಿಸಿದೆ.

1. ಈ ವರದಿಯಲ್ಲಿ, ಬ್ರಿಟನನಲ್ಲಿ ಕೆಲವು ಕಟ್ಟರವಾದಿಗಳ ಗುಂಪು ಜನರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ. ಬ್ರಿಟನನಲ್ಲಿ ಪಾಕಿಸ್ತಾನದ ಓರ್ವ ಮೌಲ್ವಿ (ಇಸ್ಲಾಂ ಧಾರ್ಮಿಕ ನಾಯಕ) ಕಾಶ್ಮೀರದ ಹಿಂಸಾಚಾರದಿಂದ ಜನರನ್ನು ಪ್ರಚೋದಿಸುತ್ತಿದ್ದಾನೆ, ಎಂದು ಕಂಡುಬಂದಿದೆ.

2. ಈ ವಿಷಯದಲ್ಲಿ ಬ್ರಿಟನ ಗೃಹಸಚಿವರು, ವರದಿಯ ಶಿಫಾರಸ್ಸುಗಳನ್ನು ತಕ್ಷಣವೇ ಜಾರಿಗೊಳಿಸಲಾಗುವುದು. ಕಟ್ಟರವಾದವನ್ನು ನಿಲ್ಲಿಸಲು ದೊಡ್ಡ ಸುಧಾರಣೆ ಮಾಡುವ ಆವಶ್ಯಕತೆಯಿದೆ ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಮತಾಂಧ ಮುಸಲ್ಮಾನರು ಎಲ್ಲಿದ್ದರೂ, ಅವರು ಧರ್ಮದ ಹೆಸರಿನಲ್ಲಿ ಒಬ್ಬರಿಗೊಬ್ಬರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ, ಎನ್ನುವುದನ್ನು ಗಮನಿಸಿರಿ !