ಚೀನಾ 12 ದೇಶಗಳಲ್ಲಿ ಬೇಹುಗಾರಿಕೆ ನಡೆಸಿದೆ !

  • ಅಮೇರಿಕಾದ ಗೂಢಚಾರ ಇಲಾಖೆಯ ಮಾಹಿತಿ

  • ಭಾರತದಲ್ಲಿಯೂ ಬೇಹುಗಾರಿಕೆ ಮಾಡಿರುವ ದಾವೆ

ವಾಶಿಂಗ್ಟನ್ – ಚೀನಾ ಹಿಂದಿನ ಕೆಲವು ವರ್ಷಗಳಿಂದ 5 ಖಂಡಗಳ 12 ದೇಶಗಳಲ್ಲಿ ಬೇಹುಗಾರಿಕೆ ನಡೆಸುವ ‘ಬಲೂನ’ ಕಳುಹಿಸಿರುವ ಬಗ್ಗೆ ಅಮೇರಿಕಾದ ಗುಪ್ತಚರ ವಿಭಾಗವು ಮಾಹಿತಿ ನೀಡಿದೆ. ವಿವಿಧ ದೇಶಗಳಲ್ಲಿ ಈ ರೀತಿಯ ‘ಬಲೂನ್’ಅನ್ನು ಕಳುಹಿಸುವುದು, ಇದು ಚೀನಾದ ಬೇಹುಗಾರಿಕೆಯ ಕಾರ್ಯಕ್ರಮದ ಒಂದು ಭಾಗವಾಗಿದೆ. ಈ ರೀತಿ ‘ಬಲೂನ’ ಕಳುಹಿಸಿ ಚೀನಾ ಭಾರತದಲ್ಲಿಯೂ ಬೇಹುಗಾರಿಕೆ ನಡೆಸಿದೆಯೆಂದು ಅಮೇರಿಕಾದ ಅಧಿಕಾರಿಗಳು ಹೇಳಿದ್ದಾರೆ. ಚೀನಾ ಇಂತಹ ‘ಬಲೂನ’ ಮೂಲಕ ಜಪಾನ, ತೈವಾನ ಮತ್ತು ಫಿಲಿಫೈನ್ಸ ದೇಶಗಳ ಆಕಾಶ ಮಾರ್ಗದಲ್ಲಿ ನುಸುಳಿದೆ. ಅಮೇರಿಕಾದ ವಾಯುದಳವು ಫೆಬ್ರುವರಿ 5 ರಂದು ಬೇಹುಗಾರಿಕೆ ನಡೆಸುವ ಚೀನಾದ ‘ಬಲೂನ’ ಕೆಡವಿತ್ತು. ಈ ಹಿನ್ನೆಲೆಯಲ್ಲಿ ಅಮೇರಿಕಾದ ಗುಪ್ತಚರ ವಿಭಾಗವು ಈ ವಿಷಯದ ಮಾಹಿತಿಯನ್ನು ಪ್ರಸಾರ ಮಾಡಿದೆ.

ಅಮೇರಿಕಾದ ಗುಪ್ತಚರ ಇಲಾಖೆಯು,

1. ಚೀನಾ ಇಂತಹ ‘ಬಲೂನ’ ಮೂಲಕ ಜಗತ್ತಿನಾದ್ಯಂತದ ದೇಶಗಳ ಸೈನ್ಯ ತಾಣಗಳ ಮೇಲೆ ಕಣ್ಣಿಟ್ಟಿದೆ. ಚೀನಾ ದಕ್ಷಿಣ ಅಮೇರಿಕಾ, ದಕ್ಷಿಣ ಪೂರ್ವ ಏಶಿಯಾ, ಪೂರ್ವ ಏಶಿಯಾ ಮತ್ತು ಯುರೋಪ ಖಂಡಗಳಲ್ಲಿಯೂ ಬೇಹುಗಾರಿಕೆ ನಡೆಸುವ ‘ಬಲೂನ’ ಕಳುಹಿಸಿದೆ.

2. ಜಗತ್ತಿನಾದ್ಯಂತ ಹೆಚ್ಚಾಗುತ್ತಿರುವ ಚೀನಾದ ಬೇಹುಗಾರಿಕೆಯಿಂದಾಗಿ ಅಮೇರಿಕಾ ಉಪಕ್ರಮವನ್ನು ಕೈಗೆತ್ತಿಕೊಂಡಿದೆ. ಇದರ ಅಡಿಯಲ್ಲಿ ಅಮೇರಿಕಾದ ವಿದೇಶದಲ್ಲಿರುವ ಅಧಿಕಾರಿಗಳು ಆಯಾ ದೇಶಗಳಿಗೆ ಚೀನಾದ ಬೇಹುಗಾರಿಕೆಯ ಮಾಡಿತಿ ನೀಡುವರು. ಭಾರತವೂ ಕೂಡ ಈ ಉಪಕ್ರಮದಲ್ಲಿ ಭಾಗವಹಿಸಲಿದೆ.

3. ಅನೇಕ ವರ್ಷಗಳಿಂದ ಚೀನಾ ಬೇಹುಗಾರಿಕೆ ನಡೆಸುವ ‘ಬಲೂನ’ ಮೇಲೆ ಸಂಶೋಧನೆ ನಡೆಸುತ್ತಿದೆ. 2021 ರಲ್ಲಿ ಚೀನಿ ವಾರ್ತಾವಾಹಿನಿಯು ಬೇಹುಗಾರಿಕೆ ನಡೆಸುವ ‘ಬಲೂನ’ನನ್ನು ‘ಆಕಾಶದಲ್ಲಿರುವ ಶಕ್ತಿಶಾಲಿ ಕಣ್ಣುಗಳು’ ಎಂದು ಬಣ್ಣಿಸಿತ್ತು.

4. ಅಮೇರಿಕಾ ಗುಪ್ತಚರ ಸಂಸ್ಥೆ ಸಿಐಎಯ ಮಾಜಿ ಅಧಿಕಾರಿ ಜಾನ್ ಕಲ್ವರ ಇವರು ಮಾತನಾಡುತ್ತಾ, ಬೇಹುಗಾರಿಕೆ ನಡೆಸುವ ಬಲೂನ ಚೀನಾದ ಬೇಹುಗಾರಿಕಾ ಉಪಗ್ರಹಗಳ ನ್ಯೂನ್ಯತೆಯನ್ನು ತುಂಬಿಸುತ್ತಿದೆ. ಈ ಬಲೂನ ಸಂಬಂಧಿಸಿರುವ ದೇಶಗಳ ವಾತಾವರಣದ ಸ್ಥಿತಿಯನ್ನು ಮತ್ತು ಬಾಹ್ಯಾಕಾಶದ ಮಾಹಿತಿಯನ್ನು ಸಹಜವಾಗಿ ಸಂಗ್ರಹಿಸಬಲ್ಲದು. ಚೀನಿ ಸೈನ್ಯಕ್ಕೆ ಈ ಮಾಹಿತಿ ಮಹತ್ವದ್ದಾಗಿರುತ್ತದೆ. ತನ್ಮೂಲಕ ಯುದ್ಧದ ಸಮಯದಲ್ಲಿ ಸರಿಯಾಗಿ ಗುರಿ ಸಾಧಿಸಲು ಚೀನಾಗೆ ಸುಲಭವಾಗಲಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಚೀನಾದ ಹೆಚ್ಚುತ್ತಿರುವ ಕಿತಾಪತಿ ಜಗತ್ತಿನ ಶಾಂತಿಗೆ ಅಪಾಯಕಾರಿಯಾಗಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡು ಭಾರತವು ಸಾಧ್ಯವಾದಷ್ಟು ಅಧಿಕ ಯುದ್ಧಸನ್ನಧ್ಧವಾಗಿರುವುದು ಆವಶ್ಯಕವಾಗಿದೆ !