ಟರ್ಕಿಯಲ್ಲಿ ಕೊರೆಯುವ ಚಳಿ ಮತ್ತು ವಿದ್ಯುತ್ ಕೊರತೆಯಿಂದಾಗಿ ಪರಿಹಾರ ಕಾರ್ಯದಲ್ಲಿ ವಿಘ್ನ !

ಅಂಕಾರ (ಟರ್ಕಿ) – ಟರ್ಕಿ ಮತ್ತು ಸಿರಿಯಾ ದೇಶದಲ್ಲಿ ಸಂಭವಿಸಿದ ಭೂಕಂಪದಿಂದ ಇಲ್ಲಿಯವರೆಗೆ ೮ ಸಾವಿರಗಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಕಟ್ಟಡದ ರಾಶಿ ಕೆಳಗೆ ಸಾವಿರಾರು ಜನರು ಸಿಲುಕಿರುವ ಸಾಧ್ಯತೆ ಇದ್ದು ಮೃತರ ಸಂಖ್ಯೆಯಲ್ಲಿ ಹೆಚ್ಚಾಗಬಹುದು ಎಂದು ಹೇಳುತ್ತಿದ್ದಾರೆ. ವಿವಿಧ ದೇಶದಿಂದ ಭೂಕಂಪ ಪೀಡಿತ ಸ್ಥಳದಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ. ಭಾರತದ ತಂಡ ಕೂಡ ಅಲ್ಲಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಅಲ್ಲಿಯ ವಾತಾವರಣ ಪ್ರತಿಕೂಲವಾಗುತ್ತಿದೆ. ಕೆಟ್ಟ ಹವಾಮಾನ ಮತ್ತು ಕೊರೆಯುವ ಚಳಿಯಿಂದ ಪರಿಹಾರ ಕಾರ್ಯದಲ್ಲಿ ಅಡಚಣೆ ನಿರ್ಮಾಣವಾಗುತ್ತಿದೆ.

ಸಾವಿರಾರು ಜನರು ಭೂಕಂಪದಿಂದ ಮನೆಗಳನ್ನು ಕಳೆದುಕೊಂಡಿರುವುದರಿಂದ ಅವರು ನಿರಾಶ್ರಿತರಾಗಿದ್ದಾರೆ. ಅದರಲ್ಲಿ ಚಳಿ ಹೆಚ್ಚಾಗಿರುವುದರಿಂದ ಅವರಿಗೆ ಬಯಲಲ್ಲಿ ಉಳಿಯುವುದು ಮತ್ತು ಬದುಕುವುದು ಕಠಿಣವಾಗಿದೆ. ಅನೇಕ ಭೂಕಂಪ ಪೀಡಿತ ಸ್ಥಳಗಳಲ್ಲಿ ವಿದ್ಯುತ್ ಮತ್ತು ಎಣ್ಣೆ ಪೂರೈಕೆ ಇಲ್ಲ. ರಾಷ್ಟ್ರಪತಿ ತಯಿಪ ಎದೋರ್ಗನ್ ಇವರು, ಕೆಟ್ಟ ವಾತಾವರಣದಿಂದ ಪರಿಹಾರ ಕಾರ್ಯದ ಎದುರು ದೊಡ್ಡ ಸವಾಲಾಗಿದೆ. ಕೊರೆಯುವ ಚಳಿಯಿದ್ದರೂ ಕೂಡ ಜನರು ಸಹಾಯಕ್ಕಾಗಿ ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.