ಮಸೀದಿಗಳಿಗೆ ‘ವಕ್ಫ್ ಬೋರ್ಡ್’ ಇದೆ, ಆದರೆ ದೇವಸ್ಥಾನಗಳಿಗೆ ‘ಹಿಂದೂ ಬೋರ್ಡ್’ ಏಕಿಲ್ಲ ? – ನ್ಯಾಯವಾದಿ ವಿಷ್ಣು ಶಂಕರ್ ಜೈನ್, ಸರ್ವೋಚ್ಚ ನ್ಯಾಯಾಲಯ

(ಎಡಬದಿಯಿಂದ) ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ

ದೇವಸ್ಥಾನಗಳ ನಿರ್ವಹಣೆ ಸರಿಯಾಗಿಲ್ಲ ಎಂಬ ಕಾರಣ ನೀಡಿ ಸರಕಾರ ದೊಡ್ಡ ದೇವಸ್ಥಾನಗಳನ್ನು ಸ್ವಾಧೀನಪಡಿಸಿಕೊಂಡಿದೆ. ಹೇಗೆ ಮಸೀದಿ-ಮದರಸಾಗಳ ರಕ್ಷಣೆಗಾಗಿ ಸರಕಾರ ‘ವಕ್ಫ್ ಬೋರ್ಡ್’ ಸ್ಥಾಪಿಸಿದೆಯೋ ಅದೇ ರೀತಿ ದೇವಸ್ಥಾನಗಳ ರಕ್ಷಣೆ ಮತ್ತು ನಿರ್ವಹಣೆಗಾಗಿ ದೇವಸ್ಥಾನಗಳನ್ನು ಸರಕಾರ ಸ್ವಾಧೀನಪಡಿಸಿಕೊಳ್ಳುವ ಬದಲು ‘ಹಿಂದೂ ಬೋರ್ಡ್’ ಅನ್ನು ಸ್ಥಾಪಿಸಿ ಅದರ ಬಳಿ ದೇವಸ್ಥಾನಗಳನ್ನು ಏಕೆ ನೀಡುವುದಿಲ್ಲ ? ಈ ಬೋರ್ಡ್‌ನಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಶಂಕರಾಚಾರ್ಯರು, ಮಹಾಮಂಡಲೇಶ್ವರ ಮಠಾಧಿಪತಿ ಮೊದಲಾದ ಅಧಿಕಾರಿ ವ್ಯಕ್ತಿಗಳಿಗೆ ಸ್ಥಾನ ನೀಡಿ ಅವರಿಗೆ ‘ಪಬ್ಲಿಕ್ ಸರ್ವೆಂಟ್’ನ ಸ್ಥಾನಮಾನ ನೀಡಬೇಕು ಎಂದು ಕಾಶಿಯಲ್ಲಿ ‘ಜ್ಞಾನವಾಪಿ’ಗಾಗಿ ಹೋರಾಟ ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಇವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಇವರೂ ಉಪಸ್ಥಿತರಿದ್ದರು. ಜಳಗಾಂವ್‌ನಲ್ಲಿ ನಡೆದ ರಾಜ್ಯ ಮಟ್ಟದ ‘ಮಹಾರಾಷ್ಟ್ರ ಮಂದಿರ-ನ್ಯಾಸ್ ಪರಿಷದ್’ ನಿಮಿತ್ತ ಸುದ್ದಿಗೋಷ್ಠಿಯನ್ನು ಆಯೋಜಿಸಲಾಗಿತ್ತು.

ಸರಕಾರಿ ಕೈಗಾರಿಕೆಗಳ ಖಾಸಗೀಕರಣ, ಆದರೆ ಹಿಂದೂ ದೇವಾಲಯಗಳ ಸರಕಾರಿಕರಣ ಏಕೆ ? – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಸನಾತನ ಧರ್ಮದ ವಿರುದ್ಧ ಹಿಂದಿನಿಂದ ನಡೆದು ಬರುತ್ತಿರುವ ಆಘಾತಗಳ ಸರಣಿ ಇಂದಿಗೂ ಮುಂದುವರೆದಿದೆ. ದೇವಸ್ಥಾನಗಳು ಕೇವಲ ದೇವಸ್ಥಾನಗಳಾಗಿರದೇ, ಅವು ಶಾಲೆ, ನ್ಯಾಯಾಲಯ ಮತ್ತು ಆಸ್ಪತ್ರೆಯೂ ಆಗಿದೆ. ಹಿಂದಿನ ಕಾಲದಲ್ಲಿ ದೇವಸ್ಥಾನಗಳ ಮೂಲಕ ವಿಶ್ವವಿದ್ಯಾಲಯಗಳನ್ನು ನಡೆಸಲಾಗುತ್ತಿತ್ತು. ಈ ಮೂಲಕ ಹಿಂದೂಗಳಿಗೆ ಶಿಕ್ಷಣವನ್ನು ನೀಡಲಾಯಿತು. ಮೊಘಲ್ ಆಕ್ರಮಣಕಾರರು ದೇವಾಲಯಗಳ ಸಂಪತ್ತನ್ನು ನಾಶಪಡಿಸಿ ಲೂಟಿ ಮಾಡಿದರು ಮತ್ತು ದೇವಾಲಯಗಳು ಶ್ರೀಮಂತವಾಗಿ ಉಳಿದರೆ ಜ್ಞಾನದ ಸಂಪತ್ತು ಅಲ್ಲಿ ಮುಂದುವರಿಯುತ್ತದೆ ಮತ್ತು ಮಿಷನರಿಗಳ ಕಾನ್ವೆಂಟ್ ಶಾಲೆಗಳು ನಡೆಯುವುದಿಲ್ಲ. ಹಿಂದೂಗಳನ್ನು ಮತಾಂತರಿಸಲು ಸಾಧ್ಯವಾಗುವುದಿಲ್ಲ, ಎಂಬ ಉದ್ದೇಶದಿಂದ ಬ್ರಿಟಿಷರು ದೇವಸ್ಥಾನಗಳ ಹಣದ ಮೇಲೆ ಹಿಡಿತ ಸಾಧಿಸಲು ದೇವಸ್ಥಾನಗಳನ್ನು ಸರಕಾರೀಕರಣಗೊಳಿಸಲು ಪ್ರಾರಂಭಿಸಿದರು. 1947ರಲ್ಲಿ ಭಾರತ ಸ್ವತಂತ್ರವಾಯಿತು; ಆದರೆ ದೇವಸ್ಥಾನಗಳು ಎಂದಿಗೂ ಸ್ವತಂತ್ರವಾಗಲೇ ಇಲ್ಲ. ಇಂದು ‘ಸೆಕ್ಯುಲರ್’ ಸರಕಾರ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ 4 ಲಕ್ಷ ದೇವಾಲಯಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಒಂದೆಡೆ ಸರಕಾರಿ ಕೈಗಾರಿಕೆಗಳು ಖಾಸಗೀಕರಣವಾಗುತ್ತಿದ್ದರೆ, ಹಿಂದೂ ದೇವಾಲಯಗಳ ಸರಕಾರಿಕರಣ ಏಕೆ ? ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಇವರು ಪ್ರಶ್ನಿಸಿದರು.