ಪ್ರಶಸ್ತಿಯ ಗೌರವ !

ದೇಶದ ಪ್ರಜಾಪ್ರಭುತ್ವ ದಿನದ ಹಿಂದಿನ ದಿನ ದೇಶದ ಸರ್ವೋಚ್ಚ ನಾಗರಿಕ ಪ್ರಶಸ್ತಿಗಳಾದ ‘ಪದ್ಮಶ್ರೀ’, ‘ಪದ್ಮಭೂಷಣ’ ಮತ್ತು ‘ಪದ್ಮವಿಭೂಷಣ’ ಇವುಗಳನ್ನು ಘೋಷಿಸಲಾಗುತ್ತದೆ. ಅದೇ ರೀತಿ ಈ ವರ್ಷವೂ ಆಯಿತು. ‘ಒಬ್ಬ ವಿದ್ಯಾರ್ಥಿಗೆ ದೊರಕುವ ಚಿಕ್ಕ ಬಹುಮಾನವಿರಲಿ ಅಥವಾ ರಾಷ್ಟ್ರದ ಸರ್ವೋಚ್ಚ ಪ್ರಶಸ್ತಿ ಇರಲಿ’, ಎಲ್ಲ ಪ್ರಶಸ್ತಿಗಳು ಆ ವ್ಯಕ್ತಿಯ ಕಾರ್ಯಸಾಧನೆಗಳನ್ನು ಗೌರವಿಸಲು ಇರುತ್ತವೆ; ಆದರೆ ಅದಕ್ಕೂ ಮುಂದೆ ಹೋಗಿ ಪ್ರಶಸ್ತಿಗಳನ್ನು ಪಡೆದುಕೊಳ್ಳುವ ವ್ಯಕ್ತಿಯ ಆದರ್ಶವನ್ನು ಸಮಾಜದೆದುರು ಇಡಲಾಗುತ್ತದೆ. ಇಂತಹ ಪ್ರಶಸ್ತಿಯನ್ನು ಪಡೆದ ಗೌರವಾನ್ವಿತರನ್ನು ತಿಳಿದು ತಿಳಿಯದೇ ಸಮಾಜವು ಅನುಸರಿಸುತ್ತದೆ. ಆದುದರಿಂದಲೇ ಯಾವುದೇ ಬಹುಮಾನ ಅಥವಾ ಪ್ರಶಸ್ತಿಯನ್ನು ಸಂಬಂಧಿತರಿಗೆ ನೀಡುವವರ ಜವಾಬ್ದಾರಿಯು ಬಹಳ ಮುಖ್ಯವಾಗಿದೆ. ಭಾರತೀಯ ಸಮಾಜದಲ್ಲಿ ವ್ಯಕ್ತಿನಿಷ್ಠೆಯನ್ನು ನೋಡಲು ಸಿಗುತ್ತದೆ. ಆದುದರಿಂದ ತಪ್ಪು ಮಾಡಿದವರಿಗೆ ಪ್ರಶಸ್ತಿಯನ್ನು ಘೋಷಿಸಿದರೆ ಸಮಾಜದ ಮೇಲೆ ಅದರ ದುಷ್ಪರಿಣಾಮವಾಗುತ್ತದೆ.

ಉತ್ತಮ ವಾಡಿಕೆ !

ಎಲ್ಲ ಕ್ಷೇತ್ರಗಳಲ್ಲಿ ಯೋಗದಾನವನ್ನು ನೀಡುವ ಭಾರತೀಯ ವ್ಯಕ್ತಿಗಳಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ಈ ವರ್ಷ ‘ಅಧ್ಯಾತ್ಮ’ ಕ್ಷೇತ್ರದಲ್ಲಿ ಬರವಣಿಗೆ ಅಥವಾ ಕಾರ್ಯವನ್ನು ಮಾಡುವ ೪ ವ್ಯಕ್ತಿಗಳಿಗೆ ನೀಡಲಾಗಿದೆ. ಹರಿಯಾಣಾದ ಡಾ. ಸುಕುಮಾ ಆಚಾರ್ಯ, ಲಡಾಖ್‌ನ ಕುಶೋಕ ಥಿಕಸೆ ನವಾಂಗ ಚಂಬಾ ಸ್ಟೆನ್‌ಜಿನ್‌ ಇವರಿಗೆ ‘ಪದ್ಮಶ್ರೀ’ ಮತ್ತು ತೆಲಂಗಾಣಾ ರಾಜ್ಯದ ಸ್ವಾಮಿ ಚಿನ್ನಾ ಜಿಯರ್‌ ಮತ್ತು ಕಮಲೇಶ ಡಿ. ಪಟೇಲ್‌ ಇವರಿಗೆ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಲಾಗಿದೆ. ೧೯೪೫ ನೇ ಇಸವಿಯಿಂದ ಈ ಪ್ರಶಸ್ತಿ ನೀಡಲು ಆರಂಭಿಸಲಾಯಿತು; ಆದರೆ ‘ಜನ್ಮದಿಂದ ಮುಸಲ್ಮಾನ ಮತ್ತು ಕರ್ಮದಿಂದ ಕ್ರೈಸ್ತ’ರಿರುವ ನೆಹರೂರಂತಹ ಪ್ರಧಾನಮಂತ್ರಿ ಈ ಹಿಂದೂಗಳ ದೇಶಕ್ಕೆ ಲಭಿಸಿದ್ದರಿಂದ ಈ ಪ್ರಶಸ್ತಿಗಳಲ್ಲಿ ಈ ಹಿಂದುಸ್ಥಾನದ ಆತ್ಮವಾಗಿರುವ ಅಧ್ಯಾತ್ಮದ ಸಮಾವೇಶವಿರಲಿಲ್ಲ; ಆದರೆ ಈಗ ಕಾಲವು ಬದಲಾಗಿದೆ. ಈ ವರ್ಷ ೪ ಜನರಿಗೆ ನೀಡಿದ ಅಧ್ಯಾತ್ಮ ಕ್ಷೇತ್ರದ ಪ್ರಶಸ್ತಿಗಳಿಂದಾಗಿ ಭಾರತ ದೇಶದ ಮೂಲ ಸಂಸ್ಕೃತಿ ಮತ್ತು ನಿಜವಾದ ಪರಿಚಯವಿರುವ ಆಧ್ಯಾತ್ಮಿಕ ಕ್ಷೇತ್ರದ ಮಹತ್ವವು ಆಂಗ್ಲಮಾನಸಿಕತೆಯ ಹಿಂದೂಸಮಾಜದವರೆಗೆ ಈ ನಿಮಿತ್ತವಾದರೂ ತಲುಪಲು ಸಹಾಯವಾಗುವುದು. ಪಠ್ಯಕ್ರಮದಿಂದ ಹಿಂದೂಗಳ ಸತ್ಯ ಇತಿಹಾಸವನ್ನು ಜನರವರೆಗೆ ತಲುಪಿಸಲು ಶ್ರಮಿಸುವ ಡಾ. ಎಸ್‌.ಎಲ್‌ ಭೈರಪ್ಪ, ಸಮಾಜ ಸೇವಕಿ ಸುಧಾ ಮೂರ್ತಿ, ಕೃಷಿ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆಗೈದ ಖಾದರ ವಲಿ ದುಡೆಕುಲಾ ಮುಂತಾದವರಿಗೆ ದೊರಕಿದ ಪ್ರಶಸ್ತಿಗಳು ಮನಸ್ಸಿಗೆ ಸಂತಸ ನೀಡುತ್ತವೆ. ಖ್ಯಾತ ತಬಲಾ ವಾದಕರಾದ ಝಾಕೀರ್‌ ಹುಸೇನ್, ಖ್ಯಾತ ಗಾಯಕಿ ಸುಮನ ಕಲ್ಯಾಣಪುರ ಇವರಿಗೂ ಪ್ರಶಸ್ತಿ ದೊರಕಿದುದರಿಂದ ಈ ಪ್ರಶಸ್ತಿಗಳ ಗೌರವವನ್ನು ಹೆಚ್ಚಿಸಲು ಸಹಾಯವಾಗುತ್ತದೆ. ಕಲೆ, ಸಾಹಿತ್ಯ, ವಿಜ್ಞಾನ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಕಾರ್ಯಸಾಧನೆಯನ್ನು ಮಾಡಿದ ಜನರ ಸಂಖ್ಯೆಯು ಭಾರತದಲ್ಲಿ ಬಹಳಷ್ಟಿದೆ. ಇವುಗಳಲ್ಲಿ ಹೆಚ್ಚಿನ ಜನರು ವ್ರತಸ್ಥ ಜೀವನವನ್ನು ನಡೆಸಿ ಆಯಾ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಮಾಡಿಕೊಂಡಿದ್ದಾರೆ. ಖಾದರ ವಲಿ ದುಡೆಕುಲಾ ಇವರ ಉದಾಹರಣೆಯನ್ನು ಉಲ್ಲೇಖಿಸುವುದಾದರೆ, ಅವರು ಅಮೇರಿಕಾದಲ್ಲಿ ಕೈತುಂಬ ಸಂಬಳವನ್ನು ಪಡೆಯುವ ನೌಕರಿ ಮಾಡುತ್ತಿದ್ದರು.೧೯೮೬-೮೭ ಈ ಕಾಲಾವಧಿಯಲ್ಲಿ ಹುಡುಗಿಯೊಬ್ಬಳು ಆರನೇ ವಯಸ್ಸಿನಲ್ಲಿ ಪ್ರಾಯಕ್ಕೆ ಬಂದ ಬಗ್ಗೆ ಅಧ್ಯಯನ ಮಾಡುವಾಗ ಅವಳಿಗೆ ನಿರೋಗಿ ಜೀವನವನ್ನು ನಡೆಸುವ ಆವಶ್ಯಕತೆ ಮತ್ತು ಅದಕ್ಕಾಗಿ ಆರೋಗ್ಯಕರ ಧಾನ್ಯಗಳ ಸೇವನೆಯ ಮಹತ್ವ ತಿಳಿಯಿತು. ಅನಂತರ ಅವಳು ಭೋಗವಸ್ತುಗಳ ಜೀವನವನ್ನು ತ್ಯಜಿಸಿ ‘ನಿರೋಗಿ ಸಮಾಜ’ವನ್ನು ನಿರ್ಮಿಸಲು ಧಾನ್ಯಗಳ ಸಂಶೋಧನೆ ನಡೆಸಿದಳು. ಸಮಾಜಕ್ಕಾಗಿ ನಿಷ್ಕಾಮ ಭಾವದಿಂದ ಕಾರ್ಯವನ್ನು ಮಾಡುವ ಇಂತಹ ವ್ಯಕ್ತಿಗಳನ್ನು ಸಮಾಜದೆದುರು ತಂದು ಅವರನ್ನು ಸನ್ಮಾನಿಸುವುದು, ಸರಕಾರದ ಕರ್ತವ್ಯವಾಗಿದೆ. ಆದುದರಿಂದ ಇಂತಹವರಿಗೆ ಪ್ರಶಸ್ತಿ ದೊರಕುವುದು ಸಾಮಾಜಿಕ ದೃಷ್ಟಿಯಿಂದ ನಿಜವಾಗಿಯೂ ಆನಂದದಾಯಕ ವಿಷಯವಾಗಿದೆ.

ಇಂತಹವರಿಗೆ ಪ್ರಶಸ್ತಿ ಏಕೆ ?

ಜಗದ್ವಿಖ್ಯಾತ ಗಾಯಕಿ ಲತಾ ಮಂಗೇಶಕರ ಅಥವಾ ರಾಕೇಟ್‌ ತಂತ್ರಜ್ಞಾನದ ವಿಜ್ಞಾನಿ ನಂಬಿ ನಾರಾಯಣ ಇವರಂತಹ ವ್ಯಕ್ತಿಗಳಿಗೆ ನೀಡಲಾದ ಪ್ರಶಸ್ತಿಯು ಆ ಪ್ರಶಸ್ತಿಯ ಗೌರವವನ್ನು ಕಾಪಾಡುತ್ತದೆ; ಅಷ್ಟೇ ಅಲ್ಲದೇ ಹೆಚ್ಚಿಸುತ್ತದೆ ಸಹ. ಕಾಂಗ್ರೆಸ್‌ ಅಥವಾ ಅನಂತರದ ಕಾಲದಲ್ಲಿಯೂ ಕೆಲವು ಚಲನಚಿತ್ರ ನಟರು ಅಥವಾ ದೇಶವಿರೋಧಿ ವಿಚಾರಸರಣಿ ಇರುವವರಿಗೆ ಪ್ರಶಸ್ತಿಯನ್ನು ನೀಡಲಾಯಿತು. ಅವರ ಹೆಸರುಗಳನ್ನು ಓದಿದಾಗ ‘ರಾಷ್ಟ್ರದ ಅಥವಾ ಸಮಾಜದ ಅಭಿವೃದ್ಧಿಯಲ್ಲಿ ಇವರ ಪಾತ್ರವೇನಿದೆ ?’, ಎಂದು ಜನಸಾಮಾನ್ಯರ ಮನಸ್ಸಿನಲ್ಲಿ ಪ್ರಶ್ನೆ ಬರದೇ ಇರಲಾರದು. ಈ ವರ್ಷ ಪ್ರಶಸ್ತಿ ದೊರಕಿದ ವ್ಯಕ್ತಿಗಳ ಹೆಸರುಗಳ ಪಟ್ಟಿಯನ್ನು ನೋಡಿದರೆ ಕೆಲವು ಹೆಸರುಗಳು ಜನಸಾಮಾನ್ಯರ ಮನಸ್ಸನ್ನು ಚುಚ್ಚುವಂತಿದೆ. ಅವುಗಳಲ್ಲಿ ಓರ್ವ ಚಲನಚಿತ್ರ ನಟಿ ರವಿನಾ ಟಂಡನ್‌ ಇದ್ದಾರೆ. ಯಾವ ಮಾನದಂಡದಿಂದ ರವಿನಾ ಟಂಡನ್‌ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು ? ನಟಿಯಾಗಿದ್ದರೂ ಟಂಡನ್‌ರ ಕಾರ್ಯಸಾಧನೆ ಅಷ್ಟರಮಟ್ಟಿಗಿತ್ತು. ಅದಕ್ಕಿಂತಲೂ ಉತ್ತಮ ನಟನೆಯನ್ನು ಮತ್ತು ಸಾಮಾಜಿಕ ಅರಿವನ್ನಿಟ್ಟುಕೊಂಡು ಕಲೆಯನ್ನು ಪ್ರಸ್ತುತ ಪಡಿಸುವ ಒಬ್ಬ ಒಳ್ಳೆಯ ಕಲಾವಿದನಿಗೆ ಈ ಪ್ರಶಸ್ತಿಯನ್ನು ನೀಡಿದ್ದರೆ, ಸಮಾಜದಲ್ಲಿ ಒಳ್ಳೆಯ ಸಂದೇಶವನ್ನು ತಲುಪಿಸಬಹುದಿತ್ತು.

ಪದ್ಮಭೂಷಣವನ್ನು ಉಚ್ಚ ಕೋಟಿಯ ವಿಶಿಷ್ಟ ಸೇವೆಗಾಗಿ ಮತ್ತು ಪದ್ಮವಿಭೂಷಣ ಪ್ರಶಸ್ತಿಯನ್ನು ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ; ಆದರೆ ಇಲ್ಲಿಯವರೆಗೆ ಕೆಲವರನ್ನು ಹೊರತುಪಡಿಸಿ ಈ ಪ್ರಶಸ್ತಿಯನ್ನು ಚಲನಚಿತ್ರ ಕೆಲವು ನಟರಿಗೆ ನೀಡಲಾಗಿದೆ. ಅವರಲ್ಲಿ ಶಾಹರೂಖ ಖಾನ್‌ ಅಥವಾ ಆಮೀರ್‌ ಖಾನ್‌ ಇವರ ಸಮಾವೇಶವಿದೆ. ಇಲ್ಲಿಯವರೆಗೆ ಹೆಚ್ಚಿನ ಚಲನಚಿತ್ರ ಕಲಾವಿದರಿಗೆ ದೊರಕಿದ ಪ್ರಶಸ್ತಿ ಎಂದರೆ ಆ ಪ್ರಶಸ್ತಿಯ ಅವಮಾನವಾಗುತ್ತದೆ. ಹಿಂದಿನ ಇತಿಹಾಸವನ್ನು ನೋಡಿಯಾದರೂ ಇಂದಾದರೂ ಚಲನಚಿತ್ರ ಕ್ಷೇತ್ರದ ಜನರಿಗೆ ಪ್ರಶಸ್ತಿಯನ್ನು ನೀಡುವಾಗ ಕೇಂದ್ರ ಸರಕಾರವು ಕಠಿಣ ಮಾನದಂಡಗಳನ್ನು ವಿಧಿಸುವುದು ಅಪೇಕ್ಷಿತವಿತ್ತು.

ಭಾರತದ ಸರ್ವೋಚ್ಚ ಪ್ರಶಸ್ತಿ ‘ಭಾರತರತ್ನ’ ಅನಂತರದ ಇನ್ನೊಂದು ಕ್ರಮಾಂಕದ ದೊಡ್ಡ ಪ್ರಶಸ್ತಿ ಎಂದರೆ ‘ಪದ್ಮವಿಭೂಷಣ’ ವಾಗಿದೆ. ಈ ವರ್ಷ 2 ‘ಮರಣೋತ್ತರ ಪದ್ಮವಿಭೂಷಣ’ ಪ್ರಶಸ್ತಿಗಳನ್ನು ನೀಡಲಾಯಿತು. ಅವುಗಳ ಪೈಕಿ ಒಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖಂಡ ಮುಲಾಯಮಸಿಂಹ ಯಾದವ ಇವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಮುಲಾಯಮ್‌ಸಿಂಹ ಇವರು ಅಮಾಯಕ ಕಾರಸೇವಕರ ಮೇಲೆ ಗುಂಡು ಹಾರಿಸುವ ಆದೇಶ ನೀಡಿ ಅವರ ಮೃತದೇಹಗಳನ್ನು ಶರಯೂ ನದಿಯಲ್ಲಿ ಎಸೆದಿದ್ದರು. ಅವರಿಗೆ ಈ ಪ್ರಶಸ್ತಿಯನ್ನು ನೀಡುವುದು, ಈ ಲಕ್ಷಾಂತರ ಹಿಂದುತ್ವನಿಷ್ಠರ ಗಾಯಕ್ಕೆ ಬರೆ ಎಳೆದಂತಾಯಿತು. ಮುಲಾಯಮ್‌ಸಿಂಹ ಇವರು ಸಮಾಜ ಮತ್ತು ರಾಷ್ಟ್ರಕ್ಕಾಗಿ ಯಾವ ಮಹತ್ವದ ಕಾರ್ಯಸಾಧನೆಯನ್ನು ಮಾಡಿದ್ದಾರೆ ?ಅವರ ಆಡಳಿತಾವಧಿಯಲ್ಲಿ ಉತ್ತರಪ್ರದೇಶವು ಎಲ್ಲ ಕ್ಷೇತ್ರಗಳಲ್ಲಿ ಅವನತಿಗೆ ಹೋಯಿತು. ಭ್ರಷ್ಟ ಮತ್ತು ರಾಷ್ಟ್ರದ್ರೋಹಿ ಕಾರ್ಯಾಚರಣೆಗಳನ್ನು ಮಾಡುವ ಮುಲಾಯಮ್‌ಸಿಂಹ ಯಾದವ ಇವರಿಗೆ ಅವರು ಜೀವಂತವಿರುವಾಗಲೇ ಶಿಕ್ಷೆಯನ್ನು ನೀಡುವ ಬದಲು ಅವರಿಗೆ ‘ಮರಣೋತ್ತರ ಪದ್ಮವಿಭೂಷಣ’ ಪ್ರಶಸ್ತಿಯನ್ನು’ ನೀಡುವುದು, ಇದು ಆಕ್ರೋಶವನ್ನುಂಟು ಮಾಡುವುದಾಗಿದೆ. ಒಟ್ಟಿನಲ್ಲಿ ಈ ವರ್ಷ ಉತ್ತಮ ವ್ಯಕ್ತಿಗಳಿಗೆ ಪ್ರಶಸ್ತಿಯನ್ನು ನೀಡಿರುವುದು ಸಂತಸ ತಂದಿದ್ದರೂ, ರಾಷ್ಟ್ರಕ್ಕೆ ಅಪಾಯಕಾರಿ ಮತ್ತು ರಾಷ್ಟ್ರ ಅಥವಾ ಸಮಾಜಕ್ಕಾಗಿ ಯಾವುದೇ ಮಹತ್ವದ ಕಾರ್ಯಸಾಧನೆಯನ್ನು ಮಾಡದಿರುವ ಜನರಿಗೆ ಗೌರವ ಸಲ್ಲುವುದನ್ನು ಜನಸಾಮಾನ್ಯರು ಅರಗಿಸಿಕೊಳ್ಳುವುದಿಲ್ಲ !