ನಾವು ನಮ್ಮ ವಾಹನದಿಂದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಮೂಲಕ ಪ್ರಯಾಣ ಮಾಡುತ್ತಿರುವಾಗ ನಮಗೆ ಅಲ್ಲಿನ ರಸ್ತೆತೆರಿಗೆ (ಟೋಲ್) ಚೌಕಿಯಲ್ಲಿ ರಸ್ತೆತೆರಿಗೆಯ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಈ ಶುಲ್ಕವನ್ನು ಕೊಡುವುದಕ್ಕಾಗಿ ಈಗ ‘ಫಾಸ್ಟಟ್ಯಾಗ್’ ಸೌಲಭ್ಯವನ್ನು ವಿವಿಧ ಸಂಸ್ಥೆಗಳು ಪ್ರಾರಂಭಿಸಿವೆ. (‘ಫಾಸ್ಟಟ್ಯಾಗ್’ನಿಂದ ವಾಹನಗಳಿಗೆ ರಸ್ತೆ ಟೋಲ್ ಬೂಥ್‌ಗಳಲ್ಲಿ (ಟೋಲ್ ಚೌಕಿ) ನಗದು ರೂಪದಲ್ಲಿ ಶುಲ್ಕ ಕಟ್ಟಬೇಕಾಗಿಲ್ಲ. ಇದರಿಂದ ವಾಹನದ ಇಂಧನ ಮತ್ತು ಪ್ರಯಾಣಿಕರ ಸಮಯ ಎರಡೂ ಉಳಿತಾಯವಾಗುತ್ತದೆ. ‘ಫಾಸ್ಟಟ್ಯಾಗ್’ ಖಾತೆಯಿಂದ ರಸ್ತೆ ತೆರಿಗೆಯ ಶುಲ್ಕ ‘ಆನ್‌ಲೈನ್’ನಲ್ಲಿ ಕಡಿತವಾದ ನಂತರ ಸಂಬಂಧ ಪಟ್ಟ ವಾಹನಚಾಲಕನಿಗೆ ಅದರ ಬಗ್ಗೆ ಒಂದು ಕಿರುಸಂದೇಶ (ಎಸ್.ಎಮ್.ಎಸ್.) ಅವನ ಮೊಬೈಲ್‌ಗೆ ಬರುತ್ತದೆ.)
ಬಹಳಷ್ಟು ಸಲ ನಾವು ನಮ್ಮ ವಾಹನವನ್ನು ಯಾವುದೇ ರಸ್ತೆತೆರಿಗೆ ಚೌಕಿಯಿಂದ ಒಯ್ಯದಿದ್ದರೂ ಅಥವಾ ಆ ಮಾರ್ಗದಿಂದ ನಾವು ಹೋಗದಿದ್ದರೂ ‘ಫಾಸ್ಟಟ್ಯಾಗ್’ನಿಂದ ರಸ್ತೆತೆರಿಗೆಯ ಮೊತ್ತ ನಮ್ಮ ‘ಫಾಸ್ಟಟ್ಯಾಗ್’ ಖಾತೆಯಿಂದ ಕಡಿತವಾಗಿರುವ ಒಂದು ಕಿರುಸಂದೇಶ (ಎಸ್.ಎಮ್.ಎಸ್.) ಮೊಬೈಲ್‌ಗೆ ಬರುವುದು ಘಟಿಸುತ್ತದೆ. ವಾಹನ ಮಾಲೀಕರು ಈ ಕಿರುಸಂದೇಶವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ನಾವೇನಾದರು ರಸ್ತೆತೆರಿಗೆ ಚೌಕಿಯಿಂದ ನಮ್ಮ ವಾಹನವನ್ನು ಕೊಂಡೊಯ್ಯದಿದ್ದರೂ ಇಂತಹ ಸಂದೇಶದ ಬಂದರೆ ಅಥವಾ ನಮ್ಮ ಖಾತೆಯಿಂದ ರಸ್ತೆತೆರಿಗೆ ಶುಲ್ಕ ಕಡಿತಗೊಂಡಿದ್ದರೆ ಅದರ ಕಡೆ ನಿರ್ಲಕ್ಷಿಸಬಾರದು. ಈ ರೀತಿಯ ಘಟನೆಗಳಾಗುತ್ತಿರುವುದು ಅನೇಕಬಾರಿ ಗಮನಕ್ಕೆಬಂದಿದೆ. ಈ ರೀತಿಸುಳ್ಳು ‘ಫಾಸ್ಟಟ್ಯಾಗ್’ ಅನ್ನು ನಮ್ಮ ಹೆಸರಿಗೆ ತೋರಿಸಿ ನಮಗೆ ಸಂಬಂಧವಿಲ್ಲದ ವಾಹನವು ಒಂದು ರಸ್ತೆತೆರಿಗೆ ಚೌಕಿ ದಾಟಿ ಹೊಗಿರುವಂತೆ ತೋರಿಸಲ್ಪಡುತ್ತದೆ. ಈ ಮಾಧ್ಯಮದಿಂದ ಯಾರಾದರೂ ಅಪರಾಧಿಯು ಅಪರಾಧವನ್ನು ಮಾಡಿ ನಾವು ನಿಷ್ಕಾರಣ ಪೊಲೀಸರ ಜಾಲದಲ್ಲಿ ಸಿಲುಕಬಹುದು. ಇಂತಹ ಕೃತ್ಯಗಳು ಗಮನಕ್ಕೆ ಬಂದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿರಿ.
– ನ್ಯಾಯವಾದಿ ನೀಲೇಶ ಸಾಂಗೋಲಕರ, ನ್ಯಾಯವಾದಿ ಸಂಘಟಕರು, ಹಿಂದು ವಿಧಿಜ್ಞ ಪರಿಷದ್ (೧೮.೨.೨೦೨೨)