ಪಾಕಿಸ್ತಾನ ವಿಭಜನೆಯ ಹೊಸ್ತಿಲಿನಲ್ಲಿ ?

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

೧. ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರದೇಶದ ಮೇಲೆ ಹಕ್ಕು ಹೇಳುತ್ತಿರುವ ಅಫ್ಘಾನಿಸ್ತಾನ !

‘ಪಾಕಿಸ್ತಾನದಲ್ಲಿ ಗೃಹಯುದ್ಧಆರಂಭವಾಗಲಿದೆಯೇ ? ಮತ್ತು ಪಾಕಿಸ್ತಾನದ ಹೊರಗಿನಿಂದ ‘ಅಫ್ಘಾನಿಸ್ತಾನ ತಾಲಿಬಾನ’ ಮತ್ತು ಪಾಕಿಸ್ತಾನದ ಗಡಿಯೊಳಗಿನಿಂದ ‘ತೆಹರಿಕ್-ಎ-ತಾಲಿಬಾನ ಪಾಕಿಸ್ತಾನ’ ಇವರಿಬ್ಬರು ಒಟ್ಟಾಗಿ ಪಾಕಿಸ್ತಾನವನ್ನು ಕೊರೆದು ಟೊಳ್ಳು ಮಾಡುವರೇ ? ಹಾಗೆಯೇ ‘ನಾರ್ಥ್ ವೆಸ್ಟ್ ಫ್ರಂಟೀಯರ್ ಪ್ರಾವಿನ್ಸ್’ (ವಾಯವ್ಯ ಗಡಿನಾಡು ಪ್ರಾಂತ್ಯ) ಎಂದು ಹೇಳುವ ಖೈಬರ್ ಪಖ್ತುನ್ಖ್ವಾ, ವಝೀರೀಸ್ತಾನ ಈ ಪ್ರದೇಶಗಳು ಪಾಕಿಸ್ತಾನದಿಂದ ಬೇರ್ಪಟ್ಟು ಅಫ್ಘಾನಿಸ್ತಾನಕ್ಕೆ ಸೇರಲಿವೆಯೇ ?’,ಎಂಬ ಅನೇಕ ಪ್ರಶ್ನೆಗಳು ಮುಂದೆ ಬರುತ್ತಿವೆ. ೨ ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ತಾಲಿಬಾನಿನ ರಾಜ್ಯ ಬಂದಾಗ ತಾಲಿಬಾನ ‘ಡ್ಯುರಂಟ್ ರೇಖೆ’ಯನ್ನು (ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಗಡಿರೇಖೆ) ನಾವು ಒಪ್ಪುವುದಿಲ್ಲ ಎಂದು ಅಫ್ಘಾನಿಸ್ತಾನ ಹೇಳಿತ್ತು. ಅಫ್ಘಾನಿಸ್ತಾನಕ್ಕೆ ತನ್ನ ಇನ್ನೂ ಒಂದು ಪ್ರದೇಶ ಪಾಕಿಸ್ತಾನದಲ್ಲಿದೆ ಎಂದೆನಿಸುತ್ತದೆ. ಪಾಕಿಸ್ತಾನದ ಖೈಬರ ಪಖ್ತೂನ್ಖ್ವಾ ಪ್ರದೇಶದಿಂದಲೇ ಇಮ್ರಾನ್ ಖಾನ್ ಆರಿಸಿ ಬಂದಿದ್ದಾರೆ. ಈ ಪ್ರದೇಶದಲ್ಲಿ ಪಠಾಣ ಮತ್ತು ಪಖ್ತುನ (ಪಶ್ತುನ) ಜನರು ವಾಸಿಸುತ್ತಾರೆ. ಆದುದರಿಂದ ಈ ಪ್ರದೇಶ ಅಫ್ಘಾನಿಸ್ತಾನಕ್ಕೆ ಸೇರಬೇಕು ಎಂದು ಅಫ್ಘಾನಿಸ್ತಾನಕ್ಕೆ ಅನಿಸುತ್ತದೆ; ಈಗ ಈ ಜನರೇ ಅಲ್ಲಿ ತಾಲೀಬಾನಿಗಳಾಗಿ ಆಡಳಿತ ನಡೆಸುತ್ತಿದ್ದಾರೆ. ಈ ರೀತಿ ‘ಎಲ್ಲ ಪಠಾಣರು ಒಂದೇ ದೇಶದಲ್ಲಿರಬೇಕು’, ಎಂದವರು ಬಯಸುತ್ತಾರೆ. ಆದರೆ ಪಾಕಿಸ್ತಾನಕ್ಕೆ ಇದು ಒಪ್ಪಿಗೆಯಿಲ್ಲ; ಏಕೆಂದರೆ ಈ ಪ್ರದೇಶ ಪಾಕಿಸ್ತಾನದಿಂದ ಬೇರ್ಪಟ್ಟರೆ, ಪಾಕಿಸ್ತಾನದ ತುಂಡುಗಳಾಗುವುದು ಮಾತ್ರವಲ್ಲ, ‘ತೆಹರಿಕ್-ಎ-ತಾಲಿಬಾನ ಪಾಕಿಸ್ತಾನ’ ಈ ಗುಂಪಿನ ನೆಲೆ, ತರಬೇತಿ ಕೇಂದ್ರಗಳು, ಆಡಳಿತದ ಶಿಬಿರಗಳು ಅಫ್ಘಾನಿಸ್ತಾನದಲ್ಲಿಯೇ ಇವೆ. ಅಲ್ಲಿಂದ ಅವರು ಪಾಕಿಸ್ತಾನದ ಖೈಬರ ಪಖ್ತುನ್ಖ್ವಾದ ಮೇಲೆ ಉಗ್ರವಾದಿ ದಾಳಿಗಳನ್ನು ಮಾಡುತ್ತಾರೆ. ಅವರು ಪಾಕಿಸ್ತಾನದ ಸೈನ್ಯ ಮತ್ತು ಅರೆಸೇನಾಪಡೆಯ ಮೇಲೆ ದಾಳಿ ಮಾಡುತ್ತಾರೆ. ಇತ್ತೀಚೆಗೆ ಈ ಪ್ರದೇಶದಲ್ಲಿ ಹಿಂಸಾಚಾರದ ಪ್ರಮಾಣ ಹೆಚ್ಚಾಗಿದ್ದು ಪಾಕಿಸ್ತಾನಕ್ಕೆ ತುಂಬಾ ಹಾನಿಯಾಗಿದೆ.

೨. ‘ತೆಹರಿಕ್-ಎ-ತಾಲಿಬಾನ ಪಾಕಿಸ್ತಾನ’ದದಾಳಿ ಮುಂದೆ ಅಸಹಾಯಕ ಪಾಕಿಸ್ತಾನ !

ಈ ಹಿಂದೆ ಪಾಕಿಸ್ತಾನದ ಸುಮಾರು ಶೇ. ೮೫ ರಷ್ಟು ಸೈನ್ಯ ಭಾರತ-ಪಾಕಿಸ್ತಾನ ಗಡಿಯಲ್ಲಿತ್ತು ಮತ್ತು ಅಫ್ಘಾನಿಸ್ತಾನ-ಪಾಕ್ ಗಡಿಯಲ್ಲಿ ಪಾಕಿಸ್ತಾನದ ಕೇವಲ ೧ ‘ಕೋರ್’ (ತುಕಡಿ) ಮಾತ್ರ ಇತ್ತು. ‘ಅಫ್ಘಾನಿಸ್ತಾನದ ಸೈನ್ಯ ಮತ್ತು ತಾಲಿಬಾನಿನ ಜನರು ಪಖ್ತುನ್ಖ್ವಾ ಪ್ರದೇಶವನ್ನು ವಶಪಡಿಸಿಕೊಳ್ಳಬಹುದು’, ಎಂದು ಪಾಕಿಸ್ತಾನಕ್ಕೆ ಭಯವಿದೆ. ಆದುದರಿಂದ ಈಗ ಪಾಕಿಸ್ತಾನ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಸೈನ್ಯವನ್ನು ನಿಲ್ಲಿಸಿದೆ. ‘ಡ್ಯುರಂಟ್ ರೇಖೆ’ಯ ಮೇಲೆ ಪಾಕಿಸ್ತಾನಿ ಸೈನ್ಯ ಬೇಲಿಯನ್ನು ಹಾಕಲು ಪ್ರಾರಂಭಿಸಿತ್ತು; ಆದರೆ ಅಫ್ಘಾನಿಸ್ತಾನ ಅನೇಕ ಬಾರಿ ಆಕ್ರಮಣ ಮಾಡಿ ಆ ಬೇಲಿಯನ್ನು ಮುರಿದು ಹಾಕಿತು. ಅದು ಪಾಕಿಸ್ತಾನದ ಸೇನೆಗೆ ಅದನ್ನು ಹಾಕಲು ಬಿಡಲೆ ಇಲ್ಲ. ‘ತೆಹರಿಕ್-ಎ-ತಾಲಿಬಾನ ಪಾಕಿಸ್ತಾನ’ ಇದು ಪಾಕಿಸ್ತಾನ ಸೈನ್ಯದ ಮೇಲೆ ದಾಳಿ ಮಾಡುತ್ತಿರುತ್ತದೆ. ಆದುದರಿಂದ ಪಾಕಿಸ್ತಾನ ತನ್ನ ಮೇಲಿನ ದಾಳಿಗಳನ್ನು ನಿಲ್ಲಿಸಬೇಕೆಂದು ಅಫ್ಘಾನಿಸ್ತಾನಕ್ಕೆ ಹೇಳಿದೆ; ಆದರೆ ಅಫ್ಘಾನಿಸ್ತಾನ ಇದನ್ನು ಒಪ್ಪಿಲ್ಲ.

೩. ಗೃಹಯುದ್ಧ ಮತ್ತು ಆರ್ಥಿಕ ಬಿಕ್ಕಟ್ಟಿನಿಂದಗಂಭೀರ ಸ್ಥಿತಿಯಲ್ಲಿರುವ ಪಾಕಿಸ್ತಾನ

ಈ ಹಿಂದೆ ‘ತೆಹರಿಕ್-ಎ-ತಾಲಿಬಾನ ಪಾಕಿಸ್ತಾನ’ ಮತ್ತು ಪಾಕಿಸ್ತಾನ ಸೈನ್ಯದ ನಡುವೆ ಯುದ್ಧವಿರಾಮವಾಗಿತ್ತು; ಆದರೆ ಅದು ಡಿಸೆಂಬರ್ನಲ್ಲಿ ಮುಗಿಯಿತು. ಅನಂತರ ಪುನಃ ‘ತೆಹರಿಕ್-ಎ-ತಾಲಿಬಾನ ಪಾಕಿಸ್ತಾನ’ದಿಂದ ಪಾಕಿಸ್ತಾನದ ಮೇಲೆಆಕ್ರಮಣಗಳು ಆರಂಭವಾಗಿವೆ. ಹಾಗೆ ನೋಡಿದರೆ, ‘ತೆಹರಿಕ್-ಎ-ತಾಲಿಬಾನ ಪಾಕಿಸ್ತಾನ’ ಇದೊಂದೇ ಅಂತಹ ಗುಂಪಲ್ಲ, ಪಾಕಿಸ್ತಾನದಿಂದ ಬೇರೆಯಾಗಲು ಇಚ್ಛಿಸುವ ಇಂತಹ ಅನೇಕಗುಂಪುಗಳಿವೆ. ಇಲ್ಲಿ ಅವುಗಳಲ್ಲಿನ ಎರಡನ್ನೇ ಉಲ್ಲೇಖಿಸುತ್ತಿದ್ದೇವೆ.

ಬಲೂಚಿಸ್ತಾನದಲ್ಲಿ ಸ್ವಾತಂತ್ರ್ಯ ಚಳುವಳಿ ನಡೆಯುತ್ತಿದೆ. ಬಲುಚಿಸ್ತಾನಕ್ಕೆ ಪ್ರತ್ಯೇಕ ರಾಜ್ಯ ಬೇಕಾಗಿದೆ. ೧೯೪೭ ರಲ್ಲಿ ಬಲುಚಿಸ್ತಾನ ಭಾರತದಲ್ಲಿ ವಿಲೀನವಾಗುವ ಇಚ್ಛೆಯನ್ನು ವ್ಯಕ್ತಪಡಿಸಿತ್ತು, ಆದರೆ ಗಡಿ ಒಂದಾಗಿರದ ಕಾರಣ ಅದಕ್ಕೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿಯೂ ‘ಜಿಓ ಸಿಂಧ್’ ಎಂಬ ಒಂದು ಸ್ವಾತಂತ್ರ್ಯ ಚಳುವಳಿ ನಡೆದಿದೆ. ಪಾಕಿಸ್ತಾನದಲ್ಲಿ ಒಂದೆಡೆ ದೊಡ್ಡ ಪ್ರಮಾಣದಲ್ಲಿ ಗೃಹಯುದ್ಧ ನಡೆದಿದೆ ಮತ್ತು ಇನ್ನೊಂದೆಡೆ ಅವರ ಅರ್ಥವ್ಯವಸ್ಥೆ ತುಂಬಾ ಬಿಕ್ಕಟ್ಟಿನಲ್ಲಿದೆ. ಇತ್ತೀಚಿನ ವಾರ್ತೆಗನುಸಾರ ಪಾಕಿಸ್ತಾನ ಹಣ ಉಳಿತಾಯ ಮಾಡಲು ಸಾಯಂಕಾಲದ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಲು ನಿರ್ಧರಿಸಿದೆ. ಈ ಗೃಹಯುದ್ಧದಿಂದಾಗಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ದೊಡ್ಡ ಘರ್ಷಣೆ ನಡೆದಿದೆ.

೪. ಅಫ್ಘಾನಿಸ್ತಾನದ ತಾಲೀಬಾನಸರಕಾರದಿಂದ ಪಾಕಿಸ್ತಾನಕ್ಕೆ ಹಾನಿ !

ತಾಲೀಬಾನ ನಿರ್ಮಾಣವಾದಾಗ ಅಫ್ಘಾನಿಸ್ತಾನದಲ್ಲಿ ತಾಲೀಬಾನಿ ಸರಕಾರ ಬಂದಿರುವುದರಿಂದ ಈಗ ಭಾರತ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಿದರೆ, ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನದಲ್ಲಿ ಒಳಗೆ ಹೋಗಿ ಭಾರತದೊಂದಿಗೆ ಯುದ್ಧವನ್ನು ಮಾಡಲು ಸಾಧ್ಯವಿದೆ ಎಂದು ಅನಿಸಿತ್ತು. ಏಕೆಂದರೆ ಪಾಕಿಸ್ತಾನದ ಗಡಿಯಲ್ಲಿ ಪಾಕಿಸ್ತಾನದ ವಿಸ್ತೀರ್ಣ ಕೇವಲ ೧೫೦ ರಿಂದ ೨೦೦ ಕಿಲೋಮೀಟರ್ಗಳಷ್ಟೆ ಇದೆ. ಈಗ ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನದಲ್ಲಿ ಯುದ್ಧಕ್ಕೆ ಜಾಗ ಸಿಗುವ ಬದಲು ತಾಲಿಬಾನಿಗೇ ಪಾಕಿಸ್ತಾನದಲ್ಲಿ ಯುದ್ಧಕ್ಕೆ ಜಾಗ ಸಿಕ್ಕಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ ಸರಕಾರ ಬಂದಾಗಿನಿಂದ ಪಾಕಿಸ್ತಾನಕ್ಕೆ ಲಾಭವಾಗುವ ಬದಲು ದೊಡ್ಡ ಪ್ರಮಾಣದಲ್ಲಿ ಹಾನಿಯೇ ಆಗುತ್ತಿದೆ. ತಾಲೀಬಾನಿನ ರಾಜ್ಯ ಬಂದ ನಂತರ ನಮ್ಮ ಬಲ ತುಂಬಾ ಹೆಚ್ಚಾಗಬಹುದು, ಅರ್ಥವ್ಯವಸ್ಥೆ ಸುದೃಢವಾಗಬಹುದು ಮತ್ತು ನಾವು ಜಗತ್ತಿನಲ್ಲಿ ಮಹತ್ವದ ದೇಶವಾಗುವೆವು, ಎಂದು ಪಾಕಿಸ್ತಾನಕ್ಕೆ ಅನಿಸಿತ್ತು; ಆದರೆ ಹಾಗೇನೂ ಆಗಲಿಲ್ಲ. ಅಲ್ಲಿ ಕೇವಲ ಹಿಂಸಾಚಾರ ಹೆಚ್ಚಾಗುತ್ತಿರುವುದರಿಂದ ಪಾಕಿಸ್ತಾನದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಆದುದರಿಂದ ‘ಅಫ್ಘಾನಿಸ್ತಾನದ ತಾಲೀಬಾನ ನೀಡಿದ ಬೆದರಿಕೆಯಲ್ಲಿ ಬಹಳಷ್ಟು ಸತ್ಯವಿದೆ. ಅದಕ್ಕನುಸಾರ ಪಾಕಿಸ್ತಾನವೇ ತುಂಡಾಗುವ ಸಾಧ್ಯತೆ ಹೆಚ್ಚಾಗಿದೆ. ಪಾಕಿಸ್ತಾನ ತುಂಡಾದರೆ, ಖೈಬರ ಪಖ್ತುನ್ಖ್ವಾ ಇದು ಅಫ್ಘಾನಿಸ್ತಾನದಲ್ಲಿ ಸೇರಿಕೊಳ್ಳುವುದು. ಇದರಿಂದ ಪಾಕಿಸ್ತಾನದ ಬಲ ಮತ್ತು ಆರ್ಥಿಕ ಶಕ್ತಿ ಇನ್ನೂ ಕಡಿಮೆಯಾಗುವುದು.’

– (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ