ಕೀರ್ತನೆ ಮತ್ತು ಪ್ರವಚನಗಳ ಮೂಲಕ ರಾಷ್ಟ್ರ ರಕ್ಷಣೆ ಮತ್ತು ಧರ್ಮಜಾಗೃತಿಯ ಸದ್ಯದ ಸ್ಥಿತಿಯನ್ನು ಹೇಳಿ ಜನಪ್ರಬೋಧನೆ ಮಾಡಿ

ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಸಾವಿರಾರು ಕೀರ್ತನಕಾರರು, ಪ್ರವಚನಕಾರರು, ಕಥಾಕಾರರು, ಹಾಗೆಯೇ ವಾಗ್ಮಿಗಳು ಹಬ್ಬ-ಉತ್ಸವ, ಕೀರ್ತನ ಸಪ್ತಾಹ, ರಾಷ್ಟ್ರೀಯ ದಿನ, ಕ್ರಾಂತಿಕಾರರ ಜಯಂತಿ ಅಥವಾ ಪುಣ್ಯತಿಥಿ ಮುಂತಾದವುಗಳ ನಿಮಿತ್ತ ವಿವಿಧ ವಿಷಯಗಳನ್ನು ಮಂಡಿಸಿ ಸಮಾಜಕ್ಕೆ ಪ್ರಬೋಧನೆ ಮಾಡುತ್ತಾರೆ. ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಪ್ರಬೋಧನೆ ಮಾಡುವುದು ಒಂದು ವೈಶಿಷ್ಟ್ಯ ಪೂರ್ಣ ಪರಂಪರೆಯಾಗಿದೆ. ರಾಷ್ಟ್ರ, ಧರ್ಮ, ಸಂಸ್ಕೃತಿ, ಅಧ್ಯಾತ್ಮ ಮುಂತಾದವುಗಳ ಮಹತ್ವವನ್ನು ಸಮಾಜದ ಮನಸ್ಸಿನಲ್ಲಿ ಬಿಂಬಿಸಲು, ಹಾಗೆಯೇ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇವುಗಳ ಬಗ್ಗೆ ಮಾರ್ಗದರ್ಶನ ಮಾಡುವಲ್ಲಿ ಈ ಪರಂಪರೆಯ ಕೊಡುಗೆ ಅಮೂಲ್ಯವಾಗಿದೆ.

೧. ಸದ್ಯದ ಸ್ಥಿತಿಯಲ್ಲಿ ಕೀರ್ತನಕಾರರುಕೀರ್ತನೆಗಳಿಂದ ರಾಷ್ಟ್ರ ಮತ್ತು ಧರ್ಮಗಳಮೇಲಿನ ಆಘಾತಗಳ ಬಗ್ಗೆ ಪ್ರಬೋಧನೆ ಮಾಡುವುದು ಪ್ರಸ್ತುತ ಕಾಲದ ಅವಶ್ಯಕತೆಯಾಗಿದೆ !

ಕೀರ್ತನಕಾರರು ತಮ್ಮದೇ ಆದ ವೈಶಿಷ್ಟಪೂರ್ಣ ಶೈಲಿಯಲ್ಲಿ ವಿಷಯವನ್ನು ಮಂಡಿಸುವುದರಿಂದ ಅವರ ಬೋಧನೆಯಿಂದ ಸಮಾಜದ ಮನಸ್ಸಿನ ಮೇಲೆ ತಕ್ಷಣ ಪ್ರಭಾವ ಬೀರುತ್ತದೆ. ಕೆಲವು ಕೀರ್ತನಕಾರರು, ಪ್ರವಚನ ಕಾರರು ಮತ್ತು ಕಥಾಕಾರರು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ದೇಶ, ದೇವರು ಮತ್ತು ಧರ್ಮ ಇವುಗಳ ಸದ್ಯದ ಸ್ಥಿತಿ ಮತ್ತು ಅವುಗಳ ಮೇಲಿನ ಆಘಾತಗಳ ಬಗ್ಗೆ ಪ್ರಬೋಧನೆ ಮಾಡುತ್ತಾರೆ. ಅವರು ಮಂಡಿಸಿದ ವಿಷಯವನ್ನು ಕೇಳಿದಾಗ ಕೇಳುಗರಿಂದ ‘ಇದು ಕಾಲದ ಆವಶ್ಯಕತೆ ಯಾಗಿದೆ’, ಎಂಬ ಸಹಜವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ.

ರಾಷ್ಟ್ರ ಮತ್ತು ಧರ್ಮಗಳ ಬಗ್ಗೆ ಜಾಗರೂಕರಿರುವ ಅನೇಕ ಕೀರ್ತನಕಾರರು ಹಿಂದೂ ಜನಜಾಗೃತಿ ಸಮಿತಿಯ ಪ್ರತಿನಿಧಿಗಳನ್ನು ಸಂಪರ್ಕಿಸಿ ‘ನಮಗೆ ರಾಷ್ಟ್ರ ಮತ್ತು ಧರ್ಮ ಇವುಗಳಿಗೆ ಸಂಬಂಧಿಸಿದ ವಿಷಯ ದೊರಕಿದರೆ ನಾವು ಅದನ್ನು ಕೀರ್ತನಗಳಲ್ಲಿ ಮಂಡಿಸುತ್ತೇವೆ ಎಂದು ಹೇಳಿದ್ದಾರೆ. ಆ ಕೀರ್ತನಕಾರರಿಗೆ ಸಮಿತಿಯ ಮೂಲಕ ಇಂತಹ ವಿಷಯಗಳನ್ನು ನಿಯಮಿತವಾಗಿ ಕಳುಹಿಸಲಾಗುತ್ತದೆ. ರಾಷ್ಟ್ರ ಮತ್ತು ಧರ್ಮದ ಮೇಲಿನ ಆಘಾತ ಅಥವಾ ಈ ಸಂದರ್ಭದಲ್ಲಿ ಇತ್ತೀಚಿನ ಘಟನಾವಳಿಗಳ ವಿಷಯವನ್ನು ಮಂಡಿಸಿ ಜನ-ಪ್ರಬೋಧನೆ ಮಾಡಲು ಬಯಸುವ ಕೀರ್ತನಕಾರರು ತಮ್ಮ ‘ವಾಟ್ಸ್‌ಯಾಪ್’ ಕ್ರಮಾಂಕವನ್ನು ನಮಗೆ ತಿಳಿಸಬೇಕು. ಅವರಿಗೂ ಸಹ ಇಂತಹ ವಿಷಯವನ್ನು ‘ವಾಟ್ಸ್‌ಯಾಪ್’ ಮೂಲಕ ಕಳುಹಿಸುವ ನಿಯೋಜನೆ ಮಾಡಲಾಗುವುದು. ರಾಷ್ಟ್ರ ರಕ್ಷಣೆ ಮತ್ತು ಧರ್ಮಜಾಗೃತಿಯ ದೃಷ್ಟಿಯಿಂದ ಮಹತ್ವಪೂರ್ಣವಾಗಿರುವ ಈ ಸಂಕಲ್ಪನೆ ಕೇವಲ ಕೆಲವೇ ಕೀರ್ತನಕಾರರ ಮಟ್ಟಿಗೆ ಸೀಮಿತವಾಗಿರದೇ ಅದು ಎಲ್ಲೆಡೆಯ ಕೀರ್ತನಕಾರರವರೆಗೆ ತಲುಪುವುದು ಆವಶ್ಯಕವಾಗಿದೆ. ಈ ರೀತಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಪ್ರಬೋಧನೆ ಮಾಡಲು ಬಯಸುವವರು ಪರಿಚಯದ ಕೀರ್ತನಕಾರರ ಹೆಸರು ಮತ್ತು ‘ವಾಟ್ಸ್‌ಯಾಪ್’ ಕ್ರಮಾಂಕವನ್ನು ನಮಗೆ ತಿಳಿಸಿದರೆ ಈ ಮಾಹಿತಿಯನ್ನು ಅವರಿಗೂ ಸಹ ಕಳುಹಿಸಲು ಸಾಧ್ಯವಾಗುವುದು.

೨. ಕೀರ್ತನಕಾರರು ಕೀರ್ತನಗಳಿಂದ ರಾಷ್ಟ್ರ ಮತ್ತು ಧರ್ಮ ಜಾಗೃತಿಯ ಬಗ್ಗೆ ವಿಷಯ ಮಂಡಿಸಿದರೆ ಸರ್ವಸಾಮಾನ್ಯ ವ್ಯಕ್ತಿಗಳವರೆಗೆ ವಿಷಯವು ತಲುಪಿ ಅವರಲ್ಲಿ ಜಾಗೃತಿ ನಿರ್ಮಾಣವಾಗುವುದು !

ಸದ್ಯ ಬಹುತೇಕ ಸ್ಥಳಗಳಲ್ಲಿ ಕೀರ್ತನ, ಪ್ರವಚನ ಮುಂತಾದವುಗಳ ಆಯೋಜನೆ ಮಾಡಲಾಗುತ್ತದೆ. ಈ ಸಮಯದಲ್ಲಿ ಕೀರ್ತನಕಾರರು ತಮ್ಮ ಕೀರ್ತನೆಗಳಿಂದ ಧರ್ಮರಕ್ಷಣೆ ಪರಂಪರೆ, ಪ್ರಗತಿಪರರು ಮತ್ತು ನಾಸ್ತಿಕರಿಂದ ಈ ಪರಂಪರೆಗಳಿಗೆ ಆಗುವ ಅನಾವಶ್ಯಕ ವಿರೋಧ, ಮತಾಂತರ, ಲವ್‌ ಜಿಹಾದ್, ದೇವಸ್ಥಾನಗಳ ಸರಕಾರೀಕರಣ, ದೇವತೆಗಳ ವಿಡಂಬನೆ ಮತ್ತು ಸಂತರ ಅಪಮಾನ, ಹಾಗೆಯೇ ಹಿಂದು ರಾಷ್ಟ್ರದ ಆವಶ್ಯಕತೆ ಮುಂತಾದ ವಿಷಯಗಳನ್ನು ಮಂಡಿಸಬಹುದು. ಇದರಿಂದ ಸರ್ವಸಾಮಾನ್ಯ ವ್ಯಕ್ತಿಗಳವರೆಗೆ ವಿವಿಧ ವಿಷಯಗಳು ತಲುಪಿ ಅವರಲ್ಲಿ ಜಾಗೃತಿ ಮೂಡುವುದು ಮತ್ತು ಈ ಕಾರ್ಯದಲ್ಲಿ ಕೀರ್ತನಕಾರರ ಕೊಡುಗೆಯೂ ಸಲ್ಲುವುದು.

ಕೀರ್ತನಕಾರರು, ಪ್ರವಚನಕಾರರು, ನಿರೂಪಕರು, ಹಾಗೆಯೇ ವ್ಯಾಖ್ಯಾನಕಾರರಿಗೆ ಕೀರ್ತನದಲ್ಲಿ ಮಂಡಿಸಲು ಮೇಲಿನ ವಿಷಯಗಳ ವಿಸ್ತಾರ ಮಾಹಿತಿ ಬೇಕಿದ್ದರೆ ಸಮಿತಿಯ ಸ್ಥಳೀಯ ಕಾರ್ಯಕರ್ತರನ್ನು ಅಥವಾ ಶ್ರೀ. ಅರುಣ ಕುಲಕರ್ಣಿ ಇವರನ್ನು ೭೭೩೮೨೩೩೩೩೩ ಈ ಕ್ರಮಾಂಕಕ್ಕೆ ಸಂಪರ್ಕಿಸಬೇಕು ಅಥವಾ ಹಿಟಿಜಉರಿಚಿಗ್ಡಿಉಣೈ.ಒಡಿಗ್ ಈ ಜಾಲತಾಣಕ್ಕೆ ಭೇಟಿ ನೀಡಬೇಕು.