ಸನಾತನದ ಮೊದಲನೇ ಬಾಲಸಂತ ಪೂ. ಭಾರ್ಗವರಾಮ ಪ್ರಭು ( ೫ ವರ್ಷ)ಇವರಿಗೆ ಅನಾರೋಗ್ಯವಿದ್ದಾಗ ಅವರ ತಾಯಿಗೆ ಕಲಿಯಲು ಸಿಕ್ಕಿರುವ ಅವರ ತಾಳ್ಮೆ,ಸ್ಥಿರತೆ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲಿನ ದೃಢ ಶ್ರದ್ಧೆ !

ಪೂ. ಭಾರ್ಗವರಾಮ ಪ್ರಭು

‘ಪೂ. ಭಾರ್ಗವರಾಮ ಇವರಿಗೆ ತೀವ್ರ ಜ್ವರವಿತ್ತು ಮತ್ತು ಅವರ ಶ್ವಾಸನಾಳದಲ್ಲಿ ಸೋಂಕುಗಳು (Bronchitis) ಆಗಿರುವುದರಿಂದ ಉಸಿರಾಡುವಾಗ ಒಂದು ರೀತಿಯ ಧ್ವನಿ ಬರುತ್ತಿತ್ತು. ಎಲ್ಲ ಔಷಧೋಪಚಾರಗಳನ್ನು ಮಾಡಿದರೂ ಅವರ ಜ್ವರ ಕಡಿಮೆಯಾಗುತ್ತಿರಲಿಲ್ಲ. ಆದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಆಗ ನನಗೆ ಅವರಲ್ಲಿನ ತಾಳ್ಮೆ, ಅವರ ತಿಳುವಳಿಕೆ, ಸ್ಥಿರತೆ ಮತ್ತು ಗುರುದೇವರ ಮೇಲಿನ ಅವರ ಅಪಾರ ಶ್ರದ್ಧೆ ಈ ಗುಣಗಳು ಕಲಿಯಲು ಸಿಕ್ಕಿದವು. ಈ ಸಂದರ್ಭದ ಅಂಶಗಳನ್ನು, ಹಾಗೆಯೇ ಪೂ. ಭಾರ್ಗವರಾಮ ಮತ್ತು ಪೂ. ವಾಮನ ರಾಜಂದೇಕರ ಇವರಿಗೆ ಬಂದ ಒಂದೇ ರೀತಿಯ ಅನುಭೂತಿಯನ್ನು ಇಲ್ಲಿ ಕೊಡುತ್ತಿದ್ದೇನೆ.

ಸೌ. ಭವಾನಿ ಭರತ ಪ್ರಭು

೧. ತಿಳುವಳಿಕೆ ಮತ್ತು ಸಹನಶೀಲತೆ !

೧ ಅ. ನೋವನ್ನು ಸಹಿಸಿಕೊಳ್ಳುವುದು : ನಾನು ಪೂ. ಭಾರ್ಗವರಾಮ ಇವರಿಗೆ, ”ನಿಮ್ಮ ಗಂಟಲು ಮತ್ತು ಮೈಕೈ ನೋವಿದೆಯಾ ?’’ ಎಂದು ಕೇಳಿದೆ. ಆಗ ಅವರು ”ಹೌದು ನನ್ನ ಗಂಟಲು ನೋವು ಮತ್ತು ಮೈಕೈ ನೋವು ತುಂಬಾ ಇದೆ’’ ಎಂದರು, ಆದರೆ ಅವರು ನೋವನ್ನು ತೋರಿಸಿಕೊಡದೇ  ಅದನ್ನು ಸಹಿಸುತ್ತಿದ್ದರು.

೧ ಆ. ಆಸ್ಪತ್ರೆಯಲ್ಲಿ ಸೇರಿಸುವುದರ ಬಗ್ಗೆ ಭಯವಾಗದಿರುವುದು :ನಾನು ಪೂ. ಭಾರ್ಗವರಾಮ ಇವರಿಗೆ, ”ನಿಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋಣವೇ ?’’ ಎಂದು ಕೇಳಿದೆ. ಆಗ ಅವರು  ಸಹಜವಾಗಿಯೇ, ‘ಆಯಿತು’ ಎಂದು ಹೇಳಿದರು. (ಚಿಕ್ಕ ಮಕ್ಕಳು ಆಸ್ಪತ್ರೆಗೆ ಹೋಗಲು ಹೆದರುತ್ತಾರೆ; ಆದರೆ ಪೂ. ಭಾರ್ಗವರಾಮರವರು ಹೆದರಲಿಲ್ಲ.)

೧ ಇ. ಆಧುನಿಕ ವೈದ್ಯರಿಗೆ ಬರಲು ತುಂಬಾ ತಡವಾಗುತ್ತಿದ್ದರೂ ಶಾಂತವಾಗಿರುವುದು : ನಾವು ಆಸ್ಪತ್ರೆಗೆ ಹೋಗಿ ೨ ಗಂಟೆಗಳಾದರೂ ತುರ್ತು ವೈದ್ಯಕೀಯ ಸೇವಾ ವಿಭಾಗದಲ್ಲಿನ (Casualty) ಆಧುನಿಕ ವೈದ್ಯರು ಬಂದಿರಲಿಲ್ಲ. ಆದ್ದರಿಂದ ನಾನು ಅಸಮಾಧಾನವನ್ನು ವ್ಯಕ್ತಪಡಿಸಿದೆ. ಆಗ ಕೂಡಲೇ ಪೂ. ಭಾರ್ಗವರಾಮ ಇವರು, ”ನಾವು ದಾರಿ ಕಾಯೋಣ, ಆಧುನಿಕ ವೈದ್ಯರು ಈಗ ಬರಬಹುದು’’, ಎಂದರು. ಅದನ್ನು ಕೇಳಿ ನನಗೆ ನನ್ನ ತಪ್ಪಿನ ಅರಿವಾಗಿ ನನ್ನ ಅಂತರ್ಮುಖತೆ ಹೆಚ್ಚಾಯಿತು. ಇದರಿಂದ ನನಗೆ, ‘ಪೂ. ಭಾರ್ಗವರಾಮ ಇವರಲ್ಲಿ ಎಷ್ಟೊಂದು ತಾಳ್ಮೆ ಇದೆ’, ಎಂಬುದು ಅರಿವಾಯಿತು.

೧ ಈ. ಪೂ. ಭಾರ್ಗವರಾಮರವರಿಗೆ ಮಾತನಾಡುವಾಗ ತೊಂದರೆ ಆಗುತ್ತಿದ್ದರೂ ಆಧುನಿಕ ವೈದ್ಯರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಅವರು ಸ್ವತಃ ಉತ್ತರ ಕೊಟ್ಟರು. 

೧ ಉ. ಚಿಕಿತ್ಸೆ ನಡೆಯುತ್ತಿರುವಾಗ ಪೂ. ಭಾರ್ಗವರಾಮ ಇವರಿಗೆ ತುಂಬಾ ವೇದನೆಯಾಗುತ್ತಿದ್ದರೂ ಅವರು ಅಳದೇ ಎಲ್ಲವನ್ನು ಸಹಿಸಿಕೊಳ್ಳುವುದು : ಪೂ. ಭಾರ್ಗವರಾಮರವರ ರಕ್ತ ಪರೀಕ್ಷೆಗಾಗಿ ಅವರ ರಕ್ತವನ್ನು ತೆಗೆದುಕೊಂಡರು. ಅವರಿಗೆ ೨ ಇಂಜೆಕ್ಶನ್‌ಗಳನ್ನು ನೀಡಿದರು ಮತ್ತು ಔಷಧಗಳನ್ನು ಕೊಡಲು ರಕ್ತವಾಹಿನಿಯಲ್ಲಿ ಸೂಜಿಯನ್ನು (Jelco Cannula) ಚುಚ್ಚಿದರು. ಅವರಿಗೆ ಅನೇಕ ಬಾರಿ ಸೂಜಿ ಚುಚ್ಚಿದರೂ, ಅವರು ಒಮ್ಮೆಯೂ ಅಳಲಿಲ್ಲ. ಅವರಿಗೆ ವೇದನೆಯಾಗುತ್ತಿರುವಾಗ ಅವರು ಕೇವಲ ಹುಬ್ಬುಗಳನ್ನು ಹತ್ತಿರ ತಂದು ಹಣೆಯ ಮೇಲೆ ಗಂಟುಗಳನ್ನು ಹಾಕಿ ವೇದನೆಯಾಗುತ್ತಿರುವುದನ್ನು ತೋರಿಸುತ್ತ ಎಲ್ಲವನ್ನು ಸಹಿಸಿದರು.

೨. ಪೂ. ಭಾರ್ಗವರಾಮ ಇವರ ವರ್ತನೆಯಿಂದ ‘ಸಂತರಿಗೆ ದೇಹಬುದ್ಧಿ ಇರುವುದಿಲ್ಲ’, ಎಂಬುದನ್ನು ಅನುಭವಿಸುವುದು

ಅದನ್ನು ನೋಡಿ ಓರ್ವ ಹಿರಿಯ ನರ್ಸಳು (ದಾದಿಯು) ನನಗೆ, ”ಆಸ್ಪತ್ರೆಯಲ್ಲಿ ನನ್ನ 26 ವರ್ಷಗಳ ಅನುಭವದಲ್ಲಿ ‘ರಕ್ತವಾಹಿನಿಯಲ್ಲಿ ಸೂಜಿಯನ್ನು (Cannula) ಚುಚ್ಚುವಾಗ ಮಗು ಅಳಲಿಲ್ಲ, ಎಂಬುದನ್ನು ನಾನು ಎಂದಿಗೂ ನೋಡಿಲ್ಲ’’ ಎಂದು ಹೇಳಿದರು. ಅದನ್ನು ಕೇಳಿ ನನಗೆ, ‘ಇದು ಪೂ. ಭಾರ್ಗವರಾಮರವರ ಸಂತತ್ವವನ್ನು ತೋರಿಸುತ್ತದೆ’ ಎಂದು ಅನಿಸಿತು. ಆಗ ನನಗೆ ಗುರುದೇವರ ಬಗ್ಗೆ ತುಂಬಾ ಕೃತಜ್ಞತೆ ಅನಿಸಿತು. ‘ಸಂತರಿಗೆದೇಹಬುದ್ಧಿ ಇರುವುದಿಲ್ಲ’, ಎಂಬುದನ್ನು ನಾನು ಪೂ. ಭಾರ್ಗವರಾಮ ಇವರನ್ನು ಆಸ್ಪತ್ರೆಗೆ ಸೇರಿಸಿದಾಗ ಅನುಭವಿಸಿದೆ.

ಪೂ. ಭಾರ್ಗವರಾಮ ಇವರು ಆಸ್ಪತ್ರೆಯಲ್ಲಿರುವಾಗ ಒಮ್ಮೆಯೂ ಹಠ ಮಾಡಲಿಲ್ಲ ಅಥವಾ ಅಳಲಿಲ್ಲ. ಸಾಮಾನ್ಯವಾಗಿ ಅನಾರೋಗ್ಯವಿರುವ ಮಕ್ಕಳು ತುಂಬಾ ಅಳುತ್ತಾರೆ; ಆದರೆ ಪೂ. ಭಾರ್ಗವರಾಮ ದೊಡ್ಡವರಂತೆ ಶಾಂತವಾಗಿ ಮಲಗಿರುತ್ತಿದ್ದರು.

೩. ಪೂ. ಭಾರ್ಗವರಾಮ ಇವರನ್ನು ಚಿಕ್ಕ ಮಕ್ಕಳ ತುರ್ತು ನಿಗಾ ಘಟಕಕ್ಕೆ (ಐ.ಸಿ.ಯು)  ಸ್ಥಳಾಂತರಿಸಿದ ನಂತರಾವರ ತಲೆದಿಂಬಿನ ಹಿಂದೆ ‘ಪರಾತ್ಪರಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಗ್ರಂಥವನ್ನು ಇಟ್ಟೆವು, ಆಗ ಅಲ್ಲಿನ ವಾತಾವರಣ ಹಗುರವಾಗಿ ಬೆಳಕು ಹೆಚ್ಚಾಗುವುದು

ಪೂ. ಭಾರ್ಗವರಾಮ ಇವರನ್ನು ನಡುರಾತ್ರಿಯಲ್ಲಿ ಚಿಕ್ಕ ಮಕ್ಕಳ ತುರ್ತು ನಿಗಾ ಘಟಕಕ್ಕೆ  (Pediatric  ICU ನಲ್ಲಿ) ಸ್ಥಳಾಂತರಿಸಲಾಯಿತು. ಆಗ ಅಲ್ಲಿನ ವಾತಾವರಣದಲ್ಲಿ ತುಂಬಾ ಜಡತ್ವ ಇತ್ತು. ಅಲ್ಲಿಗೆ ಹೋದ ನಂತರ ನಾನು ಪೂ. ಭಾರ್ಗವರಾಮ ಇವರ ಮಂಚವನ್ನು (ಕಾಟ್) ಕರ್ಪುರ, ಅತ್ತರ ಮತ್ತು ವಿಭೂತಿಯನ್ನು ಹಚ್ಚಿ ಶುದ್ಧ ಮಾಡಿದೆ. ನಂತರ ಪೂ. ಭಾರ್ಗವರಾಮ ಇವರ ತಲೆದಿಂಬಿನ ಹಿಂದೆ ತಲೆಯ ಹತ್ತಿರ ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಗ್ರಂಥವನ್ನು ಇಟ್ಟೆನು. ಅನಂತರ ಸ್ವಲ್ಪ ಸಮಯದಲ್ಲಿಯೇ ಅಲ್ಲಿನ ವಾತಾವರಣ ತುಂಬಾ ಹಗುರವಾಯಿತು. ‘ರಾತ್ರಿಯ ಸಮಯವಿದ್ದರೂ ನನಗೆ ಅಲ್ಲಿ ಬೆಳಕು ಹೆಚ್ಚಾಗಿರುವುದರ ಅರಿವಾಯಿತು.’

೪ . ಪೂ. ಭಾರ್ಗವರಾಮರಿಗೆ ಸಚ್ಚಿದಾನಂದಪರಬ್ರಹ್ಮ ಡಾ. ಆಠವಲೆಯವರ ಮೇಲಿರುವ ಅಚಲ ಶ್ರದ್ಧೆ !

೪ ಅ. ಪೂ. ಭಾರ್ಗವರಾಮ ಇವರು ಮಂಚದ ಹತ್ತಿರ ಬರುವವರಿಗೆ ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಗ್ರಂಥವನ್ನು ತೋರಿಸಿ ಅವರ ಬಗ್ಗೆ ಹೇಳುತ್ತಿದ್ದರು.

೪ ಆ. ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಗ್ರಂಥವನ್ನು ನೋಡಿ ಓರ್ವ ನರ್ಸ ಗುರುಗಳಿಗೆ ‘ಭಗವಂತ’ ಎಂದು ಕರೆಯುವುದು ಮತ್ತು ‘ಪೂ. ಭಾರ್ಗವರಾಮರಿಗೆ ಭಗವಂತನ (ಗುರುದೇವರ) ಆಶೀರ್ವಾದ ಇರುವುದರಿಂದ ಅವರಿಗೆ ಏನು ಆಗುವುದಿಲ್ಲ’, ಎಂದು ಹೇಳುವುದು : ಪೂ. ಭಾರ್ಗವರಾಮರು ಓರ್ವ ನರ್ಸಳನ್ನು (ದಾದಿಯನ್ನು) ಕರೆದು ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಗ್ರಂಥವನ್ನು ಅವಳ ಕೈಯಲ್ಲಿ ಕೊಟ್ಟರು ಮತ್ತು ಅವಳಿಗೆ ಅದನ್ನು ಕುಳಿತುಕೊಂಡು ನೋಡಲು ಹೇಳಿದರು. ಆ ದಾದಿಯು ಆ ಸಂಪೂರ್ಣ ಗ್ರಂಥವನ್ನು ನೋಡಿದಳು. ಅವಳಿಗೆ ಆ ಗ್ರಂಥವು ತುಂಬಾ ಇಷ್ಟವಾಯಿತು. ಅವಳ ಭಾವಜಾಗೃತಿಯಾಯಿತು ಮತ್ತು ಅವಳು ಗುರುದೇವರಿಗೆ ‘ಭಗವಂತ’ ಎಂದು ಕರೆಯತೊಡಗಿದಳು. ಅವಳು ನನಗೆ, ”ಭಾರ್ಗವರಾಮರಿಗೆ ಭಗವಂತನ (ಗುರುದೇವರ) ತುಂಬಾ ಆಶೀರ್ವಾದವಿದೆ. ಅವರಿಗೆ ಏನು ಆಗುವುದಿಲ್ಲ’’ ಎಂದರು.

೪ ಇ. ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಗ್ರಂಥದ ಕಡೆಗೆ ಬೆರಳು ತೋರಿಸಿ ಪೂ. ಭಾರ್ಗವರಾಮ ಇವರು ‘ನನಗೆ ಭಯವೆನಿಸುವುದಿಲ್ಲ’, ಎಂದು ನರ್ಸಳಿಗೆ (ದಾದಿಗೆ) ಹೇಳುವುದು : ಓರ್ವ ನರ್ಸ್ ಇಂಜೆಕ್ಶನ್‌ ಕೊಡಲು ಬಂದಾಗ, ಅವರು ಪೂ. ಭಾರ್ಗವರಾಮ ಇವರಿಗೆ, ”ಹೆದರಬೇಡ ಇಂಜೆಕ್ಶನ್‌ ತುಂಬಾ ಚಿಕ್ಕದಿದೆ’’, ಎಂದು ಹೇಳಿದಳು. ಆಗ ಪೂ. ಭಾರ್ಗವರಾಮರು  ತಕ್ಷಣ ಅವರ ತಲೆಯ ಹಿಂದಿಟ್ಟಿರುವ ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಗ್ರಂಥದ ಕಡೆಗೆ ಬೆರಳು ತೋರಿಸಿ, ‘ಇಲ್ಲಿ ನೋಡಿ, ನನ್ನ ಹಿಂದೆ ಯಾರಿದ್ದಾರೆ ! ಆದ್ದರಿಂದ ನನಗೆ ಭಯವಾಗುವುದಿಲ್ಲ ಮತ್ತು ನನಗೆ ನೋವೂ ಆಗುವುದಿಲ್ಲ’’ ಎಂದು ಹೇಳಿದರು.

೫. ಸ್ವಚ್ಛತೆಯ ಕೆಲಸ ಮಾಡುವ ಓರ್ವ ಮಹಿಳೆಯು ಪೂ. ಭಾರ್ಗವರಾಮರ ಚರಣಗಳನ್ನು ಸ್ಪರ್ಶಿಸಿ ‘ಇವರು ಭಗವಂತನ ರೂಪವಾಗಿದ್ದಾರೆ’, ಎಂದು ಹೇಳುವುದು

ಸ್ವಚ್ಛತೆಯನ್ನು ಮಾಡಲು ಚಿಕ್ಕ ಮಕ್ಕಳ  ತುರ್ತು ನಿಗಾ ಘಟಕಕ್ಕೆ ಓರ್ವ ಕೆಲಸದವರು ಬರುತ್ತಿದ್ದರು. ಒಮ್ಮೆ ಅವರು ಪೂ. ಭಾರ್ಗವರಾಮರವರ ಚರಣಗಳನ್ನು ಸ್ಪರ್ಶಿಸಿ, ”ಇವರು ಭಗವಂತನ ರೂಪವೇ ಆಗಿದ್ದಾರೆ’’ ಎಂದರು. ಅವರು ಪೂ. ಭಾರ್ಗವರಾಮರನ್ನು ಒಂದೇಸಮನೆ  ನೋಡುತ್ತಿದ್ದರು. ಪೂ. ಭಾರ್ಗವರಾಮರು ಅವಳಿಗೆ ‘ನೀವು ಇಲ್ಲಿ ಮಾಡಿದ ಸ್ವಚ್ಛತೆ ತುಂಬಾ ಒಳ್ಳೆಯದಾಗಿದೆ’, ಎಂದು ಹೇಳಿ ಅವರ ಪ್ರಶಂಸೆ ಮಾಡಿದರು.

೬. ಪೂ. ಭಾರ್ಗವರಾಮರ ಅಖಂಡ ಸ್ಥಿರತೆಯನ್ನು ನೋಡಿ ನಾನು ದಿನವಿಡಿ ಭಾವಸ್ಥಿತಿಯಲ್ಲಿರುತ್ತಿದ್ದೆ.

೭. ಪೂ. ಭಾರ್ಗವರಾಮರಿಂದಸಿಗುವ ಚೈತನ್ಯದ ಪರಿಣಾಮ !

ಅ. ನನಗೆ ಆಸ್ಪತ್ರೆಯಲ್ಲಿ ಮಲಗಲು ಜಾಗ ಇಲ್ಲದಿರುವುದರಿಂದ ರಾತ್ರಿ ನನ್ನ ನಿದ್ರೆ ಪೂರ್ಣ ಆಗುತ್ತಿರಲಿಲ್ಲ, ಆದರೆ ನನಗೆ ಕೇವಲ ೩೦ ನಿಮಿಷಗಳಷ್ಟು ಮಲಗಿದರೂ ೪ ಗಂಟೆ ಮಲಗಿ ಎದ್ದಿರುವಂತೆ ಉತ್ಸಾಹವೆನಿಸುತ್ತಿತ್ತು.

ಆ. ಆಸ್ಪತ್ರೆಯಲ್ಲಿ ನಾನು ರಾತ್ರಿ ಒಬ್ಬಳೇ ಇದ್ದರೂ ನನಗೆ ಆಯಾಸವಾಗುತ್ತಿರಲಿಲ್ಲ.

ಇ. ಆಸ್ಪತ್ರೆಯಿಂದ ನಮ್ಮ ಮನೆ ದೂರವಿದೆ; ಆದರೆ ನಾನು ಮನೆಗೆ ಹೋಗಿ ಸ್ನಾನ ಮಾಡಿ ತಿಂಡಿಯ ಡಬ್ಬವನ್ನು ತೆಗೆದುಕೊಂಡು, ಇತರ ವಿಷಯಗಳನ್ನು ಮಾಡಿ ಆಧುನಿಕ ವೈದ್ಯರು ಪೂ. ಭಾರ್ಗವರಾಮ ಇವರನ್ನು ಪರೀಕ್ಷಿಸಲು ಬರುವಷ್ಟರಲ್ಲಿ ಮರಳಿ ಬರುತ್ತಿದ್ದೆ. ಆಗ ನನ್ನ ಎಲ್ಲ ಕೆಲಸಗಳು ಅತಿ ಕಡಿಮೆ ಸಮಯದಲ್ಲಿ ಆಗುತ್ತಿದ್ದವು.

೮. ಆಧ್ಯಾತ್ಮಿಕ ಉಪಾಯಗಳನ್ನು ಮಾಡಿದ ಮೇಲೆ ಪೂ. ಭಾರ್ಗವರಾಮರ ಆರೋಗ್ಯ ಕೂಡಲೆ ಸುಧಾರಿಸುವುದು

‘ಪೂ. ಭಾರ್ಗವರಾಮ ಇವರ ರಕ್ತದ ವರದಿ ಹೆಚ್ಚು-ಕಡಿಮೆ ಸಾಮಾನ್ಯವಾಗಿಯೇ ಇತ್ತು, ಅದನ್ನು ನೋಡಿ, ಹೀಗಿರುವಾಗ ಅವರ ಆರೋಗ್ಯ ಇಷ್ಟೇಕೆ ಹದಗೆಟ್ಟಿದೆ ?’, ಎಂಬುದರ ಕಾರಣ ಆಧುನಿಕ ವೈದ್ಯರಿಗೆ ಮತ್ತು ನನಗೂ ತಿಳಿಯುತ್ತಿರಲಿಲ್ಲ. ಆಗ ‘ಇದರ ಹಿಂದೆ ಖಂಡಿತವಾಗಿಯೂ ಆಧ್ಯಾತ್ಮಿಕ ಕಾರಣವಿದೆ’, ಎಂಬುದು ನಮ್ಮ ಗಮನಕ್ಕೆ ಬಂದಿತು. ಸದ್ಗುರು ಡಾ. ಮುಕುಲ ಗಾಡಗೀಳ ಮತ್ತು ಪೂ. ಅಜ್ಜಿ (ಪೂ. ರಾಧಾ ಅಜ್ಜಿ, ತಂದೆಯ ಅಜ್ಜಿ ಮತ್ತು ಪೂ. ಭಾರ್ಗವರಾಮ ಇವರ ಮುತ್ತಜ್ಜಿ ಹಾಗೂ  ಸನಾತನದ ೪೪ ನೇಯ ಸಮಷ್ಟಿ ಸಂತರು) ಇವರಿಬ್ಬರು ಪ್ರತಿದಿನ ಪೂ. ಭಾರ್ಗವರಾಮರಿಗಾಗಿ ನಾಮಜಪ ಮಾಡುತ್ತಿದ್ದರು. ಆ ಇಬ್ಬರು ಸಂತರು ಆಧ್ಯಾತ್ಮಿಕ ಉಪಾಯವನ್ನು ಮಾಡಿದ್ದರಿಂದಲೇ ಪೂ. ಭಾರ್ಗವರಾಮರವರ ಆರೋಗ್ಯವು ಬೇಗನೇ ಸುಧಾರಿಸಿತು.

೯. ಪೂ. ಭಾರ್ಗವರಾಮ ಇವರು ‘ಪರಾತ್ಪರ ಗುರುಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಗ್ರಂಥದಿಂದ ಹಳದಿ ಪ್ರಕಾಶ ಪ್ರಕ್ಷೇಪಿಸುತ್ತಿರುವುದರಿಂದ ಒಳ್ಳೆಯದೆನಿಸುತ್ತಿದೆ’, ಎಂದು ಹೇಳುವುದುಮತ್ತು ಪೂ. ವಾಮನ ರಾಜಂದೇಕರ (ಸನಾನತದ ಎರಡನೇಯ ಬಾಲಸಂತರು, ವಯಸ್ಸು ೪ )ಅವರೂ ಸಹ ಹೀಗೆಯೆ ಹೇಳುವುದು

ಪೂ. ವಾಮನ ರಾಜಂದೇಕರ

ಪೂ. ಭಾರ್ಗವರಾಮ ಇವರು, ”ನನ್ನ ಸಮೀಪ ಇಟ್ಟಿರುವ ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯಜೀವನದರ್ಶನ’ ಗ್ರಂಥದಿಂದ ಹಳದಿ ಪ್ರಕಾಶ ಪ್ರಕ್ಷೇಪಿಸುತ್ತಿರು ವುದರಿಂದ ನನಗೆ ಒಳ್ಳೆಯದೆನಿಸುತ್ತಿದೆ’’ ಎಂದು ಹೇಳಿದರು. ಯೋಗಾಯೋಗವೆಂದರೆ ಅದೇ ದಿನ ಪೂ. ವಾಮನ ರಾಜಂದೇಕರರವರ ತಾಯಿ ಸೌ. ಮಾನಸಿ ಅಕ್ಕನವರು (ಆಧ್ಯಾತ್ಮಿಕ ಮಟ್ಟ ಶೇ. ೬೧) ಸಂಚಾರವಾಣಿಯಿಂದ ನನಗೆ, ”ಪೂ. ವಾಮನ ರಾಜಂದೇಕರ ಇವರೂ ಹಾಗೆಯೇ ಹೇಳಿದರು’’, ಎಂದು ಹೇಳಿದರು. ಆಧುನಿಕ ವೈದ್ಯರು, ಅದೇ ದಿನ ಪೂ. ಭಾರ್ಗವರಾಮರವರಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು.

೧೦. ಕೃತಜ್ಞತೆ

ನನಗೆ ಗುರುದೇವರ ಕೃಪೆಯಿಂದಲೆ ಪೂ. ಭಾರ್ಗವರಾಮ ಇವರ ಗುರುದೇವರ ಮೇಲಿನ ಅಚಲ ಶ್ರದ್ಧೆ ಮತ್ತು ಅವರ ಸ್ಥಿರತೆ ಇವುಗಳ ಬಗ್ಗೆ ಬರೆಯಲು ಸಾಧ್ಯವಾಯಿತು. ಅದಕ್ಕಾಗಿ ನಾನು ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ !’

– ಕೃತಜ್ಞತಾಪೂರ್ವಕ,

ಸೌ. ಭವಾನಿ ಪ್ರಭು (ಪೂ. ಭಾರ್ಗವರಾಮ ಇವರ ತಾಯಿ), ಮಂಗಳೂರು. (೧೦.೬.೨೦೨೨)