ಬಳ್ಳಿ ಜಾತಿಯ ತರಕಾರಿಗಳ ಬೀಜಗಳನ್ನು ಹೇಗೆ ನೆಡಬೇಕು ?

ಸನಾತನದ ‘ಮನೆಮನೆಯಲ್ಲಿ ಕೈತೋಟ’ ಅಭಿಯಾನ

ಸೌ. ರಾಘವಿ ಕೊನೆಕರ

‘ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಹಾಲುಕುಂಬಳ ಕಾಯಿ, ಹೀರೇಕಾಯಿ, ತುಪ್ಪರೀ ಕಾಯಿ, ಕುಂಬಳಕಾಯಿ, ಹಾಗಲ ಕಾಯಿ, ಸೌತೆಕಾಯಿ ಇಂತಹ ಬಳ್ಳಿ ಜಾತಿಯ ತರಕಾರಿಗಳ ಕೃಷಿಯನ್ನು ಮಾಡುತ್ತಾರೆ. ಈ ತರಕಾರಿಗಳ ಬೀಜಗಳನ್ನು ಹೊಲದಲ್ಲಿ ನೆಡುವಾಗ ಅವುಗಳನ್ನು ನೇರವಾಗಿ ಮಣ್ಣಿನಲ್ಲಿ ಬಿತ್ತಲಾಗುತ್ತದೆ. ಮನೆಯಲ್ಲಿನ ಕೈದೋಟದಲ್ಲಿ ಮಾತ್ರ ಈ ಬೀಜಗಳನ್ನು ನೇರವಾಗಿ ಮಣ್ಣಿನಲ್ಲಿ ಬಿತ್ತದೇ ಮೊದಲು ಮಣ್ಣು ಹಾಕಿದ ಕಾಗದದ ಕಪ್‌ಗಳಲ್ಲಿ ಪ್ರತಿಯೊಂದರಲ್ಲಿ ೧ ಬೀಜವನ್ನು ಹಾಕಿ ಸಸಿಗಳನ್ನು ಸಿದ್ಧಪಡಿಸಬೇಕು. ಸಸಿಗಳು ತಯಾರಾದ ನಂತರ ಅವುಗಳನ್ನು ಮಡಿಯಲ್ಲಿ ಅಥವಾ ದೊಡ್ಡ ಕುಂಡಗಳಲ್ಲಿ ಕೃಷಿಯನ್ನು ಮಾಡಬೇಕು. ಇದು ತುಂಬಾ ಸುಲಭ ಮತ್ತು ಅನುಕೂಲವಾಗುತ್ತದೆ. ಹೀಗೆ ಮಾಡುವುದರಿಂದ ಸಸಿಗಳು ಬೆಳೆದ ನಂತರ ಅವುಗಳಲ್ಲಿನ ಒಳ್ಳೆಯ ಸಸಿಗಳನ್ನು ಆರಿಸಿ ಬಳ್ಳಿಯನ್ನು ಏರಿಸಲು ಮಾಡಿದ ಹಂದರದ ಕೆಳಗೆ ಅವು ಗಳ ಕೃಷಿ ಮಾಡಬಹುದು. ಕಪ್‌ನಲ್ಲಿ ಹಚ್ಚಿದ ಬೀಜವು ಮೊಳಕೆ ಒಡೆದು ಸಸಿಗೆ ೪-೬ ಎಲೆಗಳು ಬಂದ ನಂತರ ಸಸಿಯನ್ನು ಯೋಗ್ಯವಾದ ಜಾಗದಲ್ಲಿ ನೆಡಬೇಕು.’

– ಸೌ. ರಾಘವಿ ಕೊನೆಕರ, ಢವಳಿ, ಫೊಂಡಾ, ಗೋವಾ. (೨೦.೧.೨೦೨೩)