ಕೆಲವು ಸಾಧಕರು ‘ನನ್ನಲ್ಲಿ ಸಮಷ್ಟಿಸೇವೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಕ್ಷಮತೆ ಇಲ್ಲ’, ‘ಸಮಷ್ಟಿ ಸೇವೆಯ ಜವಾಬ್ದಾರಿಯನ್ನು ತೆಗೆದುಕೊಂಡರೆ ನನಗೆ ವ್ಯಷ್ಟಿ ಸಾಧನೆ ಮಾಡಲು ಸಮಯ ಸಿಗುವುದಿಲ್ಲ’, ಇಂತಹ ವಿಚಾರಗಳಿಂದ ಸಮಷ್ಟಿ ಸೇವೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಕೆಲವು ಸಾಧಕರು ಅವರಿಗಾಗುವ ಆಧ್ಯಾತ್ಮಿಕ ತೊಂದರೆ ಅಥವಾ ಅನಾರೋಗ್ಯದ ಕಾರಣಗಳನ್ನು ಹೇಳಿ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರಿಂದ ಹಿಂಜರಿಯುತ್ತಾರೆ. ಈ ಕಾರಣಗಳು ಕೆಲವು ಪ್ರಮಾಣದಲ್ಲಿ ಯೋಗ್ಯವಾಗಿದ್ದರೂ, ಈ ಕುರಿತು ಮುಂದಿನ ಕಾರಣಗಳೇ ಹೆಚ್ಚು ಪ್ರಮಾಣದಲ್ಲಿರುತ್ತವೆ – ಸಮಷ್ಟಿ ಸೇವೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವಾಗ ವಿವಿಧ ಪ್ರಕೃತಿಯಸಾಧಕರೊಂದಿಗೆ ಹೊಂದಿಕೊಳ್ಳುವಾಗ ಆಗುವಂತಹ ಮನಸ್ಸಿನ ಸಂಘರ್ಷವು ಬೇಡವೆನಿಸುತ್ತದೆ, ಜವಾಬ್ದಾರಿಯನ್ನು ನಿರ್ವಹಿಸುವಾಗ ತಪ್ಪುಗಳಾದರೆ ಸಾಧನೆಯಲ್ಲಿ ಅಧೋಗತಿ ಆಗುವುದೆಂಬ ಭಯವೆನಿಸುವುದು, ಜವಾಬ್ದಾರಿಯನ್ನು ನಿರ್ವಹಿಸುವಾಗ ಹೆಚ್ಚು ಪರಿಶ್ರಮಪಡುವ ಸಿದ್ಧತೆ ಇಲ್ಲದಿರುವುದು ಇತ್ಯಾದಿ.
ಸಮಷ್ಟಿ ಸೇವೆಯ ಜವಾಬ್ದಾರಿಯನ್ನು ತೆಗೆದುಕೊಂಡಾಗ ಆ ಸೇವೆಯು ಸಮಯಮಿತಿಯಲ್ಲಿ ಪೂರ್ಣಗೊಳ್ಳಲು ನಮ್ಮಿಂದ ಸಹಜವಾಗಿ ಹೆಚ್ಚೆಚ್ಚು ಸಮಯವನ್ನು ಕೊಟ್ಟು ಪ್ರಯತ್ನಗಳಾಗುತ್ತವೆ, ಅಂದರೆ ಶರೀರದ ಹೆಚ್ಚು ತ್ಯಾಗವಾಗುತ್ತದೆ. ‘ಸೇವೆ ಬೇಗ ಹೇಗೆ ಆಗಬಹುದು ?’, ಎಂಬ ಒಂದೇ ವಿಚಾರ ಮನಸ್ಸಿನಲ್ಲಿರುವುದರಿಂದ ಇತರ ಅನಾವಶ್ಯಕ ವಿಚಾರವು ಮನಸ್ಸಿನಲ್ಲಿ ಬರುವ ಪ್ರಮಾಣ ತುಂಬಾ ಕಡಿಮೆ ಇರುತ್ತದೆ, ಅಂದರೆ ಮನಸ್ಸಿನ ತ್ಯಾಗ ಹೆಚ್ಚಾಗುತ್ತದೆ. ‘ಸೇವೆಯನ್ನು ಹೇಗೆ ಪರಿಪೂರ್ಣ ಮಾಡಬಹುದು ?’, ಎಂಬ ಹಂಬಲವಾಗಿರುವುದರಿಂದ ಬುದ್ಧಿಯ ಸ್ತರದಲ್ಲಿ ಸತತವಾಗಿ ಮನನ-ಚಿಂತನ ಆಗುತ್ತಿರುತ್ತದೆ. ಅಂದರೆ ಬುದ್ಧಿಯ ತ್ಯಾಗ ಹೆಚ್ಚಾಗುತ್ತದೆ. ‘ಸೇವೆ ಅಂದರೆ ಗುರುಕಾರ್ಯವು ಚೆನ್ನಾಗಿ ಆಗಬೇಕು’, ಎಂಬ ತಳಮಳದಿಂದ ಸೇವೆಯಲ್ಲಿ ಪಾಲ್ಗೊಂಡಿರುವ ಸಾಧಕರನ್ನು ಅರ್ಥ ಮಾಡಿಕೊಂಡು ಪ್ರಸಂಗ ಬಂದಾಗ ಅವರ ಮುಂದೆ ಕಡಿಮೆತನವನ್ನೂ ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ಪ್ರೇಮಭಾವವು ಹೆಚ್ಚಾಗುವುದರೊಂದಿಗೆ ಅಹಂವೂ ಕಡಿಮೆಯಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಜವಾಬ್ದಾರಿಯನ್ನು ವಹಿಸಿ ಸೇವೆಯನ್ನು ಮಾಡಿದರೆ ಇನ್ನೂ ಹೆಚ್ಚು ಒಳ್ಳೆಯ ರೀತಿಯಿಂದ ಸಾಧನೆಯಾಗಿ ಬೇಗ ಗುರುಕೃಪೆಯಾಗಲು ಸಹಾಯವಾಗುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಅವರ ಗುರುಗಳು ಸಗುಣರೂಪದಲ್ಲಿರುವ ಅವಧಿಯಲ್ಲಿ ಗುರುಗಳ ‘ಗುರುಪೂರ್ಣಿಮಾ ಮಹೋತ್ಸವ’, ‘ಅಮೃತ ಮಹೋತ್ಸವ’ಗಳಂತಹ ಕಾರ್ಯಗಳಲ್ಲಿ ಅನೇಕ ಜವಾಬ್ದಾರಿಯನ್ನು ವಹಿಸಿಕೊಂಡು ಮಾಡಿದರು. ‘ಎಲ್ಲೆಡೆ ಅಧ್ಯಾತ್ಮದ ಪ್ರಸಾರವನ್ನು ಮಾಡಿರಿ !’, ಎಂಬ ಗುರ್ವಾಜ್ಞೆಯನ್ನು ಪಾಲಿಸಿ ಇಂದು ಅವರು ತಮ್ಮ ೮೦ ನೇಯ ವಯಸ್ಸಿನಲ್ಲಿಯೂ ಅಷ್ಟೇ ತಳಮಳದಿಂದ ಮಾಡುತ್ತಿದ್ದಾರೆ. ಸನಾತನದ ಎಲ್ಲ ಸಮಷ್ಟಿ ಸಂತರ ಮೇಲೆ ವಿವಿಧ ಜವಾಬ್ದಾರಿಗಳಿವೆ; ಬಹುಶಃ ವಿವಿಧ ಸೇವೆಗಳ ಜವಾಬ್ದಾರಿಯನ್ನು ತೆಗೆದುಕೊಂಡು ಅವರು ಯೋಗ್ಯರೀತಿಯಿಂದ ನಿರ್ವಹಿಸಿರುವುದರಿಂದಲೇ ದೇವರು ಅವರ ಶೀಘ್ರ ಆಧ್ಯಾತ್ಮಿಕ ಪ್ರಗತಿ ಆಗುವಂತೆ ಮಾಡಲು ಸಹಾಯವಾಯಿತು. ಹೀಗಿರುವಾಗ ‘ನಾವು ಜವಾಬ್ದಾರಿಯನ್ನು ತೆಗೆದುಕೊಂಡು ಸೇವೆ ಮಾಡುವುದು ಬೇಡವೇ ? ಎಂಬುದರ ಬಗ್ಗೆ ಸಾಧಕರು ಅಂತರ್ಮುಖವಾಗಿ ವಿಚಾರ ಮಾಡಬೇಕು. ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪ್ರಯತ್ನಿಸಿ ನೋಡಲುಮೊದಲನೇ ಹೆಜ್ಜೆ ಇಟ್ಟನಂತರ ‘ದೇವರು ನಮ್ಮ ಬಳಿಗೆ ಹತ್ತು ಹೆಜ್ಜೆಗಳನ್ನಿಡುತ್ತಾನೆ’, ಅಂದರೆ ‘ನಮ್ಮ ಜವಾಬ್ದಾರಿಗಳನ್ನು ಕ್ರಮೇಣ ದೇವರೇ ವಹಿಸಿಕೊಳ್ಳುತ್ತಾನೆ’, ಈ ರೀತಿ ಅನುಭೂತಿಯೂ ಬರುತ್ತದೆ ! ಜವಾಬ್ದಾರಿಯನ್ನು ತೆಗೆದುಕೊಳ್ಳುವ ಬಗ್ಗೆ ನಿಜವಾಗಿಯೂ ಕೆಲವು ಅಡಚಣೆಗಳಿದ್ದರೆ ಆ ಕುರಿತು ತಮ್ಮ ಸೇವೆಗಳ ಜವಾಬ್ದಾರಿ ಇರುವ ಸಾಧಕರ ಮಾರ್ಗದರ್ಶನವನ್ನು ಪಡೆಯಬೇಕು.’
– (ಪೂ.) ಸಂದೀಪ ಆಳಶಿ (೨೬.೧೨.೨೦೨೨)
ನಿಜವಾದ ತ್ಯಾಗ !‘ಸಾಧನೆಗಾಗಿ ಹಣ, ಸಮಯ ಇತ್ಯಾದಿಗಳ ತ್ಯಾಗಕ್ಕಿಂತ ‘ನನ್ನ’ ತನದ ತ್ಯಾಗವೇ ನಿಜವಾದ ತ್ಯಾಗವಾಗಿದೆ. ‘ನನ್ನ’ ತನದ ತ್ಯಾಗವೆಂದರೆ, ‘ನಾನು’, ‘ನನ್ನದು’, ‘ಸ್ವಕೇಂದ್ರಿತವೃತ್ತಿ’ ಇತ್ಯಾದಿಗಳ ತ್ಯಾಗ. ಇದಕ್ಕಾಗಿ ‘ದಿನವಿಡಿ ಪ್ರತಿಯೊಂದು ಪ್ರಸಂಗದಲ್ಲಿ ನನಗೆ ನನ್ನ ‘ನನ್ನ’ ತನದ ಅರಿವಾಗಿ ಅದನ್ನು ದೂರಗೊಳಿಸಲು ನನ್ನಿಂದ ಪ್ರಯತ್ನವಾಗಲಿ.’ ಎಂದು ಗುರುಗಳಿಗೆ ಅಥವಾ ದೇವರಲ್ಲಿ ಪ್ರಾರ್ಥಿಸಬೇಕು, ಇದಕ್ಕನುಸಾರ ಮಾಡಿದ ಪ್ರಯತ್ನಗಳ ವರದಿಯನ್ನು ಪ್ರತಿದಿನ ದೇವರಿಗೆ ಕೊಡಬೇಕು.’ – (ಪೂ.) ಸಂದೀಪ ಆಳಶಿ (೧೪.೧೨.೨೦೨೨) |